twitter
    For Quick Alerts
    ALLOW NOTIFICATIONS  
    For Daily Alerts

    'ಮುಂಗಾರು ಮಳೆ' 150 ಕೋಟಿ ಕಲೆಕ್ಷನ್ ಮಾಡಿರೋದು: ಪ್ರದರ್ಶಕ ಜಗದೀಶ್

    |

    ''ಕಲೆಯ ವಿಷಯದಲ್ಲಿ ಭಾಷೆಗಳನ್ನು ತರಬಾರದು'' ಎನ್ನುತ್ತಲೇ ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳೇ ನಂಬರ್ ಒನ್ ಎಂದವರು ಕೆಂಗೇರಿಯ ವೆಂಕಟೇಶ್ವರ ಚಿತ್ರಮಂದಿರದ ಮಾಲೀಕ, ಸಿನಿಮಾ ವಿತರಕ ಹಾಗೂ ಜಾಹೀರಾತುದಾರರೂ ಆಗಿರುವ ಜಗದೀಶ್.

    Recommended Video

    10 ರೂಪಾಯಿ ಟಿಕೆಟ್ ರೇಟ್ ಇದ್ದಾಗ ಜೋಗಿ ಕೋಟಿ ಕೋಟಿ ದುಡ್ಡು ಮಾಡ್ತು

    ಬಿಎಂಟಿಸಿ ಬಸ್‌ಸ್ಟ್ಯಾಂಡ್‌ನಲ್ಲಿ ಟಿವಿ ಅಳವಡಿಸಿ ಅದರ ಮೇಲುಸ್ತಾವರಿ ನೋಡಿಕೊಳ್ಳುತ್ತಿದ್ದ ಜಗದೀಶ್ ಕೈಯಡಿ ಇಂದು ಆರೇಳು ಚಿತ್ರಮಂದಿರಗಳಿವೆ. ಈವರೆಗೆ 35ಕ್ಕೂ ಹೆಚ್ಚು ಕನ್ನಡ, ತೆಲುಗು ಸಿನಿಮಾಗಳನ್ನು ಕರ್ನಾಟಕದಾದ್ಯಂತ ವಿತರಣೆ ಮಾಡಿದ್ದಾರೆ.

    ಕರ್ನಾಟಕದ ಚಿತ್ರಮಂದಿರಗಳ ಇತಿಹಾಸ ಹಾಗೂ ಚಿತ್ರಮಂದಿರಗಳ ಈಗಿನ ಪಾಡು, ಹಳೆಯ ಹಾಡುಗಳನ್ನು ಜನರ ಮುಂದಿಡುವ ಪ್ರಯತ್ನವಾಗಿ 'ಫಿಲ್ಮಿಬೀಟ್ ಕನ್ನಡ' ಪ್ರಸರಿಸುತ್ತಿರುವ 'ನಮ್ಮ ಥಿಯೇಟರ್' ಸರಣಿಗೆ ನೀಡಿದ ವಿಶೇಷ ಸಂದರ್ಭದಲ್ಲಿ ಮಾತನಾಡಿದ ಜಗದೀಶ್, ''ಕರ್ನಾಟಕದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡುವುದು ಕನ್ನಡ ಸಿನಿಮಾಗಳೇ ಅದರಲ್ಲಿ ಅನುಮಾನವೇ ಬೇಡ'' ಎಂದರು.

    ಬಹುತೇಕ ಚಿತ್ರಮಂದಿರ ಮಾಲೀಕರಂತೆ ಜಗದೀಶ್ ಅವರು ಸಹ 'ಆ ಕಾಲವೇ ಚೆನ್ನಾಗಿತ್ತು' ಎಂದೇ ಮಾತು ಆರಂಭಿಸಿ, ''ಕೇವಲ 10 ರುಪಾಯಿ ಟಿಕೆಟ್ ಬೆಲೆ ಇದ್ದಾಗ 'ಜೋಗಿ' ಅಂಥಹಾ ಸಿನಿಮಾಗಳು ಹತ್ತಾರು ಕೋಟಿ ಕಲೆಕ್ಷನ್ ಮಾಡಿದ್ದವು. ಡಾ.ರಾಜ್‌ಕುಮಾರ್ ಸಿನಿಮಾಗಳ ಕಾಲದಲ್ಲಿ ಬೆಲೆ ಇನ್ನೂ ಕಡಿಮೆ ಇತ್ತು ಆಗಲೂ ಕೋಟ್ಯಂತರ ಹಣ ಗಳಿಸುತ್ತಿದ್ದ ಬಗ್ಗೆ ಈಗಲೂ ಉದ್ಯಮದ ಹಿರಿಯ ವಿತರಕರು ಹೇಳುತ್ತಾರೆ'' ಎಂದಿದ್ದಾರೆ ಜಗದೀಶ್.

    150 ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿರುತ್ತಿತ್ತು

    150 ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿರುತ್ತಿತ್ತು

    ''ಮುಂಗಾರು ಮಳೆ ಸಿನಿಮಾ ಮಾಡಿ ಕೊಟ್ಟ ಕಲೆಕ್ಷನ್ ಮರೆಯುವುದುಂಟೆ. 30 ರು. ಟಿಕೆಟ್ ದರ ಇದ್ದಾಗಲೇ 30 ಕೋಟಿಗೂ ಹೆಚ್ಚು ಹಣವನ್ನು ಸಿನಿಮಾ ಕಲೆಕ್ಷನ್ ಮಾಡಿತ್ತು. ಈಗಿನ ಟಿಕೆಟ್ ಬೆಲೆಯಲ್ಲಿ ಅದೇ ಸಿನಿಮಾ ಅಷ್ಟೇ ಕಲೆಕ್ಷನ್ ಮಾಡಿದ್ದರೆ 150 ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿರುತ್ತಿತ್ತು. ಆಗಿನ ಸಮಯಕ್ಕೆ ಹೋಲಿಸಿದರೆ ಚಿತ್ರಮಂದಿರದ ಟಿಕೆಟ್ ದರಗಳು 5 ಪಟ್ಟು ಏರಿಕೆ ಆಗಿವೆ'' ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು ಜಗದೀಶ್.

    'ಬಾಹುಬಲಿ'ಯನ್ನು ಮೀರಿಸಿತು 'ಕೆಜಿಎಫ್'

    'ಬಾಹುಬಲಿ'ಯನ್ನು ಮೀರಿಸಿತು 'ಕೆಜಿಎಫ್'

    ''ನಾವು ಮೊದಲ ಬಾರಿಗೆ ದೊಡ್ಡ ಕಲೆಕ್ಷನ್ ನೋಡಿದ್ದು 'ಬಾಹುಬಲಿ' ಸಿನಿಮಾದಲ್ಲಿ ಸುಮಾರು 60 ಕ್ಕೂ ಹೆಚ್ಚು ಹಣ ಕಲೆಕ್ಷನ್ ಆಗಿತ್ತು. ಅಬ್ಬಾ ಇದೇನು ಚಿತ್ರಮಂದಿರದ ಶಕ್ತಿ ಎಂದು ಎನಿಸಿತ್ತು. ಆದರೆ ಆ ದಾಖಲೆಯನ್ನು ಅಳಿಸಿ ಹಾಕಿದ ಶ್ರೇಯ ನಮ್ಮ ಕನ್ನಡ ಸಿನಿಮಾ 'ಕೆಜಿಎಫ್‌ 2'ಗೆ ಸಲ್ಲಬೇಕು. ಎಲ್ಲ ದಾಖಲೆಗಳನ್ನೂ ಅಳಿಸಿ ಹಾಕಿ ಈವರೆಗೆ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ದಾಖಲೆ 'ಕೆಜಿಎಫ್ 2' ಹೆಸರಿನಲ್ಲಿದೆ. ಕೋವಿಡ್ ನಂತರ ಅತಿ ಹೆಚ್ಚು ಕಲೆಕ್ಷನ್ ಮಾಡಿದ್ದು ದರ್ಶನ್ ಅಭಿನಯದ 'ರಾಬರ್ಟ್' ಎಂದರು ಜಗದೀಶ್.

    ತೆಲುಗು ಎರಡನೇ ಸ್ಥಾನದಲ್ಲಿದೆ

    ತೆಲುಗು ಎರಡನೇ ಸ್ಥಾನದಲ್ಲಿದೆ

    ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಷ್ಟು ಇನ್ನಾವ ಸಿನಿಮಾಗಳು ಸಹ ಕಲೆಕ್ಷನ್ ಮಾಡುವುದಿಲ್ಲ. ಮೊದಲ ಸ್ಥಾನ ಕನ್ನಡಕ್ಕೇ ಇದೆ. ಅದಾದ ಬಳಿಕ ಕಲೆಕ್ಷನ್ ಮಾಡುವುದು ತೆಲುಗು ಸಿನಿಮಾಗಳು. ಕೋಲಾರ, ಚಿಕ್ಕಬಳ್ಳಾಪುರ, ಚಿಂತಾಮಣಿ, ಮುಳಬಾಗಿಲು, ಹುಬ್ಬಳ್ಳಿ, ದಾವಣಗೆರೆಗಳಲ್ಲಿಯೂ ತೆಲುಗು ಸಿನಿಮಾಗಳು ಚೆನ್ನಾಗಿ ಓಡುತ್ತವೆ. ಅದಾದ ನಂತರ ಮೂರನೇ ಸ್ಥಾನದಲ್ಲಿರುವುದು ತಮಿಳು ಮತ್ತು ಹಿಂದಿ ಭಾಷೆಯ ಸಿನಿಮಾಗಳು. ಆದರೆ ಯಾವುದೇ ಸ್ಟಾರ್ ಆಗಲಿ ಮೂರರಿಂದ ನಾಲ್ಕು ವಾರವಷ್ಟೆ ಸಿನಿಮಾಗಳು ಓಡುತ್ತವೆ. ಸಿನಿಮಾ ಚೆನ್ನಾಗಿದ್ದರೆ ಆ ವೇಳೆಯಲ್ಲಿಯೇ ಕಲೆಕ್ಷನ್ ಚೆನ್ನಾಗಿ ಆಗಿಬಿಡುತ್ತದೆ ಎಂದು ಗುಟ್ಟು ಬಿಟ್ಟುಕೊಟ್ಟರು ಜಗದೀಶ್.

     ಮುಚ್ಚಿಹೋಗುತ್ತಿದ್ದ ಚಿತ್ರಮಂದಿರಕ್ಕೆ ಮರುಜೀವ

    ಮುಚ್ಚಿಹೋಗುತ್ತಿದ್ದ ಚಿತ್ರಮಂದಿರಕ್ಕೆ ಮರುಜೀವ

    ತಮ್ಮ ಒಡೆತನದ ವೆಂಕಟೇಶ್ವರ ಚಿತ್ರಮಂದಿರದ ಬಗ್ಗೆ ಮಾತನಾಡಿದ ಜಗದೀಶ್, ಈ ಚಿತ್ರಮಂದಿರ ಮುಚ್ಚು ಹಂತ ತಲುಪಿತ್ತು. ಆದರೆ ತಾವು ಅದನ್ನು ಪಡೆದು ಮಲ್ಟಿಫೆಕ್ಸ್ ರೀತಿಯಲ್ಲಿ ಸಜ್ಜುಗೊಳಿಸಿ ಚೆನ್ನಾಗಿ ವಿನ್ಯಾಸ ಮಾಡಿಸಿ ಓಡಿಸುತ್ತಿದ್ದೇನೆ. ಹೊಸ ಅವತಾರದಲ್ಲಿ ಚಿತ್ರಮಂದಿರವು 2020ರ ಜನವರಿಯಲ್ಲಿ ಓಪನ್ ಆಯ್ತು ಆದರೆ ಅದಾದ ಎರಡೇ ತಿಂಗಳಿಗೆ ಲಾಕ್‌ಡೌನ್ ಆಯಿತು. ಆದರೂ 'ರಾಬರ್ಟ್' ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿಕೊಟ್ಟಿತು. ಈ ಏರಿಯಾದಲ್ಲಿ ಒಳ್ಳೆಯ ಮಲ್ಟಿಫ್ಲೆಕ್ಸ್‌ಗಳಿಲ್ಲ ಹಾಗಾಗಿ ಅದೇ ಮಾದರಿಯ ಸವಲತ್ತುಗಳಿರುವ ಚಿತ್ರಮಂದಿರ ಮಾಡಿದ್ದೇವೆ. ಇಲ್ಲಿ ಕನ್ನಡ ಸಿನಿಮಾಗಳೆ ಹೆಚ್ಚು ಓಡುತ್ತವೆ ಹಾಗಾಗಿ ಏರಿಯಾದ ಜನರ ಇಚ್ಛೆಗೆ ಅನುಸಾರವಾಗಿ ಸಿನಿಮಾಗಳನ್ನು ಪ್ರದರ್ಶಿಸುತ್ತಿದ್ದೇವೆ'' ಎಂದಿದ್ದಾರೆ ಜಗದೀಶ್.

    English summary
    If 'Mungaru Male' movie released today it would have to collect more than 150 crore rs said Venkateshwara movie theater movie owner Jagadish.
    Tuesday, August 31, 2021, 9:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X