ಆ ನಾಯಕಿಯ ದಾಖಲೆ ಮುರಿಯಲು ಒಂದೇ ಚಿತ್ರದಲ್ಲಿ 30 ಬಾರಿ ಲಿಪ್ ಲಾಕ್ ಮಾಡಿದ ಚೆಲುವೆ..!

ಚಿತ್ರ ಗೆಲ್ಲಬೇಕು ಅಂದರೆ ಆ ಚಿತ್ರದಲ್ಲಿ ನಾಯಕ ಮತ್ತು ನಾಯಕಿಯ ನಡುವೆ ಮುತ್ತಿನ ಮಳೆಯಾಗಬೇಕೆಂಬ ಮಾತು ಹಿಂದೆಯೆಲ್ಲ ಕೇಳಿ ಬರುತ್ತಿತ್ತು. ಮರ್ಡರ್ ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ಅನೇಕರು ಈ ಮಾತನ್ನು ನಿಜಾ ಎಂದೇ ಅಂದುಕೊಂಡರು. ಆ ನಂತರ ಬಂದ ಜೆಹರ್, ಅಕ್ಸರ್, ಆಶಿಕ್ ಬನಾಯಾ ಆಪ್ನೇ, ಎಲ್ಲವೂ ಈ ಮಾತುಗಳನ್ನು ಪುಷ್ಟೀಕರಿಸಿದವು. ಇಮ್ರಾನ್ ಹಶ್ಮಿಗೆ ಸೀರಿಯಲ್ ಕಿಸ್ಸರ್ ಎಂಬ ಪಟ್ಟವನ್ನು ನೀಡಿದವು.

ಈ ಕಾರಣಕ್ಕೆ ಚಿತ್ರದ ಕಥೆಗೆ ಅವಶ್ಯಕತೆ ಇರಲಿ, ಇಲ್ಲದಿರಲಿ.. ತಮ್ಮ ಚಿತ್ರಗಳಲ್ಲಿ ಲಿಪ್ ಲಾಕ್ ಸನ್ನಿವೇಶಗಳನ್ನು ಹೆಣೆಯಲು ಅನೇಕರು ಶುರು ಮಾಡಿದರು. ರೇಜಿಗೆ ಹುಟ್ಟಿಸುವ ಹಂತಕ್ಕೆ ತಲುಪಿದರು. ಇದಕ್ಕೆ ಕೈಗನ್ನಡಿ ಎನ್ನುವಂತೆ ಮುತ್ತನ್ನೇ ನಂಬಿಕೊಂಡವರ ಅಮಲನ್ನು ಪ್ರೇಕ್ಷಕರು ಇಳಿಸಿದರು. ಚಿತ್ರವನ್ನು ತಿರಸ್ಕರಿಸಿದರು.

India s worst film with 30 kissing scenes lost 50 of its budget leading the actress to quit

ಹೀಗೆ ತಿರಸ್ಕಾರಗೊಂಡ ಚಿತ್ರಗಳಲ್ಲಿಈಗ ನಾವು ಹೇಳುತ್ತಿರುವ ಈ ಚಿತ್ರ ಕೂಡ ಒಂದು. ಭಾರತದಲ್ಲಿ ತೆರೆಗೆ ಬಂದ ಅತ್ಯಂತ ದರಿದ್ರ ಚಿತ್ರಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಸಿನಿಮಾ ಇದು. ಒಂದಲ್ಲ. ಎರಡಲ್ಲ. ಮೂವತ್ತು ಕಿಸ್ಸಿಂಗ್ ಸೀನ್‌ಗಳನ್ನೊಂದಿದ್ದ ಈ ಚಿತ್ರ ತೆರೆಗೆ ಬಂದ ನಂತರ ಚಿತ್ರದ ಕಥಾನಾಯಕಿ ಐದು ವರ್ಷ ಚಿತ್ರರಂಗದಿಂದನೇ ಕಣ್ಮರೆಯಾಗಿದ್ದರು.. ಆ ಚಿತ್ರದ ಹೆಸರು 3G- ಎ ಥ್ರಿಲ್ಲರ್ ಕನೆಕ್ಷನ್.

ನೀಲ್ ನಿತಿನ್ ಮುಖೇಶ್ ಮತ್ತು ಸೋನಲ್ ಚವ್ಹಾಣ್ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದ ಈ ಚಿತ್ರ ಮಾರ್ಚ್ 15-2013ರಲ್ಲಿ ತೆರೆಗೆ ಬಂದಿತ್ತು. ಆ ಕಾಲಕ್ಕೆ ಈ ಚಿತ್ರಕ್ಕೆ 13 ಕೋಟಿಯನ್ನು ಖರ್ಚು ಮಾಡಲಾಗಿತ್ತು. ಆದರೆ ಹಾಕಿದ ಈ ಬಂಡವಾಳದಲ್ಲಿ ಅರ್ಧ ಕೂಡ ನಿರ್ಮಾಪಕರಿಗೆ ಮರಳಿ ಬರಲಿಲ್ಲ.

ಅಂದ್ಹಾಗೇ ಮರ್ಡರ್ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಮತ್ತು ಮಲ್ಲಿಕಾ ಶೆರಾವತ್ ಇಬ್ಬರು 20 ಬಾರಿ ತುಟಿಗೆ ತುಟಿ ಒತ್ತಿದ್ದರು. ಇದಕ್ಕೆ ಇಬ್ಬರು ತೆಗೆದುಕೊಂಡ ರೀಟೇಕ್ ಎಷ್ಟು ಎನ್ನುವುದು ಅವರಿಗೆ ಗೊತ್ತಾದರೂ ಈ ದಾಖಲೆಯನ್ನು ಮುರಿಯಲೆಂದೇ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ ಎನ್ನುವ ವಿಚಾರ ಸ್ಪಷ್ಟವಾಗಿತ್ತು.

ಇನ್ನು ಈ ಚಿತ್ರ ತೆರೆಗೆ ಬರುವ ಮುನ್ನ ಸೋನಲ್ ಚವ್ಹಾಣ್ ಆಗಷ್ಟೇ ಬಾಲಿವುಡ್‌ನಲ್ಲಿ ನೆಲೆಯೂರುತ್ತಿದ್ದರು. ಮೊದಲ ಚಿತ್ರ ಜನ್ನತ್‌ನಲ್ಲಿ ಗೆದ್ದು ಬೀಗಿದ್ದರು. ಭರವಸೆಯನ್ನು ಮೂಡಿಸಿದ್ದರು. ಆ ನಂತರ ಕನ್ನಡದಲ್ಲಿ ಡಾ.ಶಿವರಾಜ್ ಕುಮಾರ್ ಎದುರು ಚೆಲುವೆಯೇ ನಿನ್ನ ನೋಡಲು ಚಿತ್ರದಲ್ಲಿ ನಾಯಕಿಯಾಗಿ ಕೂಡ ಕಾಣಿಸಿಕೊಂಡರು. ಆದರೆ ಈ ಚಿತ್ರದ ನಂತರ ಬಂದ 3G- ಎ ಥ್ರಿಲ್ಲರ್ ಕನೆಕ್ಷನ್ ಚಿತ್ರ ಸೋನಲ್ ಚವ್ಹಾಣ್ ವೃತ್ತಿ ಬದುಕಿನಲ್ಲಿ ಹಿನ್ನೆಡೆಗೆ ಕಾರಣವಾಯ್ತು. ಅವಕಾಶ ವಂಚಿತಗೊಂಡು ಬಾಲಿವುಡ್‌ ತೊರೆದು ದಕ್ಷಿಣ ಭಾರತೀಯ ಚಿತ್ರರಂಗದ ಕಡೆ ಸೋನಲ್ ಬರಬೇಕಾಯ್ತು. 2013ರಿಂದ 2018ರವರೆಗೆ ಅಂದರೆ ಐದು ವರ್ಷ ಸೋನಲ್ ಚವ್ಹಾಣ್ ಅವರನ್ನು ಮರೆತೇ ಹೋಗಿತ್ತು ಬಾಲಿವುಡ್.

ಅಂದ್ಹಾಗೇ ಈ ಚಿತ್ರವನ್ನು ಶಾಂತನು ರಾಯ್ ನಿರ್ದೇಶನವನ್ನು ಮಾಡಿದ್ದರು. ತಮ್ಮ ಮೊದಲ ಚಿತ್ರ ಹೀನಾಯವಾಗಿ ಸೋತ ಕಾರಣ ಎರಡು ವರ್ಷ ಚಿತ್ರರಂಗದಿಂದ ದೂರವಿದ್ದ ಶಾಂತನು ಆ ನಂತರ ಗುಡ್ಡು ಕೀ ಗನ್ ಎಂಬ ಚಿತ್ರವನ್ನು ಮಾಡಿದ್ದರು. ಈ ಚಿತ್ರ ಕೂಡ ಸೋತು ಹೋಯಿತು. ಆ ನಂತರ ನಿರ್ದೇಶನ ಮಾಡುವ ಧೈರ್ಯವನ್ನು ಶಾಂತನು ಮಾಡಲಿಲ್ಲ.

More from Filmibeat

Read more about: liplock bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X