twitter
    For Quick Alerts
    ALLOW NOTIFICATIONS  
    For Daily Alerts

    #IAmABlueWarrior: ಕೋವಿಡ್ ವಾರಿಯರ್ಸ್‌ಗಾಗಿ ಜೋಷ್ APPನಿಂದ ದೇಣಿಗೆ ಸಂಗ್ರಹ

    |

    ಕೋವಿಡ್ ಎರಡನೇ ಅಲೆ ಜನಸಾಮಾನ್ಯರನ್ನು ಬಹಳ ಗಂಭೀರವಾಗಿ ಕಾಡಿದೆ. ಆರೋಗ್ಯವಾಗಿ, ಆರ್ಥಿಕವಾಗಿ, ಮಾನಸಿಕವಾಗಿ ಹಿಂಸಿಸಿದೆ. ಕೊರೊನಾ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂಬ ಉದ್ದೇಶದಿಂದ ಹಲವು ಸಂಘಗಳು, ಸಂಸ್ಥೆಗಳು, ಎನ್‌ಜಿಓಗಳು, ಸೆಲೆಬ್ರಿಟಿಗಳು ಜನರಿಗೆ ಸಹಾಯ ಮಾಡ್ತಿದ್ದಾರೆ.

    ದಿನಸಿ ಕಿಟ್, ಚಿಕಿತ್ಸೆ ಕೊಡಿಸುವುದು, ಆಂಬುಲೆನ್ಸ್ ವ್ಯವಸ್ಥೆ, ಆಕ್ಸಿಜನ್ ವ್ಯವಸ್ಥೆ ಹೀಗೆ ಅಗತ್ಯ ಸೇವೆಗಳಲ್ಲಿ ತೊಡಗಿಕೊಂಡಿದ್ದಾರೆ. ಇದೀಗ, ದೇಶದ ನಾಗರೀಕಗರಿಗೆ ನೆರವು ನೀಡುವ ಉದ್ದೇಶದಿಂದ ಜೋಷ್ ಆಪ್ (JOSH APP) ದೇಣಿಗೆ ಸಂಗ್ರಹಿಸುತ್ತಿದೆ. ಬ್ಲೂ ರಿಬ್ಬನ್ (Blue Ribbon) ಮೂಲಕ ದೇಣಿಗೆ ಸಂಗ್ರಹಿಸಲಾಗುತ್ತಿದ್ದು, ಜೂನ್ 18ರ ವರೆಗೂ ಮಾತ್ರ ಮಾನ್ಯವಾಗಿರುತ್ತದೆ ಎಂದು ತಿಳಿಸಿದೆ.

    ಇದರಿಂದ ಬಂದ ಹಣದಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಹೋರಾಡುತ್ತಿರುವ ವಾರಿಯರ್ಸ್‌ಗೆ, ತೊಂದರೆಗೊಳಗಾದ ಫ್ರಂಟ್ ಲೈನ್ ವರ್ಕರ್ಸ್‌ಗೆ ಸಹಾಯ ಮಾಡಲು ತೀರ್ಮಾನಿಸಲಾಗಿದೆ.

    ಬ್ಲೂ ರಿಬ್ಬನ್ ಮೂಲಕ ಕೋವಿಡ್‌ 19ನಿಂದ ತೊಂದರೆಗೆ ಒಳಗಾದ ಜನರಿಗೆ ನೆರವು ನೀಡುವ ಜಾಗೃತಿ ಮೂಡಿಸಲಾಗುವುದು. ಜೊತೆಗೆ #IAmABlueWarrior ಎಂಬ ಹ್ಯಾಶ್‌ ಟ್ಯಾಗ್‌ನಲ್ಲಿ ನಮ್ಮ ಜೋಷ್‌ ಬಳಕೆದಾರರು ಕಳುಹಿಸಿರುವ ಶಾರ್ಟ್‌ ವೀಡಿಯೋಗಳನ್ನು ಆ್ಯಪ್‌ನಲ್ಲಿ ಹಾಗೂ ಹೊರಗಡೆ ಪ್ರಮೋಟ್ ಮಾಡಿ ಅದರಿಂದ ಬರುವ ಹಣವನ್ನು ಪಿಎಂ ಕೇರ್‌ಗೆ ನೀಡಲಾಗುವುದು.

    ಖ್ಯಾತ ಸಂಗೀತ ಸಂಯೋಜಕ ಕ್ಲಿಂಟೋನ್ ಸೆರೆಜೊ ಬ್ಲೂ ರಿಬ್ಬನ್‌ನೊಂದಿಗೆ ಕೈ ಜೋಡಿಸಿದ್ದು, ಜೋಷ್‌ನಲ್ಲಿ ಜನರಿಗೆ ಜಾಗೃತಿ ಮೂಡಿಸುವ ಸಂಗೀತದ ಮೂಲಕ ಜನರಿಗೆ ಭರವಸೆ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ.

    ನಮ್ಮೆಲ್ಲಾ ಜೋಷ್ ಬಳಕೆದಾರರೇ ನೀವು ಕೂಡ ನಿಮ್ಮ ಮೆಚ್ಚಿನ ಇನ್‌ಫ್ಲ್ಯೂನ್ಸರ್ ರೀತಿ ವೀಡಿಯೋಗಳನ್ನು ಮಾಡಿ ನಮಗೆ ಕಳುಹಿಸಬಹುದು, ನೀವು ಕೂಡ ಬ್ಲೂ ವಾರಿಯರ್ಸ್ ಚಾಲೆಂಜ್‌ನಲ್ಲಿ ಭಾಗಿ ಆಗಬೇಕೆ? ಹಾಗಾದರೆ ನೀವೇನು ಮಾಡಬೇಕೆಂದು ನೋಡೋಣ:

    * ಜೋಷ್‌ ಬಳಕೆದಾರರೇ, ವೀಡಿಯೋ ಹಾಕುವ ಮೂಲಕ ಬ್ಲೂ ರಿಬ್ಬನ್‌ ಕಾರ್ಯದಲ್ಲಿ ಭಾಗವಹಿಸಲು ನೀವು ಈ ಟಾಪಿಕ್‌ಗಳ ಮೇಲೆ ವೀಡಿಯೋ ಮಾಡಬಹುದಾಗಿದೆ.
    * ಡಬಲ್ ಮಾಸ್ಕ್ ಅವಶ್ಯಕತೆ
    * ವ್ಯಾಕ್ಸಿನ್ ಬಗ್ಗೆ ಜಾಗೃತಿ
    * ಕೋವಿಡ್‌ 19 ಬಗ್ಗೆ ನಿಖರ ಸಂಗತಿಗಳು
    * ಸಾಮಾಜಿಕ ಅಂತರ
    * ಸ್ಯಾನಿಟೈಸ್‌ ಮಾಡುವುದರ ಪ್ರಯೋಜನಗಳು/ಅವಶ್ಯಕತೆ
    * ಕೋವಿಡ್ 19: ಶುಚಿತ್ವ
    * ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ
    * ಆಕ್ಸಿಜನ್ ಬಗ್ಗೆ ಮಾಹಿತಿ

    ವೀಡಿಯೋದಲ್ಲಿ ಬಳಸಬೇಕಾದ ಹ್ಯಾಶ್‌ ಟ್ಯಾಗ್: #IAmABlueWarrior
    ಈ ಹ್ಯಾಶ್ ಟ್ಯಾಗ್‌ ಬಳಸುವುದರಿಂದ ಈ ವೀಡಿಯೋಗೆ ಬರುವ ಹಣ ನೇರವಾಗಿ ಬ್ಲೂ ರಿಬ್ಬನ್‌ಗೆ ದೇಣಿಗೆಗೆ ವರ್ಗಾವಣೆ ಆಗುವುದು.

    ಸ್ಪೆಷಲ್‌ ಡಿಸ್‌ಪ್ಲೇ ಪಿಕ್ಚರ್
    ಈ ಚಾಲೆಂಜ್ ಭಾಗವಾಗಿ ವೀಡಿಯೋ ಮಾಡುವವರು ತಮ್ಮ ಇನ್‌ಸ್ಟಾಗ್ರಾಂ ಡಿಪಿಯಲ್ಲಿ ಅಭಿಯಾನದ ಲೋಗೋ ಬಳಸುವಂತೆ ಕೋರಲಾಗಿದೆ. ಇದರ ಮೂಲಕ ನಿಮ್ಮ ಸ್ನೇಹಿತರನ್ನು ಕೂಡ ಈ ಸಂಕಷ್ಟದ ಸಮಯದಲ್ಲಿ ನೆರವಾಗಲು ಪ್ರೇರೇಪಿಸಬಹುದು, ನೀವೂ ಕೂಡ ಬ್ಲೂ ವಾರಿಯರ್‌ ಆಗಲು ಸಿದ್ಧ ತಾನೆ?

    ಜೋಷ್ ಆ್ಯಪ್‌ನಲ್ಲಿ #IAmABlueWarrior ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

    English summary
    #IAmABlueWarrior: India's popular Josh short video app has also launched an awareness campaign called the ‘Blue Ribbon Initiative - #IAmABlueWarrior’ To Help Corona Warriors And Frontline Workers, (valid until 18th June 2021).
    Saturday, June 5, 2021, 13:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X