For Quick Alerts
  ALLOW NOTIFICATIONS  
  For Daily Alerts

  ಮೂಕಿಯಿಂದ ಟಾಕಿಯೆಡೆಗೆ ಭಾರತೀಯ ಸಿನಿಮಾ ಪಯಣ

  |

  1920ರ ವೇಳೆಗಾಗಲೆ ಆಗಿನ ಭಾರತದ ಪ್ರಮುಖ ನಗರಗಳಾದ ಬಾಂಬೆ, ಮದ್ರಾಸು, ಕಲ್ಕತ್ತ, ಲಾಹೋರ್, ಕರಾಚಿ, ಪುಣೆ, ಬೆಂಗಳೂರು ಇನ್ನೂ ಕೆಲವೆಡೆಗಳೆಲ್ಲ ಸಿನಿಮಾ ಮ್ಯಾಜಿಕ್ ಹಬ್ಬಿಯಾಗಿತ್ತು.

  ಚಲಿಸುವ ಚಿತ್ರಗಳು ಎಂಬ ಕಲ್ಪನೆಯನ್ನೇ ನಂಬಲು ತಯಾರಿಲ್ಲದಿದ್ದ ಜನರು ನಿಧಾನಕ್ಕೆ ಚಿತ್ರಮಂದಿರಗಳತ್ತ ಅಥವಾ ಸಿನಿಮಾ ಪ್ರದರ್ಶಿಸಲು ಆಗಿನ ಕಾಲಕ್ಕೆ ಏರ್ಪಾಟು ಮಾಡಲಾಗುತ್ತಿದ್ದ ಪ್ರೊಜೆಕ್ಟರುಗಳು, ಟೆಂಟುಗಳತ್ತ ಬರಲಾರಂಭಿಸಿದ್ದರು.

  1920ರ ವೇಳೆಗಾಗಲೆ ಕೆಲವಾರು ಉತ್ಸಾಹಿ ಯುವಕರು, ಉತ್ಸಾಹಿ ಧನಿಕರು ಸಿನಿಮಾ ನಿರ್ಮಾಣ ಮಾಡಲಾರಂಭಿಸಿದ್ದರು. ಆಗ ನಡೆಯುತ್ತಿದ್ದ ಸ್ವತಂತ್ರ್ಯ ಚಳವಳಿಯ ಕೆಲವು ಮಂದಿಯೂ ಸಿನಿಮಾಗಳನ್ನು ಚಳವಳಿಯ ಅಸ್ತ್ರಗಳನ್ನಾಗಿ ಬಳಸಿಕೊಳ್ಳಲು ಯತ್ನಿಸಿದರು. ಗಂಗಾಧರ ತಿಲಕರು, ದಾದಾ ಸಾಹೇಬ್ ಫಾಲ್ಕೆಗೆ ಸಿನಿಮಾ ನಿರ್ಮಾಣಕ್ಕೆ ಹಣ ಹೊಂದಿಸಿಕೊಡಲು ಅಭಿಯಾನವನ್ನೇ ಆರಂಭಿಸಿದ್ದರು ಎಂದರೆ ಸಿನಿಮಾಗಳು ಎಷ್ಟು ಬೇಗೆ ಜನಪ್ರಿಯತೆ ಗಳಿಸಿಕೊಳ್ಳುತ್ತಿದ್ದವು ಎಂಬುದನ್ನು ಅಂದಾಜಿಸಬಹುದು.

  ದಕ್ಷಿಣ ಭಾರತದ ಮೊದಲ ಸಿನಿಮಾ ನಿರ್ಮಾಣವಾಗಿದ್ದು ಹೇಗೆ?ದಕ್ಷಿಣ ಭಾರತದ ಮೊದಲ ಸಿನಿಮಾ ನಿರ್ಮಾಣವಾಗಿದ್ದು ಹೇಗೆ?

  ಸಿನಿಮಾಗಳ ಆರಂಭ ಕಾಲದಲ್ಲಿ ಅವನ್ನು ಹೆಚ್ಚಿನ ಜನರಿಗೆ ತಲುಪುವಂತೆ ಮಾಡಿದ ಶ್ರೇಯ ಸಲ್ಲಬೇಕಿರುವುದು ಜಮ್‌ಶೇಡ್ಜಿ ಫ್ರಮ್ಜಿ ಮದನ್ ಎಂಬುವರಿಗೆ.

  ಜಮ್‌ಶೇಡ್ಜಿ ಫರ್ಡಿಮನ್ ಮದನ್ 1902 ರಲ್ಲಿಯೇ ವಿದೇಶಗಳಿಂದ ಭಯೋಸ್ಕೋಪ್ ಫಿಲಂಗಳನ್ನು ತರಿಸಿಕೊಂಡು ಅದರ ಶೋಗಳನ್ನು ಆಯೋಜಿಸುತ್ತಿದ್ದರು. ಬ್ರಿಟಿಷರಿಗೆ ಗೂಡ್ಸ್ ವ್ಯವಸ್ಥೆಯನ್ನೂ ಮಾಡುತ್ತಿದ್ದ ಜಮ್‌ಶೇಡ್ಜಿ ಮದನ್‌ ಭಾರತದ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು.

  1907ರಲ್ಲಿ ಮೊದಲ ಮದನ್ ಚಿತ್ರಮಂದಿರ

  1907ರಲ್ಲಿ ಮೊದಲ ಮದನ್ ಚಿತ್ರಮಂದಿರ

  ಕೊಲ್ಕತ್ತದಲ್ಲಿ ಭಯೋಸ್ಕೋಪ್ ಫಿಲಂಗಳನ್ನು ಪ್ರದರ್ಶಿಸುತ್ತಿದ್ದ ಮದನ್ ಕೆಲವೇ ತಿಂಗಳಲ್ಲಿ ಅಲ್ಲಿನ ಎಲಿಫೆಂಟ್‌ಸ್ಟೋನ್ ಥಿಯೇಟರ್ ಕಂಪೆನಿಯನ್ನು ಖರೀದಿಸಿ ಅಲ್ಲಿ ನಾಟಕಗಳನ್ನು ಭಯೋಸ್ಕೋಪಿಕ್ ಸಿನಿಮಾಗಳನ್ನು, ಬ್ರಿಟೀಷರಿಗಾಗಿ ಸಿನಿಮಾಗಳನ್ನು ಪ್ರದರ್ಶಿಸಲು ಆರಂಭಿಸಿದರು. 1907 ರಲ್ಲಿ ಕೊಲ್ಕತ್ತದಲ್ಲಿಯೇ ಮೊದಲ ಮದನ್ ಥಿಯೇಟರ್ ಸ್ಥಾಪನೆ ಮಾಡಿದರು.

  ಭಾರತದ ಬಾಕ್ಸ್‌ ಆಫೀಸ್ ಮದನ್ ಕೈಯಲ್ಲಿ!

  ಭಾರತದ ಬಾಕ್ಸ್‌ ಆಫೀಸ್ ಮದನ್ ಕೈಯಲ್ಲಿ!

  ಕೆಲವೇ ವರ್ಷಗಳಲ್ಲಿ ಭಾರತದ ಮೊದಲ ಸಿನಿಮಾ ನಿರ್ಮಾಣವೂ ಆಯಿತು. ನಂತರ ಸತತವಾಗಿ ಹಲವು ಸಿನಿಮಾಗಳು ಭಾರತದಲ್ಲಿ ನಿರ್ಮಾಣವಾಗಲು ಪ್ರಾರಂಭವಾದವು. ಮೊದಲ ವಿಶ್ವ ಯುದ್ಧ ಮುಗಿವ ವೇಳೆಗೆ ಸಿನಿಮಾಗಳಿಗೆ ಭಾರಿ ಬೇಡಿಕೆ ವಿಶ್ವದಾದ್ಯಂತ ಸೃಷ್ಟಿಯಾಗಿತ್ತು. ಭಾರತದಲ್ಲೂ ಸಹ ಸಿನಿಮಾಗಳು ಜನಪ್ರಿಯತೆ ಗಳಿಸಲು ಆರಂಭಿಸಿದ್ದವು. 1920ರ ವೇಳೆಗೆ ಜೆಮ್‌ಶೇಡ್ಜಿ ಅವರ ಒಡೆತನದ 127 ಚಿತ್ರಮಂದಿರಗಳು ಭಾರತದ ವಿವಿಧ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಆಗಿನ ಇಡೀ ಭಾರತದ ಬಾಕ್ಸ್‌ ಆಫೀಸ್‌ ಅನ್ನು ನಿಯಂತ್ರಿಸುತ್ತಿದ್ದಿದ್ದು ಒಬ್ಬರೇ ವ್ಯಕ್ತಿ ಅದುವೇ ಜೆಮ್‌ಶೇಡ್ಜಿ ಫ್ರಮ್ಜಿ ಮದನ್! ಮದನ್ ಥಿಯೇಟರ್ ಭಾರತ ಮಾತ್ರವಲ್ಲ ಶ್ರೀಲಂಕಾ, ಬರ್ಮಾ, ಮಲೇಷ್ಯಾಗಳಲ್ಲಿಯೂ ಕಾರ್ಯನಿರ್ವಹಿಸುತ್ತಿತ್ತು.

  ವಿದೇಶಿಗರನ್ನು ಕರೆಸಿ ಸಿನಿಮಾ ನಿರ್ಮಾಣ ಮಾಡಲಾಗಿಸುತ್ತಿತ್ತು

  ವಿದೇಶಿಗರನ್ನು ಕರೆಸಿ ಸಿನಿಮಾ ನಿರ್ಮಾಣ ಮಾಡಲಾಗಿಸುತ್ತಿತ್ತು

  ಆಗಿನ ಕಾಲದಲ್ಲಿಯೇ ಸ್ಟಾಕ್ ಮಾರ್ಕೆಟ್‌ನಲ್ಲಿದ್ದ ಮದನ್ ಥಿಯೇಟರ್ ಕಂಪೆನಿ ಕೇವಲ ಸಿನಿಮಾ ಪ್ರದರ್ಶನ ಮಾತ್ರವಲ್ಲ ಸಿನಿಮಾ ನಿರ್ಮಾಣದಲ್ಲೂ ಏಕಮೇವಾಧಿಪತ್ಯ ಸ್ಥಾಪಿಸಿತ್ತು. ಹಲವಾರು ವಿದೇಶಿ ನಿರ್ದೇಶಕರನ್ನು ಕರೆಸಿ 1920 ರಿಂದ 1930 ರ ಅವಧಿಯಲ್ಲಿ ಹಲವಾರು ಸಿನಿಮಾಗಳನ್ನು ನಿರ್ಮಿಸಿತ್ತು. 'ನಳ-ದಮಯಂತಿ' (1920), 'ಧೃವ ಚರಿತ್ರ' (1921), 'ರತ್ನವಲ್ಲಿ' (1922) ಇನ್ನೂ ಹಲವಾರು ಸಿನಿಮಾಗಳನ್ನು ವಿದೇಶಿ ನಿರ್ದೇಶಕರನ್ನು ಕರೆಸಿ ಮದನ್ ಥಿಯೇಟರ್ಸ್ ನಿರ್ಮಾಣ ಮಾಡಿತ್ತು. ವರ್ಷವೊಂದಕ್ಕೆ ಹತ್ತು ಮೂಕಿ ಸಿನಿಮಾಗಳನ್ನು ಮದನ್ ಥಿಯೇಟರ್ಸ್ ನಿರ್ಮಿಸಿದ್ದು ವಿಶೇಷ.

  ಹಲವು ಸಿನಿಮಾ ಕರ್ಮಿಗಳು ಸಿನಿಮಾ ನಿರ್ಮಿಸುತ್ತಿದ್ದರು

  ಹಲವು ಸಿನಿಮಾ ಕರ್ಮಿಗಳು ಸಿನಿಮಾ ನಿರ್ಮಿಸುತ್ತಿದ್ದರು

  1920-30 ರ ದಶಕದ ವೇಳೆಗಾಗಲೇ ದಕ್ಷಿಣದಲ್ಲಿ ಆರ್.ನಟರಾಜ ಮೊದಲಿಯಾರ್, ತೆಲುಗಿನ ರಘುಪತಿ ವೆಂಕಯ್ಯ ನಾಯ್ಡು, ಮಲಯಾಳಂನ ಜೆಸಿ ಡ್ಯಾನಿಯಲ್ ನಡಾರ್, ಹಿಂದಿಯಲ್ಲಿ ಅರ್ದೇಶಿರ್ ಇರಾನಿ ಇನ್ನೂ ಹಲವರು ಸಿನಿಮಾ ನಿರ್ಮಾಣ ಮಾಡಿ ಖ್ಯಾತಿ ಹಾಗೂ ಹಣ ಎರಡನ್ನೂ ಗಳಿಸುತ್ತಿದ್ದರು. ಕೆಲವು ಪ್ರಯೋಗಗಳು ಸಹ ಆಗುತ್ತಿದ್ದವು. ಮದನ್ ಥಿಯೇಟರ್‌ನ ಸಹಾಯದಿಂದ ಭಾರತದ ಹಲವು ಪ್ರಮುಖ ನಗರಗಳಲ್ಲಿ ಸಾವಿರಾರು ಮಂದಿ ಸಿನಿಮಾ ವೀಕ್ಷಿಸುತ್ತಿದ್ದರು ಮತ್ತು ಸಿನಿಮಾದ ಜನಪ್ರಿಯತೆ ಬಹುಬೇಗನೆ ಬೆಳೆಯುತ್ತಿತ್ತು.

  'ದಿ ಜಾಜ್ ಸಿಂಗರ್' ಸಿನಿಮಾದ ಸುದ್ದಿ

  'ದಿ ಜಾಜ್ ಸಿಂಗರ್' ಸಿನಿಮಾದ ಸುದ್ದಿ

  ಅದೇ ವೇಳೆಗೆ 1927ರಲ್ಲಿ ಅಮೆರಿಕದಲ್ಲಿ ಅಲನ್ ಕ್ರೊಸ್‌ಲ್ಯಾಂಡ್ ಎಂಬಾತ 'ದಿ ಜಾಜ್ ಸಿಂಗರ್' ಹೆಸರಿನ ಟಾಕಿ ಸಿನಿಮಾ ತೆರೆಗೆ ತಂದಿದ್ದ. ಭಾರತದಲ್ಲಿಯೂ ಈ ಸಿನಿಮಾದ ಸುದ್ದಿ ಬಹುಬೇಗನೆ ಹರಡಿತು. ಅದಾಗಲೇ ಸಿನಿಮಾಗಳ ಸೆಳೆವ ಶಕ್ತಿ ಅರಿತಿದ್ದ ಇಲ್ಲಿನ ಸಿನಿಮಾ ಕರ್ಮಿಗಳು ಆದಷ್ಟು ಬೇಗನೇ ಭಾರತದಲ್ಲಿಯೂ ಟಾಕಿ ಸಿನಿಮಾ ನಿರ್ಮಾಣ ಮಾಡುವ ಪ್ರಯತ್ನ ಆರಂಭಿಸಿದರು. ಆದರೆ ಮೊದಲು ಸಫಲತೆ ಕಂಡಿದ್ದು ಅರ್ದೇಶಿರ್ ಇರಾನಿ.

  English summary
  Indian Cinema History Part 5: Indian cinemas grow rapidly in 1920 after the first world war. Madan Theaters helped Indian cinema grow quickly in 1920-30.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X