twitter
    For Quick Alerts
    ALLOW NOTIFICATIONS  
    For Daily Alerts

    ಭಾರತೀಯ ಚಿತ್ರರಂಗದ ಇತಿಹಾಸ: ಮೊದಲ ಹೆಜ್ಜೆಗಳು ಹೇಗಿದ್ದವು?

    |

    ವಿಶ್ವದಲ್ಲಿಯೇ ಅತಿ ಹೆಚ್ಚು ಸಿನಿಮಾಗಳನ್ನು ನಿರ್ಮಿಸುವ ರಾಷ್ಟ್ರ ಭಾರತ. ಜೊತೆಗೆ ವಿಶ್ವದ ಶ್ರೀಮಂತ ಸಿನಿಮಾ ಉದ್ಯಮಗಳಲ್ಲಿ ಒಂದು, ಭಾರತೀಯ ಚಿತ್ರೋದ್ಯಮ. ಭಾರತದಲ್ಲಿ ಇಂದು ಚಿತ್ರೋದ್ಯಮವೆಂಬುದು ಸಾವಿರಾರು ಕೋಟಿ ಮೌಲ್ಯದ ಉದ್ದಿಮೆ. ಆದರೆ ಭಾರತದಲ್ಲಿ ಸಿನಿಮಾದ ಮೊದಲ ಹೆಜ್ಜೆಗಳು ಬರೀ ಮುಳ್ಳನ್ನೇ ತುಳಿದಿದ್ದವು.

    ಭಾರತ ಚಿತ್ರರಂಗದ ಇತಿಹಾಸ ಸಿನಿಮಾಗಳಷ್ಟೆ ಕುತೂಹಲಕಾರಿ. ಭಾರತದಲ್ಲಿ ಮೊದಲ ಬಾರಿಗೆ ವಿಡಿಯೋ ಒಂದು ಪ್ರದರ್ಶನ ಆಗಿದ್ದು 1897ರಲ್ಲಿ ಕೊಲ್ಕತ್ತದ ಸ್ಟಾರ್ ಥಿಯೇಟರ್‌ನಲ್ಲಿ. ಬ್ರಿಟೀಷ್ ಪ್ರೊಫೆಸರ್ ಸ್ಟೀವ್‌ಸನ್ ಮೊದಲ ಬಾರಿಗೆ ನಾಟಕವೊಂದನ್ನು ರೆಕಾರ್ಡ್ ಮಾಡಿ ಅದನ್ನೇ ಪ್ರದರ್ಶನ ಮಾಡಿದ್ದ. ಅದರಿಂದ ಪ್ರೇರಣೆಗೊಂಡ ಪಶ್ಚಿಮ ಬಂಗಾಳದ ಹರಿಲಾಲ್ ಸೇನ್ ಎಂಬುವರು ಪ್ರೊಫೆಸರ್ ಸ್ವೀವ್‌ಸನ್‌ರ ಕ್ಯಾಮೆರಾ ಬಳಸಿ 1898ರಲ್ಲಿ 'ದಿ ಫ್ಲವರ್ ಆಫ್ ಪರ್ಷಿಯಾ' ಹೆಸರಿನ ಒಪೆರಾ ಒಂದರ ನೃತ್ಯದ ದೃಶ್ಯಗಳನ್ನು ಚಿತ್ರೀಕರಿಸಿ ಅದನ್ನೇ ಪ್ರದರ್ಶಿಸಿದ್ದರು. ನಂತರ 1899ರಲ್ಲಿ ಮುಂಬೈನ ಎಚ್.ಎಸ್.ಬಟ್ವೀಂಡರ್ ಎಂಬುವರು ಕುಸ್ತಿ ಪಂದ್ಯವೊಂದನ್ನು ಚಿತ್ರೀಕರಿಸಿ 'ದಿ ವ್ರೆಸ್ಟ್ಲರ್' ಹೆಸರಿನ ಡಾಕ್ಯುಮೆಂಟರಿಯನ್ನು ಪ್ರದರ್ಶಿಸಿದರು. ''ರೆಸ್ಲರ್' ಭಾರತದ ಮೊದಲ ಡಾಕ್ಯುಮೆಂಟರಿ ಎನಿಸಿಕೊಂಡಿತು.

    ಎಚ್.ಎಸ್.ಬಟ್ವೀಂಡರ್ ಆಗಿನ ಕಾಲಕ್ಕೆ ಕ್ಯಾಮೆರಾ ಹಾಗೂ ಪ್ರೊಜೆಕ್ಟರ್ ಸ್ಕ್ರೀನ್ ಖರೀದಿಸಿ ಆಗ ನಡೆಯುತ್ತಿದ್ದ ಕೆಲವು ಮಹತ್ವದ ಘಟನೆಗಳನ್ನು, ಜನರ ಜೀವನವನ್ನು ಚಿತ್ರೀಕರಿಸಿ ಪ್ರದರ್ಶಿಸಿದ್ದರು. ಬಟ್ವೀಂಡರ್‌ ಅವರ ನಾಲ್ಕನೇ ತಲೆಮಾರು ಈಗಲೂ ಮುಂಬೈನಲ್ಲಿ ವಾಸವಿದ್ದಾರೆ. ಅಜಿಲೊ ಲ್ಯಾಬ್ಸ್ ಮತ್ತು ಫೆಲಿಸಿಟಾ ಫುಡ್ಸ್ ಅನ್ನು ನಡೆಸುತ್ತಿರುವುದು ಇವರ ಕುಟುಂಬಸ್ಥರೇ.

    History and Evolution of Indian Cinema Part 1

    ಭಾರತದ ಮೊದಲ ಸಿನಿಮಾ ತಯಾರಿಸಿದ್ದು ದಾದಾ ಸಾಹೇಬ್ ಫಾಲ್ಕೆ ಎಂದೇ ಹೇಳಲಾಗುತ್ತದೆ. ಆದರೆ ಅದಕ್ಕೆ ಮುನ್ನವೇ ರಾಮಚಂದ್ರ ಗೋಪಾಲ್ ಎಂಬುವರು 1912ರಲ್ಲಿ 'ಶ್ರೀ ಪುಂಡಲೀಕ್' ಹೆಸರಿನ ಸಿನಿಮಾ ಪ್ರದರ್ಶಿಸಿದ್ದರು.

    ಮಹಾರಾಷ್ಟ್ರದ ರಾಮಚಂದ್ರ ಗೋಪಾಲ್, ಬ್ರಿಟಿಷ್‌ ಪ್ರೊಫೆಸರ್ ಒಬ್ಬರು ಸೇರಿ ವಿದೇಶದಿಂದ ಕ್ಯಾಮೆರಾ ಹಾಗೂ ಫಿಲಂಗಳನ್ನು ತರಿಸಿಕೊಂಡರು. ರಾಮಚಂದ್ರ ಗೋಪಾಲ್ ಮಾಡಿದ್ದ ಸಿನಿಮಾಕ್ಕೆ ಬಂಡವಾಳ ಬ್ರಿಟಿಷ್ ಪ್ರೊಫೆಸರ್ ಸಹ ಬಂಡವಾಳ ಹೂಡಿದ್ದರು. ಬ್ರಿಟನ್‌ನಿಂದ ತರಿಸಿಕೊಂಡ ಕ್ಯಾಮೆರಾ ಹಾಗೂ ಫಿಲಂನಿಂದ ನಾಟಕವೊಂದನ್ನು ಚಿತ್ರೀಕರಿಸಿ ಅದನ್ನು ಬಾಂಬೆಯಲ್ಲಿ ಬಿಡುಗಡೆ ಮಾಡಿದರು. ಆದರೆ ಇದನ್ನು ಭಾರತದ ಮೊದಲ ಸಿನಿಮಾ ಎಂದು ಇತಿಹಾಸಕಾರರು ಒಪ್ಪಿಕೊಂಡಿಲ್ಲ.

    'ಶ್ರೀ ಪುಂಡಲೀಕ' ಸಿನಿಮಾವು ನಾಟಕವೊಂದರ ರೆಕಾರ್ಡ್ ಆಗಿತ್ತು. ಅಲ್ಲದೆ, ಆ ಸಿನಿಮಾಕ್ಕೆ ಕ್ಯಾಮೆರಾ ನಿರ್ವಹಿಸಿದ್ದು ಭಾರತೀಯರಲ್ಲ ಬದಲಿಗೆ ಸಿನಿಮಾಕ್ಕೆ ಬಂಡವಾಳ ಹೂಡಿದ್ದ ಬ್ರಿಟಿಷ್ ವ್ಯಕ್ತಿ. ಈ ಸಿನಿಮಾವನ್ನು ಫೊಟೊಗ್ರಾಫಿಕ್ ಮಾದರಿಯಲ್ಲಿ ರೆಕಾರ್ಡ್ ಮಾಡಲಾಗಿತ್ತು. ಸ್ಟೇಜ್‌ನ ಮುಂದೆ ಕ್ಯಾಮೆರಾ ಇಟ್ಟು ದೃಶ್ಯ ಚಿತ್ರೀಕರಿಸಿಕೊಳ್ಳಲಾಗಿತ್ತು. ಆದರೆ ಸಿನಿಮಾವನ್ನು ಪರದೆಯ ಮೇಲೆ ನೋಡಿದಾಗ ವೇದಿಕೆಯ ಒಂದು ಭಾಗದಲ್ಲಿ ನಡೆದ ನಾಟಕವಷ್ಟೆ ರೆಕಾರ್ಡ್ ಆಗಿತ್ತು. ಹಾಗಾಗಿ ರಾಮಚಂದ್ರ ಗೋಪಾಲ್‌ಗೆ ಇದು ತೃಪ್ತಿ ನೀಡಲಿಲ್ಲ. ಮತ್ತೊಮ್ಮೆ ನಾಟಕದ ವಿವಿಧ ಭಾಗಗಳನ್ನು ಚಿತ್ರೀಕರಿಸಿ ನಂತರ ಎಲ್ಲವನ್ನೂ ಒಟ್ಟು ಮಾಡಿ ಪ್ರದರ್ಶಿಸಲು ನಿಶ್ಚಯಿಸಿದರು. ಅದನ್ನೇ ಇಂದಿನ ಸಿನಿಮಾ ಭಾಷೆಯಲ್ಲಿ ಎಡಿಟಿಂಗ್ ಎನ್ನುತ್ತಾರೆ. 'ಶ್ರೀ ಪುಂಡಲೀಕ' ಸಿನಿಮಾದ ಎಡಿಟಿಂಗ್ ನಡೆದಿದ್ದು ಇಂಗ್ಲೆಂಡ್‌ನಲ್ಲಿ.

    'ಶ್ರೀ ಪುಂಡಲೀಕ' ಸಿನಿಮಾವನ್ನು ಮೇ 08, 1912ರಂದು ಮುಂಬೈನ ಕೊರೊನೇಷನ್ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಾಯಿತು. ಸಿನಿಮಾಕ್ಕೆ ಬಹಳ ಒಳ್ಳೆಯ ಜನಸ್ಪಂದನೆ ದೊರೆತಿತ್ತು. ಆಗ ಟೈಮ್ಸ್‌ ಆಫ್ ಇಂಡಿಯಾ ಪತ್ರಿಕೆಯಲ್ಲಿ ಸಿನಿಮಾ ಸಂಬಂಧಿಸಿ ಜಾಹೀರಾತೊಂದನ್ನು ಸಹ ನೀಡಲಾಗಿತ್ತು, 'ಈ ಸಿನಿಮಾವನ್ನು ಮುಂಬೈನ ಅರ್ಧದಷ್ಟು ಜನ ಈಗಾಗಲೇ ನೋಡಿದ್ದಾರೆ. ಇನ್ನರ್ಧದಷ್ಟು ಜನ ನೋಡಲೇಬೇಕು'' ಎಂದು. ಸಿನಿಮಾ ನಿರ್ದೇಶಿಸಿದ್ದ ರಾಮಚಂದ್ರ ಗೋಪಾಲ್‌ ಮುಂದೆ ಹಲವು ಸಿನಿಮಾಗಳನ್ನು ನಿರ್ದೇಶನ ಹಾಗೂ ನಿರ್ಮಾಣ ಮಾಡಿದರು. ಭಾರತೀಯ ಸಿನಿಮಾಕ್ಕೆ ಅಡಿಪಾಯ ಹಾಕಿದ ಮೂಲ ವ್ಯಕ್ತಿ ಎನಿಸಿಕೊಂಡರು ಇವರು.

    'ಶ್ರೀ ಪುಂಡಲೀಕ' ಸಿನಿಮಾ ಬಿಡುಗಡೆ ಆಗಿ ಬರೋಬ್ಬರಿ ಒಂದು ವರ್ಷದ ನಂತರ ಅದೇ ಮುಂಬೈನ ಕೊರೊನೇಷನ್ ಚಿತ್ರಮಂದಿರದಲ್ಲಿ ಭಾರತದ ಮೊದಲ ಸಿನಿಮಾ ಎಂದು ಕರೆಯಲಾಗುವ 'ರಾಜಾ ಹರೀಶ್ಚಂದ್ರ' ಸಿನಿಮಾ ಬಿಡುಗಡೆ ಆಯಿತು. ಆ ಸಿನಿಮಾ ಎದುರಿಸಿದ ಸಮಸ್ಯೆಗಳೇನು? ಆ ಸಿನಿಮಾವನ್ನೇ ಏಕೆ ಭಾರತದ ಮೊಟ್ಟ ಮೊದಲ ಸಿನಿಮಾ ಎನ್ನಲಾಗುತ್ತದೆ. ಎಂಬುದನ್ನು ಮುಂದುವರೆದ ಭಾಗದಲ್ಲಿ ತಿಳಿಯೋಣ.

    English summary
    Here is the history and evolution of Indian cinema. How cinema started in India. What was the scenario before the Indian first movie 'Raja Harishchandra'. Know more
    Monday, July 12, 2021, 12:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X