twitter
    For Quick Alerts
    ALLOW NOTIFICATIONS  
    For Daily Alerts

    ಭಾರತದ ಹತ್ತು ಸಾರ್ವಕಾಲಿಕ ಅತ್ಯುತ್ತಮ ಸಿನಿಮಾಗಳಲ್ಲಿ ಕನ್ನಡದ ಒಂದು ಸಿನಿಮಾ!

    |

    ಭಾರತದ ಅತ್ಯುತ್ತಮ ಹತ್ತು ಸಿನಿಮಾಗಳು ಯಾವುವು ಎಂಬುದಕ್ಕೆ ಸೂಕ್ತ ಉತ್ತರ ಇಲ್ಲ. ಅತಿ ಹೆಚ್ಚು ಗಳಿಸಿದ ಸಿನಿಮಾ, ಅತಿ ಹೆಚ್ಚು ಕಾಲ ಓಡಿದ ಸಿನಿಮಾ ಇವುಗಳಿಗೆಲ್ಲ ಸಿಗುವಂತೆ ನಿರ್ದಿಷ್ಟ ಉತ್ತರ ಅತ್ಯುತ್ತಮ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಸಿಗುವುದಿಲ್ಲ.

    ಒಬ್ಬೊಬ್ಬರಿಗೆ ಒಂದೊಂದು ಕಾರಣಕ್ಕೆ ಒಂದೊಂದು ಸಿನಿಮಾ ಇಷ್ಟವಾಗುತ್ತವೆ. ಐಎಂಡಿಬಿ ತೋರಿಸುವ ಪಟ್ಟಿಯಲ್ಲಿ ಟಾಪ್ ಹತ್ತು ಸಿನಿಮಾಗಳ ಪಟ್ಟಿ ಬೇರೊಂದು ವೆಬ್‌ಸೈಟ್‌ನ ಟಾಪ್ ಟೆನ್‌ ಪಟ್ಟಿಯಲ್ಲಿರುವುದಿಲ್ಲ.

    ಇದೀಗ, ಭಾರತದ ಕೆಲವು ಅತ್ಯುತ್ತಮ ವಿಮರ್ಶಕರು ಸೇರಿ ಭಾರತದ ಹತ್ತು ಸಿನಿಮಾಗಳನ್ನು ಮತದಾನದ ಮೂಲಕ ಆಯ್ಕೆ ಮಾಡಿದ್ದಾರೆ. ಈ ಹತ್ತು ಸಿನಿಮಾಗಳ ಪಟ್ಟಿಯಲ್ಲಿ ಕನ್ನಡದ ಒಂದು ಸಿನಿಮಾ ಸಹ ಸ್ಥಾನ ಪಡೆದಿರುವುದು ವಿಶೇಷ.

    ಪಟ್ಟಿಯಲ್ಲಿ ಮೂರು ಬೆಂಗಾಲಿ ಸಿನಿಮಾಗಳಿವೆ, ಕೇವಲ ಎರಡು ದಕ್ಷಿಣ ಭಾರತದ ಸಿನಿಮಾಗಳಿದ್ದು, ಅವುಗಳಲ್ಲಿ ಒಂದು ಸಿನಿಮಾ ಕನ್ನಡದ್ದಾಗಿದೆ. ಆದರೆ ಐದು ಹಿಂದಿ ಸಿನಿಮಾಗಳು ಪಟ್ಟಿಯಲ್ಲಿವೆ.

    ಭಾರತದ ಅತ್ಯುತ್ತಮ ಸಿನಿಮಾ ಯಾವುದು?

    ಭಾರತದ ಅತ್ಯುತ್ತಮ ಸಿನಿಮಾ ಯಾವುದು?

    ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಬೆಂಗಾಲಿ ಸಿನಿಮಾ 'ಪತೇರ್ ಪಾಂಚಾಲಿ' ಇದೆ. ಈ ಸಿನಿಮಾ ಭಾರತದ ಸಾರ್ವಕಾಲಿಕ ಶ್ರೇಷ್ಟ ಸಿನಿಮಾ ಎಂದು ಹಲವು ವಿಮರ್ಶಕರು ಒಪ್ಪಿಕೊಂಡಿದ್ದಾರೆ. ಈ ಸಿನಿಮಾವನ್ನು ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕ ಸತ್ಯಜಿತ್ ರೇ ನಿರ್ದೇಶನ ಮಾಡಿದ್ದಾರೆ. ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿಯೂ ಬಂಗಾಳಿ ಸಿನಿಮಾ 'ಮೇಘೆ ಢಾಕ ತಾರಾ' ಸಿನಿಮಾ ಇದೆ. ಈ ಸಿನಿಮಾವನ್ನು ರಿತ್ವಿಕ್ ಘಾತಕ್ ನಿರ್ದೇಶನ ಮಾಡಿದ್ದಾರೆ.

    ಕನ್ನಡದ ಒಂದು ಸಿನಿಮಾ

    ಕನ್ನಡದ ಒಂದು ಸಿನಿಮಾ

    ಪಟ್ಟಿಯ ಮೂರನೇ ಸ್ಥಾನದಲ್ಲಿ ಹಿಂದಿ ಸಿನಿಮಾ 'ಭುವನ್ ಶೋಮೆ' ಇದೆ. ಈ ಸಿನಿಮಾವನ್ನು ಮೃಣಾಲ್ ಸೇನ್ ನಿರ್ದೇಶನ ಮಾಡಿದ್ದಾರೆ. ಪಟ್ಟಿಯ ನಾಲ್ಕನೇ ಸ್ಥಾನದಲ್ಲಿ ಮಲಯಾಳಂನ 'ಇಲಿಪಾತ್ತಯಂ' ಸಿನಿಮಾ ಇದೆ. ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ನಿರ್ದೇಶನ ಮಾಡಿದ್ದಾರೆ. ಐದನೇ ಸ್ಥಾನದಲ್ಲಿ ಕನ್ನಡದ 'ಘಟಶ್ರಾದ್ಧ' ಸಿನಿಮಾ ಇದೆ. 1977 ರಲ್ಲಿ ಬಿಡುಗಡೆ ಆದ ಈ ಸಿನಿಮಾವನ್ನು ಗಿರೀಶ್ ಕಾಸರವಳ್ಳಿ ನಿರ್ದೇಶನ ಮಾಡಿದ್ದರು.

    ಸತ್ಯಜಿತ್‌ ರೇ ನಿರ್ದೇಶನದ ಎರಡು ಸಿನಿಮಾ

    ಸತ್ಯಜಿತ್‌ ರೇ ನಿರ್ದೇಶನದ ಎರಡು ಸಿನಿಮಾ

    ಆರನೇ ಸ್ಥಾನದಲ್ಲಿ ಹಿಂದಿಯ 'ಗರಂ ಹವಾ' ಸಿನಿಮಾ ಇದೆ. ಈ ಸಿನಿಮಾವನ್ನು ಎಂಎಸ್ ಸತ್ಯು ನಿರ್ದೇಶನ ಮಾಡಿದ್ದಾರೆ. ವಿಶೇಷವೆಂದರೆ ಈ ಸಿನಿಮಾದ ನಿರ್ದೇಶಕ ಸತ್ಯು ಕರ್ನಾಟಕದವರು. ಏಳನೇ ಸ್ಥಾನದಲ್ಲಿ ಮತ್ತೊಂದು ಬಂಗಾಳಿ ಸಿನಿಮಾ 'ಚಾರುಲತಾ' ಇದೆ, 1964 ರಲ್ಲಿ ಬಿಡುಗಡೆ ಆದ ಈ ಸಿನಿಮಾವನ್ನು ಸಹ ಸತ್ಯಜಿತ್ ರೇ ನಿರ್ದೇಶನ ಮಾಡಿದ್ದಾರೆ. ಎಂಟನೇ ಸ್ಥಾನದಲ್ಲಿ ಶ್ಯಾಮ್ ಬೆನಗಲ್ ನಿರ್ದೇಶನದ 'ಅಂಕುರ್' ಸಿನಿಮಾ ಇದೆ. ಈ ಸಿನಿಮಾ 1974 ರಲ್ಲಿ ಬಿಡುಗಡೆ ಆಗಿತ್ತು.

    'ಶೋಲೆ' ಆಯ್ಕೆಗೆ ವಿರೋಧ

    'ಶೋಲೆ' ಆಯ್ಕೆಗೆ ವಿರೋಧ

    ಒಂಬತ್ತನೇ ಸ್ಥಾನದಲ್ಲಿ ಗುರುದತ್ ನಿರ್ದೇಶನದ ಎವರ್‌ಗ್ರೀನ್ ಸಿನಿಮಾ 'ಪ್ಯಾಸಾ' ಇದೆ. ಈ ಸಿನಿಮಾಕ್ಕೆ ಕನ್ನಡಿಗ ವಿಕೆ ಮೂರ್ತಿ ಕ್ಯಾಮೆರಾ ಹಿಡಿದಿದ್ದರು. ಹತ್ತನೇ ಸ್ಥಾನದಲ್ಲಿ ಹಿಂದಿಯ 'ಶೋಲೆ' ಸಿನಿಮಾ ಇದೆ. ಪಟ್ಟಿಯಲ್ಲಿ ಇರುವ ಏಕೈಕ ಕಮರ್ಶಿಯಲ್ ಸಿನಿಮಾ ಇದಾಗಿದೆ. ಅಮಿತಾಬ್ ಬಚ್ಚನ್-ಧರ್ಮೇಂದ್ರ ನಟನೆಯ ಈ ಸಿನಿಮಾವನ್ನು ರಮೇಶ್ ಸಿಪ್ಪಿ ನಿರ್ದೇಶನ ಮಾಡಿದ್ದರು. ಈ ಸಿನಿಮಾವನ್ನು ಅತ್ಯುತ್ತಮ ಸಿನಿಮಾಗಳ ಪಟ್ಟಿಗೆ ಆಯ್ಕೆ ಮಾಡಿರುವುದಕ್ಕೆ ಕೆಲವರ ವಿರೋಧ ಸಹ ಎದುರಾಗಿದೆ.

    English summary
    International Federation of Film Critics released a list of India's all time best ten movies. Movies selected by voting process.
    Tuesday, October 25, 2022, 18:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X