ಹೃತಿಕ್ ರೋಷನ್ ಹುರಿಗಟ್ಟಿದ ದೇಹ ಹಾಗೂ ಏಯ್ಟ್ ಪ್ಯಾಕ್ಸ್ ಸೀಕ್ರೆಟ್ ಏನು?
ಬಾಲಿವುಡ್ ನಟ ಹೃತಿಕ್ ರೋಷನ್ ಪ್ರಪಂಚದಾದ್ಯಂತ ಅಭಿಮಾನಿ ಬಳಗ ಹೊಂದಿದ್ದಾರೆ. ಅದ್ಭುತ ಆಕ್ಷನ್, ಡ್ಯಾನ್ಸ್ ಮತ್ತು ಅಭಿನಯದಿಂದ ಮೋಡಿ ಮಾಡುತ್ತಾ ಬರ್ತಿದ್ದಾರೆ. ತಮ್ಮ ದೈಹಿಕ ಸಮಸ್ಯೆಗಳನ್ನೆಲ್ಲಾ ಮೆಟ್ಟಿ ಸೂಪರ್ ಸ್ಟಾರ್ ಆಗಿ ಮೆರೆಯುತ್ತಾರೆ. ಫಿಟ್‌ನೆಸ್ ವಿಚಾರದಲ್ಲಿ ಟ್ರೆಂಡ್ ಸೆಟ್ ಮಾಡಿದ್ದಾರೆ. ಹೃತಿಕ್ ಲುಕ್ಕು, ಮೈಕಟ್ಟು ನೋಡಿ ಅಭಿಮಾನಿಗಳು ಗ್ರೀಕ್ ಗಾಡ್ ಅಂತ್ಲೇ ಕೊಂಡಾಡುತ್ತಾರೆ.
ಸಿಕ್ಸ್‌ಪ್ಯಾಕ್ ಅನ್ನೋದು ಈಗ ಸರ್ವೇ ಸಾಧಾರಣ ಎನ್ನುವಂತಾಗಿಬಿಟ್ಟಿದೆ. ಒಂದ್ಕಾಲದಲ್ಲಿ ಸಲ್ಮಾನ್ ಖಾನ್ ಸಿಕ್ಸ್‌ಪ್ಯಾಕ್ಸ್ ಹ್ಯಾಬ್ಸ್ ಮಾಡಿ ಸಂಚಲನ ಸೃಷ್ಟಿಸಿದ್ದರು. ಬಳಿಕ ಸಲ್ಲುನ ಮೀರಿಸಿ ಹೃತಿಕ್ ರೋಷನ್ ಏಯ್ಟ್ ಪ್ಯಾಕ್ ಮಾಡಿ ಎಲ್ಲರ ಹುಬ್ಬೇರಿಸಿದ್ದರು. ಸಿನಿಮಾ ಶೂಟಿಂಗ್ ಇಲ್ಲದೇ ಕೆಲವೊಮ್ಮೆ ದಪ್ಪಗಾಗುವ ಹೃತಿಕ್ ಕೆಲವೇ ದಿನಗಳಲ್ಲಿ ಮತ್ತೆ ತಮ್ಮ ಹುರಿಗಟ್ಟಿದ ದೇಹ ಪ್ರದರ್ಶಿಸಿ ಶಾಕ್ ಕೊಡುತ್ತಾರೆ.

ಹೃತಿಕ್ ರೋಷನ್‌ಗೆ 'ಸೆಕ್ಸಿಯೆಸ್ಟ್ ಮ್ಯಾನ್ ಆಫ್ ಏಷ್ಯಾ' ಹಾಗೂ 'ಥರ್ಡ್ ಮೋಸ್ಟ್ ಹ್ಯಾಂಡ್ ಸಮ್ ಮ್ಯಾನ್ ಆನ್ ಪ್ಲಾನೆಟ್' ಎನ್ನುವ ಬಿರುದುಗಳು ಸಿಕ್ಕಿತ್ತು. ಅಭಿಮಾನಿಗಳ ಪ್ರೀತಿಯ ಗ್ರೀಕ್‌ಗಾಡ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು, ಆಪ್ತರು ಸೋಶಿಯಲ್ ಮೀಡಿಯಾದಲ್ಲಿ ನೆಚ್ಚಿನ ನಟನಿಗೆ ಶುಭಾಶಯ ಕೋರುತ್ತಿದ್ದಾರೆ. ಫಿಟ್‌ನೆಸ್, ಸಿಕ್ಸ್‌ಪ್ಯಾಕ್ ವಿಚಾರದಲ್ಲಿ ಬೆಂಚ್ ಮಾರ್ಕ್ ಕ್ರಿಯೇಟ್ ಮಾಡಿರುವ ಹೃತಿಕ್ ಇದಕ್ಕಾಗಿ ಏನೆಲ್ಲಾ ಮಾಡ್ತಾರೆ? ಡಯೆಟ್ ಹೇಗಿರುತ್ತೆ? ತಿಳಿಯೋಣ ಬನ್ನಿ.
1. ಕಾರ್ಡಿಯೋ ಟ್ರೈನಿಂಗ್
ಕ್ಯಾಲೋರಿಗಳನ್ನು ಕರಗಿಸಲು ಕಾರ್ಡಿಯೋ ಉತ್ತಮ ವ್ಯಾಯಾಮ. ಇದು ಆರೋಗ್ಯಕ್ಕೂ ಬಹಳ ಒಳ್ಳೆಯದು. ಕಾರ್ಡಿಯೋ ವ್ಯಾಯಾಮದ ಶಕ್ತಿ ಏನು ಎನ್ನುವುದನ್ನು ಅರಿತಿರುವ ಹೃತಿಕ್ ತಪ್ಪದೇ ಈ ವ್ಯಾಯಾಮಗಳನ್ನು ಮಾಡುತ್ತಾರೆ. ಬರೀ ಟ್ರೆಡ್‌ಮಿಟ್ ಮೇಲೆ ನಡೆಯುವುದು, ಓಡುವುದು ಮಾತ್ರವಲ್ಲ, ಅದನ್ನು ಬಿಟ್ಟು ಸಾಕಷ್ಟು ಕಾರ್ಡಿಯೋ ವ್ಯಾಯಾಮ ಮಾಡ್ತಾರೆ.
2. ಭಾರ ಎತ್ತುವ ಕಸರತ್ತು
ವರ್ಕಟ್‌ನಲ್ಲಿ ಭಾರ ಎತ್ತುವುದು ಕೂಡ ಉತ್ತಮ ವ್ಯಾಯಾಮ. ಹುರಿಗಟ್ಟಲು ಇದು ಬಹಳ ಸಹಾಯಕಾರಿ. ಹೃತಿಕ್ ರೋಷನ್ ಇದನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಭಾರ ಎತ್ತುವ ವ್ಯಾಯಾಮವನ್ನು ಬಹಳ ಇಷ್ಟಪಟ್ಟು ಕ್ರಿಶ್ ಮಾಡ್ತಾರೆ. ಆರ್ಮ್ಸ್, ಆಬ್ಸ್, ಬೈಸಿಪ್ಸ್, ಶೋಲ್ಡರ್ಸ್ ಹೀಗೆ ದೇಹದ ಪ್ರತಿ ಸ್ನಾಯುಗಳಿಗೂ ವ್ಯಾಯಾಮ ಮಾಡ್ತಾರೆ.
3. ಕೋರ್ ವರ್ಕೌಟ್
ಬೀಸ್ಟ್ ಹೋಲ್ಡ್, ಟಕ್ ಕ್ರಂಚ್, ಸೈಡ್ ಕಿಕ್, ಮೌಂಟೇಂನ್ ಕ್ಲೈಂಬರ್ಸ್, ಡೆಡ್‌ಬಗ್ ಹೀಗೆ ಹಲವು ಕೋರ್ ವರ್ಕೌಟ್‌ಗಳನ್ನು ಹೃತಿಕ್ ರೋಷನ್ ಮಾಡುತ್ತಾರೆ. ಬಾಲಿವುಡ್ ನಟನ ರಿಪ್ಡ್ ಮಸಲ್ಸ್ ಹಾಗೂ ಟೋನ್ಡ್ ಆಬ್ಸ್‌ನ ಸೀಕ್ರೆಟ್ ಇದೇ ಅಂದ್ರೆ ತಪ್ಪಾಗಲ್ಲ.
4. ಸ್ಟ್ರೆಚಿಂಗ್ ವ್ಯಾಯಾಮಗಳು
ದೇಹವನ್ನು ವಿವಿಧ ಕೋನಗಳಲ್ಲಿ ಚಾಚಿ ಸ್ಟ್ರೆಚಿಂಗ್ ವ್ಯಾಯಾಮ ಮಾಡುವುದು ಕೂಡ ಮುಖ್ಯ. ವರ್ಕೌಟ್ ಆರಂಭಿಸುವುದಕ್ಕು ಮುನ್ನ ಮುಗಿಸಿದ ಬಳಿಕ ದೇಹದ ಭಾಗಗಳನ್ನು, ಸ್ನಾಯುಗಳನ್ನು, ಸ್ಟ್ರೆಚಿಂಗ್ ಮಾಡುವುದುನ್ನು ಹೃತಿಕ್ ರೋಷನ್ ಮರೆಯುವುದಿಲ್ಲ. ಇದು ದೈಹಿಕ ಆರೋಗ್ಯಕ್ಕೂ ಉತ್ತಮ.

5. ಡಯೆಟ್
ಎಷ್ಟೇ ವರ್ಕೌಟ್ ಮಾಡಿದರೂ ಡಯೆಟ್ ಬಹಳ ಅವಶ್ಯಕ. ಬಾಯಿ ಕಟ್ಟದ ಹೊರತು ಬರೀ ಕಸರತ್ತು ಮಾಡುವುದರಿಂದ ತೂಕ ಇಳಿಸಲು ಸಾಧ್ಯವಿಲ್ಲ. ಪ್ರೋಟಿನ್ ಇರುವ ತರಕಾರಿ, ಹಣ್ಣು, ಬೇಳೆ, ಮೊಟ್ಟೆ ರೀತಿಯ ಆಹಾರವನ್ನು ಹೃತಿಕ್ ಸೇವಿಸುತ್ತಾರೆ. ತರಬೇತುದಾರರ ಮಾರ್ಗದರ್ಶನದಂತೆ ಹೃತಿಕ್ ವರ್ಕೌಟ್, ಡಯೆಟ್ ಇರುತ್ತದೆ.
6. ಮೈಮರೆಯುವಂತಿಲ್ಲ
ವಯಸ್ಸು 50 ದಾಟಿದರೂ ಹೃತಿಕ್ ರೋಷನ್ ಫಿಟ್‌ನೆಸ್, ವರ್ಕೌಟ್ ವಿಚಾರದಲ್ಲಿ ಎಂದೂ ರಾಜಿಯಾಗುವುದಿಲ್ಲ. ಸಿನಿಮಾ ನಟರು ಕೋಟ್ಯಾಧಿಪತಿಗಳು, ಬಹಳ ಹಣವಿದೆ ಅವರಿಗೆ ಸಿಕ್ಸ್‌ಪ್ಯಾಕ್, ಏಯ್ಟ್ ಪ್ಯಾಕ್ ಮಾಡುವುದು ಕಷ್ಟ ಏನಲ್ಲ ಎಂದುಕೊಳ್ಳುತ್ತಾರೆ. ಅದೇ ನಿಜವಾಗಿದ್ದರೆ ಎಲ್ಲಾ ಶ್ರೀಮಂತರು ಸಿಕ್ಸ್‌ಪ್ಯಾಕ್ ಮಾಡಿಕೊಂಡಿರಬೇಕಿತ್ತು. ಎಷ್ಟೇ ಹಣ ಇದ್ದರೂ ಏನೇ ಅನುಕೂಲಗಳಿದ್ದರೂ ದೇಹ ದಂಡಿಸದ ಹೊರತು ಪ್ರತಿಫಲ ಸಿಗುವುದಿಲ್ಲ. ಹೃತಿಕ್ ವರ್ಕೌಟ್, ಡಯೆಟ್ ಎಂದೂ ತಪ್ಪಿಸುವುದಿಲ್ಲ.


Click it and Unblock the Notifications











