twitter
    For Quick Alerts
    ALLOW NOTIFICATIONS  
    For Daily Alerts

    ಆಗಸ್ಟ್ 15 ದಾಖಲೆ: ಅಕ್ಷಯ್ ಕುಮಾರ್-ಸಲ್ಮಾನ್ ಖಾನ್ ಇಬ್ಬರು 'ಬಾಸ್'

    |

    ಪ್ರತಿ ವರ್ಷವೂ ಸ್ವಾತಂತ್ರ್ಯ ದಿನಾಚರಣೆಯಂದು ಹೆಚ್ಚು ಹೆಚ್ಚು ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು. ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ದಿನ ಬರಿ ಟೀಸರ್, ಪೋಸ್ಟರ್ ಹಾಗೂ ಹೊಸ ಹಾಡುಗಳ ಮಾತ್ರ ಬಿಡುಗಡೆ ಆಗಿದೆ. ಬಾಲಿವುಡ್‌ನಲ್ಲಿ ಖ್ಯಾತ ನಟರೇ ಸ್ವಾತಂತ್ರ್ಯ ದಿನಾಚರಣೆಯನ್ನು ಗುರಿಯಾಗಿಸಿ ಸಿನಿಮಾಗಳನ್ನು ರಿಲೀಸ್ ಮಾಡುತ್ತಿದ್ದಾರೆ. ಕೆಲವರು ಸಕ್ಸಸ್ ಕಂಡಿದ್ರೆ, ಇನ್ನು ಕೆಲವರಿಗೆ ಅದೃಷ್ಟ ಕೈ ಹಿಡಿದಿರಲಿಲ್ಲ.

    75ನೇ ಸ್ವಾತಂತ್ರ್ಯ ದಿನಾಚರಣೆಯ ವಿಶೇಷವಾಗಿ ಬಾಲಿವುಡ್‌ನಲ್ಲಿ ಅಜಯ್ ದೇವಗನ್ ನಟನೆಯ 'ಭುಜ್: ದಿ ಪ್ರೈಡ್ ಆಫ್ ಇಂಡಿಯಾ' ಸಿನಿಮಾ ಬಿಡುಗಡೆಯಾಗಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಲೆಕ್ಷನ್ ಹೆಚ್ಚು ಆಗಿಲ್ಲ. ಆಗಸ್ಟ್ 15 ರಂದು ತೆರೆಕಂಡ ಸಿನಿಮಾಗಳ ಪಟ್ಟಿಯನ್ನೊಮ್ಮೆ ನೋಡಿದ್ರೆ ನಟ ಅಕ್ಷಯ್ ಕುಮಾರ್ ಹೆಚ್ಚು ದಾಖಲೆ ಹೊಂದಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ಹೆಚ್ಚು ಸಿನಿಮಾ ಬಿಡುಗಡೆ ಮಾಡಿದ ದಾಖಲೆಯೂ ಅಕ್ಷಯ್ ಹೆಸರಿನಲ್ಲಿದೆ. ಮುಂದೆ ಓದಿ...

    ಆಗಸ್ಟ್ 15ರ ವಿಶೇಷ ದಿನಕ್ಕೆ ಬಂದ ಪೋಸ್ಟರ್, ಟೀಸರ್, ಸಿನಿಮಾ ಸುದ್ದಿಗಳುಆಗಸ್ಟ್ 15ರ ವಿಶೇಷ ದಿನಕ್ಕೆ ಬಂದ ಪೋಸ್ಟರ್, ಟೀಸರ್, ಸಿನಿಮಾ ಸುದ್ದಿಗಳು

    ಸ್ವಾತಂತ್ರ್ಯ ದಿನಾಚರಣೆಗೆ ಬಂದ ಹೆಚ್ಚು ಸಿನಿಮಾಗಳು ಯಾರದ್ದು?

    ಸ್ವಾತಂತ್ರ್ಯ ದಿನಾಚರಣೆಗೆ ಬಂದ ಹೆಚ್ಚು ಸಿನಿಮಾಗಳು ಯಾರದ್ದು?

    Koimoi.com ವರದಿ ಮಾಡಿರುವಂತೆ ಕಳೆದ ಒಂದು ದಶಕದಲ್ಲಿ (2012-2021) ಹಲವು ಸಿನಿಮಾಗಳು ಸ್ವಾತಂತ್ರ್ಯ ದಿನಾಚರಣೆಯ ಸನಿಹದಲ್ಲಿ ಬಿಡುಗಡೆಯಾಗಿದೆ. ಅದರಲ್ಲಿ ಬಹುತೇಕ ಚಿತ್ರಗಳಿಗೆ ಸಕ್ಸಸ್ ಕಂಡಿದ್ದು, ಅಕ್ಷಯ್ ಕುಮಾರ್ ಹೆಚ್ಚು ಯಶಸ್ಸು ಪಡೆದಿರುವ ನಟ ಎನಿಸಿಕೊಂಡಿದ್ದಾರೆ. 'ಒನ್ಸ್ ಅಪಾನ್ ಐ ಟೈಮ್ ಇನ್ ಮುಂಬೈ ದೊಬಾರಾ' (2013), ಬ್ರದರ್ಸ್ (2015), ರುಸ್ತಮ್ (2016), ಟಾಯ್ಲೆಟ್: ಏಕ್ ಪ್ರೇಮ್ ಕಥಾ (2017), ಗೋಲ್ಡ್ (2018) ಮತ್ತು ಮಿಷನ್ ಮಂಗಲ್ (2019) ಸಿನಿಮಾಗಳು ಆಗಸ್ಟ್ 15ರ ಸುತ್ತಮುತ್ತಾ ಬಿಡುಗಡೆಯಾಗಿದೆ. ಜಾನ್ ಅಬ್ರಹಾಂ (ಬತ್ಲಾ ಹೌಸ್ ಮತ್ತು ಸತ್ಯಮೇವ ಜಯತೆ), ಸಿದ್ಧಾರ್ಥ್ ಮಲ್ಹೋತ್ರಾ (ಶೇರ್‌ಶಾ & ಬ್ರದರ್ಸ್) ಮತ್ತು ಅಜಯ್ ದೇವಗನ್ (ಭುಜ್: ದಿ ಪ್ರೈಡ್ ಆಫ್ ಇಂಡಿಯಾ & ಸಿಂಗಮ್ ರಿಟರ್ನ್ಸ್) ಸಿನಿಮಾಗಳು ರಿಲೀಸ್ ಆಗಿವೆ.

    ಆಗಸ್ಟ್ 15ಕ್ಕೆ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳು

    ಆಗಸ್ಟ್ 15ಕ್ಕೆ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳು

    ಸ್ವಾತಂತ್ರ್ಯ ದಿನಾಚರಣೆಯ ಆಸುಪಾಸು ಬಿಡುಗಡೆಯಾದ ಚಿತ್ರಗಳ ಪೈಕಿ ಏಕ್ ಥಾ ಟೈಗರ್, ಮಿಷನ್ ಮಂಗಲ್, ಸಿಂಗಮ್ ರಿಟರ್ನ್ಸ್ ಹೆಚ್ಚು ಗಳಿಕೆ ಕಂಡಿದೆ. Koimoi.com ವರದಿಯಂತೆ ಮಿಷನ್ ಮಂಗಲ್ (200 ಕೋಟಿ), ಏಕ್ ಥಾ ಟೈಗರ್ (198 ಕೋಟಿ), ಸಿಂಗಮ್ ರಿಟರ್ನ್ಸ್ (141 ಕೋಟಿ), ಟಾಯ್ಲೆಟ್ : ಏಕ್ ಪ್ರೇಮ್ ಕಥಾ (134 ಕೋಟಿ) ಮತ್ತು ರುಸ್ತಮ್ (127 ಕೋಟಿ) ಬಾಚಿಕೊಂಡಿರುವ ದಾಖಲೆ ಹೊಂದಿದೆ.

    ಸೋಲು ಕಂಡ ಸಿನಿಮಾಗಳು ಇವೆ

    ಸೋಲು ಕಂಡ ಸಿನಿಮಾಗಳು ಇವೆ

    ಸ್ವಾತಂತ್ರ್ಯ ದಿನಾಚರಣೆಯ ಸನಿಹದಲ್ಲಿ ತೆರೆಕಂಡ ಹಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದೆ ದಾಖಲೆ ಹೊಂದಿದೆ. ಹೆಚ್ಚು ನಿರೀಕ್ಷೆ ಹೊಂದಿದ್ದರೂ ಗಳಿಕೆಯಲ್ಲಿ ಹಿನ್ನಡೆ ಅನುಭವಿಸಿತ್ತು. ಹೃತಿಕ್ ರೋಷನ್ ಮತ್ತು ಪೂಜಾ ಹೆಗ್ಡೆ ನಟಿಸಿರುವ ಮೊಹೆಂಜೊ ದಾರೋ (58 ಕೋಟಿ) ಅತಿ ಕಡಿಮೆ ಗಳಿಕೆ ಕಂಡಿದೆ. 'ಒನ್ಸ್ ಅಪಾನ್ ಐ ಟೈಮ್ ಇನ್ ಮುಂಬೈ ದೊಬಾರಾ' ಕೋಟಿ ಗಳಿಸಿದ್ದು 65 ಕೋಟಿ.

    ಮೊದಲ ದಿನ ದಾಖಲೆ ಬರೆದ ಚಿತ್ರಗಳು

    ಮೊದಲ ದಿನ ದಾಖಲೆ ಬರೆದ ಚಿತ್ರಗಳು

    ಆಗಸ್ಟ್ 15ರ ಸನಿಹ ತೆರೆಕಂಡ ಚಿತ್ರಗಳು ಪೈಕಿ ಸಲ್ಮಾನ್ ಖಾನ್ ನಟನೆಯ 'ಏಕ್ ಥಾ ಟೈಗರ್' ಮೊದಲ ದಿನ ಹೆಚ್ಚು ಗಳಿಕೆ ಕಂಡಿದೆ. ಮೊದಲ ದಿನ 34.10 ಕೋಟಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಸಿಂಗಮ್ ರಿಟರ್ನ್ಸ್ (32.00 ಕೋಟಿ), ಮಿಷನ್ ಮಂಗಲ್ (29.16 ಕೋಟಿ) ಮತ್ತು ಗೋಲ್ಡ್ (25.25 ಕೋಟಿ) ಬಾಚಿಕೊಂಡಿದೆ.

    English summary
    Highest grossing movie on independence day release. Akshay kumar holds more records.
    Monday, August 16, 2021, 11:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X