twitter
    For Quick Alerts
    ALLOW NOTIFICATIONS  
    For Daily Alerts

    ಭಾರತೀಯ ಸಿನಿಮಾ ಮಾರುಕಟ್ಟೆಯ ಮೌಲ್ಯ ಎಷ್ಟು ಲಕ್ಷ ಕೋಟಿ?

    |

    ವಿಶ್ವ ಸಿನಿಮಾ ಮಾರುಕಟ್ಟೆಯಲ್ಲಿ ಭಾರತೀಯ ಸಿನಿಮಾ ಮಾರುಕಟ್ಟೆಗೆ ವಿಶೇಷ ಸ್ಥಾನವಿದೆ. ಹಾಲಿವುಡ್ ಸಿನಿಮಾಗಳು ಸಹ ಭಾರತೀಯ ಸಿನಿಮಾ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡೆ ಸಿನಿಮಾ ನಿರ್ಮಿಸುತ್ತವೆ. ಭಾರತೀಯ ಪ್ರೇಕ್ಷಕರನ್ನು ಸೆಳೆಯಲೆಂದೇ ತಮ್ಮ ಸಿನಿಮಾಗಳಲ್ಲಿ ಭಾರತೀಯ ನಟರಿಗೆ ಅವಕಾಶಗಳನ್ನು ಕೊಡುತ್ತಿದೆ.

    ಭಾರತೀಯ ಸಿನಿಮಾ ಮಾರುಕಟ್ಟೆ ಬಹಳ ಬೇಗವಾಗಿ ಬಹಳ ಬೃಹತ್ ಆಗಿ ಬೆಳೆದು ನಿಂತಿದೆ. ಹಾಲಿವುಡ್ ಸಿನಿಮಾರಂಗಕ್ಕೂ ಸವಾಲೆಸೆಯುವಂಥಹಾ ಬಿಗ್ ಬಜೆಟ್ ಸಿನಿಮಾಗಳು ನಮ್ಮಲ್ಲಿ ತಯಾರಾಗುತ್ತಿವೆ, ವಿಶ್ವಕ್ಕೆ ರಫ್ತಾಗುತ್ತಿವೆ.

    ಹಲವು ಪ್ರಾದೇಶಿಕ ಸಿನಿಮಾರಂಗಗಳನ್ನು ಒಟ್ಟಾಗಿರಿಸಿಕೊಂಡು ಭಾರತೀಯ ಸಿನಿಮಾದ ಆಳ-ಅಗಲ, ವ್ಯಾಪ್ತಿ ಬಹಳ ದೊಡ್ಡದು. ಅದೆಷ್ಟು ದೊಡ್ಡದೆಂದರೆ ಅದೆಷ್ಟೋ ಲಕ್ಷ ಕೋಟಿಗಳಾಗುತ್ತದೆ ಭಾರತೀಯ ಸಿನಿಮಾರಂಗದ ಮೌಲ್ಯ.

    ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಸಿನಿಮಾಗಳು, ಅವುಗಳು ಗಳಿಸಿದ ಹಣದ ಮೇಲೆ ಒಮ್ಮೆ ಕಣ್ಣಾಡಿಸಿದರೆ ಸುಲಭಕ್ಕೆ ಅರ್ಥವಾಗುತ್ತದೆ ಭಾರತೀಯ ಸಿನಿಮಾ ಮಾರುಕಟ್ಟೆ ಹಣವೇ ಇಂಗದ ಅಕ್ಷಯ ಪಾತ್ರೆಯೆಂದು.

    12 ದಿನ, ಮೂರು ಸಿನಿಮಾ, 500 ಕೋಟಿ!

    12 ದಿನ, ಮೂರು ಸಿನಿಮಾ, 500 ಕೋಟಿ!

    ಡಿಸೆಂಬರ್ ತಿಂಗಳಲ್ಲಿ ಭಾರತದಲ್ಲಿ ಒಮಿಕ್ರಾನ್ ಪ್ರಕರಣಗಳು ವೇಗವಾಗಿ ಹಬ್ಬಲು ಆರಂಭವಾದವು. ಆದರೆ ಇದೇ ಸಮಯದಲ್ಲಿ ಹಾಲಿವುಡ್‌ನ 'ಸ್ಪೈಡರ್‌ಮ್ಯಾನ್; ನೋ ವೇ ಹೋಮ್', ತೆಲುಗಿನ 'ಪುಷ್ಪ' ಹಿಂದಿಯ '83' ಇನ್ನೂ ಹಲವು ಸಿನಿಮಾಗಳು ಬಿಡುಗಡೆ ಆದವು ಮತ್ತು ನೂರಾರು ಕೋಟಿ ರುಪಾಯಿ ಆದಾಯವನ್ನು ಚಿತ್ರಮಂದಿರಗಳ ಮೂಲಕ ಗಳಿಸಿದವು. 'ಸ್ಪೈಡರ್‌ಮ್ಯಾನ್, 'ಪುಷ್ಪ' ಸಿನಿಮಾಗಳಂತೂ ಕೇವಲ 10-15 ದಿನಗಳಲ್ಲಿ 200 ಕೋಟಿಗೂ ಹೆಚ್ಚು ಹಣವನ್ನು ಬಾಚಿಬಿಟ್ಟವು. ಅದಕ್ಕೆ ಹಿಂದಿನ ತಿಂಗಳಷ್ಟೆ ಬಿಡುಗಡೆ ಆಗಿದ್ದ ಅಕ್ಷಯ್ ಕುಮಾರ್‌ ನಟನೆಯ 'ಸೂರ್ಯವಂಶಿ' ಸಿನಿಮಾ ಬಾಚಿದ್ದು ಬರೋಬ್ಬರಿ 270 ಕೋಟಿ!

    ಕೆಲವೇ ದಿನಗಳಲ್ಲಿ 1000 ಕೋಟಿ ಬಗೆದು ಕೊಟ್ಟ ಸಿನಿಮಾ ಮಾರುಕಟ್ಟೆ!

    ಕೆಲವೇ ದಿನಗಳಲ್ಲಿ 1000 ಕೋಟಿ ಬಗೆದು ಕೊಟ್ಟ ಸಿನಿಮಾ ಮಾರುಕಟ್ಟೆ!

    ಕೆಲವೇ ದಿನಗಳಲ್ಲಿ ಭಾರತೀಯ ಸಿನಿಮಾ ಮಾರುಕಟ್ಟೆ ಮಾಡಿಕೊಟ್ಟ ಕಲೆಕ್ಷನ್ 1000 ಕೋಟಿ ದಾಟಿದೆ. ಹಾಗಿದ್ದರೆ ಇಡೀಯ ವರ್ಷದ ಕಲೆಕ್ಷನ್ ಲೆಕ್ಕಾಚಾರ ಹಾಕಿದಲ್ಲಿ ಲಕ್ಷ ಕೋಟಿಗಳಾಗುತ್ತವೆ. ಇದು ಭಾರತೀಯ ಸಿನಿಮಾರಂಗದ ಶಕ್ತಿ. ಭಾರತೀಯ ಸಿನಿಮಾ ಮಾರುಕಟ್ಟೆ ಎಂಬುದು ಹಣ ಬಗೆದುಕೊಳ್ಳುವ ಬಾವಿಯಂತಾಗಿದೆ. ಹಾಗಾಗಿಯೇ ಹಾಲಿವುಡ್‌ ಮಾತ್ರವೇ ಅಲ್ಲ, ಯೂರೋಪ್ ದೇಶದ ಸಿನಿಮಾಕರ್ಮಿಗಳು, ನ್ಯೂಜಿಲೆಂಡ್ ಸಿನಿಮಾಕರ್ಮಿಗಳು ಸಹ ಭಾರತೀಯ ಸಿನಿಮಾ ಮಾರುಕಟ್ಟೆಯನ್ನು ಗಮನದಲ್ಲಿರಿಸಿಕೊಂಡು ಸಿನಿಮಾ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ.

    2019ರಲ್ಲಿ ಭಾರತೀಯ ಚಿತ್ರರಂಗದ ಆದಾಯ ಎಷ್ಟು ಸಾವಿರ ಕೋಟಿ?

    2019ರಲ್ಲಿ ಭಾರತೀಯ ಚಿತ್ರರಂಗದ ಆದಾಯ ಎಷ್ಟು ಸಾವಿರ ಕೋಟಿ?

    ವಿಕಿಪೀಡಿಯಾ ಮಾಹಿತಿ ಪ್ರಕಾರ 2019ರಲ್ಲಿ ಭಾರತೀಯ ಸಿನಿಮಾರಂಗದ ಆದಾಯವೇ 20 ಸಾವಿರ ಕೋಟಿಗೂ ಹೆಚ್ಚು. ಈ ಎರಡು ವರ್ಷದಲ್ಲಿ ಈ ಮೊತ್ತ ಮೂರು ಪಟ್ಟು ಹೆಚ್ಚಾಗಿದೆ. 2019ರಲ್ಲಿ ಸಿನಿಮಾ ಒಂದು ನೂರು ಕೋಟಿ, ಇನ್ನೂರು ಕೋಟಿ ಗಳಿಸಲು 50 ದಿನವಾದರೂ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಬೇಕಿತ್ತು, ಆದರೆ ಈಗ ಪರಿಸ್ಥಿತಿ ಬದಲಾಗಿದೆ. ರಜನೀಕಾಂತ್ ನಟನೆಯ 'ಅಣ್ಣಾತೆ' ಸಿನಿಮಾ ಕೇವಲ 13 ದಿನದಲ್ಲಿ 200 ಕೋಟಿ ಕಲೆಕ್ಷನ್ ದಾಟಿತ್ತು. 'ಪುಷ್ಪ', ವಿಜಯ್‌ರ 'ಮಾಸ್ಟರ್', ಅಕ್ಷಯ್ ಕುಮಾರ್ ನಟನೆಯ 'ಸೂರ್ಯವಂಶಿ', ಸಲ್ಮಾನ್ ಖಾನ್ ನಟನೆಯ 'ಅಂತಿಮ್' ಇನ್ನೂ ಕೆಲವು ಸಿನಿಮಾಗಳು ಕೆಲವೇ ದಿನಗಳಲ್ಲಿ ನೂರಾರು ಕೋಟಿ ರುಪಾಯಿಗಳನ್ನು ಸುಲಭವಾಗಿ ಬಾಚಿಕೊಂಡವು.

    2011ರಲ್ಲಿಯೇ ಹಾಲಿವುಡ್ ಅನ್ನು ಹಿಂದಿಕ್ಕಿದೆ ಭಾರತೀಯ ಚಿತ್ರರಂಗ

    2011ರಲ್ಲಿಯೇ ಹಾಲಿವುಡ್ ಅನ್ನು ಹಿಂದಿಕ್ಕಿದೆ ಭಾರತೀಯ ಚಿತ್ರರಂಗ

    ಭಾರತದ ಸಿನಿಮಾ ರಂಗ 2011ರಲ್ಲಿಯೇ ಹಾಲಿವುಡ್‌ ಅನ್ನು ಹಿಂದಿಕ್ಕಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ವರ್ಷಂಪ್ರತಿ ಮಾರಾಟವಾಗುವ ಸಿನಿಮಾ, ನಿರ್ಮಾಣವಾಗುವ ಸಿನಿಮಾ, ಸಿನಿಮಾಗಳಿಗೆ ಖರ್ಚು ಮಾಡುವ ಸರಾಸರಿ ಮೊತ್ತ ಇವುಗಳ ಹೋಲಿಕೆಯಲ್ಲಿ ಹಾಲಿವುಡ್‌ಗಿಂತಲೂ ಹಲವು ಪಟ್ಟು ಮುಂದೆ ಇದೆ ಭಾರತೀಯ ಸಿನಿಮಾ ರಂಗ. ಹಾಲಿವುಡ್‌ನಲ್ಲಿ ವರ್ಷಕ್ಕೆ 500 ಸಿನಿಮಾಗಳು ತಯಾರಾದರೆ ಭಾರತದಲ್ಲಿ ತಯಾರಾಗುವುದು 1000 ಕ್ಕೂ ಹೆಚ್ಚು ಸಿನಿಮಾಗಳು. ಹಾಲಿವುಡ್‌ ಸಿನಿಮಾಗಳಿಗಿಂತಲೂ ವೀಕ್ಷಕರ ಸಂಖ್ಯೆ ಹೆಚ್ಚಿರುವುದು ಸಹ ಭಾರತೀಯ ಸಿನಿಮಾಗಳಿಗೆ. ಭಾರತೀಯ ಸಿನಿಮಾಗಳಿಗೆ ವಿಶ್ವದಾದ್ಯಂತ 300 ಕೋಟಿಗೂ ಹೆಚ್ಚು ವೀಕ್ಷಕರಿದ್ದಾರೆ. ಹಾಲಿವುಡ್‌ ಸಿನಿಮಾಗಳಿಗೆ 200 ಕೋಟಿ ವೀಕ್ಷಕರು ಮಾತ್ರವೇ ಇದ್ದಾರೆ.

    ಭಾರತೀಯ ಸಿನಿಮಾರಂಗದ ಒಟ್ಟು ಮೌಲ್ಯವೆಷ್ಟು?

    ಭಾರತೀಯ ಸಿನಿಮಾರಂಗದ ಒಟ್ಟು ಮೌಲ್ಯವೆಷ್ಟು?

    2019ರಲ್ಲಿ ಭಾರತೀಯ ಸಿನಿಮಾ ರಂಗದ ಆದಾಯವೇ 20,000 ಕೋಟಿಗೂ ಹೆಚ್ಚಿತ್ತು. ಆ ಆದಾಯ ಈಗ ನಾಲ್ಕು ಪಟ್ಟು ಹೆಚ್ಚಾಗಿದೆ. ಆದರೆ ಭಾರತೀಯ ಸಿನಿಮಾ ರಂಗದ ಒಟ್ಟು ಮೌಲ್ಯ ಲೆಕ್ಕ ಹಾಕಲು ಆದಾಯವನ್ನಷ್ಟೆ ಪರಿಗಣಿಸಿದರೆ ಸಾಲದು, ಸಿನಿಮಾ ರಂಗದ ಒಟ್ಟು ವ್ಯವಹಾರವನ್ನೂ ಅಳೆಯಬೇಕಾಗುತ್ತದೆ. 'ಸ್ಟಾಟಿಸ್ಟಾ' ಸಂಸ್ಥೆಯ ಪ್ರಕಾರ 2020ರಲ್ಲಿ ಭಾರತೀಯ ಸಿನಿಮಾ ರಂಗದ ಒಟ್ಟು ಮೌಲ್ಯ 13 ಲಕ್ಷ ಕೋಟಿ. ಸಿನಿಮಾ ರಂಗದಲ್ಲಿ ತಿಂಗಳಿನಿಂದ ತಿಂಗಳಿಗೆ ಸಿನಿಮಾಗಳ ಬಜೆಟ್ ಏರುತ್ತದೆಯೇ ಹೊರತು ಇಳಿಯುವುದಿಲ್ಲ ಹಾಗಾಗಿ 2022 ರಲ್ಲಿ ಭಾರತೀಯ ಸಿನಿಮಾ ರಂಗದ ಒಟ್ಟು ಮೌಲ್ಯ 2020ಕ್ಕಿಂತಲೂ 50% ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಅಂದರೆ 2022ರಲ್ಲಿ ಭಾರತೀಯ ಸಿನಿಮಾ ರಂಗದ ಒಟ್ಟು ಮೌಲ್ಯ ಸರಿ ಸುಮಾರು 20 ಲಕ್ಷ ಕೋಟಿಗೂ ಹೆಚ್ಚು.

    English summary
    Indian cinema industry is the largest movie industry in the world. Indian cinema market is known for its heavy money liquidity. How big Indian cinema market is, what its value.
    Wednesday, January 5, 2022, 9:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X