ಒಂದು ಇನ್‌ಸ್ಟಾ ಸ್ಟೋರಿ, ಒಂದು ರೀಲ್ಸ್‌ಗೆ ಎಷ್ಟು ಲಕ್ಷ ಗೊತ್ತಾ?; ಆದಾಯದ ಲೆಕ್ಕ ಕೊಟ್ಟ ಸೋನು

ಸ್ಯಾಂಡಲ್‌ವುಡ್‌ನಲ್ಲಿ ಪದೇ ಪದೆ ಟ್ರೋಲ್ ಆಗಿ ಸದ್ದು ಮಾಡುವವರು ಸೋನು ಶ್ರೀನಿವಾಸ್ ಗೌಡ. ಯಾವುದೇ ಟ್ರೋಲ್‌ಗಳಿಗೆ ತಲೆ ಕೆಡಿಸಿಕೊಳ್ಳದೇ ತಾನಾಯ್ತು, ತನ್ನ ಕೆಲಸ ಆಯ್ತು ಎಂದು ಸೋನು ಬ್ಯುಸಿ ಇರ್ತಾರೆ. ಬಿಗ್‌ಬಾಸ್ ಓಟಿಟಿ ಶೋನಲ್ಲಿ ಕೂಡ ಭಾಗಿ ಆಗಿದ್ದರು. ಆ ಬಳಿಕ ಆಕೆಯ ಬಗ್ಗೆ ಕ್ರೇಜ್ ಹೆಚ್ಚಾಗಿತ್ತು. ಇನ್ನು ರೀಲ್ಸ್ ರಾಣಿ ಅಂತ್ಲೇ ಸೋನು ಫೇಮಸ್ ಆಗಿಬಿಟ್ಟಿದ್ದಾರೆ.

ಇನ್‌ಸ್ಟಾಗ್ರಾಮ್‌, ಯೂಟ್ಯೂಬ್‌ನಲ್ಲಿ ಸೋನು ಶ್ರೀನಿವಾಸ್ ಗೌಡ ಕ್ರೇಜ್ ಜೋರಾಗಿದೆ. ಲಕ್ಷ ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಆಕೆಯ ಒಂದೊಂದು ಪೋಸ್ಟ್, ರೀಲ್ಸ್‌ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಟ್ರೋಲ್ ಮಾಡುವವರು ಮಾಡುತ್ತಲೇ ಇರುತ್ತಾರೆ. ಇದೀಗ ಮತ್ತೊಮ್ಮೆ ಸೋನು ತಮ್ಮನ್ನು ಟ್ರೋಲ್ ಮಾಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಗಂಭೀರ ಕಾರಣವೂ ಇದೆ.

Influencer Sonu Srinivas Gowda reveals her Instagram and youtube earnings

ಇತ್ತೀಚೆಗೆ ಸೋನು ಶ್ರೀನಿವಾಸ್ ಗೌಡ ಹೊಸ ಮನೆಯ ಗೃಹಪ್ರವೇಶ ಮಾಡಿದ್ದರು. ಈ ಬಗ್ಗೆ ಕೂಡ ಕೆಲವರು ಬಹಳ ಟ್ರೋಲ್ ಮಾಡಿದ್ದರು. ಸೋನು ಹೊಸ ಮನೆ ಕಟ್ಟಿಸಿದ್ಲು, ಇಷ್ಟು ಹಣ ಎಲ್ಲಿಂದ ಬಂತು ಎಂದು ಕುಹಕವಾಡಿದ್ದರು. ರೋಸ್ಟ್ ವೀಡಿಯೋಗಳನ್ನು ಮಾಡಿದ್ದರು. ಈ ಬಗ್ಗೆ ತಮ್ಮದೇ ಯೂಟ್ಯೂಬ್ ಚಾನಲ್‌ನಲ್ಲಿ ಮಾತನಾಡಿ ಸ್ಪಷ್ಟನೆ ಕೊಟ್ಟಿದ್ದಾರೆ. ತಮ್ಮ ಆದಾಯದ ಮೂಲವನ್ನು ಹೇಳಿದ್ದಾರೆ.

ಹೌದು ನನಗೆ ಇನ್‌ಸ್ಟಾಗ್ರಾಮ್‌, ಯೂಟ್ಯೂಬ್‌ನಲ್ಲಿ ಸಾಕಷ್ಟು ಫಾಲೋವರ್ಸ್ ಇದ್ದಾರೆ. ನನ್ನ ಒಂದೊಂದು ಪೋಸ್ಟ್‌, ರೀಲ್ಸ್‌ಗೆ ಸಾವಿರ ಸಾವಿರ ಹಣ ಬರುತ್ತದೆ. ನಾನು ಹಣ ಸಂಪಾದನೆ ಮಾಡುತ್ತಿದ್ದೇನೆ, ನನಗೆ ಆ ಬಗ್ಗೆ ಹೆಮ್ಮೆ ಇದೆ. ನಾನು ಪಿಂ* ಕೆಲಸ ಮಾಡ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಒಂದು ವೀಡಿಯೋ ಹಾಕಲು ಎಷ್ಟು ಕಷ್ಟಪಡ್ತೀನಿ ನನಗೆ ಗೊತ್ತು. ಸುಮ್ಮನೆ ಮಾತನಾಡೋದಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Influencer Sonu Srinivas Gowda reveals her Instagram and youtube earnings

ಒಂದು ಯೂಟ್ಯೂಬ್ ವಿಡಿಯೋ ಥಂಬ್‌ನೇಲ್‌ಗೆ ನಾನು 250 ರೂ. ಖರ್ಚು ಮಾಡ್ತೀನಿ. ನಾನು ಕಂಟೆಂಟ್ ಕ್ರಿಯೇಟರ್ ಅಲ್ಲ, ಸೋಶಿಯಲ್ ಮೀಡಿಯಾ ಇನ್ಫುಯೆನ್ಸರ್, ಸೆಲೆಬ್ರೆಟಿ ನಾನು. ಇತ್ತೀಚೆಗೆ ಪ್ರಯಾಣದ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿದ್ದೆ. ಅದಕ್ಕೆ ಕೆಟ್ಟ ಕೆಟ್ಟದಾಗಿ ಹಾಕಿದ್ರು. ಮಾನನಷ್ಟ ಮೊಕದ್ದಮೆ ಹಾಕಬೇಕು ಅನ್ನುವಷ್ಟು ಕೋಪ ಬಂದಿತ್ತು ಎಂದು ಸೋನು ಗರಂ ಆಗಿದ್ದಾರೆ.

ಕೆಲ ಹುಡುಗಿಯರು ಕಾಮೆಂಟ್ ಮಾಡ್ತಾರೆ. ಇಷ್ಟು ಶೋಕಿ ಮಾಡ್ತಿಯಾ ನಿನಗೆ ಯಾರು ಹಣ ಕೊಡ್ತಾರೆ ಎಂದು ಹೇಳ್ತಾರೆ. ಅಂತಹವರಿಗೆ ಹೇಳುವುದು ಏನು ಅಂದ್ರೆ, ನೀವು ಕಷ್ಟಪಟ್ಟು ವೀಡಿಯೋ ಮಾಡಿ ಹಾಕಿ ನಿಮಗೂ ಹಣ ಬರುತ್ತದೆ ಎಂದು ಸೋನು ಹೇಳಿದ್ದಾರೆ. ಬ್ಯಾಡ್ ಕಾಮೆಂಟ್ ಹಾಕಿ ಟೈಮ್ ವೇಸ್ಟ್ ಮಾಡುವ ಬದಲು ಕಂಟೆಂಟ್ ಕ್ರಿಯೇಟ್ ಮಾಡಿ ಎಂದು ಸಲಹೆ ನೀಡಿದ್ದಾರೆ.

ನಮಗೂ ಕುಟುಂಬ ಇದೆ. ನಿಮ್ಮ ಕೆಟ್ಟ ಮಾತುಗಳು ಅವರಿಗೂ ನೋವು ತರುತ್ತದೆ. ನೆಗೆಟಿವಿಟಿ ಹರಡಬೇಡಿ. ಐದಾರು ವರ್ಷಗಳ ಶ್ರಮದಿಂದ ನಾನು ಮನೆ ಕಟ್ಟಿಸಿದ್ದೀನಿ. ಅದು ಎಲ್ಲರಿಗೂ ಸಾಧ್ಯವಿಲ್ಲ. ಇದಕ್ಕೂ ಮೇಲೆ ಯಾರಾದರೂ ನೆಗೆಟಿವ್ ಕಾಮೆಂಟ್ ಮಾಡಿದರೆ ನಾನು ಏನು ಮಾಡೋಕ್ಕಾಗಲ್ಲ. ಅವರು ಇರುವುದೇ ಹಾಗೆ, ಅವರನ್ನು ಬದಲಾಯಿಸಲು ಸಾಧ್ಯವಿಲ್ಲ.

ಏನೋ ಒಂದು ನೆಗೆಟಿವ್ ಆಗಿಬಿಟ್ಟು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಆಗಿಬಿಟ್ಟರೆ, ಅವರು ಬದಲಾದರೂ ಬಿಡಲ್ಲ. ಹೀಗೆ ಕಾಮೆಂಟ್ ಮಾಡುವವರಿಗೆ ಏನು ಮಾಡೋಕೆ ಆಗಲ್ಲ. ಇಂತಹ ಕಾಮೆಂಟ್‌ಗಳಿಂದ ನಮ್ಮ ಕುಟುಂಬ ಸದಸ್ಯರಿಗೆ ನೋವಾಗಿದೆ. ಹಾಗಾಗಿ ಈ ವೀಡಿಯೋ ಮಾಡಿ ಮಾತನಾಡುತ್ತಿದ್ದೇನೆ. ಆ ಮನೆ ಕಟ್ಟಿಸಲು ಕೋಟಿ ಕೋಟಿ ಆಗಲಿಲ್ಲ. ಕೆಲ ಲಕ್ಷಗಳು ಆಗಿದೆ ಅಷ್ಟೆ. ಹೀಗೆ ನೆಗೆಟಿವ್ ಸುದ್ದಿ ಮಾಡುತ್ತಿದ್ದರೆ ಮಾನನಷ್ಟ ಮೊಕದ್ದಮೆ ಹಾಕ್ತೀನಿ ಎಂದು ಸೋನು ಎಚ್ಚರಿಸಿದ್ದಾರೆ.

ಇನ್ನು ತಮ್ಮ ಆದಾಯದ ಬಗ್ಗೆ ಮಾತನಾಡುತ್ತಾ "ನನಗೆ ಇನ್‌ಸ್ಟಾಗ್ರಾಮ್‌ನಲ್ಲಿ 10 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಅದಕ್ಕೆ ಹೆಮ್ಮೆ ಇದೆ. ಗೊತ್ತಿಲ್ಲದ ಏಜ್ ಅಲ್ಲಿ ತಪ್ಪು ಮಾಡಿದ್ದೆ. ಅದರಿಂದ ಸಾಕಷ್ಟು ನೋವು ಅನುಭವಿಸಿದೆ. ಈಗ ಬದಲಾಗಿದ್ದೀನಿ. ಇನ್ನು ಒಂದು ಇನ್‌ಸ್ಟಾಗ್ರಾಮ್‌ ಸ್ಟೋರಿ ಹಾಕಿದರೆ 60 ರಿಂದ 70 ಸಾವಿರ ಹಣ ಕೊಡ್ತಾರೆ. ಒಂದು ರೀಲ್ಸ್ ಹಾಕಿದ್ರೆ ನಾನು 2 ಲಕ್ಷ ಚಾರ್ಜ್ ಮಾಡ್ತೀನಿ. ಯೂಟ್ಯೂಬ್‌ನಲ್ಲಿ ತಿಂಗಳಿಗೆ 80 ಸಾವಿರ ಬರುತ್ತದೆ. ಹೀಗೆ ಸಾಕಷ್ಟು ರೀತಿಯಲ್ಲಿ ಆದಾಯ ಬರುತ್ತದೆ" ಎಂದು ಸೋನು ವಿವರಿಸಿದ್ದಾರೆ.

More from Filmibeat

English summary
Bigg Boss Fame Sonu Srinivas Gowda says how much she charge for each Instagram story and reels, youtube video;
Read more about: bigg boss tv sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X