2021ರಲ್ಲಿ ತಂದೆ-ತಾಯಿಯಾದ ಚಿತ್ರರಂಗ ನಟ-ನಟಿಯರು
ಕಳೆದ ಒಂದೂವರೆ ವರ್ಷದಿಂದ ಹೆಚ್ಚಾಗಿ ಕೆಟ್ಟ ವಿಚಾರಗಳೇ ಕಿವಿಗೆ ಬೀಳುತ್ತಿದೆ. ಕೋವಿಡ್ ಸೋಂಕಿನಿಂದ ದೇಶದಲ್ಲಿ ಅನೇಕ ಸಾವು-ನೋವು ಸಂಭವಿಸಿದೆ. ಅನಿರೀಕ್ಷಿತವಾಗಿ ಬಂದ ಈ ರೋಗ ಬಹುತೇಕರು ತಮ್ಮ ಜೀವನದಲ್ಲಿ ನಡೆಯಬೇಕಿದ್ದ ಅನೇಕ ಸಂಭ್ರಮ ಕಸಿದುಕೊಂಡಿತು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಜೀವನದ ಪಯಣ ಮುಂದುವರಿಸಿದ ಸೆಲೆಬ್ರಿಟಿಗಳು ಸಣ್ಣದಾಗಿ ಮದುವೆ ಕಾರ್ಯಕ್ರಮ, ನಾಮಕರಣ, ಹುಟ್ಟುಹಬ್ಬಗಳನ್ನು ಆಚರಿಸಿಕೊಂಡರು.
ಇನ್ನು ಚಿತ್ರರಂಗದಲ್ಲಿ ಹಲವು ನಟ-ನಟಿಯರು ಈ ಕೊರೊನಾ ಬಿಕ್ಕಟ್ಟಿನ ಸಮಯದಲ್ಲೇ ತಮ್ಮ ಮನೆಗಳಿಗೆ ಹೊಸ ಅತಿಥಿಯನ್ನು ಬರ ಮಾಡಿಕೊಂಡಿದ್ದಾರೆ. ಲಾಕ್‌ಡೌನ್‌ನಲ್ಲಿ ಮದುವೆಯಾದ ಜೋಡಿಗಳ ಬಗ್ಗೆ ತಿಳಿದಿರುವ ನಿಮಗೆ 2021ನೇ ವರ್ಷದಲ್ಲಿ ತಂದೆ-ತಾಯಿಯಾದ ಸೆಲೆಬ್ರಿಟಿಗಳನ್ನು ಪರಿಚಯ ಮಾಡಿಕೊಡ್ತೇವೆ. ಮುಂದೆ ಓದಿ...

ಮನೆಗೆ ಮಹಾಲಕ್ಷ್ಮಿ ಸ್ವಾಗತಿಸಿದ ಧರ್ಮಣ್ಣ
'ರಾಮಾ ರಾಮಾ ರೇ' ಸಿನಿಮಾ ಮೂಲಕ ಖ್ಯಾತಿ ಗಳಿಸಿಕೊಂಡಿದ್ದ ನಟ ಧರ್ಮಣ್ಣ ದಂಪತಿ ಜನವರಿ ತಿಂಗಳಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿದರು. ಧರ್ಮಣ್ಣ ಪತ್ನಿ ಕಾವ್ಯ ಈ ವರ್ಷದ ಆರಂಭದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿ ಮನೆಗೆ ಮಹಾಲಕ್ಷ್ಮಿ ಸ್ವಾಗತಿಸಿದರು.

ಹೆಣ್ಣು ಮಗುವಿಗೆ ಜನ್ಮ ನೀಡಿದ ಅಕ್ಷತಾ
ಬಿಗ್ ಬಾಸ್ ಖ್ಯಾತಿಯ, ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಜನವರಿ 15 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಸಂತಸವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಅಕ್ಷತಾ, ಮನೆಗೆ ಲಕ್ಷ್ಮಿ ಬಂದಳು ಎಂದು ಪೋಸ್ಟ್ ಹಾಕಿದ್ದರು. ಅಕ್ಷತಾ ಪತಿ ರಂಗನಿರ್ದೇಶಕ ಪ್ರಸನ್ನಾ ಸಾಗರ್.

ತಂದೆಯಾದ ಕಪಿಲ್ ಶರ್ಮಾ
ಬಾಲಿವುಡ್‌ನ ಖ್ಯಾತ ನಿರೂಪಕ ಕಪಿಲ್ ಶರ್ಮಾ ಎರಡನೇ ಬಾರಿ ತಂದೆಯಾದರು. ಫೆಬ್ರವರಿ 1 ರಂದು ಕಪಿಲ್ ಶರ್ಮಾ ಪತ್ನಿ ಗಿನ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಅದಾಗಲೇ ಕಪಿಲ್ ಶರ್ಮಾಗೆ ಒಂದು ಹೆಣ್ಣು ಮಗು ಇದೆ.

ಗಂಡು ಮಗು ಬರಮಾಡಿಕೊಂಡ ಕರೀನಾ
ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ದಂಪತಿ ಫೆಬ್ರವರಿ ತಿಂಗಳಲ್ಲಿ ಎರಡನೇ ಮಗು ಬರಮಾಡಿಕೊಂಡರು. ಅದಾಗಲೇ ತೈಮೂರ್ ಹೆಸರಿನ ಗಂಡು ಮಗು ಇದ್ದು, ಎರಡನೇ ಸಲವೂ ಗಂಡು ಮಗುವಿಗೆ ಕರೀನಾ ಜನ್ಮ ನೀಡಿದ್ದರು.

ತಾಯಿಯಾದ 'ಶೈಲೂ' ನಟಿ ಭಾಮಾ
'ಶೈಲೂ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿಕೊಂಡ ಮಲಯಾಳಂ ನಟಿ ಭಾಮಾ ಹೆಣ್ಣು ಮಗುವಿಗೆ ತಾಯಿಯಾದರು. ಮಾರ್ಚ್ 11 ರಂದು ಶುಕ್ರವಾರ ಭಾಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಅಮ್ಮನಾದ ಮಯೂರಿ
'ಕೃಷ್ಣಲೀಲಾ' ಖ್ಯಾತಿಯ ನಟಿ ಮಯೂರಿ ದಂಪತಿ ಮಾರ್ಚ್ 16 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 2020ರಲ್ಲಿ ಬಹುಕಾಲದ ಗೆಳೆಯ ಅರುಣ್ ಜೊತೆ ಮಯೂರಿ ವಿವಾಹವಾಗಿದ್ದರು.

ತಾಯಿಯಾದ ಶ್ರೇಯಾ ಘೋಷಲ್
ಖ್ಯಾತ ಗಾಯಕಿ ಶ್ರೆಯಾ ಘೋಷಾಲ್ ಇದೇ ವರ್ಷ ತಾಯಿಯಾದರು. ಮೇ 22 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಶ್ರೆಯಾ ಹಾಗೂ ಶಿಲಾದಿತ್ಯ 2005 ರಲ್ಲಿ ವಿವಾಹವಾಗಿದ್ದರು.

ಬಿಗ್ ಬಾಸ್ ನಯನಾ
ಸ್ಯಾಂಡಲ್ ವುಡ್ ನಟಿ, ಬಿಗ್ ಬಾಸ್ ಖ್ಯಾತಿಯ ನಯನಾ ಪುಟ್ಟಸ್ವಾಮಿ ಜೂನ್ 29 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ಅಮೆರಿಕದಲ್ಲಿ ನೆಲೆಸಿರುವ ನಯನಾ ಅಲ್ಲೇ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. 2018ರಲ್ಲಿ ನಯನಾ, ಚರಣ ತೇಜ್ ಜೊತೆ ಹಸೆಮಣೆ ಏರಿದರು.

ಅಮ್ಮನಾದ ಬಿಸಿ ಪಾಟೀಲ್ ಪುತ್ರಿ
ಕೃಷಿ ಸಚಿವ, ಚಲನಚಿತ್ರ ನಟ ಬಿಸಿ ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ಅಮ್ಮನಾಗಿದ್ದಾರೆ. ಹೆಣ್ಣು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಜುಲೈ 1 ರಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸೃಷ್ಟಿ ಪಾಟೀಲ್ 2019ರಲ್ಲಿ ಉದ್ಯಮಿ ಸಂಜಯ್ ಬೇಲೂರು ಜೊತೆ ಹಸೆಮಣೆ ಏರಿದ್ದರು.


Click it and Unblock the Notifications











