twitter
    For Quick Alerts
    ALLOW NOTIFICATIONS  
    For Daily Alerts

    ಆರು ತಿಂಗಳಲ್ಲಿ ಭಾರತೀಯ ಚಿತ್ರರಂಗ ಗಳಿಸಿದ್ದೆಷ್ಟು ಸಾವಿರ ಕೋಟಿ? ಯಾವ ಭಾಷೆಯದ್ದು ಹೆಚ್ಚು ಪಾಲು?

    |

    ಭಾರತೀಯ ಚಿತ್ರರಂಗದ ವಿಶ್ವದ ಅತಿ ಶ್ರೀಮಂತ, ಅತಿ ಸಕ್ರಿಯ ಚಿತ್ರರಂಗವಾಗಿ ಬದಲಾಗಿದೆ. ಗಾತ್ರ, ಬಿಡುಗಡೆ ಆಗುವ ಸಿನಿಮಾಗಲು, ಮಾಡುವ ಒಟ್ಟಾರೆ ಕಲೆಕ್ಷನ್ ವಿಚಾರದಲ್ಲಿ 2011 ರಲ್ಲಿಯೇ ಹಾಲಿವುಡ್ ಅನ್ನು ಹಿಂದಿಕ್ಕಿದ್ದಾಗಿದೆ.

    ದಿನೇ ದಿನೇ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗುತ್ತಿರುವ ಭಾರತೀಯ ಚಿತ್ರರಂಗದ 2022 ರ ಅಂದಾಜು ಮಾರುಕಟ್ಟೆ ಮೌಲ್ಯ 18 ಲಕ್ಷ ಕೋಟಿ ಎನ್ನಲಾಗುತ್ತದೆ. 2019 ರಲ್ಲಿ ಭಾರತೀಯ ಚಿತ್ರರಂಗದ ಒಟ್ಟಾರೆ ಮಾರುಕಟ್ಟೆ ಮೌಲ್ಯ 13 ಲಕ್ಷ ಕೋಟಿಗಳಾಗಿತ್ತು.

    ಭಾರತೀಯ ಸಿನಿಮಾ ಮಾರುಕಟ್ಟೆಯ ಮೌಲ್ಯ ಎಷ್ಟು ಲಕ್ಷ ಕೋಟಿ?ಭಾರತೀಯ ಸಿನಿಮಾ ಮಾರುಕಟ್ಟೆಯ ಮೌಲ್ಯ ಎಷ್ಟು ಲಕ್ಷ ಕೋಟಿ?

    ವರ್ಷದಿಂದ ವರ್ಷಕ್ಕೆ ಸಿನಿಮಾಗಳ ಬಜೆಟ್‌ಗಳು ಏರುತ್ತಲೇ ಇವೆ ಹಾಗೆಯೇ ಬಾಕ್ಸ್ ಆಫೀಸ್‌ ಕಲೆಕ್ಷನ್ ಸಹ ನೂರು ಕೋಟಿಯಿಂದ ಈಗ ಸಾವಿರ ಕೋಟಿ ತಲುಪಿದೆ. ಕೋವಿಡ್‌ನಿಂದ ಎರಡು ವರ್ಷ ಬಹುತೇಕ ಬಾಗಿಲು ಹಾಕಿಕೊಂಡಿದ್ದ ಚಿತ್ರರಂಗ 2022 ರಲ್ಲಿ ಗರಿಗೆದರಿದ್ದು, ಪೂರ್ಣಬಲದೊಂದಿಗೆ ಮುನ್ನುಗ್ಗುತ್ತಿದೆ. ಅದಕ್ಕೆ ವರ್ಷದ ಮೊದಲಾರ್ಧದಲ್ಲಿ ಬಂದಿರುವ ಗಳಿಕೆಯೇ ಸಾಕ್ಷಿ.

    2019 ರಲ್ಲಿ 10,948 ಕೋಟಿ ಗಳಿಕೆ

    2019 ರಲ್ಲಿ 10,948 ಕೋಟಿ ಗಳಿಕೆ

    ಒರ್ಮ್ಯಾಕ್ಸ್ ಮೀಡಿಯಾ ಮಾಹಿತಿ ಪ್ರಕಾರ 2019 ರಲ್ಲಿ ಭಾರತೀಯ ಚಿತ್ರರಂಗ 10,948 ಕೋಟಿ ರುಪಾಯಿ ಹಣ ಗಳಿಕೆ ಮಾಡಿದೆ. ಆಗಿನ ಟಿಕೆಟ್ ದರಕ್ಕೆ ಹೋಲಿಸಿದರೆ ಈಗ ಟಿಕೆಟ್ ದರ ಕನಿಷ್ಟ 30% ಹೆಚ್ಚಾಗಿದೆ. ಹಾಗಾಗಿ ಈ ವರ್ಷ ಗಳಿಕೆ ಪ್ರಮಾಣ ಕನಿಷ್ಟ 30% ಹೆಚ್ಚಾಗಲಿದೆ ಎಂದು ಸುಲಭಕ್ಕೆ ಅಂದಾಜಿಸಬಹುದು. ಸಿನಿಮಾಗಳ ಗುಣಮಟ್ಟ, ಸಿನಿಮಾಗಳು ನಿರ್ಮಾಣವಾಗುತ್ತಿರುವ ಸಂಖ್ಯೆ, ಪ್ರೇಕ್ಷಕರು ಸಿನಿಮಾ ನೋಡಲು ತೋರುತ್ತಿರುವ ಆಸಕ್ತಿ ಎಲ್ಲವನ್ನೂ ಗಮನಿಸಿದಲ್ಲಿ 2019 ಕ್ಕಿಂತಲೂ 50% ಹೆಚ್ಚು ಮೊತ್ತದ ಗಳಿಕೆ ಆಗಬಹುದು.

    5688 ಕೋಟಿ ಗಳಿಕೆ ಮಾಡಿದೆ ಚಿತ್ರರಂಗ

    5688 ಕೋಟಿ ಗಳಿಕೆ ಮಾಡಿದೆ ಚಿತ್ರರಂಗ

    ಈಗಾಗಲೇ 2022 ರ ಅರ್ಧ ವಾರ್ಷಿಕ ವರದಿ ಈಗಾಗಲೇ ಬಂದಿದ್ದು, ಒರ್ಮ್ಯಾಕ್ಸ್ ಮೀಡಿಯಾ ಪ್ರಕಾರ ಭಾರತೀಯ ಚಿತ್ರರಂಗವು ಜನವರಿಯಿಂದ ಜೂನ್ ವರೆಗೆ ಬರೋಬ್ಬರಿ 5688 ಕೋಟಿ ಗಳಿಕೆ ಮಾಡಿದೆ. ಈ ಗಳಿಕೆ ನಿರೀಕ್ಷಿತ ಮಟ್ಟದಲ್ಲಿಲ್ಲವೆಂದೇ ಹೇಳಬೇಕು. ವರ್ಷದ ಆರಂಭದಲ್ಲಿ ಕೋವಿಡ್ ಮೂರನೇ ಅಲೆಯ ಭೀತಿ ಎದುರಾಗಿದ್ದ ಕಾರಣ ಚಿತ್ರರಂಗಕ್ಕೆ ಮತ್ತೆ ಪೆಟ್ಟಾಗಿತ್ತು. ಹಾಗೂ ಕೆಲವು ರಾಜ್ಯಗಳಲ್ಲಿ ಆಗಾಗ್ಗೆ ಕೋವಿಡ್ ಉಲ್ಬಣವಾಗುವುದು ಇಳಿಕೆಯಾಗುವುದು ಈಗಲೂ ಜಾರಿಯಲ್ಲಿದೆ ಆದ್ದರಿಂದ ಮೊದಲಾರ್ಧ ನಿರೀಕ್ಷಿತ ಮಟ್ಟದಲ್ಲಿ ಆದಾಯ ಬಂದಿಲ್ಲ. ಆದರೂ ಇದು ಕಡಿಮೆ ಮೊತ್ತವಂತೂ ಅಲ್ಲ.

    ದೊಡ್ಡ ಮೊತ್ತ ಗಳಿಸಿರುವುದು ಹಿಂದಿ ಸಿನಿಮಾಗಳು! ಅದ್ಹೇಗೆ ಸಾಧ್ಯ?

    ದೊಡ್ಡ ಮೊತ್ತ ಗಳಿಸಿರುವುದು ಹಿಂದಿ ಸಿನಿಮಾಗಳು! ಅದ್ಹೇಗೆ ಸಾಧ್ಯ?

    ಆದರೆ ಈಗ ಜನವರಿಯಿಂದ ಜೂನ್‌ವರೆಗೆ ಗಳಿಸಿರುವ 5688 ಕೋಟಿ ರು ಆದಾಯದಲ್ಲಿ ದೊಡ್ಡ ಪಾಲು ಬಂದಿರುವುದು ಹಿಂದಿ ಭಾಷಿಕ ಪ್ರದೇಶದಿಂದ! ಹೌದು, ಉತ್ತರ ಭಾರತದ ರಾಜ್ಯಗಳಿಂದಲೇ ಹೆಚ್ಚು ಮೊತ್ತ ಗಳಿಕೆಯಾಗಿದೆ. 5688 ಕೋಟಿಯಲ್ಲಿ 34% ಅಂದರೆ 1933 ಕೋಟಿ ಹಣ ಗಳಿಸಿರುವುದು ಸಹ ಹಿಂದಿ ಸಿನಿಮಾಗಳೇ! ಆಶ್ಚರ್ಯವಾಗಬಹುದು, ಬಾಲಿವುಡ್‌ನ ಬಹುತೇಕ ಸಿನಿಮಾಗಳು ಫ್ಲಾಪ್ ಆದರೂ ಅದು ಹೇಗೆ ಹಿಂದಿ ಸಿನಿಮಾಗಳೇ ಹೆಚ್ಚು ಗಳಿಸಿದವೆಂದು. ಅದಕ್ಕೆ ಬೇರೆಯದ್ದೇ ಲೆಕ್ಕಾಚಾರವಿದೆ.

    ದಕ್ಷಿಣ ಭಾರತ ಸಿನಿಮಾಗಳ ಗಳಿಕೆಯೆಷ್ಟು?

    ದಕ್ಷಿಣ ಭಾರತ ಸಿನಿಮಾಗಳ ಗಳಿಕೆಯೆಷ್ಟು?

    ಅತಿ ಹೆಚ್ಚು ಗಳಿಸಿರುವುದು ಹಿಂದಿ ಭಾಷೆಯ ಸಿನಿಮಾಗಳೇ ಆದರೂ ಬಾಲಿವುಡ್ ಸಿನಿಮಾಗಳಲ್ಲ. ದಕ್ಷಿಣ ಭಾರತದ ಸಿನಿಮಾಗಳು ಹಿಂದಿ ಭಾಷೆಗೆ ಡಬ್ ಆಗಿ ಹೆಚ್ಚು ಹಣ ಗಳಿಕೆ ಮಾಡಿವೆ. ಹಿಂದಿ ಸಿನಿಮಾಗಳು ಗಳಿಸಿರುವ 1933 ಕೋಟಿ ರುಪಾಯಿಯಲ್ಲಿ 40% ಹಣ ಹಿಂದಿಗೆ ಡಬ್ ಆದ ದಕ್ಷಿಣ ಭಾರತದ ಸಿನಿಮಾಗಳು ಗಳಿಸಿದ್ದು, ಅಲ್ಲಿಗೆ ಈ ಆರು ತಿಂಗಳ ಒಟ್ಟು ಗಳಿಕೆ 5688 ಕೋಟಿಯಲ್ಲಿ ಅಪ್ಪಟ ಹಿಂದಿ ಸಿನಿಮಾಗಳು ಗಳಿಸಿರುವುದು 1160 ಕೋಟಿ ಮಾತ್ರವೇ. ಇನ್ನುಳಿದ 4400 ಕೋಟಿ ಹಣ ಗಳಿಸಿರುವುದು ದಕ್ಷಿಣ ಭಾರತದ ಸಿನಿಮಾಗಳು. ಬೆಂಗಾಲಿ, ಮರಾಠಿ, ಒಡಿಸ್ಸಾ ಸಿನಿಮಾಗಳೆಲ್ಲ ಒಟ್ಟಾಗಿ ಸುಮಾರು 100-150 ಕೋಟಿ ಗಳಿಸಿರಬಹುದಷ್ಟೆ.

    English summary
    Indian movie industry grossed 5688 crore rs this year till June. Hindi movies collects more money but not Bollywood movies.
    Saturday, July 16, 2022, 18:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X