For Quick Alerts
  ALLOW NOTIFICATIONS  
  For Daily Alerts

  ಸುವರ್ಣದಲ್ಲಿ ಪ್ರಸಾರವಾಗಲಿದೆ 'ಹೋಸ್ಟೇಜಸ್' ಡಬ್ಬಿಂಗ್: ಉಳಿದ ವೆಬ್ ಸೀರೀಸ್, ಸಿನಿಮಾಗಳೇಕಿಲ್ಲ?

  |

  ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದ್ದ 'ಹೋಸ್ಟೇಜಸ್' ವೆಬ್ ಸೀರೀಸ್ ಇನ್ನು ಮುಂದೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಕ್ರೈಂ ಥ್ರಿಲ್ಲರ್ ವೆಬ್ ಸೀರೀಸ್ ಕನ್ನಡ ಸೇರಿದಂತೆ ಭಾರತದ ಏಳು ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಲಾಕ್‌ಡೌನ್ ಕಾರಣದಿಂದ ಮನೆಯಲ್ಲಿ ಕುಳಿತಿರುವವರು, ಕ್ರೈಂ ಥ್ರಿಲ್ಲರ್ ಇಷ್ಟಪಡುವವರು ಕಿರಿತೆರೆಯಲ್ಲಿ ಡಬ್ಬಿಂಗ್ ಅವತರಣಿಕೆಯನ್ನು ವೀಕ್ಷಿಸಬಹುದು.

  ಲಾಕ್‌ಡೌನ್ ಕಾರಣದಿಂದ ಮನೆಯಲ್ಲಿಯೇ ಇರುವ ಅನಿವಾರ್ಯತೆಯಲ್ಲಿರುವ ಜನರಿಗಾಗಿ ದೂರದರ್ಶನ ಸೇರಿದಂತೆ ಅನೇಕ ವಾಹಿನಿಗಳು ತಮ್ಮ ಹಳೆಯ ಜನಪ್ರಿಯ ಕಾರ್ಯಕ್ರಮಗಳನ್ನು ಮರುಪ್ರಸಾರ ಮಾಡುತ್ತಿವೆ. ಆದರೆ ಇವೆಲ್ಲವೂ ಅವುಗಳ ಮೂಲ ಭಾಷೆಯಲ್ಲಿ ಮಾತ್ರ ಪ್ರಸಾರವಾಗುತ್ತಿವೆ. ದೂರದರ್ಶನದ ರಾಮಾಯಣ, ಮಹಾಭಾರತ, ಶಕ್ತಿಮಾನ್ ಮುಂತಾದ ಧಾರಾವಾಹಿಗಳು ಕನ್ನಡದಲ್ಲಿಯೂ ಡಬ್ ಆಗಿ ಪ್ರಸಾರವಾಗಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಮುಂದೆ ಓದಿ...

  ಕನ್ನಡಕ್ಕೆ ಬಂದ ತಮಿಳಿನ 'ಮಾಸ್ಟರ್': ಪೋಸ್ಟರ್ ಬಿಡುಗಡೆಕನ್ನಡಕ್ಕೆ ಬಂದ ತಮಿಳಿನ 'ಮಾಸ್ಟರ್': ಪೋಸ್ಟರ್ ಬಿಡುಗಡೆ

  ಸ್ಟಾರ್ ಸುವರ್ಣದಲ್ಲಿ ಹೋಸ್ಟೇಜಸ್ ಪ್ರಸಾರ

  ಸ್ಟಾರ್ ಸುವರ್ಣದಲ್ಲಿ ಹೋಸ್ಟೇಜಸ್ ಪ್ರಸಾರ

  ಹೋಸ್ಟೇಜಸ್ ವೆಬ್ ಸರಣಿಯ ಕನ್ನಡ ಡಬ್ಬಿಂಗ್ ಅವತರಣಿಕೆಯು ಏಪ್ರಿಲ್ 6ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇದೇ ಮೊದಲ ಬಾರಿಗೆ ಈ ವೆಬ್ ಸರಣಿ ಟೆಲಿವಿಷನ್‌ನಲ್ಲಿ ಪ್ರಸಾರವಾಗಲಿದೆ.

  750 ಎಪಿಸೋಡ್‌ಗಳು ಲಭ್ಯ

  ಕನ್ನಡದಲ್ಲಿ ಸುಮಾರು 750 ಎಪಿಸೋಡ್‌ಗಳಷ್ಟು ವೆಬ್ ಸೀರೀಸ್‌ ಹಾಗೂ ಸುಮಾರು 75 ಸಿನಿಮಾಗಳು ಡಬ್ ಆಗಿ ಲಭ್ಯವಾಗುತ್ತಿವೆ. ಇವು ಕಿರುತೆರೆಯಲ್ಲಿ ಪ್ರಸಾರಕ್ಕೆ ಯೋಗ್ಯವಾಗಿವೆ. ಆದರೆ ಕನ್ನಡ ಟಿವಿ ವಾಹಿನಿಗಳ ಸಮಸ್ಯೆಯೇನು? ಮೂಲ ಕಂಟೆಂಟ್ ಲಭ್ಯವಿಲ್ಲದೆ ಇರುವಾಗ ಈ ಕಂಟೆಂಟ್‌ಗಳನ್ನು ಏಕೆ ಪ್ರಸಾರ ಮಾಡುತ್ತಿಲ್ಲ ಎಂದು ರತೀಶ ಬಿಆರ್ ಪ್ರಶ್ನಿಸಿದ್ದಾರೆ.

  ಕನ್ನಡಕ್ಕೆ ತಮಿಳು ನಟ ವಿಜಯ್ ಅಭಿನಯದ 'ಬಿಗಿಲ್'!ಕನ್ನಡಕ್ಕೆ ತಮಿಳು ನಟ ವಿಜಯ್ ಅಭಿನಯದ 'ಬಿಗಿಲ್'!

  ಕನ್ನಡದಲ್ಲಿ ಸಿದ್ಧ ಇರುವ ಕಂಟೆಂಟ್‌ಗಳು

  ಕನ್ನಡದಲ್ಲಿ ಸಿದ್ಧ ಇರುವ ಕಂಟೆಂಟ್‌ಗಳು

  ಜೀ 5ನಲ್ಲಿ 53 ವೆಬ್ ಸೀರೀಸ್ (ಸುಮಾರು 600 ಎಪಿಸೋಡ್‌ಗಳು), 23 ಕನ್ನಡ ಡಬ್ಬಿಂಗ್ ಚಿತ್ರಗಳು. ಹಾಟ್‌ಸ್ಟಾರ್‌ನಲ್ಲಿ 6 ವೆಬ್ ಸೀರೀಸ್ (ಸುಮಾರು 50 ಎಪಿಸೋಡ್‌ಗಳು).

  ವೂಟ್‌ನಲ್ಲಿ 5 ವೆಬ್ ಸೀರೀಸ್‌ಗಳು (ಸುಮಾರು 45 ಎಪಿಸೋಡ್‌ಗಳು). ಯೂಟ್ಯೂಬ್‌ನಲ್ಲಿ ಕನ್ನಡಕ್ಕೆ ಡಬ್ಬಿಂಗ್ ಆದ 40 ಸಿನಿಮಾಗಳು. ಮಾಲ್ಗುಡಿ ಡೇಸ್- 54 ಎಪಿಸೋಡ್‌ಗಳು ಡಬ್ಬಿಂಗ್ ಆಗಿವೆ.

  74 ಸಿನಿಮಾಗಳು ಬಾಕಿ ಇವೆ

  74 ಸಿನಿಮಾಗಳು ಬಾಕಿ ಇವೆ

  ಸತ್ಯದೇವ್ ಐಪಿಎಸ್, ಧೀರ, ನಾನು ನನ್ನ ಪ್ರೀತಿ, ಕಮಾಂಡೋ, ಕಾಂಚನ 3, ಡಿಯರ್ ಕಾಮ್ರೇಡ್, ರಂಗಸ್ಥಳ, ನೋಟಾ, ಕಿರಿಕ್ ಲವ್ ಸ್ಟೋರಿ, ಫಾಸ್ಟ್ ಆಂಡ್ ಫ್ಯೂರಿಯಸ್ 8, ಟರ್ಮಿನೇಟರ್- ದಿ ಡಾರ್ಕ್ ಫೇಟ್, ದಬಾಂಗ್ 3 ಸೇರಿ ಒಟ್ಟು 12 ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿವೆ.

  ಸುಮಾರು 750 ಎಪಿಸೋಡ್‌ಗಳನ್ನು ಹೊಂದಿರುವ ಒಟ್ಟು 65 ವೆಬ್ ಸೀರೀಸ್‌ಗಳು, 74 ಕನ್ನಡ ಡಬ್ಬಿಂಗ್ ಚಿತ್ರಗಳು ಲಭ್ಯ ಇವೆ ಎಂದು ಗಣೇಶ್ ಚೇತನ್ ಮಾಹಿತಿ ನೀಡಿದ್ದಾರೆ.

  English summary
  Star Suvarna to telecast Kannada dubbed version of the Hostages Web Series. Many demands TV chennels to telecast dubbing contents.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X