twitter
    For Quick Alerts
    ALLOW NOTIFICATIONS  
    For Daily Alerts

    '777 ಚಾರ್ಲಿ' ಕಾಣಲಿಲ್ಲವೇ? ಐಎಂಡಿಬಿಯಿಂದ ಮತ್ತೆ ದಕ್ಷಿಣ ಚಿತ್ರರಂಗ ನಿರ್ಲಕ್ಷ್ಯ

    |

    ಸಿನಿಮಾಗಳಿಗೆ ಗುಣಮಟ್ಟ, ಜನಪ್ರಿಯತೆ ಆಧಾರದಲ್ಲಿ ರೇಟಿಂಗ್ ನೀಡುವ ಐಎಂಡಿಬಿ ಸಂಸ್ಥೆಯು 2022 ರಲ್ಲಿ ಈವರೆಗೆ ಬಿಡುಗಡೆ ಆದ ಭಾರತೀಯ ಸಿನಿಮಾಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ.

    ಈ ಪಟ್ಟಿಯಲ್ಲಿ ಕನ್ನಡದ 'ಕೆಜಿಎಫ್ 2' ಸೇರಿದಂತೆ ಇನ್ನೂ ಕೆಲವು ದಕ್ಷಿಣದ ಸಿನಿಮಾಗಳು ಸ್ಥಾನ ಗಿಟ್ಟಿಸಿದೆ. ಆದರೆ ಆಶ್ಚರ್ಯಕರ ಸಂಗತಿಯೆಂದರೆ ಈ ವರ್ಷ ಬಾಕ್ಸ್‌ಆಫೀಸ್‌ನಲ್ಲಿ ಧಾರುಣ ಸೋಲು ಕಂಡ ಬಾಲಿವುಡ್‌ ಸಿನಿಮಾಗಳು ಸಹ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.

    ಈ ವರ್ಷದ ಟಾಪ್ 10 ಜನಪ್ರಿಯ ಭಾರತೀಯ ಸಿನಿಮಾಗಳಿವು: 'ಕೆಜಿಎಫ್ 2' ಎಷ್ಟನೇ ಸ್ಥಾನ?ಈ ವರ್ಷದ ಟಾಪ್ 10 ಜನಪ್ರಿಯ ಭಾರತೀಯ ಸಿನಿಮಾಗಳಿವು: 'ಕೆಜಿಎಫ್ 2' ಎಷ್ಟನೇ ಸ್ಥಾನ?

    ಕನ್ನಡದ ಸೂಪರ್ ಡೂಪರ್ ಹಿಟ್ ಸಿನಿಮಾ '777 ಚಾರ್ಲಿ' ಸೇರಿದಂತೆ ಇನ್ನೂ ಹಲವು ದಕ್ಷಿಣ ಭಾರತದ ಸೂಪರ್ ಹಿಟ್ ಸಿನಿಮಾಗಳನ್ನು ಐಎಂಡಿಬಿ ಪರಿಗಣನೆಗೇ ತೆಗೆದುಕೊಂಡಿಲ್ಲ. ಬಾಲಿವುಡ್‌ ಅನ್ನಷ್ಟೆ ಗಮನದಲ್ಲಿಟ್ಟುಕೊಂಡು ಈ ಪಟ್ಟಿ ಬಿಡುಗಡೆ ಮಾಡಿದೆಯೇ ಎಂಬ ಅನುಮಾನವೂ, ಪಟ್ಟಿ ನೋಡಿದ ಸಿನಿ ಪ್ರೇಮಿಗಳಲ್ಲಿ ಹುಟ್ಟಿದೆ. ಹಾಗಿದ್ದರೆ ದಕ್ಷಿಣದ ಯಾವ ಸಿನಿಮಾಗಳು ಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡಿವೆ? ಬಾಲಿವುಡ್‌ನ ಯಾವ ಡಬ್ಬಾ ಸಿನಿಮಾಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ? ಇಲ್ಲಿದೆ ನೋಡಿ.

    '777 ಚಾರ್ಲಿ' ಸಿನಿಮಾಕ್ಕಿಂತಲೂ ಒಳ್ಳೆಯ ಸಿನಿಮಾ ಬೇಕೆ?

    '777 ಚಾರ್ಲಿ' ಸಿನಿಮಾಕ್ಕಿಂತಲೂ ಒಳ್ಳೆಯ ಸಿನಿಮಾ ಬೇಕೆ?

    ನಾಯಕ ಪ್ರಧಾನ, ಆಕ್ಷನ್ ಸಿನಿಮಾಗಳೇ ಹೆಚ್ಚಾಗಿದ್ದ ಸಮಯದಲ್ಲಿ ಗಟ್ಟಿ ಕತೆ, ಭಾವುಕತೆ, ಸಂದೇಶಗಳನ್ನು ಹೊತ್ತು ತಂದು ಗೆದ್ದ ಸಿನಿಮಾ '777 ಚಾರ್ಲಿ'. ಕೇವಲ ಆಕ್ಷನ್ ಸಿನಿಮಾಗಳಲ್ಲ ಬದಲಿಗೆ ಕಥಾಆಧರಿತ ಸಿನಿಮಾಗಳು ಸಹ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆಲ್ಲುತ್ತವೆ ಎಂದು ತೋರಿಸಿಕೊಟ್ಟ ಸಿನಿಮಾ '777 ಚಾರ್ಲಿ' ಹಾಗಿದ್ದರೂ ಈ ಸಿನಿಮಾ ಐಎಂಡಿಬಿಯ 2022ರ ಈವರೆಗಿನ ಜನಪ್ರಿಯ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಐಎಂಡಿಬಿಯಲ್ಲಿ ಈ ಸಿನಿಮಾಕ್ಕೆ 10 ರಲ್ಲಿ 9.1 ರೇಟಿಂಗ್ ನೀಡಲಾಗಿದೆ. 12 ಸಾವಿರ ಮತಗಳು ಸಿಕ್ಕಿವೆ ಆದರೆ ಇದಕ್ಕಿಂತಲೂ ಕಡಿಮೆ ಐಎಂಡಿಬಿ ರೇಟಿಂಗ್ ಇರುವ, ಕಡಿಮೆ ಮತಗಳನ್ನು ಪಡೆದ ಕೆಲವು ಸಿನಿಮಾಗಳು ಪಟ್ಟಿಯಲ್ಲಿವೆ!

    ಮಲಯಾಳಂನ 'ಜನ ಗಣ ಮನ' ಯಾಕಿಲ್ಲ?

    ಮಲಯಾಳಂನ 'ಜನ ಗಣ ಮನ' ಯಾಕಿಲ್ಲ?

    ಪೃಥ್ವಿರಾಜ್ ಸುಕುಮಾರನ್ ನಟನೆಯ ಮಲಯಾಳಂ ಸಿನಿಮಾ 'ಜನ ಗಣ ಮನ' ಈ ವರ್ಷ ಬಿಡುಗಡೆ ಆದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು. ಕರ್ನಾಟಕದ ಮಂಡ್ಯದ ಬಳಿ ನಡೆದ ನಿಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಮಾಡಲಾದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಐಎಂಡಿಬಿಯಲ್ಲಿ ಈ ಸಿನಿಮಾಕ್ಕೆ 8.3 ಅಂಕ ನೀಡಲಾಗಿದೆ. ಆದರೆ ಈ ಸಿನಿಮಾ ಸಹ ಪಟ್ಟಿಯಲ್ಲಿಲ್ಲ.

    'ಜೇಮ್ಸ್' ಸಿನಿಮಾದ ರೇಟಿಂಗ್ ಸಹ ಉತ್ತಮವಾಗಿದೆ

    'ಜೇಮ್ಸ್' ಸಿನಿಮಾದ ರೇಟಿಂಗ್ ಸಹ ಉತ್ತಮವಾಗಿದೆ

    ಪುನೀತ್ ರಾಜ್‌ಕುಮಾರ್ ನಟನೆಯ 'ಜೇಮ್ಸ್' ಸಿನಿಮಾ ಮಾರ್ಚ್ 17 ಕ್ಕೆ ಬಿಡುಗಡೆ ಆಗಿತ್ತು. ಈ ಸಿನಿಮಾದ ರೇಟಿಂಗ್ 7.7 ಆಗಿದೆ. ಮತಗಳ ಸಂಖ್ಯೆ ಕಡಿಮೆ ಇದ್ದರು ರೇಟಿಂಗ್ ಹೆಚ್ಚಾಗಿದೆ ಹಾಗಿದ್ದರೂ ಈ ಸಿನಿಮಾವನ್ನು ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಈ ವರ್ಷ ಅತಿ ಹೆಚ್ಚು ಮಂದಿ ನೋಡಿದ ಭಾರತದ ಸಿನಿಮಾಗಳಲ್ಲಿ ಇದೂ ಸಹ ಒಂದು ಆದರೂ ಪಟ್ಟಿಯಲ್ಲಿ ಸಿನಿಮಾಕ್ಕೆ ಸ್ಥಾನ ನೀಡಲಾಗಿಲ್ಲ.

    ಐಎಂಡಿಬಿಗೆ ಸ್ಪಷ್ಟತೆ ಇಲ್ಲ!

    ಐಎಂಡಿಬಿಗೆ ಸ್ಪಷ್ಟತೆ ಇಲ್ಲ!

    ಪಟ್ಟಿ ಬಿಡುಗಡೆ ಮಾಡಿರುವ ಐಎಂಡಿಬಿ, ಈ ವರ್ಷ ಜನವರಿ 01 ರಿಂದ ಜೂನ್ 30 ರ ಒಳಗೆ ಬಿಡುಗಡೆ ಆದ ಅತ್ಯುತ್ತಮ ಸಿನಿಮಾಗಳ ಪಟ್ಟಿ ಇದಾಗಿದೆ ಎಂದಿದೆ. 777 ಚಾರ್ಲಿ ಸಿನಿಮಾ ಜೂನ್ 03 ರಂದೇ ಬಿಡುಗಡೆ ಆಗಿದ್ದು, ಬಿಡುಗಡೆ ಆದಾಗಿನಿಂದಲೂ ಉತ್ತಮ ರೇಟಿಂಗ್ ಉಳಿಸಿಕೊಂಡಿದೆ. ಮಲಯಾಳಂನ 'ಜನ ಗಣ ಮನ' ಸಹ. ಆದರೆ ಪಟ್ಟಿಯಲ್ಲಿ ಈ ಎರಡೂ ಸಿನಿಮಾಗಳು ಸ್ಥಾನ ಪಡೆದಿಲ್ಲ. ಕಳಪೆ ರೇಟಿಂಗ್ ಹೊಂದಿರುವ 'ಪೃಥ್ವಿರಾಜ್ ಸುಕುಮಾರನ್', ರೀಮೇಕ್ ಸಿನಿಮಾ 'ರನ್‌ ವೇ 34'ಗಳಿಗೆ ಮಣೆ ಹಾಕಲಾಗಿದೆ. ಪೇಜ್‌ವೀವ್ಸ್‌ ಆಧಾರದ ಮೇಲೆ ಪಟ್ಟಿ ತಯಾರಿಸುವುದಾದರೆ ವಯಸ್ಕರ ಸಿನಿಮಾಗಳ ಪೇಜ್‌ಗಳಿಗೆ ಅತಿ ಹೆಚ್ಚು ವೀವ್ಸ್‌ ಸಿಕ್ಕಿವೆ ಅವನ್ನೇ ಹಾಕಬಹುದಿತ್ತಲ್ಲ ಎಂಬುದು ಸಿನಿಪ್ರೇಮಿಗಳ ಆಕ್ರೋಶ.

    English summary
    IMDb released 2022 most popular movie list. But list does not have 777 Charlie and Malayalam's Jana Gana Mana movie.
    Friday, July 15, 2022, 12:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X