ತಮ್ಮ ತಿಂಗಳ ಯೂಟ್ಯೂಬ್ ಆದಾಯ ಬಹಿರಂಗಪಡಿಸಿದ ಡಾ. ಬ್ರೋ; ಇಲ್ಲಿದೆ ಮಾಹಿತಿ

ಕರ್ನಾಟಕದ ಖ್ಯಾತ ಯೂಟ್ಯೂಬರ್ ಡಾ. ಬ್ರೋ ಸಿಕ್ಕಾಪಟ್ಟೆ ಜನಪ್ರಿಯತೆ ಸಾಧಿಸಿದ್ದಾರೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷ ಲಕ್ಷ ಫಾಲೋವರ್ಸ್ ಹೊಂದಿರುವ ಈತನಿಗೆ ಯೂಟ್ಯೂಬ್‌ನಲ್ಲಿ ಭಾರೀ ಸಬ್‌ಸ್ಕ್ರೈಬರ್ಸ್ ಇದ್ದಾರೆ. ಇನ್ನು ಡಾ. ಬ್ರೋ ತಿಂಗಳ ಆದಾಯ ಎಷ್ಟು ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿರುತ್ತದೆ.

ಯೂಟ್ಯೂಬ್‌ನಲ್ಲಿ ಹೆಚ್ಚು ಸಬ್‌ಸ್ಕ್ರೈಬರ್ಸ್ ಇದ್ದರೆ ವೀಡಿಯೋಗಳು ಹೆಚ್ಚು ಹೆಚ್ಚು ವೀವ್ಸ್ ಪಡೆದರೆ ಅದಕ್ಕೆ ತಕ್ಕಂತೆ ಹೆಚ್ಚು ಆದಾಯ ಬರುತ್ತದೆ. ದೇಶ ವಿದೇಶಗಳನ್ನು ಸುತ್ತಿ ವಿವಿಧ ಸ್ಥಳಗಳು, ಅದರ ವಿಶೇಷತೆಗಳ ಬಗ್ಗೆ ಡಾ. ಬ್ರೋ ವೀಡಿಯೋಗಳನ್ನು ಮಾಡುತ್ತಾರೆ. ಗಗನ್ ಶ್ರೀನಿವಾಸ್ ವೀಡಿಯೋಗಳಿಗೆ ಜನ ಕಾದು ಕೂರುತ್ತಾರೆ. ಸರಿಯಾದ ಮಾಹಿತಿ, ಸೊಗಸಾದ ನಿರೂಪಣೆ, ಉತ್ತಮ ಎಡಿಟಿಂಗ್ ಕ್ವಾಲಿಟಿಯಿಂದ ಡಾ. ಬ್ರೋ ವೀಡಿಯೋ ಸದ್ದು ಮಾಡುತ್ತವೆ.

How much money dr Bro aka Gagan srinivas is earning from YouTube every month

ಎಲ್ಲರಿಗೂ ದೇಶ, ವಿದೇಶಕ್ಕೆ ಹೋಗಿ ಅಲ್ಲಿನ ಜಾಗಗಳನ್ನು ಸುತ್ತಾಡಲು ಸಾಧ್ಯವಿಲ್ಲ. ಪ್ರವಾಸ ಅಂತ ಹೋದರೂ ಒಂದೆರಡು ದಿನಗಳಲ್ಲಿ ಏನೆಲ್ಲಾ ನೋಡಬಹುದೋ ಅದನ್ನು ನೋಡಿ ಬಂದುಬಿಡುತ್ತೇವೆ. ಅವುಗಳ ಬಗ್ಗೆ ಹೆಚ್ಚು ಮಾಹಿತಿ ಕಲೆ ಹಾಕುವ ಕೆಲಸಕ್ಕೂ ಕೈ ಹಾಕಲ್ಲ. ಪ್ರವಾಸ ಎಂದರೆ ಎಂಜಾಯ್ ಎಂದುಕೊಂಡುಬಿಡುತ್ತೇವೆ. ಆದರೆ ಗಗನ್ ಶ್ರೀನಿವಾಸ್ ವಿವಿಧ ದೇಶಗಳಲ್ಲಿ ಸುತ್ತಾಡಿ ಅಲ್ಲಿನ ನೈಜ ಚಿತ್ರಣವನ್ನು ವಿವರಿಸುತ್ತಾ ಸಾಗುತ್ತಾರೆ.

ನೋಡುಗರಿಗೆ ಕುಲಿತಲ್ಲೇ ಆ ದೇಶದ, ಆ ಜಾಗದ ಸಮಗ್ರ ಮಾಹಿತಿ ಕೊಡುತ್ತಾರೆ. ನಾವು ಅಲ್ಲೇ ಇದ್ದು ಆ ಜಾಗಗಳನ್ನು ವೀಕ್ಷಿಸಿದ ಅನುಭವ ಆ ವೀಡಿಯೋಗಳಲ್ಲಿ ಸಿಗುತ್ತದೆ. ಅದೇ ಕಾರಣಕ್ಕೆ ಸಾಕಷ್ಟು ಜನ ಆತನನ್ನು ಮೆಚ್ಚಿಕೊಂಡು ಫಾಲೋ ಮಾಡುತ್ತಿದ್ದಾರೆ. ಡಾ. ಬ್ರೋ ಯೂಟ್ಯೂಬ್‌ ಚಾನಲ್‌ಗೆ 25 ಲಕ್ಷಕ್ಕೂ ಅಧಿಕ ಸಬ್‌ಸ್ಕ್ರೈಬರ್ಸ್ ಇದ್ದಾರೆ. ಇನ್ನು ಪ್ರತಿ ವೀಡಿಯೋ ಲಕ್ಷ ಲಕ್ಷ ವೀವ್ಸ್, ಲೈಕ್ಸ್ ಗಿಟ್ಟಿಸಿಕೊಳ್ಳುತ್ತದೆ.

ಈಗಾಗಲೇ 20ಕ್ಕೂ ಅಧಿಕ ದೇಶಗಳನ್ನು ಡಾ. ಬ್ರೋ ಸುತ್ತಾಡಿದ್ದಾರೆ. ಅಲ್ಲಿನ ಜನ, ಅವರ ವೇಷಭೂಷಣ, ಭೌಗೋಳಿಕ ಇತಿಹಾಸ, ಅಲ್ಲಿನ ಸಂಪ್ರದಾಯ ಎಲ್ಲವನ್ನೂ ವಿವರಿಸಿದ್ದಾರೆ. ಗಗನ್ ​ಶ್ರೀನಿವಾಸ್ ಇನ್ನು 195 ದೇಶಗಳಿಗೆ ಪ್ರವಾಸ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಾರಿಯ ಬಿಗ್‌ಬಾಸ್ ಕನ್ನಡ ಶೋಗೆ ಗಗನ್ ಸ್ಪರ್ಧಿಯಾಗಿ ಹೋಗುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.

ಇತ್ತೀಚೆಗೆ ಗಗನ್ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಬಿಗ್‌ಬಾಸ್ ಶೋಗೆ ಹೋಗುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಹೋಗಲ್ಲ ಎಂದಿದ್ದಾರೆ. ಒಂದೇ ಮನೆಯಲ್ಲಿ 3 ತಿಂಗಳು ಇರುವುದಕ್ಕಿಂತ ಅದೇ ಸಮಯದಲ್ಲಿ ನಾನು 3 ದೇಶ ಸುತ್ತಬಹುದು ಎಂದು ಹೇಳಿದ್ದಾರೆ.

ಇನ್ನು ಅಭಿಮಾನಿಯೊಬ್ಬರು ಡಾ. ಬ್ರೋ ಆದಾಯದ ಬಗ್ಗೆ ಪ್ರಶ್ನಿಸಿದ್ದರು. ಅದಕ್ಕೆ ಅವರು ಉತ್ತರಿಸಿದ್ದಾರೆ. "ಕಳೆದ ಒಂದು ತಿಂಗಳ ನನ್ನ ಯೂಟ್ಯೂಬ್ ಸಂಬಳ 2 ಸಾವಿರದ 100 ಡಾಲರ್. ಅಂದರೆ ಒಂದು ಲಕ್ಷದ 76 ಸಾವಿರ ರೂಪಾಯಿ ಪ್ರತಿ ತಿಂಗಳಿಗೆ ಬರುತ್ತದೆ. ಆದರೆ ಇದರಲ್ಲಿ ಬಹುತೇಕ ಹಣ ಖರ್ಚಾಗಿಬಿಡುತ್ತದೆ. ಯಾವುದೇ ದೇಶಕ್ಕೆ ಹೋಗುವ ವಿಮಾನದ ಟಿಕೆಟ್, ಅಲ್ಲಿ ಉಳಿದುಕೊಳ್ಳಲು ವ್ಯಯಿಸುವ ಹಣ ಜಾಸ್ತಿ ಇರುತ್ತದೆ ಎಂದಿದ್ದಾರೆ.

ಒಂದು ಲಕ್ಷದ 76 ಸಾವಿರ ರೂಪಾಯಿಯಲ್ಲಿ ಎಲ್ಲಾ ನನ್ನ ಖರ್ಚು ಕಳೆದರೆ ಹತ್ತಿಪ್ಪತ್ತು ಸಾವಿರ ಉಳಿಯಬಹುದು ಎಂದು ಗಗನ್ ಮಾಹಿತಿ ನೀಡಿದ್ದಾರೆ. ಇದು ಬರೀ ನನ್ನ ಯೂಟ್ಯೂಬ್ ಆದಾಯ, ಜಾಹೀರಾತುಗಳಿಂದಲೂ ಆದಾಯ ಬರುತ್ತದೆ ಎಂದು ಡಾ. ಬ್ರೋ ತಿಳಿಸಿದ್ದಾರೆ.

More from Filmibeat

English summary
Kannada youtuber Dr Bro aka Gagan srinivas Opens Up About his YouTube Income;
Read more about: kannada tv sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X