ಅಭಿಮಾನಿಗಳ ಹೃದಯ ಗೆದ್ದ ನಮ್ರತಾ ಗೌಡ ಪ್ರೀತಿಯಲ್ಲಿ ಸೋತಿದ್ದು ಹೇಗೆ ? ನಾಗಿಣಿಯನ್ನು ಪ್ರೀತಿಸಿದ್ದು ಯಾರು ?
ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ, ಪ್ರೀತಿಯ ಕೆಲವೊಮ್ಮೆ ಕಾಡುತ್ತೆ. ಪ್ರೀತಿಯಲ್ಲಿ ನೋವು ಸಹಜವಾದರೂ ಅದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಅದರಿಂದಾಗುವ ನೋವು ಶಾಶ್ವತವಾಗಿಲ್ಲದಿದ್ದರೂ ಆ ಕ್ಷಣಕ್ಕೆ ಮಾತ್ರ ಅದು ನುಂಗಲಾರದ ತುತ್ತು. ಎಲ್ಲಾ ಉತ್ಸಾಹ, ಆಸಕ್ತಿ, ಖುಷಿಯ ಕ್ಷಣಗಳನ್ನು ಕಸಿದುಕೊಳ್ಳೋ ಆ ಬ್ರೇಕ್ ಅಪ್‌ನ ನೋವು ಸಹಿಸಿಕೊಳ್ಳೋದಕ್ಕೆ ಸಾಧ್ಯ ಆಗದೇ ಇರುವುದಕ್ಕೆ ಕಾರಣಗಳೇನು ಎಂಬುದು ಹೃದಯವಂತರ ಪ್ರಶ್ನೆ. ಈ ಪ್ರಶ್ನೆಗೆ ಲವ್ ಗುರುಗಳು ಇನ್ನು ಉತ್ತರವನ್ನು ನೀಡದೇ ಇದ್ದರೂ ನಮ್ರತಾ ಗೌಡ ಇದೇ ಮೊದಲ ಬಾರಿ ತಮ್ಮ ಮನದ ನೋವನ್ನು ಹೊರ ಹಾಕಿದ್ದಾರೆ. ಪ್ರೀತಿಯಲ್ಲಿ ಬಿದ್ದು ಕಣ್ಣೀರು ಹಾಕಿದ ದಿನಗಳನ್ನು ಮೆಲುಕು ಹಾಕಿದ್ದಾರೆ.
ಹೌದು, ಈ ಕುರಿತು ರಾಜೇಶ್ ಗೌಡ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನಮ್ರತಾ ಗೌಡ ನನ್ನ ಬದುಕಿನಲ್ಲಿ ಪ್ರೀತಿ ಅರಳಿದ್ದು ಕೇವಲ ಒಂದು ಬಾರಿ ಮಾತ್ರ, ಅದೇ ಮೊದಲು ಅದೇ ಕೊನೆ ಎಂದು ಹೇಳಿದ್ದಾರೆ. ನಾನು ಆಗಷ್ಟೇ ಹತ್ತನೇ ತರಗತಿ ಮುಗಿಸಿ, ಕಾಲೇಜ್ ಮೆಟ್ಟಿಲೇರಿದ್ದೇ ಆಗ ನನಗೆ ಸ್ನೇಹಿತರು ಎಂದು ಇದ್ದಿದ್ದು ಕೇವಲ ಹುಡುಗರೇ ಎಂದು ಹೇಳಿರುವ ನಮ್ರತಾ, ನಾನು ಮೊದಲಿಂದ ಹುಡುಗರ ರೀತಿಯಲ್ಲಿಯೇ ಬೆಳೆದು ಬಂದವಳು, ಟಾಮ್ ಬಾಯ್ ತರ, ಹೀಗಾಗಿ ಇಬ್ಬರು ಮೂವರು ಹುಡುಗಿಯರು ಮಾತ್ರ ನನಗೆ ಸ್ನೇಹಿತೆಯರಾಗಿದ್ದರು ಎಂದು ಹೇಳಿದ್ದಾರೆ.

ಇನ್ನು ಇದೇ ಸಮಯದಲ್ಲಿ ಕಾಲೇಜ್‌ನಲ್ಲಿ ಹುಡುಗ ಒಬ್ಬ ನನ್ನ ಹಿಂದೆ ಬಿದ್ದ ಆದರೆ ನಾನು ಮೊದಲು ಆ ವ್ಯಕ್ತಿಯನ್ನು ದ್ವೇಷ ಮಾಡುತ್ತಿದ್ದೆ, ಇವನ್ಯಾರು ಗುರು ನನ್ನ ಹಿಂದೆ ಬಿದ್ದು ನನಗೆ ಯಾಕೆ ಹಿಂಸೆ ಕೊಡ್ತಿದ್ದಾನೆ ಎಂದು ನನಗೆ ಅನಿಸುತ್ತಿತ್ತು ಎಂದಿರುವ ನಮ್ರತಾ ಮುಂದೆ ಎರಡು ಮೂರು ತಿಂಗಳಾದ ನಂತರ ನನ್ನಲ್ಲಿಯೂ ಕೂಡ ಪ್ರೀತಿಯ ಭಾವನೆ ಹುಟ್ಟಿಕೊಂಡಿತು ಆ ವ್ಯಕ್ತಿಯ ಮೇಲೆ ಪ್ರೀತಿ ಆಯ್ತು ಎಂದು ಹೇಳಿದ್ದಾರೆ.
ಮುಂದುವರೆದು ಆ ಕಾಲದಲ್ಲಿ ನಮ್ಮ ಇಬ್ಬರ ಲವ್ ಸ್ಟೋರಿ ಇಡೀ ಕಾಲೇಜ್‌ನಲ್ಲಿಯೇ ಜನಜನಿತವಾಗಿತ್ತು, ನಾನು ಕೂಡ ಮನೆಯಲ್ಲಿ ಹೀಗೆ ಒಬ್ಬ ಹುಡುಗ ನನಗೆ ಮೆಸೇಜ್ ಮಾಡ್ತಿದ್ದಾನೆ, ಕಾಲೇಜ್‌ಗೆ ಹೋದರೆ ಕಾಡಿಸುತ್ತಾನೆ ಎಂದೆಲ್ಲ ಹೇಳಿದ್ದೇ ಎಂದು ಹೇಳಿರುವ ನಮ್ರತಾ ನಮಗೆ ಆಗ ಬಹುಶಃ ಹದಿನೈದು ಹದಿನಾರು ವರ್ಷ ಇರಬಹುದು, ಖಂಡಿತ ಪ್ರೀತಿಯಲ್ಲಿ ಬೀಳುವ ವಯಸ್ಸು ಅಲ್ಲ ಅದು ಹೀಗಾಗಿ ಪರಿಸ್ಥಿತಿಯನ್ನು ನಿಭಾಯಿಸುವುದು ನಮಗೆ ಗೊತ್ತಾಗಲಿಲ್ಲ ಎಂದು ಹೇಳಿದ್ದಾರೆ.
ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು ಆದರೆ ಎರಡನೇ ವರ್ಷದ ಪಿಯುಸಿ ಮುಗಿದ ನಂತರ ನಾನು ಈ ಕಡೆ ಆಕ್ಟಿಂಗ್ ಮಾಡಲು ಬಂದೆ ಆಗ ಆ ವ್ಯಕ್ತಿಗೆ ನಾನು ಹೆಚ್ಚಿನ ಸಮಯ ನೀಡಲು ಸಾಧ್ಯವಾಗುತ್ತಿರಲಿಲ್ಲ, ಇದರಿಂದ ಆ ವ್ಯಕ್ತಿ ಗಮನ ಕೂಡ ಬೇರೆ ಕಡೆ ಹೋಯಿತು ಎಂದು ಹೇಳಿರುವ ನಮ್ರತಾ ಕೊನೆ ಕೊನೆಗೆ ನಮ್ಮ ಸಂಬಂಧ ತೀರಾ ಹಾಳಾಯ್ತು, ಬದುಕು ಅಸ್ತವಸ್ತ್ಯ ಎಂದು ಅನಿಸಲು ಶುರುವಾಯ್ತು ಎಂದು ಹೇಳಿದ್ದಾರೆ.
ಇದೆಲ್ಲದರಿಂದ ಮಾನಸಿಕವಾಗಿ ನಾನು ಕುಗ್ಗಿ ಹೋಗಿದ್ದೇ, ಕಣ್ಣೀರು ಹಾಕುತ್ತಿದ್ದೆ, ಆದರೂ ಕೂಡ ಆ ಸಂಬಂಧ ಉಳಿಸಿಕೊಳ್ಳುವ ಪ್ರಯತ್ನವನ್ನು ನಾನು ತುಂಬಾ ಮಾಡಿದೆ, ನನ್ನ ಬದುಕಿನಲ್ಲಿ ಬಂದ ಮೊದಲ ಮತ್ತು ಕೊನೆಯ ಹುಡುಗ ನೀನೆ ಆಗಬೇಕು ಎಂದೆಲ್ಲ ಹೇಳಿದ್ದೇ, ಸಂಬಂಧ ಉಳಿಸಿಕೊಳ್ಳಲು ಆ ವ್ಯಕ್ತಿಯ ಮೇಲೆ ಒತ್ತಡವನ್ನು ಹಾಕಿದ್ದೆ, ನೀನೆ ಬೇಕು ಅಂತ ನನ್ನ ಹಿಂದೆ ಬಂದು ಈಗ ಹೀಗೆ ಮಾಡುತ್ತಿದ್ದಾರಲ್ಲ ಎಂದು ನೋವು ಅನುಭವಿಸಿದೆ ಎಂದು ಹೇಳಿರುವ ನಮ್ರತಾ ಗೌಡ ಕೊನೆಗೊಂದು ದಿನ ಒಂದು ಹಂತದಲ್ಲಿ ನನಗೂ ಸಾಕಾಯ್ತು ಬೇಡ ಎಂದು ನಾನು ಕೂಡ ಬಿಟ್ಟೆ ಎಂದು ಹೇಳಿದ್ದಾರೆ. ಇದೇ ಮೊದಲು ಇದೇ ಕೊನೆ ಆ ನಂತರ ನನಗೆ ಯಾರ ಮೇಲೆ ಮತ್ತೆ ಪ್ರೀತಿಯಾಗಲಿಲ್ಲ ಎಂದು ಕೂಡ ಹೇಳಿದ್ಧಾರೆ. ಈಗ ಆ ವ್ಯಕ್ತಿ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ಕೂಡ ನಮ್ರತಾ ಗೌಡ ಹೇಳಿದ್ದಾರೆ.
ಹೀಗೆ ಪ್ರೀತಿ ತರುವ ಈ ನೋವು ಸಂತೋಷದಿಂದ ಬದುಕಿನಲ್ಲಿ ಪಾಠವನ್ನು ಕಲಿತ ನಮ್ರತಾ ಗೌಡ ಬಿಗ್ ಬಾಸ್ ಮನೆಯಲ್ಲಿದ್ದಾಗ ಸ್ನೇಹಿತ್ ಜೊತೆಗಿನ ಸಲುಗೆಯಿಂದ ಇದ್ದರು. ಇವರ ಈ ಸಲುಗೆಯನ್ನೇ ಅನೇಕರು ಪ್ರೀತಿ ಎಂದುಕೊಂಡಿದ್ದರು. ಸ್ನೇಹಿತ್ ಮತ್ತು ನಮ್ರತಾ ಮದುವೆಯಾಗ್ತಾರೆ ಎಂದು ಭವಿಷ್ಯವನ್ನು ಹೇಳಿದ್ದರು. ಇದಕ್ಕೆ ಪೂರಕವಾಗಿ ಸ್ನೇಹಿತ್ ಮನೆಯಾಚೆ ಹೋಗಬೇಕಾದ ಪರಿಸ್ಥಿತಿ ಬಂದಾಗ ನಮ್ರತಾ ಕಣ್ಣೀರಿಟ್ಟಿದ್ದರು. ಆದರೆ, ಆ ನಂತರ ಏನಾಯಿತು ಗೊತ್ತಿಲ್ಲ. ಸ್ನೇಹಿತ್ ಮತ್ತು ನಮ್ರತಾ ಸಂಬಂಧ ಮೊದಲಿನಂತೆ ಇಲ್ಲ ಎನ್ನುವ ಮಾತು ಎಲ್ಲೆಡೆ ಕೇಳಿ ಬರಲು ಶುರುವಾಯ್ತು. ಹೀಗೆ ಕೇಳಿ ಬಂದ ಸುದ್ದಿಯನ್ನು ಇಬ್ಬರು ಅಲ್ಲಗೆಳೆಯಲಿಲ್ಲ, ಒಪ್ಪಿಕೊಳ್ಳಲಿಲ್ಲ ಎನ್ನುವುದು ಬೇರೆ ವಿಷಯ.
ಇನ್ನು ಅಪ್ಪ ಹಾಗೂ ಅಮ್ಮನ ಮುದ್ದಿನ ಮಗಳಾಗಿರುವ ನಮ್ರತಾ, ಬಿಗ್ ಬಾಸ್ ಮನೆಯಲ್ಲಿದ್ದಾಗ ಹೆತ್ತವರನ್ನ ನೆನೆದು ಅನೇಕ ಬಾರಿ ಕಣ್ಣೀರಿಟ್ಟಿದ್ದರು. ಆಗ್ಲೂ ಕೂಡ ಮನೆಯಿಂದ ಪತ್ರ ಸಿಕ್ಕಾಗ ನಾನು ಮದುವೆಯಾದರೆ ಅಪ್ಪ ಅಮ್ಮನಿಂದ ದೂರವಾಗಬೇಕಾಗುತ್ತೆ. ತಾಯಿ ಜೊತೆ ಇರೋಕೆ ಬಿಡಲ್ಲ ಎಂದು ನನಗೆ ಅನ್ಸುತ್ತೆ ಎಂದಿದ್ದರು. ನಮ್ರತಾ ಹೀಗೆ ಹೇಳಿದ್ದೇ ತಡ, ನೆಚ್ಚಿನ ನಾಗಿಣಿ ಮದುವೆಯಾಗದೇ ಇರಲು ಇದೇ ಕಾರಣವೆಂದು ಇವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನ ಶುರು ಮಾಡಿದ್ದರು.
ಇದೆಲ್ಲದರಿಂದ ಬಿಗ್ ಬಾಸ್ ಮನೆಯಿಂದ ನಮ್ರತಾ ಆಚೆ ಬರುತ್ತಿದ್ದಂತೆಯೇ ಅನೇಕ ಬಾರಿ ನಮ್ರತಾ ಅವರಲ್ಲಿ ನಿಮ್ಮ ಮದುವೆ ಯಾವಾಗ ಎಂಬ ಪ್ರಶ್ನೆಯನ್ನಸಂದರ್ಶನಗಳಲ್ಲಿ ಕೇಳಲಾಗಿತ್ತು. ಹೀಗೆ ಕೇಳಲಾದ ಪ್ರಶ್ನೆಗೆ ಮದುವೆ ಬಗ್ಗೆ ಮೊದಲು ತುಂಬಾ ಆಸೆ ಇತ್ತು. ಸಿಕ್ಕಾಪಟ್ಟೆ ಮದುವೆ ಬಗ್ಗೆ ಆಸೆ ಇಟ್ಟುಕೊಂಡಿದ್ದೆ, ಆದರೆ ಈಗ ಇದರಲ್ಲಿ ಆಸಕ್ತಿ ಕಳೆದುಕೊಂಡಿದ್ದೇನೆ. ಸಾಧನೆ ಮಾಡಬೇಕು, ದೇಶ ಸುತ್ತಬೇಕು, ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮದುವೆ ಬಗ್ಗೆ ನಂಬಿಕೆ ತರಿಸುವವರು ಸಿಕ್ಕರೆ ಯೋಚನೆ ಮಾಡ್ತೀನಿ ಎಂದು ಹೇಳಿದ್ದರು.
ಮತ್ತೆ ಮತ್ತೆ ಮದುವೆಯ ಬಗ್ಗೆಯೇ ಪ್ರಶ್ನೆ ಎದುರಾದಾಗ ನನಗೆ ಮೈಸೂರು ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಮೈಸೂರಿನಲ್ಲೇ ಅಪ್ಪ, ಅಮ್ಮನ ಜೊತೆ ಮುಂದೊಂದು ದಿನ ನೆಲೆಯೂರುವ ಕನಸಿದೆ ಎಂದು ಹೇಳಿದ್ದ ನಮ್ರತಾ, ಮದುವೆಯಾಗುವ ಹುಡುಗ ಅಪ್ಪಟ ಕನ್ನಡದವನಾಗಿರಬೇಕು ಎಂದಿದ್ದರು. ಮದುವೆಯಾಗುವ ಹುಡುಗ ಅವಿಭಕ್ತ ಕುಟುಂಬದವನಾಗಿದ್ದರೆ ಇನ್ನೂ ಒಳ್ಳೆಯದು ಎಂದು ಹೇಳಿದ್ದರು. ಇನ್ನೂ ಎರಡು ವರ್ಷ ಕೆಲಸ ಮಾಡಬೇಕು. ಕೆಲಸ ಮಾಡುವ ಟೈಮ್‌ನಲ್ಲಿ ಮದುವೆ ಬೇಡ. ಹುಡುಗ ಸಿಕ್ಕಿದ್ಮೇಲೆ ನೋಡೋಣ ಎಂದು ಹೇಳಿ ಕೈ ತೊಳೆದುಕೊಂಡಿದ್ದರು.
ಇಂಥಾ ನಮ್ರತಾ ಈಗ ರಾಜೇಶ್ ಗೌಡ ಅವರ ಸಮ್ಮುಖದಲ್ಲಿ ಕುಳಿತು ತಮ್ಮ ಮೊದಲ ಮತ್ತು ಕೊನೆಯ ಪ್ರೀತಿಯ ಕುರಿತು ಮಾತನಾಡಿದ್ದಾರೆ. ಪ್ರೀತಿಯಲ್ಲಿ ತಾವು ಸೋತಿದ್ದು ಹೇಗೆ ಎನ್ನುವುದನ್ನು ಹೇಳಿದ್ದಾರೆ. ಸದ್ಯಕ್ಕೆ ನಮ್ರತಾ ಅವರ ಈ ವಿಡಿಯೋ ಯೂಟ್ಯೂಬ್‌ನಲ್ಲಿ ಅನೇಕರ ಗಮನ ಸೆಳೆಯುತ್ತಿದೆ.


Click it and Unblock the Notifications











