ಅತಿ ನಿರೀಕ್ಷಿತ ಟಾಪ್ 10 ಸಿನಿಮಾಗಳ ಪಟ್ಟಿ ಕೊಟ್ಟ ಐಎಂಡಿಬಿ: 'ಕೆಜಿಎಫ್ 2' ಗೆ ಎಷ್ಟನೇ ಸ್ಥಾನ?
ಕೊರೊನಾ ಹಾವಳಿ ಬಹುತೇಕ ಕಡಿಮೆ ಆಗಿದೆ. ಮುದುಡಿ ಕೂತಿದ್ದ ಚಿತ್ರರಂಗ ಗರಿಗೆದರಿ ತಿಂಗಳು ಕಳೆದಿವೆ. ಆರಂಭದಲ್ಲಿ ಸಣ್ಣ-ಪುಟ್ಟ ಸಿನಿಮಾಗಳು ಬಿಡುಗಡೆ ಆದ ಬಳಿಕ ಈಗ ಬಿಗ್ ಬಜೆಟ್ ಸಿನಿಮಾಗಳ ಸರದಿ.
ಸಾಲು-ಸಾಲಾಗಿ ಬಿಗ್ ಬಜೆಟ್, ಬಿಗ್ ಸ್ಟಾರ್ ಸಿನಿಮಾಗಳು ಒಂದರ ಹಿಂದೊಂದರಂತೆ ಎಲ್ಲ ಭಾಷೆಗಳಲ್ಲಿಯೂ ಬಿಡುಗಡೆ ಆಗುತ್ತಿವೆ. ಕನ್ನಡದಲ್ಲಿ 'ಜೇಮ್ಸ್' ಬಳಿಕ ಈಗ 'ಕೆಜಿಎಫ್ 2' ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ.
ಏಪ್ರಿಲ್, ಮೇ ತಿಂಗಳಲ್ಲಿ ಅಂತೂ ಚಿತ್ರಮಂದಿರಗಳು ಬಹಳ ಬ್ಯುಸಿಯಾಗಿರಲಿವೆ. ಕನ್ನಡದ 'ಕೆಜಿಎಫ್ 2' ಸೇರಿದಂತೆ ಪರಭಾಷೆಯ ಹಲವು ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಈ ನಡುವೆ ಜಗತ್ತಿನ ಸಿನಿಮಾಗಳಿಗೆ ರೇಟಿಂಗ್ ನೀಡುವ ಬಹುಮಾನ್ಯ ಸಂಸ್ಥೆ ಐಎಂಡಿಬಿ ಇದೀಗ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕನ್ನಡದ ಕೆಜಿಎಫ್ 2 ಸೇರಿದಂತೆ ಹಲವು ಭಾಷೆಯ ಹತ್ತು ಸಿನಿಮಾಗಳು ಪಟ್ಟಿಯಲ್ಲಿವೆ. ಯಾವ ಸಿನಿಮಾಕ್ಕೆ ಯಾವ ಸ್ಥಾನ ದೊರಕಿದೆ ಇಲ್ಲಿದೆ ಪಟ್ಟಿ....

ಹತ್ತನೇ ಸ್ಥಾನದಲ್ಲಿ 'ಗಲ್‌ವಾಕ್ಡಿ'
ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿ 'ಗಲ್‌ವಾಕ್ಡಿ' ಪಂಜಾಬಿ ಸಿನಿಮಾ ಇದೆ. ಸಿನಿಮಾ ಇಂದಷ್ಟೆ ಬಿಡುಗಡೆ ಆಗಿದ್ದು, ಮಾನಸಿಕ ಆರೋಗ್ಯದ ಕುರಿತಾದ ಕತೆಯನ್ನು ರಂಜನೀಯವಾಗಿ ಈ ಸಿನಿಮಾದಲ್ಲಿ ಹೇಳಲಾಗಿದೆ.

ಒಂಬತ್ತನೇ ಸ್ಥಾನದಲ್ಲಿ 'ದಸ್ವಿ'
ಅಭಿಷೇಕ್ ಬಚ್ಚನ್ ನಟನೆಯ 'ದಸ್ವಿ' ಸಿನಿಮಾ ಈ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಬಹಳ ಒಳ್ಳೆಯ ವಿಮರ್ಶೆಗಳು ಕೇಳಿ ಬಂದಿವೆ. ರಾಜಕೀಯ ನಾಯಕನೊಬ್ಬ ಹತ್ತನೇ ತರಗತಿ ಪರೀಕ್ಷೆ ಬರೆದು ಪಾಸ್ ಆಗುತ್ತಾನೊ ಇಲ್ಲವೊ ಎಂಬ ಕತೆಯನ್ನು ಸಿನಿಮಾ ಒಳಗೊಂಡಿದೆ.

ಎಂಟನೇ ಸ್ಥಾನದಲ್ಲಿ 'ಆಚಾರ್ಯ'
ಮೆಗಾಸ್ಟಾರ್ ಚಿರಂಜೀವಿ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಆಚಾರ್ಯ' ಸಿನಿಮಾ ಎಂಟನೇ ಸ್ಥಾನದಲ್ಲಿದೆ. ಈ ಸಿನಿಮಾದಲ್ಲಿ ನಟ ರಾಮ್ ಚರಣ್ ತೇಜ ಸಹ ನಟಿಸಿದ್ದಾರೆ. ಸಿನಿಮಾವ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ. ಸಿನಿಮಾವು ಏಪ್ರಿಲ್ 29 ರಂದು ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ.

ಏಳನೇ ಸ್ಥಾನದಲ್ಲಿ 'ಕಾತುವಾಕು ರೆಂಡು ಕಾದಲ್'
ತಮಿಳಿನ ಕಾಮಿಡಿ ರೊಮ್ಯಾಂಟಿಕ್ ಸಿನಿಮಾ 'ಕಾತುವಾಕು ರೆಂಡು ಕಾದಲ್' ಸಿನಿಮಾ ಏಳನೇ ಸ್ಥಾನದಲ್ಲಿದೆ. ಈ ಸಿನಿಮಾದಲ್ಲಿ ನಯನತಾರಾ, ಸಮಂತಾ ಹಾಗೂ ವಿಜಯ್ ಸೇತುಪತಿ ಒಟ್ಟಾಗಿ ನಟಿಸಿದ್ದಾರೆ. ಸಿನಿಮಾವನ್ನು ನಯನತಾರಾ ಹಾಗೂ ಬಾಯ್‌ಫ್ರೆಂಡ್ ವಿಘ್ನೇಷ್ ನಿರ್ಮಾಣ ಮಾಡಿದ್ದು, ವಿಘ್ನೇಶ್ ಅವರೇ ನಿರ್ದೇಶನ ಮಾಡಿದ್ದಾರೆ. ಸಿನಿಮಾವು ಏಪ್ರಿಲ್ 28 ರಂದು ಬಿಡಗುಡೆ ಆಗಲಿದೆ.

ಆರನೇ ಸ್ಥಾನದಲ್ಲಿ 'ಅಭಯ್'
ಆರನೇ ಸ್ಥಾನದಲ್ಲಿ ವೆಬ್ ಸರಣಿ 'ಅಭಯ್; ಸೀಸನ್ 3' ಇದೆ. ಕುಮಾನ್ ಕೇಮು ನಟಿಸಿರುವ ಈ ವೆಬ್ ಸರಣಿ ಜೀನಲ್ಲಿ ಏಪ್ರಿಲ್ 08 ರಿಂದ ಪ್ರಸಾರವಾಗುತ್ತಿದೆ. ಈ ವೆಬ್ ಸರಣಿಯ ಮೊದಲೆರಡು ಭಾಗ ಹಿಟ್ ಎನಿಸಿಕೊಂಡಿವೆ.

'ರನ್‌ವೇ 34' ಐದನೇ ಸ್ಥಾನದಲ್ಲಿ
ಅಜಯ್ ದೇವಗನ್, ಅಮಿತಾಬ್ ಬಚ್ಚನ್, ರಾಕುಲ್ ಪ್ರೀತ್ ನಟಿಸಿರುವ 'ರನ್‌ವೇ 34' ಸಿನಿಮಾ ಐದನೇ ಸ್ಥಾನದಲ್ಲಿದೆ. ಸಿನಿಮಾದ ಟ್ರೇಲರ್ ಭಾರಿ ವೈರಲ್ ಆಗಿದೆ. ಸಿನಿಮಾವು ವಿಮಾನಯಾನದ ಕುರಿತ ಥ್ರಿಲ್ಲಿಂಗ್ ಕತೆಯನ್ನು ಹೊಂದಿದೆ. ಸಿನಿಮಾವನ್ನು ಅಜಯ್ ದೇವಗನ್ ಅವರೇ ನಿರ್ದೇಶನ ಮಾಡಿರುವುದು ವಿಶೇಷ. ಏಪ್ರಿಲ್ 29 ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಅಮಿತಾಬ್ ಬಚ್ಚನ್ ತನಿಖಾಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ.

ನಾಲ್ಕನೇ ಸ್ಥಾನದಲ್ಲಿ 'ಹೀರೋಪಂತಿ 2'
ಟೈಗರ್ ಶ್ರಾಫ್ ನಟನೆಯ ಆಕ್ಷನ್ ಸಿನಿಮಾ 'ಹೀರೋಪಂತಿ 2' ಸಿನಿಮಾ ನಾಲ್ಕನೇ ಸ್ಥಾನದಲ್ಲಿದೆ. ಅಹ್ಮದ್ ಖಾನ್, ಆಕಾಶ್ ಸೋಲಂಕಿ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಟೈಗರ್ ಜೊತೆಗೆ ತಾರಾ ಸುತಾರಿಯಾ ನಟಿಸಿದ್ದಾರೆ. ಸಿನಿಮಾವು ಆಕ್ಷನ್, ಕಾಮಿಡಿ ಜಾನರ್‌ನದ್ದಾಗಿದೆ.
Recommended Video


ಮೂರನೇ ಸ್ಥಾನದಲ್ಲಿ 'ಅಟ್ಯಾಕ್'
ಜಾನ್ ಅಬ್ರಹಾಂ ನಟನೆಯ 'ಅಟ್ಯಾಕ್' ಸಿನಿಮಾ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಋಣಾತ್ಮಕ ವಿಮರ್ಶೆಗಳು ಕೇಳಿ ಬಂದಿದ್ದು, ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನೂ ಯಶಸ್ಸನ್ನು ಈ ಸಿನಿಮಾ ಗಳಿಸಿಲ್ಲ.

ಎರಡನೇ ಸ್ಥಾನದಲ್ಲಿ 'ಬೀಸ್ಟ್'
ಐಎಂಡಿಬಿ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವುದು ವಿಜಯ್ ನಟನೆಯ 'ಬೀಸ್ಟ್' ಸಿನಿಮಾ. ಈ ಸಿನಿಮಾ ಏಪ್ರಿಲ್ 13 ರಂದು ದೇಶದಾದ್ಯಂತ ಬಿಡುಗಡೆ ಆಗಲಿದೆ. ನೆಲ್ಸನ್ ದಿಲಿಪ್ ಕುಮಾರ್ ಈ ಸಿನಿಮಾವನ್ನು ನಿರ್ದೇಶಿಸಿದ್ದು, ವಿಜಯ್ ಜೊತೆಗೆ ಪೂಜಾ ಹೆಗ್ಡೆ ಸಹ ನಟಿಸಿದ್ದಾರೆ. ಸಿನಿಮಾದಲ್ಲಿ ಯೋಗಿಬಾಬು ಸಹ ನಟಿಸಿದ್ದಾರೆ.

ಮೊದಲನೇ ಸ್ಥಾನದಲ್ಲಿ ಕನ್ನಡದ 'ಕೆಜಿಎಫ್ 2'
ಕನ್ನಡದ 'ಕೆಜಿಎಫ್ 2' ಸಿನಿಮಾ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. 'ಕೆಜಿಎಫ್ 2' ಸಿನಿಮಾವು ದೇಶದ ಎಲ್ಲ ಇತರ ಸಿನಿಮಾಗಳನ್ನು ಹಿಂದಿಕ್ಕಿ ಬಹುನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಮೆಗಾಸ್ಟಾರ್ ಚಿರಂಜೀವಿ, ಸೂಪರ್ ಸ್ಟಾರ್ ವಿಜಯ್ ಸಿನಿಮಾಗಳನ್ನು ಹಿಂದಿಕ್ಕಿ 'ಕೆಜಿಎಫ್ 2' ಮೊದಲ ಸ್ಥಾನ ಪಡೆದುಕೊಂಡಿದೆ. ಸಿನಿಮಾವು ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.


Click it and Unblock the Notifications











