For Quick Alerts
  ALLOW NOTIFICATIONS  
  For Daily Alerts

  ಈ ವರ್ಷ ನೆಟ್‌ಫ್ಲೆಕ್ಸ್ & ಅಮೇಜಾನ್‌ನಲ್ಲಿ ತೆರೆಕಂಡ ಹಿಂದಿ ಚಿತ್ರಗಳು

  |

  ಕೊರೊನಾ ಲಾಕ್‌ಡೌನ್ ಆದ ಕಾರಣ ಚಿತ್ರಮಂದಿರಗಳು ಬಂದ್ ಆಗಿದ್ದವು. ಆರೇಳು ತಿಂಗಳು ಥಿಯೇಟರ್ ಮುಚ್ಚಿದ್ದರ ಪರಿಣಾಮ ಕೆಲವು ಸಿನಿಮಾಗಳು ಒಟಿಟಿಯಲ್ಲಿ ತೆರೆಕಂಡವು. ಅಮಿತಾಭ್ ಬಚ್ಚನ್, ಸುಶಾಂತ್ ಸಿಂಗ್ ರಜಪೂತ್, ಜಾಹ್ನವಿ ಕಪೂರ್ ಸೇರಿದಂತೆ ಹಲವರು ಕಲಾವಿದರ ಚಿತ್ರಗಳು ಈ ವರ್ಷ ನೆಟ್‌ಫ್ಲೆಕ್ಸ್ & ಅಮೇಜಾನ್‌ನಲ್ಲಿ ಬಿಡುಗಡೆ ಕಂಡಿವೆ.

  ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಣೆಯಾಗಿತ್ತು. ಲಾಕ್‌ಡೌನ್ ಯಾವಾಗ ತೆರವುಗೊಳ್ಳುತ್ತೆ, ಚಿತ್ರಮಂದಿರಗಳು ಯಾವಾಗ ಮತ್ತೆ ತೆರಯಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟನೆ ಸಿಗದ ನಿರ್ಮಾಪಕರು ಚಿತ್ರಗಳನ್ನು ಒಟಿಟಿಯಲ್ಲಿ ರಿಲೀಸ್ ಮಾಡಿದರು. ಹಾಗಾದ್ರೆ, ಈ ವರ್ಷ ಒಟಿಟಿಯಲ್ಲಿ ತೆರೆಕಂಡ ಹಿಂದಿ ಚಿತ್ರಗಳು ಯಾವುದು? ಮುಂದೆ ಓದಿ....

  2020: ಒಟಿಟಿಯಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಭಾರತದ 'ಟಾಪ್ 10' ಸಿನಿಮಾಗಳಿವು2020: ಒಟಿಟಿಯಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಭಾರತದ 'ಟಾಪ್ 10' ಸಿನಿಮಾಗಳಿವು

  ಗುಲಾಬೊ ಸೀತಾಬೊ

  ಗುಲಾಬೊ ಸೀತಾಬೊ

  ಅಮಿತಾಭ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನ್ ಅಭಿನಯದ 'ಗುಲಾಬೊ ಸೀತಾಬೋ' ಡಿಜಿಟಲ್ ವೇದಿಕೆಯಲ್ಲಿ ಬಿಡುಗಡೆಯಾದ ವರ್ಷದ ಮೊದಲ ಸಿನಿಮಾ. ಶೂಜಿತ್ ಸಿರ್ಕಾರ್ ನಿರ್ದೇಶನದ ಈ ಚಿತ್ರವು ಮೆಚ್ಚುಗೆ ಪಡೆದುಕೊಂಡಿತ್ತು.

  ಗುಂಜಾನ್ ಸಕ್ಸೇನಾ

  ಗುಂಜಾನ್ ಸಕ್ಸೇನಾ

  ಈ ವರ್ಷ ಒಟಿಟಿಯಲ್ಲಿ ರಿಲೀಸ್ ಆದ ಸಿನಿಮಾಗಳಲ್ಲಿ ಪೈಕಿ ಗುಂಜನ್ ಸಕ್ಸೇನಾ ಸಹ ಪ್ರಮುಖವಾದದು. ಫ್ಲೈಟ್ ಲೆಫ್ಟಿನೆಂಟ್ ಗುಂಜನ್ ಸಕ್ಸೇನಾ ಅವರ ಜೀವನವನ್ನು ಆಧರಿಸಿದ ಈ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಗುಂಜನ್ ಸಕ್ಸೇನಾ ಆಗಿ ನಟಿ ಜಾಹ್ನವಿ ಕಪೂರ್ ಕಾಣಿಸಿಕೊಂಡಿದ್ದಾರೆ. ಶರಣ್ ಶರ್ಮಾ ನಿರ್ದೇಶನ ಮಾಡಿದ್ದರು.

  2020: ನೆಟ್‌ಫ್ಲಿಕ್ಸ್‌ನಲ್ಲಿ ಭಾರತೀಯರು ಹೆಚ್ಚು ನೋಡಿದ ಸಿನಿಮಾಗಳಿವು2020: ನೆಟ್‌ಫ್ಲಿಕ್ಸ್‌ನಲ್ಲಿ ಭಾರತೀಯರು ಹೆಚ್ಚು ನೋಡಿದ ಸಿನಿಮಾಗಳಿವು

  ಸುಶಾಂತ್ ಸಿಂಗ್ ದಿಲ್ ಬೆಚಾರ

  ಸುಶಾಂತ್ ಸಿಂಗ್ ದಿಲ್ ಬೆಚಾರ

  ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಕೊನೆಯ ಸಿನಿಮಾ ದಿಲ್ ಬೆಚಾರ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ತೆರೆಕಂಡಿತ್ತು. ಮುಖೇಶ್ ಚಾಬ್ರ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಸುಶಾಂತ್ ಸಿಂಗ್ ಜೊತೆ ನಾಯಕಿಯಾಗಿ ಸಂಜನಾ ಸಾಂಘಿ ಕಾಣಿಸಿಕೊಂಡಿದ್ದಾರೆ.

  ಲೂಡೊ ಸಿನಿಮಾ

  ಲೂಡೊ ಸಿನಿಮಾ

  ಈ ವರ್ಷ ಒಟಿಟಿಯಲ್ಲಿ ಬಿಡುಗಡೆಯಾದ ಮತ್ತೊಂದು ಚಿತ್ರ ಲೂಡೊ. ನವೆಂಬರ್ 12ರಂದು ರಿಲೀಸ್ ಆದ ಈ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್, ರಾಜ್ ಕುಮಾರ್ ರಾವ್ ಆದಿತ್ಯ ರಾಯ್ ಕಪೂರ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಅನುರಾಗ್ ಬಸು ಸಾರಥ್ಯದಲ್ಲಿ ಸಿನಿಮಾ ಮೂಡಿಬಂದಿದೆ.

  ಅಕ್ಷಯ್ ಕುಮಾರ್ 'ಲಕ್ಷ್ಮಿ'

  ಅಕ್ಷಯ್ ಕುಮಾರ್ 'ಲಕ್ಷ್ಮಿ'

  ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಲಕ್ಷ್ಮೀ ಸಿನಿಮಾ ಈ ವರ್ಷ ಒಟಿಟಿಯಲ್ಲಿ ರಿಲೀಸ್ ಆಗಿದೆ. ತಮಿಳಿನ ಕಾಂಚನಾ ಚಿತ್ರದ ರೀಮೇಕ್ ಇದಾಗಿದ್ದು, ಹಿಂದಿಯಲ್ಲಿ ರಾಘವ ಲಾರೆನ್ಸ್ ನಿರ್ದೇಶಿಸಿದ್ದರು.

  ದುರ್ಗಮತಿ ಸಿನಿಮಾ

  ದುರ್ಗಮತಿ ಸಿನಿಮಾ

  ರಾಜೇಶ್ ಕೃಷ್ಣನ್ ನಿರ್ದೇಶಿಸಿದ ಲೂಟ್‌ಕೇಸ್ ಚಿತ್ರವೂ ಈ ವರ್ಷ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ನವಾಜುದ್ದೀನ್ ಸಿದ್ದಿಕಿ ಅವರ 'ರಾತ್ ಅಕೆಲಿ ಹೈ', ಭೂಮಿ ಪೆಡ್ನೆಕರ್ ಅವರ 'ದುರ್ಗಮತಿ', ವಿದ್ಯಾ ಬಾಲನ್ ಅವರ 'ಶಕುಂತಲಾ ದೇವಿ' ಸೇರಿದಂತೆ ಹಲವು ಗಮನಾರ್ಹ ಚಿತ್ರಗಳು ಈ ವರ್ಷ ಒಟಿಟಿಯಲ್ಲಿ ಬಿಡುಗಡೆಯಾಗಿವೆ.

  English summary
  Best hindi movies released on Netflix And Amazon Prime Video In 2020.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X