ಈ ಮಹಾನಟಿಯ ಚಿತ್ರಕ್ಕೆ ಹಾಡಲ್ಲ ಅಂದಿದ್ದರು ಜಾನಕಮ್ಮ ; 3 ತಿಂಗಳು ಸತಾಯಿಸಿದ್ದೇಕೆ ಗಾನ ಕೋಗಿಲೆ

ಚಿತ್ರರಂಗದಲ್ಲಿ ಶರೀರ ಎಷ್ಟು ಮುಖ್ಯವೋ ಅಷ್ಟೇ ಶಾರೀರವೂ ಮುಖ್ಯ. ಉದಾಹರಣೆಗೆ ಡಾ.ರಾಜ್ ಕುಮಾರ್ ಅವರ ಸಿನಿಮಾ ಅಂದರೆ ಅಲ್ಲಿ ಹಾಡುಗಳಿಗಾಗಿ ಪಿ.ಬಿ.ಶ್ರೀನಿವಾಸ್ ಅವರ ಕಂಠ‌ ಕುಣಿಯಲೇಬೇಕಿತ್ತು. ಡಾ.ವಿಷ್ಣುವರ್ಧನ್ ಅವರ ಸಿನಿಮಾಗಳಿಗೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಲೇಬೇಕಿತ್ತು.

ಅನಂತ್ ನಾಗ್-ಎಸ್ ಪಿ ಬಿ.. ಸುದೀಪ್-ರಾಜೇಶ್ ಕೃಷ್ಣನ್.. ಅನಂತ್ ನಾಗ್-ಎಸ್ ಪಿ ಬಿ.. ಇನ್ನೂ ಹಿಂದಿಯಲ್ಲಿ ಸಲ್ಮಾನ್ ಖಾನ್ ಅವರ ವೃತ್ತಿ ಬದುಕಿನ ಆರಂಭದಲ್ಲಿ ಗಾನಗಾರುಡಿಗ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡು ಕಡ್ಡಾಯವಾಗಿತ್ತು.‌

if-she-sings-i-wont-act-the-shocking-rift-between-savitri-and-s-janaki

ಕೇವಲ ನಾಯಕರು ಮಾತ್ರವಲ್ಲ. ನಾಯಕಿಯರ ವಿಚಾರದಲ್ಲಿಯೂ ಈ ಮಾತು ಅನ್ವಯ. ಉದಾಹರಣೆಗೆ ಭಾರತೀಯ ಚಿತ್ರರಂಗದ ಮಹಾನಟಿ ಸಾವಿತ್ರಿ ಮತ್ತು ಪಿ.ಸುಶೀಲಾ ಜೋಡಿ. ಆದರೆ ಇದೇ ವಿಚಾರ ಹಿಂದೊಮ್ಮೆ ಎಸ್ ಜಾನಕಿ ಮತ್ತು ಸಾವಿತ್ರಿ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು ಎನ್ನುವ ವಿಚಾರ ನಿಮಗೆ ಗೊತ್ತಾ ?

ಸಾವಿತ್ರಿ VS ಜಾನಕಿ

ಹೌದು. ಸಾವಿತ್ರಿ ಖ್ಯಾತಿಯ ಉತ್ತುಂಗದಲ್ಲಿದ್ದ. ದಿನಗಳವು. ಆ ದಿನಗಳಲ್ಲಿ ಸಾವಿತ್ರಿ ಅವರ ಅಭಿನಯಕ್ಕೆ ಪಿ.ಸುಶೀಲಾ ಅವರ ಬೆಣ್ಣೆಯಂತಹ ಕಂಠ ನಲಿಯದಿದ್ದರೆ ಪ್ರೇಕ್ಷಕರಿಗೆ ಅದು ಅಪೂರ್ಣ ಅನುಭವ. ಸಾವಿತ್ರಿ ಅವರಿಗೆ ಕೂಡ ಈ ವಿಚಾರ ಚೆನ್ನಾಗಿಯೇ ಗೊತ್ತಿತ್ತು.

ಹೀಗಾಗಿಯೇ ತಮ್ಮ ಪ್ರತಿ ಚಿತ್ರಕ್ಕೂ ಪಿ.ಸುಶೀಲಾ ಅವರ ಧ್ವನಿಯನ್ನೇ ಸಾವಿತ್ರಿ ಬಯಸುತ್ತಿದ್ದರು. ಆದರೆ ಈ ವಿಷಯ ಆಗಷ್ಟೇ ಬಂದಿದ್ದ ಜಾನಕಮ್ಮಗೆ ಗೊತ್ತಿರಲಿಲ್ಲ. ಹೀಗಾಗಿ ತಪ್ಪಿ ಒಂದು ಹಾಡನ್ನು ಹಾಡಿದ್ದರು.

ಆದರೆ ಸಾವಿತ್ರಿಗೆ ಇದು ಸುತಾರಾಂ ಇಷ್ಟ ಆಗಲಿಲ್ಲ. ಯಾಕೆಂದರೆ ಆಗಲೇ ಹೇಳಿದಂತೆ ತಮ್ಮ ಅಭಿನಯಕ್ಕೆ ಸುಶೀಲಾ ಅವರ ಧ್ವನಿಯೇ ಸರಿ ಎಂದು ಬಲವಾಗಿ ನಂಬಿದ್ದರು ಸಾವಿತ್ರಿ.

if-she-sings-i-wont-act-the-shocking-rift-between-savitri-and-s-janaki

ಈ ಹಿನ್ನೆಲೆ ಎಸ್.ಜಾನಕಿ ಚೆನ್ನಾಗಿ ಹಾಡಿದ್ದರೂ ಕೂಡ ಅವರ ಕಂಠವನ್ನು ಕಡೆಗಣಿಸಿದ ಸಾವಿತ್ರಿ ಆ ಹಾಡನ್ನು ಮತ್ತೆ ಪಿ.ಸುಶೀಲಾ ಅವರದಿಂಲೇ ಹಾಡಿಸಿದರು. ಇದರಿಂದ ಎಸ್ ಜಾನಕಿ ಅವರ ಆತ್ಮಾಭಿಮಾನಕ್ಕೆ ಬಹುದೊಡ್ಡ ಪೆಟ್ಟು ಬಿದ್ದಿತ್ತು.

ಇನ್ನೇನು..? ಕೂಡಲೇ ಸಾವಿತ್ರಿ ಅಭಿನಯದ ಯಾವ ಚಿತ್ರಕ್ಕೂ ನಾನು ಹಾಡುವುದಿಲ್ಲ ಎಂದು ಶಪಥ ಮಾಡಿ ಬಿಟ್ಟರು ಜಾನಕಮ್ಮ. ಆದರೆ.. ಕಾಲ ಯಾವತ್ತು ಒಂದೇ ರೀತಿ ಇರಲ್ಲ. ಅದೊಂದು ದಿನ ಸಾವಿತ್ರಿ ಅಭಿನಯದ ''ನೀ ಲೀಲ ಪಾಡೆದ ದೇವ'' ಚಿತ್ರಕ್ಕೆ ಹಾಡು ಹಾಡಬೇಕೆಂಬ ಬೇಡಿಕೆ ಜಾನಕಮ್ಮ ಎದುರು ಬಂದಿತ್ತು. ಆಗ ಚಿತ್ರದ ನಾಯಕಿ ಸಾವಿತ್ರಿ ಎನ್ನುವ ವಿಚಾರ ತಿಳಿದ ಎಸ್ ಜಾನಕಿ ಹಾಡನ್ನು ಯಾವುದೇ ಕಾರಣಕ್ಕೂ ಹಾಡುವುದಿಲ್ಲ ಎಂದು ಪಟ್ಟು ಹಿಡಿದರು.

ಇಷ್ಟೇ ಅಲ್ಲ ಬೇಕಿದ್ದರೆ ಬೇರೆಯವರಿಂದ ಹಾಡಿಸಲಿ ಎಂದು 3 ತಿಂಗಳು ಆ ಚಿತ್ರತಂಡಕ್ಕೆ ಸತಾಯಿಸಿದ್ದರು ಜಾನಕಮ್ಮ. ಆದರೆ.. ಚಿತ್ರತಂಡ ಮಾತ್ರ ತಮ್ಮ ನಿರ್ಧಾರ ಬದಲಿಸಲೇ ಇಲ್ಲ. ಬದಲಿಗೆ ಚಿತ್ರದ ನಾಯಕಿ ಸಾವಿತ್ರಿ ಅಲ್ಲ ಅವರ ಬದಲು ಬೇರೆಯವರು ಆಕ್ಟ್ ಮಾಡ್ತಿದ್ದಾರೆ ಎಂದು ಹೇಳಿತ್ತು ಚಿತ್ರತಂಡ.

ಹೀಗಾಗಿಯೇ ಕೊನೆಗೆ ಒಪ್ಪಿಕೊಂಡ ಎಸ್. ಜಾನಕಿ ಆ ಚಿತ್ರದ ಹಾಡನ್ನು ಹಾಡಿದ್ದರು. ಆದರೆ. ಸತ್ಯ ಒಂದಿಲ್ಲೊಂದು ದಿನ ಹೊರ ಬರಲೇಬೇಕು. ಕೊನೆಗೊಂದು ದಿನ ಜಾನಕಮ್ಮಗೆ ಸತ್ಯ ಗೊತ್ತಾಯ್ತು. ಈ ಕುರಿತು ಸಂದರ್ಶನವೊಂದರಲ್ಲಿ ಎಸ್. ಜಾನಕಿ ಮಾತನಾಡಿದ್ದರು.

ಎಸ್ ಜಾನಕಿ ಹೇಳಿದ್ದೇನು..?

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಎಸ್ ಜಾನಕಿ, ಸಾವಿತ್ರಿ ಅವರಿಗೆ ಸುಶೀಲಾ ಅವರ ಕಂಠ ಅಂದ್ರೆ ತುಂಬಾ ಇಷ್ಟ. ಅವರ ಆಕ್ಟಿಂಗ್‌ಗೆ ಸುಶೀಲಾ ಅವರೇ ಬೆಸ್ಟ್ ಅಂತ ಅವರ ಅಭಿಪ್ರಾಯ ಇರಬಹುದು. ಅದಕ್ಕೇ ನಾನು ಹಾಡ್ತೀನಿ ಅಂದ್ರೆ ಅವರು ಒಪ್ಪಿಕೊಳ್ತಿರಲಿಲ್ಲ. ಹಾಗಾಗಿ ''ನೀ ಲೀಲ ಪಾಡೆದ ದೇವ'' ಹಾಡನ್ನು ನಾನು ಹಾಡಲ್ಲ ಅಂತ ಡೈರೆಕ್ಟಾಗಿ ಹೇಳಿಬಿಟ್ಟಿದ್ದೆ ಎಂದು ಹೇಳಿದ್ದರು.

ಮುಂದುವರೆದು ಆ ಚಿತ್ರದಲ್ಲಿ ಸಾವಿತ್ರಿ ನಟಿಸ್ತಾ ಇದ್ದಿದ್ದರಿಂದಲೇ ಆ ಸಾಂಗ್ ಹಾಡೋಕೆ ಒಪ್ಪದೆ 3 ತಿಂಗಳು ಪೆಂಡಿಂಗ್ ಇಟ್ಟಿದ್ದೆ. ಕೊನೆಗೆ ಆ ಹಾಡಿನಲ್ಲಿ ಸಾವಿತ್ರಿ ನಟಿಸುತ್ತಿಲ್ಲ ಅಂತ ಪ್ರೊಡ್ಯೂಸರ್ ಮತ್ತು ಡೈರೆಕ್ಟರ್ ಸುಳ್ಳು ಹೇಳಿದ್ದಕ್ಕೆ ನಾನು ಹಾಡೋಕೆ ಒಪ್ಪಿಕೊಂಡೆ ಎಂದು ಹೇಳಿದ್ದ ಎಸ್ ಜಾನಕಿ, ಕೊನೆಯಲ್ಲಿ ನೋಡಿದ್ರೆ ಆ ಸಾಂಗ್‌ನಲ್ಲಿ ಸಾವಿತ್ರಿ ಅವರೇ ಆಕ್ಟ್ ಮಾಡಿದ್ದರು ಎಂದು ನೆನಪು ಮಾಡಿಕೊಂಡಿದ್ದರು.

English summary
Discover the shocking untold story behind Tollywood's biggest historic rift. Why did Mahanati Savitri give an ultimatum over S. Janaki's voice during Muripinchu Muvvalu? Read the real story behind the clash of the legends.
Read more about: death s janaki
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X