twitter
    For Quick Alerts
    ALLOW NOTIFICATIONS  
    For Daily Alerts

    'ಬುಲ್ ಬುಲ್' ನೋಡಿ ''ಸಿನಿಮಾ ಡೌಟ್ ಇದೆ'' ಎಂದು ಎಚ್ಚರಿಸಿದ್ದು ಯಾರು?

    |

    ದರ್ಶನ್ ಅಭಿನಯದ 'ಬುಲ್ ಬುಲ್' (2013) ದೊಡ್ಡ ಹಿಟ್ ಆಯ್ತು. ಶತದಿನದ ಸಂಭ್ರಮ ಮಾಡಲಾಯಿತು. ಆದರೆ, ಬಿಡುಗಡೆಗೂ ಮುಂಚೆ ಬುಲ್ ಬುಲ್ ಸಕ್ಸಸ್ ಆಗೋದು ಅನುಮಾನ ಎಂಬ ಅಭಿಪ್ರಾಯ ಇತ್ತು. ರಿಲೀಸ್‌ಗೂ ಮೊದಲು ಪ್ರೀಮಿಯರ್ ನೋಡಿದವರ ಪೈಕಿ ದಿನಕರ್‌ಗೆ ತೀರಾ ಆಪ್ತರಾಗಿದ್ದವರೊಬ್ಬರು ''ಈ ಚಿತ್ರ ನಿಲ್ಲೋದು ಡೌಟು, ನೋಡ್ಕೊಂಡು ಬಿಡುಗಡೆ ಮಾಡಿ'' ಎಂದು ಎಚ್ಚರಿಕೆ ನೀಡಿದ್ದರಂತೆ. ಆದರೆ, ಆ ವ್ಯಕ್ತಿ ಯಾರು ಎನ್ನುವುದು ಬಹಿರಂಗಪಡಿಸಿಲ್ಲ.

    Recommended Video

    ಪುನೀತ್ ದರ್ಶನ್ಗೆ ಎಚ್ಚರಿಕೆ ನೀಡಿದ್ರು ಸಚಿವ ಡಿ ಸುಧಾಕರ್ | Filmibeat Kannada

    'ದರ್ಶನ್ ಮಾಸ್ ಹೀರೋ, ಬುಲ್ ಬುಲ್ ಸಿನಿಮಾದಲ್ಲಿ ಡಿ ಬಾಸ್ ಪಾತ್ರ ಬಹಳ ವಿಭಿನ್ನವಾಗಿದೆ. ಮೊದಲಾರ್ಧ ಪೂರ್ತಿ ಕಾಮಿಡಿಯಾಗಿ ತೆಗೆದುಕೊಂಡು ಹೋಗಲಾಗಿದೆ. ಮಾಸ್ ಹೀರೋ ಇಮೇಜ್ ಹೊಂದಿದ್ದ ದರ್ಶನ್‌ಗೆ ಇದು ವರ್ಕೌಟ್ ಆಗುವುದು ಕಷ್ಟ' ಎಂದು ತಿಳಿಸಿದ್ದರಂತೆ. ಆದರೆ ಸಿನಿಮಾ ಬಿಡುಗಡೆ ಆದ್ಮೇಲೆ ಆಗಿದ್ದೇ ಬೇರೆ. ರಿಲೀಸ್ ಆದ ಎಲ್ಲ ಚಿತ್ರಮಂದಿರದಲ್ಲೂ 50 ದಿನ ಪೂರೈಸಿತು. ಬಹುತೇಕ ಥಿಯೇಟರ್‌ಗೆ ಶತದಿನ ಆಚರಣೆ ಮಾಡಿಕೊಂಡಿತ್ತು. ಮುಂದೆ ಓದಿ....

    'ರಾಬರ್ಟ್' ಸಿನಿಮಾ ನೋಡಿ ಮಂಗಳಮುಖಿ 'ಪದ್ಮಶ್ರೀ' ಮಂಜಮ್ಮ ಜೋಗತಿ ಹೇಳಿದ್ದೇನು?'ರಾಬರ್ಟ್' ಸಿನಿಮಾ ನೋಡಿ ಮಂಗಳಮುಖಿ 'ಪದ್ಮಶ್ರೀ' ಮಂಜಮ್ಮ ಜೋಗತಿ ಹೇಳಿದ್ದೇನು?

    ತೆಲುಗಿನ ಡಾರ್ಲಿಂಗ್, ಕನ್ನಡದಲ್ಲಿ ಬುಲ್ ಬುಲ್

    ತೆಲುಗಿನ ಡಾರ್ಲಿಂಗ್, ಕನ್ನಡದಲ್ಲಿ ಬುಲ್ ಬುಲ್

    ತೆಲುಗಿನಲ್ಲಿ ಪ್ರಭಾಸ್ ನಟಿಸಿದ್ದ 'ಡಾರ್ಲಿಂಗ್' ಕನ್ನಡದಲ್ಲಿ 'ಬುಲ್ ಬುಲ್' ಆಯಿತು. ನಿರ್ದೇಶಕ ಎಂಡಿ ಶ್ರೀಧರ್, ಕವಿರಾಜ್ 'ಡಾರ್ಲಿಂಗ್' ನೋಡಿದ್ಮೇಲೆ ದರ್ಶನ್ ಜೊತೆ ಈ ಸಿನಿಮಾ ಮಾಡಲು ನಿರ್ಧರಿಸಿದರು. ನಂತರ ದಿನಕರ್ ಜೊತೆ ಮಾತಾಡಿ ಸಿನಿಮಾ ತೋರಿಸಲಾಯಿತು. ದಿನಕರ್ ಸಹ ಒಪ್ಪಿಕೊಂಡರು. ಕೊನೆಗೆ ದರ್ಶನ್ ಬಳಿ ಈ ವಿಚಾರ ಮಾತಾನಾಡಿ ಪ್ರಾಜೆಕ್ಟ್ ಓಕೆ ಮಾಡಿದ್ರು. ತಂತ್ರಜ್ಞರಿಗಾಗಿ ಈ ಸಿನಿಮಾ ಮಾಡೋದಾಗಿ ಡಿ ಬಾಸ್ ಒಪ್ಪಿಕೊಂಡರು. ಸಂಭಾವನೆ ಇಲ್ಲದೇ ಬುಲ್ ಬುಲ್ ಮಾಡಿಕೊಟ್ಟರು.

    ರಚಿತಾ ರಾಮ್ ಆಯ್ಕೆಯಾಗಿದ್ದು ಹೇಗೆ?

    ರಚಿತಾ ರಾಮ್ ಆಯ್ಕೆಯಾಗಿದ್ದು ಹೇಗೆ?

    ಎಲ್ಲವೂ ಓಕೆ ಆದ್ಮೇಲೆ ನಾಯಕಿ ಯಾರು ಎಂದು ಹುಡುಕಾಟ ನಡೆಯಿತು. ಅನುಷ್ಕಾ, ಕಾಜಲ್ ಹೆಸರು ಬಂತು. ನಂತರ ಡೇಟ್ ಹೊಂದಾಣಿಕೆಯಾಗದ ಹಾಗೂ ಬಜೆಟ್ ಕಾರಣದಿಂದ ಹೊಸಬರ ಕಡೆ ಗಮನ ಹರಿಸಲಾಯಿತು. ಈ ಹಂತದಲ್ಲಿ ರಚಿತಾ ರಾಮ್ ಸಿಕ್ಕರು. ಫೋಟೋಶೂಟ್ ನೋಡಿದ್ಮೇಲೆ ಪಕ್ಕಾ ಆಯ್ತು. ಬಿಂದ್ಯಾ ರಾಮ್ ಹೆಸರನ್ನು ರಚಿತಾ ರಾಮ್ ಎಂದು ಮರುನಾಮಕರಣ ಮಾಡಲಾಯಿತು.

    'ರಾಬರ್ಟ್'ಗೆ ಮೊದಲು ಆಯ್ಕೆಯಾಗಿದ್ದು ರಾಶಿ ಖನ್ನಾ; ಆದರೆ ಆಶಾ ಸೆಲೆಕ್ಟ್ ಆಗಿದ್ದು ಹೇಗೆ?'ರಾಬರ್ಟ್'ಗೆ ಮೊದಲು ಆಯ್ಕೆಯಾಗಿದ್ದು ರಾಶಿ ಖನ್ನಾ; ಆದರೆ ಆಶಾ ಸೆಲೆಕ್ಟ್ ಆಗಿದ್ದು ಹೇಗೆ?

    ಸ್ಕ್ರಿಪ್ಟ್ ಬದಲಾವಣೆ ಮಾಡಲಾಯಿತು

    ಸ್ಕ್ರಿಪ್ಟ್ ಬದಲಾವಣೆ ಮಾಡಲಾಯಿತು

    ಡಾರ್ಲಿಂಗ್ ಸಿನಿಮಾವನ್ನು ಯಥಾವತ್ತಾಗಿ ರೀಮೇಕ್ ಮಾಡಲಿಲ್ಲ. ಅದರಲ್ಲಿ ಕೆಲವು ದೃಶ್ಯಗಳು ಬೋರಿಂಗ್ ಆಗಿತ್ತು. ಚಿತ್ರದ ಕಥೆಯನ್ನು ಇಟ್ಟುಕೊಂಡು ಬುಲ್ ಬುಲ್ ಸ್ಕ್ರಿಪ್ಟ್ ಬದಲಾವಣೆ ಮಾಡಲಾಯಿತು. ಕನ್ನಡಕ್ಕೆ ತಕ್ಕಂತೆ ಕಥೆ ಜೋಡಣೆ ಮಾಡಲಾಯಿತು. ಮೊದಲಾರ್ಧ ಮತ್ತು ಕ್ಲೈಮ್ಯಾಕ್ಸ್ ಸಂಪೂರ್ಣವಾಗಿ ಬದಲಾಯಿತು ಎಂದು ನಿರ್ದೇಶಕ ಎಂ.ಡಿ ಶ್ರೀಧರ್ ಹೇಳಿಕೊಂಡಿದ್ದಾರೆ.

    ಅಡ್ವಾನ್ಸ್ ಇಲ್ಲದೇ ಸಿನಿಮಾ ಮಾಡಿದ ಡಿ ಬಾಸ್

    ಅಡ್ವಾನ್ಸ್ ಇಲ್ಲದೇ ಸಿನಿಮಾ ಮಾಡಿದ ಡಿ ಬಾಸ್

    ತಂತ್ರಜ್ಞರಿಗಾಗಿ ಮಾಡಿದ ಸಿನಿಮಾ ಬುಲ್ ಬುಲ್. ಮೀನಾ ತೂಗುದೀಪ್ ನಿರ್ಮಾಪಕರಾಗಿದ್ದರೂ, ಅವರ ಜೊತೆಯಲ್ಲಿ ಎಂಡಿ ಶ್ರೀಧರ್, ಹರಿಕೃಷ್ಣ, ಕವಿರಾಜ್ ಸೇರಿದಂತೆ ಹಲವು ತಂತ್ರಜ್ಞರನ್ನು ಒಟ್ಟುಗೂಡಿಸಿಕೊಂಡು ನಿರ್ಮಾಣ ಮಾಡಿದ ಚಿತ್ರ. ಈ ಚಿತ್ರದಲ್ಲಿ ಕೆಲಸ ಮಾಡಿದ ಎಲ್ಲ ತಂತ್ರಜ್ಞರಿಗೆ ಬಂದ ಲಾಭದಲ್ಲಿ ಹಂಚಿಕೆ ಮಾಡಲಾಗಿದೆ. ಬುಲ್ ಬುಲ್ ಚಿತ್ರದಲ್ಲಿ ನಟಿಸಲು ದರ್ಶನ್ ಅವರು ಅಡ್ವಾನ್ಸ್ ಸಹ ಪಡೆದಿಲ್ಲ ಎನ್ನುವುದು ಈ ಚಿತ್ರದ ಮತ್ತೊಂದು ವಿಶೇಷ.

    English summary
    Interesting Facts About Challenging star Darshan starrer Bul Bul Kannada Movie.
    Saturday, March 27, 2021, 14:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X