twitter
    For Quick Alerts
    ALLOW NOTIFICATIONS  
    For Daily Alerts

    ಸಾವಿರ ಕೋಟಿ ಕಲೆಕ್ಷನ್! ಆದರೆ ನಿರ್ಮಾಪಕರಿಗೆ ಸಿಗುವ ಹಣವೆಷ್ಟು?

    |

    ಸಿನಿಮಾ ರಂಗದಲ್ಲಿ ಈಗೇನಿದ್ದರು ಸಾವಿರ ಕೋಟಿಗಳಲ್ಲೇ ಲೆಕ್ಕ. ಕೆಲವು ವರ್ಷಗಳ ಹಿಂದಷ್ಟೆ 'ನೂರು ಕೋಟಿ ಕ್ಲಬ್' ಎಂದು ಮಾತನಾಡುತ್ತಿದ್ದ ಚಿತ್ರರಂಗ ಈಗ ಕಲೆಕ್ಷನ್ ಅನ್ನು ಸಾವಿರ ಕೋಟಿಗಳಿಗೆ ಏರಿಸಿಕೊಂಡಿದೆ. ಈ ಪ್ರಗತಿ ಅತ್ಯಂತ ವೇಗವಾಗಿ ಆಗಿದೆ.

    ಆದರೆ ಸಿನಿಮಾಗಳು ಹೇಳುವ ಸಾವಿರ ಕೋಟಿ ಕಲೆಕ್ಷನ್‌ನ ಕತೆಯಲ್ಲಿ ಎಷ್ಟು ನಿಜವಿದೆ? ಒಳ್ಳೆಯ ಸಿನಿಮಾ ಒಂದು ಸಾವಿರ ಕೋಟಿ, 500 ಕೋಟಿ ಕಲೆಕ್ಷನ್ ಮಾಡುವುದು ನಿಜವೇ ಆದರು, ಆ ಹಣವೆಲ್ಲ ನಿರ್ಮಾಪಕ ಜೇಬು ಸೇರುತ್ತದೆಯೇ? ಎಂದರೆ ಉತ್ತರ ಇಲ್ಲವೆಂದೇ ಬರುತ್ತದೆ.

    ರಾಜ್ ಕಪೂರ್‌ ಅನ್ನು ಬೀದಿಗೆ ತಂದ ಸಿನಿಮಾದಿಂದ ಕೋಟಿಗಟ್ಟಲೆ ಬಾಚಿತ್ತು ರಷ್ಯಾದ ಕಂಪೆನಿ!ರಾಜ್ ಕಪೂರ್‌ ಅನ್ನು ಬೀದಿಗೆ ತಂದ ಸಿನಿಮಾದಿಂದ ಕೋಟಿಗಟ್ಟಲೆ ಬಾಚಿತ್ತು ರಷ್ಯಾದ ಕಂಪೆನಿ!

    'ಕೆಜಿಎಫ್ 2', 'RRR', 'ಪುಷ್ಪ', 'ವಿಕ್ರಂ' ಇನ್ನಿತರೆ ಕೆಲವು ಸಿನಿಮಾಗಳು ಇತ್ತೀಚೆಗೆ ಭಾರಿ ಅದ್ಧೂರಿ ಕಲೆಕ್ಷನ್ ಮಾಡಿವೆ. ಈ ಸಿನಿಮಾಗಳು ಸಾವಿರಾರು, ನೂರಾರು ಕೋಟಿ ಕಲೆಕ್ಷನ್ ಮಾಡಿರುವುದು ನಿಜವೇ ಆದರೂ ಸಿನಿಮಾದ ನಿರ್ಮಾಪಕರಿಗೆ ಇಷ್ಟೆಲ್ಲ ಹಣ ಹೋಗಿಲ್ಲ. ಹಾಗಿದ್ದರೆ ಸಿನಿಮಾದ ಕಲೆಕ್ಷನ್‌ಗಳ ಹಿಂದಿನ ಮರ್ಮವೇನು? ಸಾವಿರ ಕೋಟಿ ಅಥವಾ ಐದುನೂರು ಕೋಟಿ ಕಲೆಕ್ಷನ್ ಮಾಡುವ ಸಿನಿಮಾ ಒಂದರ ನಿರ್ಮಾಪಕನಿಗೆ ಧಕ್ಕುವ ಲಾಭವೆಷ್ಟು? ಲಾಭದಲ್ಲಿ ಯಾರಿಗೆ ಎಷ್ಟು ಪಾಲು ಸಲ್ಲುತ್ತದೆ? ಇಲ್ಲಿದೆ ಉದಾಹರಣೆ ಸಹಿತ ವಿಶ್ಲೇಷಣೆ.

    Recommended Video

    Darshan Thoogudeepa | ಮರಿ ಟೈಗರ್ ಜೊತೆ ಡಿಬಾಸ್ ಹೇಳಿದ್ದೇನು? | Vinod Prabhakar *Sandalwood
    1000 ಕೋಟಿ ಕಲೆಕ್ಷನ್‌ನಲ್ಲಿ ನಿರ್ಮಾಪಕನಿಗೆ ಉಳಿಯುವುದೆಷ್ಟು?

    1000 ಕೋಟಿ ಕಲೆಕ್ಷನ್‌ನಲ್ಲಿ ನಿರ್ಮಾಪಕನಿಗೆ ಉಳಿಯುವುದೆಷ್ಟು?

    ಒಂದು ಸಿನಿಮಾ ಬಿಡುಗಡೆ ಆಗಿ ಲಾಭದ ಹರಿವು ಆರಂಭವಾದ ಬಳಿಕ ಅದರ ಕೊನೆಯ ಭಾಗ ಸಾಮಾನ್ಯವಾಗಿ ನಿರ್ಮಾಪಕನಿಗೆ ಬರುತ್ತದೆ. ಅಂದರೆ ಯಾವುದಾರೂ ಸಿನಿಮಾ ಒಂದು ಸಾವಿರ ಕೋಟಿ ಗಳಿಸಿತೆಂದರೆ ಅದರ 18% ಅಂದರೆ ಸುಮಾರು 180 ಕೋಟಿ ಹಣ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಆ ಸಿನಿಮಾ ಪ್ರದರ್ಶಿತವಾದ ಚಿತ್ರಮಂದಿರಗಳು, ಮಲ್ಟಿಫ್ಲೆಕ್ಸ್‌ಗಳಿಗೆ ಸರಿ ಸುಮಾರು 25-30% ಮೊತ್ತ ಬಾಡಿಗೆ ರೂಪದಲ್ಲಿ ಹೋಗುತ್ತದೆ. ವಿತರಕರಿಗೆ ಸುಮಾರು 10% ರಿಂದ 15% ಕಮೀಷನ್ ಹೋಗುತ್ತದೆ. ಉಳಿದಿದ್ದರಲ್ಲಿ ಸಿನಿಮಾಕ್ಕೆ ಹೂಡಿಕೆಯಾದ ಬಂಡವಾಳವನ್ನು ಕಳೆಯಲಾಗುತ್ತದೆ. ಆಗ ಉಳಿಯುವ ಮೊತ್ತ ನಿರ್ಮಾಪಕನ ಲಾಭವಾಗುತ್ತದೆ. ಅಲ್ಲಿಗೆ ಸಾವಿರ ಕೋಟಿ ಕಲೆಕ್ಷನ್ ಮಾಡಿದ ಸಿನಿಮಾದಲ್ಲಿ ನಿರ್ಮಾಪಕನಿಗೆ ಕೊನೆಗೆ ಸಿಗುವುದು ಸುಮಾರು 150-200 ಕೋಟಿ ಅಷ್ಟೆ!

    'ಸುಲ್ತಾನ್' ಸಿನಿಮಾದಿಂದ ನಿರ್ಮಾಪಕಗೆ ಬಂದ ಹಣವೆಷ್ಟು?

    'ಸುಲ್ತಾನ್' ಸಿನಿಮಾದಿಂದ ನಿರ್ಮಾಪಕಗೆ ಬಂದ ಹಣವೆಷ್ಟು?

    ಒಂದು ಉದಾಹರಣೆಯೊಂದಿಗೆ ಈ ಲೆಕ್ಕಾಚಾರ ಗಮನಿಸುವುದಾದರೆ, 2016ರಲ್ಲಿ ಬಿಡುಗಡೆ ಆದ ಸಲ್ಮಾನ್ ಖಾನ್ ನಟನೆಯ 'ಸುಲ್ತಾನ್' ಸಿನಿಮಾ ಭಾರಿ ಹಿಟ್ ಆಗಿತ್ತು. ಆರು ವರ್ಷಗಳ ಹಿಂದೆ ಆ ಸಿನಿಮಾ 500 ಕೋಟಿ ಕಲೆಕ್ಷನ್ ಮಾಡಿತ್ತು. ಇದು ಭಾರಿ ದೊಡ್ಡ ಕಲೆಕ್ಷನ್ ಎನಿಸಿತ್ತು ಆಗ. ಆದರೆ ಈ ಕಲೆಕ್ಷನ್‌ ಆದ ಹಣದಲ್ಲಿ ನಿರ್ಮಾಣ ಸಂಸ್ಥೆ ಯಶ್‌ರಾಜ್‌ ಫಿಲಮ್ಸ್‌ಗೆ ಧಕ್ಕಿದ್ದು (ನಿರ್ಮಾಪಕನಾಗಿ) ಸುಮಾರು 54 ಕೋಟಿ ರುಪಾಯಿ ಮಾತ್ರ! ಹಾಗಿದ್ದರೆ ಉಳಿದ ಹಣವೆಲ್ಲ ಎಲ್ಲಿ ಹೋಯಿತು? ಲೆಕ್ಕ ಹೀಗಿದೆ ನೋಡಿ...

    106 ಕೋಟಿ ತೆರಿಗೆ ಪಾವತಿ ಮಾಡಲಾಯ್ತು!

    106 ಕೋಟಿ ತೆರಿಗೆ ಪಾವತಿ ಮಾಡಲಾಯ್ತು!

    500 ಕೋಟಿ ಗಳಿಸಿದ ಈ ಸಿನಿಮಾ 106 ಕೋಟಿ ಹಣವನ್ನು ತೆರಿಗೆ ರೂಪದಲ್ಲಿ ಪಾವತಿಸಿತು. ಇನ್ನುಳಿದ 394 ಕೋಟಿಯಲ್ಲಿ. 79 ಕೋಟಿ ರುಪಾಯಿ ಹಣವನ್ನು ವಿತರಕರ ಪಾಲೆಂದು ನೀಡಲಾಯಿತು. 20 ಕೋಟಿ ರುಪಾಯಿ ಮಾರ್ಕೆಟಿಂಗ್‌ಗೆ ಖರ್ಚು ಮಾಡಲಾಗಿದ್ದ ಕಾರಣ ವಿತರಕರ ಷೇರು 59 ಕೋಟಿಯಷ್ಟೆ ಉಳಿಯಿತು. ಈ ಸಿನಿಮಾಕ್ಕೆ ಯಶ್‌ರಾಜ್ ಸಂಸ್ಥೆಯೇ ವಿತರಕ ಸಂಸ್ಥೆ ಸಹ ಆಗಿತ್ತು. 394 ಕೋಟಿಯಲ್ಲಿ ವಿತರಕರ ಷೇರು 79 ಕೋಟಿ ತೆಗೆದರೆ ಉಳಿದಿದ್ದು 315 ಕೋಟಿ.

    ಪ್ರದರ್ಶಕರಿಗೆ 157 ಕೋಟಿ

    ಪ್ರದರ್ಶಕರಿಗೆ 157 ಕೋಟಿ

    ಈ 315 ಕೋಟಿಯಲ್ಲಿ 157 ಕೋಟಿ ರುಪಾಯಿಗಳು ಪ್ರದರ್ಶಕರ ಪಾಲಾಯಿತು. ಅಂದರೆ ಚಿತ್ರಮಂದಿರಗಳು, ಮಲ್ಟಿಫ್ಲೆಕ್ಸ್‌ಗಳಿಗೆ ಈ ಹಣ ಪಾವತಿಯಾಯ್ತು. ಇನ್ನುಳಿದದ್ದು 158 ಕೋಟಿ. 'ಸುಲ್ತಾನ್' ಸಿನಿಮಾ ನಿರ್ಮಾಣ ಮಾಡಲು ಯಶ್‌ ರಾಜ್ ಸಂಸ್ಥೆ 70 ಕೋಟಿ ಖರ್ಚು ಮಾಡಿತ್ತು. ಅದನ್ನು ತೆಗೆದರೆ ಉಳಿದಿದ್ದು ಕೇವಲ 88 ಕೋಟಿ. ಇದರ ಜೊತೆಗೆ 'ಸುಲ್ತಾನ್' ಸಿನಿಮಾವನ್ನು ಒಟಿಟಿ, ಟಿವಿಗಳಿಗೆ ಹಕ್ಕು ಮಾರಾಟ ಮಾಡಿ ಸುಮಾರು 20 ಕೋಟಿ ಹಣವನ್ನು ಯಶ್ ರಾಜ್ ಸಂಸ್ಥೆ ಗಳಿಸಿತ್ತು. ಹಾಗಾಗಿ ಸಿನಿಮಾದ ನಿವ್ವಳ ಲಾಭ 108 ಕೋಟಿ ರುಪಾಯಿಗಳಾಯಿತು.

    ಸಲ್ಮಾನ್ ಖಾನ್‌ಗೆ ಅರ್ಧ ಪಾಲು ನೀಡಲಾಯ್ತು

    ಸಲ್ಮಾನ್ ಖಾನ್‌ಗೆ ಅರ್ಧ ಪಾಲು ನೀಡಲಾಯ್ತು

    ಯಶ್ ರಾಜ್ ಸಂಸ್ಥೆಯು ನಿರ್ಮಾಪಕನಾಗಿ ಈ ಸಿನಿಮಾದಿಂದ 108 ಕೋಟಿ ಗಳಿಸಿತು. ಹಾಗೂ ವಿತರಕನಾಗಿ 59 ಕೋಟಿ ಗಳಿಸಿತು. ಅಲ್ಲಿಗೆ ಒಟ್ಟು ಲಾಭ 167 ಕೋಟಿ ಯಾಯಿತು. ಈ ನಿವ್ವಳ ಲಾಭದಲ್ಲಿ ಸಿನಿಮಾದ ನಾಯಕ ಸಲ್ಮಾನ್ ಖಾನ್‌ಗೆ ಅರ್ಧದಷ್ಟು ಹಣವನ್ನು ಒಪ್ಪಂದಂತೆ ಪಾಲು ನೀಡಲಾಯ್ತು ಅಂದರೆ 83.5 ಕೋಟಿ ರುಪಾಯಿಯನ್ನು ಸಲ್ಮಾನ್ ಖಾನ್‌ಗೆ ನೀಡಲಾಯ್ತು. ಅಲ್ಲಿಗೆ ಯಶ್‌ರಾಜ್‌ ಫಿಲಮ್ಸ್‌ಗೆ ಉಳಿದಿದ್ದು 83.5 ಕೋಟಿ ರುಪಾಯಿ. ಅದೂ ವಿತರಕರ ಪಾಲು ಸೇರಿಸಿ, ಒಂದೊಮ್ಮೆ ಈ ಸಿನಿಮಾವನ್ನು ಬೇರೆ ಸಂಸ್ಥೆ ವಿತರಣೆ ಮಾಡಿದ್ದರೆ ಯಶ್‌ರಾಜ್‌ ಸಂಸ್ಥೆಗೆ ಉಳಿಯುತ್ತಿದ್ದಿದ್ದು ಕೇವಲ 54 ಕೋಟಿ ರುಪಾಯಿ ಮಾತ್ರ.

    10% ಅಷ್ಟೆ ನಿರ್ಮಾಪಕನಿಗೆ ಉಳಿಯಿತು

    10% ಅಷ್ಟೆ ನಿರ್ಮಾಪಕನಿಗೆ ಉಳಿಯಿತು

    500 ಕೋಟಿ ಗಳಿಸಿದ ಸಿನಿಮಾದ 10% ಹಣವಷ್ಟೆ ನಿರ್ಮಾಪಕನಿಗೆ ಉಳಿಯಿತು. ಆದರೆ ಎಲ್ಲ ಸಿನಿಮಾ ನಿರ್ಮಾಣ ಸಂಸ್ಥೆಗಳು ನಾಯಕ ನಟನೊಟ್ಟಿಗೆ ಲಾಭ ಹಂಚಿಕೆ ಒಪ್ಪಂದದ ಮೇಲೆ ಕೆಲಸ ಮಾಡುವುದಿಲ್ಲ. ಕೆಲವು ಸ್ಟಾರ್ ನಟರಷ್ಟೆ ಹೀಗೆ ಲಾಭ ಹಂಚಿಕೆ ವಿಧಾನದಲ್ಲಿ ಕೆಲಸ ಮಾಡುತ್ತಾರೆ. ಎಲ್ಲ ನಟರಿಗೂ ಸಂಭಾವನೆಯನ್ನು ನಿರ್ಮಾಪಕರು ನೀಡಿದರೆ ಇನ್ನಷ್ಟು ಹೆಚ್ಚು ಹಣ ನಿರ್ಮಾಣ ಸಂಸ್ಥೆಗೆ ಉಳಿಯುತ್ತದೆ. ಆದರೆ ಸಿನಿಮಾ ಫ್ಲಾಪ್ ಆದರೆ ಎಲ್ಲ ನಷ್ಟವನ್ನು ಅವರೊಬ್ಬರೆ ಭರಿಸಬೇಕಾಗುತ್ತದೆ. ಪಾಲು ಹಂಚಿಕೆ ಮಾದರಿಯಲ್ಲಿ ಲಾಸ್ ಆದರೆ ಸಿನಿಮಾದ ನಾಯಕನೂ ನಷ್ಟ ಭರಿಸಬೇಕಾಗುತ್ತದೆ!

    English summary
    How Much money will producer get if a movie collects 1000 crore or 500 crore rs. Here is a example based analysis.
    Thursday, June 30, 2022, 14:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X