ಇನ್‌ಸ್ಟಾಗ್ರಾಮ್‌ಗೂ ಬಂತು ಸಬ್‌ಸ್ಕ್ರಿಪ್ಷನ್ ಬಟನ್; ನಟಿಯರ ಬಿಂದಾಸ್ ಫೋಟೊ, ವಿಡಿಯೋ ನೋಡಲು ಕಟ್ಬೇಕಾ ಹಣ
ಸೋಶಿಯಲ್ ಮೀಡಿಯಾದಲ್ಲಿ ಹಣ ಗಳಿಸೋಕೆ ನಾನಾ ಮಾರ್ಗಗಳಿವೆ. ಜನ ಅಕ್ಕ ಪಕ್ಕ ಇರುವವರ ಜೊತೆ ಮಾತನಾಡುವುದಕ್ಕಿಂತ ಮೊಬೈಲ್ ನೋಡುವುದೇ ಹೆಚ್ಚಾಗಿದೆ. ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಈಗ ಓಟಿಟಿ, ಯೂಟ್ಯೂಬ್ ಕೂಡ ಜನ ಸಮಯವನ್ನು ತಿನ್ನುತ್ತಿದೆ. ಹಣ ಕಟ್ಟಿ ಓಟಿಟಿ ಪ್ಲಾಟ್‌ಫಾರ್ಮ್ ಹಾಗೂ ಯೂಟ್ಯೂಬ್ ಚಂದಾದಾರಾಗುವುದು ಗೊತ್ತೇಯಿದೆ. ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಕೂಡ ಈಗ ಸಬ್‌ಸ್ಕ್ರಿಪ್ಷನ್ ಆಪ್ಷನ್ ಬಂದಿದೆ.
ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಮೂಲಕ ಕೆಲವರು ಲಕ್ಷ ಲಕ್ಷ ದುಡಿಯುತ್ತಿದ್ದಾರೆ. ಪ್ರತಿ ಲೈಕ್, ವೀವ್, ಶೇರ್ ಈಗ ಮುಖ್ಯ ಎನ್ನುವಂತಾಗಿದೆ. ಸ್ಟಾರ್ ಕಂಟೆಂಟ್ ಕ್ರಿಯೇಟರ್ಸ್ ಲಕ್ಷ ಲಕ್ಷ ದುಡಿಯುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಕೂಡ ಸಬ್‌ಸ್ಕ್ರಿಪ್ಷನ್ ಬಟನ್ ಬಂದಿದ್ದು ಎಕ್ಸ್‌ಕ್ಲೂಸಿವ್ ಕಂಟೆಂಟ್ ಬೇಕು ಅಂದ್ರೆ, ತಿಂಗಳಿಗೆ ಅಥವಾ ವರ್ಷಕ್ಕೆ ಇಷ್ಟು ಅಂತ ಹಣ ಕಟ್ಟಿ ಸಬ್‌ಸ್ಕ್ರೈಬ್ ಮಾಡಿಕೊಳ್ಳಬಹುದು. ಬಿಂದಾಸ್ ನಟಿಯರು, ಕಂಟೆಂಟ್ ಕ್ರಿಯೇಟರ್ಸ್ ಇದನ್ನು ಎನ್‌ಕ್ಯಾಶ್ ಮಾಡಿಕೊಳ್ಳುತ್ತಿರುವುದು ಗೊತ್ತಾಗುತ್ತಿದೆ.

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬಿಂದಾಸ್ ಫೋಟೊ, ವಿಡಿಯೋ ಪೋಸ್ಟ್ ಮಾಡಿ ಫಾಲೋವರ್ಸ್ ಗಮನ ಸೆಳೆಯುತ್ತಾರೆ. ಹೆಚ್ಚಿನ ಕಂಟೆಂಟ್ ಬೇಕು ಅಂದ್ರೆ ತಮ್ಮ ಇನ್‌ಸ್ಟಾ ಅಕೌಂಟ್ ಸಬ್‌ಸ್ಕ್ರೈಬ್ ಮಾಡಿಕೊಳ್ಳುವಂತೆ ಕೇಳುತ್ತಿದ್ದಾರೆ. ಬಾಲಿವುಡ್ ನಟಿ ನೇಹಾ ಶರ್ಮಾ, ತೆಲುಗು ಆಂಕರ್ ವಿಷ್ಣಪ್ರಿಯಾ ಸೇರಿ ಕೆಲವರು ಈಗಾಗಲೇ ಸಬ್‌ಸ್ಕ್ರಿಪ್ಷನ್ ಬಟನ್ ಓಪನ್ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ನಡೀತಿದೆ.
ನೇಹಾ, ವಿಷ್ಣುಪ್ರಿಯಾ ತಮ್ಮ ಬಿಂದಾಸ್ ಫೋಟೊ, ವೀಡಿಯೋಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಾ ಬರ್ತಿದ್ದಾರೆ. ಇದೀಗ ತಮ್ಮ ಇನ್‌ಸ್ಟಾ ಚಂದಾದಾರರಿಗಾಗಿ ಗ್ಲಾಮರ್ ಡೋಸ್ ಹೆಚ್ಚಿಸುತ್ತಿದ್ದಾರೆ. ನೇಹಾ ಶರ್ಮಾ ಇನ್‌ಸ್ಟಾ ಖಾತೆ ಚಂದಾದಾರರಾಗಲು ತಿಂಗಳಿಗೆ 290 ರೂ. ಪಾವತಿಸಬೇಕು. ಈಗಾಗಲೇ 3727 ಜನ ಹಣ ಕಟ್ಟಿ ಚಂದಾದಾರರಾಗಿದ್ದಾರೆ. ಈ ಮೂಲಕ ಆಕೆ ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾರೆ ಎನ್ನಲಾಗ್ತಿದೆ.
ತೆಲುಗು ನಿರೂಪಕಿ ವಿಷ್ಣುಪ್ರಿಯಾ ಇನ್‌ಸ್ಟಾ ಖಾತೆಗೆ ಸದ್ಯ 2039 ಮಂದಿ ಚಂದಾದಾರರಾಗಿದ್ದಾರೆ. ಈ ಖಾತೆ ಸಬ್‌ಸ್ಕ್ರೈಬ್ ಮಾಡಲು ತಿಂಗಳಿಗೆ 390 ರೂ. ಪಾವತಿಸಬೇಕಿದೆ. ಸದ್ಯ ಒಂದೇ ಒಂದು ಎಕ್ಸ್‌ಕ್ಲೂಸಿವ್ ಕಂಟೆಂಟ್ ಮಾತ್ರ ಆಕೆ ಹಂಚಿಕೊಂಡಿದ್ದಾರೆ. ಕೇರಳ ಮೂಲದ ಕಂಟೆಂಟ್ ಕ್ರಿಯೇಟರ್ 'ಪರ್ಪಲ್ ಹ್ಯಾಲ್ಸಿಯಾನ್' ಖಾತೆಯ ಅಶ್ವಿನಿ ಎ ಬರೋಬ್ಬರಿ 25 ಸಾವಿರ ಸಬ್‌ಸ್ಕೈಬರ್ ಹೊಂದಿದ್ದಾರೆ. ಆಕೆಯ ಇನ್‌ಸ್ಟಾ ಖಾತೆ ಚಂದಾದಾರರಾಗಲು ತಿಂಗಳಿಗೆ 390 ರೂ. ಕಟ್ಟಬೇಕು.
ಒಟ್ಟಾರೆ ಈಗ ಇನ್‌ಸ್ಟಾಗ್ರಾಮ್ ಹಣ ಸಂಪಾದನೆಯ ದೊಡ್ಡ ಮೂಲವಾಗುತ್ತಿದೆ. ಸಾಕಷ್ಟು ಜನರಿಗೆ ಸಬ್‌ಸ್ಕ್ರಿಪ್ಷನ್ ಬಗ್ಗೆ ಗೊತ್ತಿಲ್ಲ. ಮುಂದೆ ಇದು ಹೊಸ ಕ್ರಾಂತಿಯನ್ನೇ ಸೃಷ್ಟಿಸುವ ಸಾಧ್ಯತೆಯಿದೆ. ಆದರೆ ಒಳ್ಳೆ ರೀತಿಯಲ್ಲಿ ಇದನ್ನು ಬಳಸಿಕೊಂಡರೆ ಪರವಾಗಿಲ್ಲ. ಹೆಣ್ಣುಮಕ್ಕಳು ಮೈಮಾಟ ಪ್ರದರ್ಶಿಸಿ ಚಂದಾದಾರರನ್ನು ಸೆಳೆಯುವುದು ಎಷ್ಟು ಸರಿ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ದುಡ್ಡು ಕೊಟ್ಟು ಯಾರಪ್ಪಾ ಇನ್‌ಸ್ಟಾಗ್ರಾಮ್ ಖಾತೆಗಳ ಸಬ್‌ಸ್ಕ್ರಿಪ್ಷನ್ ತಗೋತ್ತಾರೆ? ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಸಿನಿಮಾ, ವೆಬ್ ಸೀರಿಸ್ ನೋಡೋಕೆ ಜನ ಹಣ ಕೊಡುತ್ತಾರೆ ಸರಿ. ಹೀಗೆ ನಟ, ನಟಿಯರ ಎಕ್ಸ್‌ಕ್ಲೂಸಿಕ್ ಕಂಟೆಂಟ್ ವೀಕ್ಷಣೆಗೆ ಹಣ ಕೊಡ್ತಾರಾ? ಇದು ಯಾಕೋ ಅತಿ ಆಯಿತು ಅಲ್ವಾ? ಎಂದು ಹೇಳುತ್ತಿದ್ದಾರೆ. ಹೆಚ್ಚು ಫಾಲೋವರ್ಸ್ ಹೊಂದಿರುವ ಕಂಟೆಂಟ್ ಕ್ರಿಯೇಟರ್ಸ್ ಸದ್ಯ ಜಾಹೀರಾತುಗಳ ಮೂಲಕ ಆದಾಯ ಗಳಿಸುತ್ತಿದ್ದಾರೆ. ಸಬ್‌ಸ್ಕ್ರಿಪ್ಷನ್ ಆಯ್ಕೆ ಹೆಚ್ಚಿನ ಆದಾಯ ತಂದು ಕೊಡಲಿದೆ.


Click it and Unblock the Notifications











