twitter
    For Quick Alerts
    ALLOW NOTIFICATIONS  
    For Daily Alerts

    ಡಾ.ರಾಜ್‌ಕುಮಾರ್ ಸಿನಿಜೀವನ ಕುರಿತ ಕುತೂಹಲಕಾರಿ ವಿಷಯಗಳು, ಆಸಕ್ತಿಕರ ಕತೆಗಳು

    |

    ಡಾ.ರಾಜ್‌ಕುಮಾರ್ ಹೆಸರಿಗೆ ಅದೆಷ್ಟೋ ಬಿರುದುಗಳು, ಬಹುಮಾನಗಳು, ಸನ್ಮಾನಗಳು, ದಾಖಲೆಗಳು. ಡಾ.ರಾಜ್‌ಕುಮಾರ್ ನಮ್ಮನ್ನು ಅಗಲಿ 15 ವರ್ಷಗಳಾದರೂ ಅವರು ಕನ್ನಡಿಗರ ಹೃದಯದಲ್ಲಿ ಸದಾ ನೆಲೆಸಿದ್ದಾರೆ. ರಾಜ್ಯದ ಯಾವ ಮೂಲೆಗೆ ಹೋದರು ಅಣ್ಣಾವ್ರ ನಗುಮುಖದ ಪುತ್ಥಳಿಯೊಂದನ್ನು ಕಾಣದೇ ಬರಲಾಗದು.

    ಡಾ.ರಾಜ್‌ಕುಮಾರ್ ನಟಿಸಿದ ಪ್ರತಿ ಸಿನಿಮಾ ಹಿಂದೆಯೂ ಸ್ವಾರಸ್ಯಕರ ಕತೆಗಳಿವೆ. ಎಲ್ಲರೂ ತಿಳಿದಿರುವಂತೆ 'ಬೇಡರ ಕಣ್ಣಪ್ಪ' ಡಾ.ರಾಜ್‌ಕುಮಾರ್ ನಟಿಸಿರುವ ಮೊದಲ ಸಿನಿಮಾ ಅಲ್ಲ. 'ಹಾಲು-ಜೇನು' ಸಿನಿಮಾ ಅಣ್ಣಾವ್ರಿಗೆ ಸಿಕ್ಕಿದ್ದೇ ಅದೃಷ್ಟ. ಅಣ್ಣಾವ್ರು ಮೊದಲ ಹಾಡಿದ ಹಾಡು 'ಎಮ್ಮೆ ನಿನಗೆ ಸಾಟಿ ಇಲ್ಲ' ಎಂದೇ ನಂಬಲಾಗಿದೆ ಆದರೆ ಇದು ತಪ್ಪು.

    ಇಂಥಹುವೇ, ಡಾ.ರಾಜ್‌ಕುಮಾರ್ ಕುರಿತ ಹಲವು ಆಸಕ್ತಿಕರ, ಕುತೂಹಲಕಾರಿ ಸಂಗತಿಗಳು ಇಲ್ಲಿವೆ...

    ಅಣ್ಣಾವ್ರು ಹಾಡಿದ ಮೊದಲ ಹಾಡು 'ಎಮ್ಮೆ ನಿಂಗೆ ಸಾಟಿಯಿಲ್ಲ' ಅಲ್ಲ

    ಅಣ್ಣಾವ್ರು ಹಾಡಿದ ಮೊದಲ ಹಾಡು 'ಎಮ್ಮೆ ನಿಂಗೆ ಸಾಟಿಯಿಲ್ಲ' ಅಲ್ಲ

    ಅಣ್ಣಾವ್ರು ಸಿನಿಮಾಕ್ಕಾಗಿ ಹಾಡಿದ ಮೊದಲ ಹಾಡು 'ಸಂಪತ್ತಿಗೆ ಸವಾಲ್' ಸಿನಿಮಾದ 'ಎಮ್ಮೆ ನಿಂಗೆ ಸಾಟಿ ಇಲ್ಲ' ಹಾಡು ಎಂದು ನಂಬಲಾಗಿದೆ ಆದರೆ ಇದು ಅಣ್ಣಾವ್ರು ಸಿನಿಮಾಕ್ಕೆ ಹಾಡಿದ ಮೊದಲ ಹಾಡಲ್ಲ 'ಸಂಪತ್ತಿಗೆ ಸವಾಲ್' ಸಿನಿಮಾ ಬಿಡುಗಡೆ ಆಗುವ ಹದಿನೆಂಟು ವರ್ಷದ ಹಿಂದೆ "ಓಹಿಲೇಶ್ವರ' ಸಿನಿಮಾದಲ್ಲೇ "ಮಹಿಷಾಸುರ ಮರ್ದಿನಿ' ಸಿನಿಮಾದ "ತುಂಬಿತು ಮನವ' ಹಾಡನ್ನೂ ಹಾಡಿದ್ದರು. ಆಮೇಲೆ ಅವರ ಎಲ್ಲ ಹಾಡುಗಳನ್ನೂ ಪಿಬಿ ಶ್ರೀನಿವಾಸ್ ಹಾಡೋಕೆ ಶುರುಮಾಡಿದರು.

    ಅನಂತ್‌ನಾಗ್ ನಟಿಸಬೇಕಿದ್ದ 'ಹಾಲು-ಜೇನು' ಅಣ್ಣಾವ್ರಿಗೆ ಬಂತು

    ಅನಂತ್‌ನಾಗ್ ನಟಿಸಬೇಕಿದ್ದ 'ಹಾಲು-ಜೇನು' ಅಣ್ಣಾವ್ರಿಗೆ ಬಂತು

    ರಾಜ್‌ಕುಮಾರ್ ಅವರ ಸೂಪರ್ ಹಿಟ್ ಸಿನಿಮಾ "ಹಾಲು ಜೇನು' ಸಿನಿಮಾದಲ್ಲಿ ಅನಂತನಾಗ್-ಲಕ್ಷ್ಮಿ ನಟಿಸ್ತಾರೆ ಎಂದಾಗಿತ್ತು ಪಾರ್ವತಮ್ಮ ರಾಜ್‌ಕುಮಾರ್ ಅವರ ಒತ್ತಾಸೆಯಿಂದ ಆ ಸಿನಿಮಾ ರಾಜ್ ಕುಮಾರ್‌ಗೆ ದೊರಕಿತು. ಹೀಗೆ ಅಣ್ಣಾವ್ರಿಗೆ ಸಿಕ್ಕಿದವರು ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್ ಆಮೇಲೆ ಇವರಿಬ್ಬರ ಕಾಂಬಿನೇಶನ್‌ನಲ್ಲಿ ಏಳು ಡಿಫರೆಂಟ್ ಸಿನಿಮಾ ಬಂದವು ಹಾಲುಜೇನು, ಚಲಿಸುವ ಮೋಡಗಳು, ಶ್ರಾವಣಬಂತು

    ಭಾಗ್ಯದ ಲಕ್ಷ್ಮೀ ಬಾರಮ್ಮ, ಎರಡು ನಕ್ಷತ್ರಗಳು, ದೇವತಾಮನುಷ್ಯ ಮತ್ತು ಜ್ವಾಲಾಮುಖಿ. ಅನಂತ್‌ನಾಗ್‌ಗೆ 'ಬಯಲು ದಾರಿ' ಸಿನಿಮಾ ಕೊಡಿಸಿದ್ದು ಪಾರ್ವತಮ್ಮ ರಾಜ್‌ಕುಮಾರ್ ಎಂಬುದು ಸಹ ಗಮನಾರ್ಹ.

    ರಾಜ್‌ಕುಮಾರ್ ಮೊದಲು ನಟಿಸಿದ ಸಿನಿಮಾ 'ಬೇಡರ ಕಣ್ಣಪ್ಪ' ಅಲ್ಲ

    ರಾಜ್‌ಕುಮಾರ್ ಮೊದಲು ನಟಿಸಿದ ಸಿನಿಮಾ 'ಬೇಡರ ಕಣ್ಣಪ್ಪ' ಅಲ್ಲ

    ರಾಜ್ ಕುಮಾರ್ ನಟಿಸಿದ ಮೊದಲ ಸಿನಿಮಾ 'ಬೇಡರ ಕಣ್ಣಪ್ಪ' ಎಂಬುದೇ ಹಲವರ ನಂಬಿಕೆ ಆದರೆ ಇದು ಸುಳ್ಳು. ಅದಕ್ಕೆ ಮುನ್ನಾ 1942ರಲ್ಲಿ ಬಂದ "ಭಕ್ತ ಪ್ರಹ್ಲಾದ' ಸಿನಿಮಾದಲ್ಲಿ ಅಣ್ಣಾವ್ರು ಬಾಲನಟನಾಗಿ ಅಭಿನಯಿಸಿದ್ದರು.

    ಹತ್ತು ವರ್ಷದ ನಂತರ ಬಂದ "ಶ್ರೀನಿವಾಸ ಕಲ್ಯಾಣ'ದಲ್ಲಿ ಸಪ್ತ ಋಷಿಗಳಲ್ಲಿ ಒಬ್ಬರಾಗಿ ನಟಿಸಿದರು. 'ಕಣ್ಣು ಮಿಟುಕಿಸುವುದರ ಒಳಗಾಗಿ ನನ್ನ ಪಾತ್ರ ತೆರೆ ಮೇಲೆ ಬಂದು ಕಣ್ಮರೆಯಾಯಿತು' ಎಂದು ಅಣ್ಣಾವ್ರು 'ಶ್ರೀನಿವಾಸ ಕಲ್ಯಾಣ'ದ ತಮ್ಮ ಪಾತ್ರದ ಬಗ್ಗೆ ಮುಂದೆ ಹೇಳಿಕೊಂಡರು. 'ಭಕ್ತ ಪ್ರಹ್ಲಾದ' ಹಾಗೂ 'ಶ್ರೀನಿವಾಸ ಕಲ್ಯಾಣ' ಈ ಎರಡೂ ಸಿನಿಮಾ ಕಲರ್ ನಲ್ಲಿ ನಿರ್ಮಾಣ ಆದವು ಆಗ ರಾಜ್ ಕುಮಾರ್ ಎರಡರಲ್ಲೂ ಮುಖ್ಯಪಾತ್ರ ನಿರ್ವಹಿಸಿದ್ದು ವಿಶೇಷ.

    ಅಣ್ಣಾವ್ರಿಗಾಗಿ ಬರೆದ ಹಾಡು ನಾಯಕಿಗೆ ಬಳಕೆಯಾಯ್ತು

    ಅಣ್ಣಾವ್ರಿಗಾಗಿ ಬರೆದ ಹಾಡು ನಾಯಕಿಗೆ ಬಳಕೆಯಾಯ್ತು

    'ಭಾಗ್ಯದ ಲಕ್ಷ್ಮಿ ಬಾರಮ್ಮ' ಸಿನಿಮಾದಲ್ಲಿ ರಾಜ್‌ಕುಮಾರ್ ಅವರು ನಾಯಕಿಯನ್ನು ವರ್ಣಿಸುತ್ತಾ 'ಯಾವ ಕವಿಯು ಬರೆಯಲಾರ' ಎಂದು ಹಾಡುವ ಹಾಡು ಕೇಳಿಯೇ ಇರುತ್ತೀರಿ. ಈ ಹಾಡು ಸಿನಿಮಾಕ್ಕಾಗಿ ಬರೆದದ್ದಲ್ಲ. ಬದಲಿಗೆ ಡಾ.ರಾಜ್‌ಕುಮಾರ್ ಕುರಿತಾಗಿಯೇ ಚಿ.ಉದಯ್‌ಶಂಕರ್ ಅವರು ಬರೆದಿದ್ದ ಹಾಡಿದು. ಆದರೆ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ಅವರು ಈ ಹಾಡನ್ನು ಸಿನಿಮಾದಲ್ಲಿ ಪ್ರೇಮಗೀತೆಯಾಗಿ ಬಳಸಿಕೊಂಡರು. ಸಿನಿಮಾ ಸೂಪರ್-ಡೂಪರ್ ಹಿಟ್. ಹಾಡು ಎವರ್‌ಗ್ರೀನ್ ಹಿಟ್.

    ಅಣ್ಣಾವ್ರಿಗಾಗಿ ಮೈಸೂರು ಅರಮನೆ ಕೊಟ್ಟ ಒಡೆಯರು

    ಅಣ್ಣಾವ್ರಿಗಾಗಿ ಮೈಸೂರು ಅರಮನೆ ಕೊಟ್ಟ ಒಡೆಯರು

    ಮೈಸೂರು ಅರಮನೆಯನ್ನ ಹಾಗೆಲ್ಲಾ ಶೂಟಿಂಗಿಗೆ ಕೊಡ್ತಾ ಇರಲಿಲ್ಲ, ಈಗಲೂ ಅಷ್ಟೆ. ಆದರೂ ರಾಜ್‌ಕುಮಾರ್ ಅವರು ಕೇಳಿದರು ಎಂಬ ಕಾರಣಕ್ಕೆ ಒಡೆಯರು ಒಪ್ಪಿ ಚಿತ್ರೀಕರಣಕ್ಕೆ ನೀಡಿ, "ಸಿನಿಮಾ ರೆಡಿಯಾದ ಮೇಲೆ ತೋರಿಸಿ' ಎಂದಿದ್ದರು. ಆದರೆ ಸಿನಿಮಾ ಮುಗಿಯುವ ವೇಳೆಗೆ ಅರಸರು ತೀರಿಕೊಂಡಿದ್ದರು. ಅದಕ್ಕೇ 'ಮಯೂರ' ಸಿನಿಮಾವನ್ನು ಜಯಚಾಮರಾಜೇಂದ್ರ ಒಡೆಯರಿಗೆ ಅರ್ಪಿಸಲಾಗಿತ್ತು. ಮತ್ತೊಂದು ವಿಶೇಷವೆಂದರೆ ಈ ಸಿನಿಮಾದ ಸೂಪರ್ ಹಿಟ್ ಹಾಡು "ನಾನಿರುವುದೆ ನಿಮಗಾಗಿ' ಈ ಹಾಡಿನ ಶೂಟಿಂಗ್ ಹೊತ್ತಲ್ಲೇ ಪುನೀತ್ ಹುಟ್ಟಿದ್ದು.

    ರಂಗಭೂಮಿಯಿಂದ ಬೆಳ್ಳಿತೆರೆಗೆ ಬಂದ 'ಕವಿರತ್ನ ಕಾಳಿದಾಸ'

    ರಂಗಭೂಮಿಯಿಂದ ಬೆಳ್ಳಿತೆರೆಗೆ ಬಂದ 'ಕವಿರತ್ನ ಕಾಳಿದಾಸ'

    ರಾಜ್ ಕುಮಾರ್ ರಂಗಭೂಮಿಯಿಂದ ಬಂದವರು ಎಂಬುದು ಎಲ್ಲರಿಗೂ ಗೊತ್ತಿರುವುದೇ. ರಂಗಭೂಮಿಯಿಂದ ಹಲವು ಪ್ರಸಿದ್ಧ ನಾಟಕಗಳನ್ನು ಸಿನಿಮಾಗೆ ತಂದರು. ಗುಬ್ಬಿ ಕಂಪನಿಯಲ್ಲಿ ತುಂಬಾ ಹೆಸರು ಮಾಡಿದ್ದ ನಾಟಕ 'ಕವಿರತ್ನ ಕಾಳಿದಾಸ' ಅದರಲ್ಲಿ ಒಟ್ಟು 58 ರಂಗಗೀತೆಗಳಿದ್ದವು ಸಿನಿಮಾ ಆಗುವಾಗ ಆ ರಂಗಗೀತೆಗಳನ್ನ ಅಣ್ಣಾವ್ರು ರಂಗರಾಯರ ಎದುರು ಹಾಡಿತೋರಿಸಿದರು. ರಂಗರಾಯರು ಅವುಗಳಲ್ಲಿ ಕೆಲವಕ್ಕೆ ಸಿನಿಮಾಕ್ಕೆ ಹೊಂದುವಂತೆ ರಾಗ ಸಂಯೋಜಿಸಿದರು.ಹಾಗೇ ತಯಾರಾದ ಎಂದಿಗೂ ಮರೆಯದ ಹಾಡೇ 'ಓ ಪ್ರಿಯತಮೆ' ಉದಯಶಂಕರ್ ಬರೆದ ಗೀತೆಯನನ್ನು ರಾಜ್ ಮತ್ತು ವಾಣಿ ಜಯರಾಂ ಹಾಡಿದ್ದರು.

    Recommended Video

    ವೈರಲ್ ಆಗ್ತಿದೆ ವಿಜಯ್ ದೇವರಕೊಂಡ ರಶ್ಮಿಕಾಗೆ ಪ್ರಪೋಸ್ ಮಾಡ್ತಿರೋ ವಿಡಿಯೋ | Filmibeat Kannada
    ಡ್ರೈವರ್‌ಗಳು ರಾಜ್‌ಕುಮಾರ್ ಸಿನಿಮಾಕ್ಕೆ ಹೆಸರಿಟ್ಟ ಕತೆ

    ಡ್ರೈವರ್‌ಗಳು ರಾಜ್‌ಕುಮಾರ್ ಸಿನಿಮಾಕ್ಕೆ ಹೆಸರಿಟ್ಟ ಕತೆ

    ಡ್ರೈವರ್‌ಗಳು ರಾಜ್‌ಕುಮಾರ್ ಅವರ ಎವರ್‌ಗ್ರೀನ್‌ ಸಿನಿಮಾ ಒಂದಕ್ಕೆ ಹೆಸರಿಟ್ಟಿದ್ದು ಸ್ವಾರಸ್ಯಕರ ಘಟನೆ. ಅದುವೇ 'ಶಂಕರ್ ಗುರು'. ಈ ಸಿನಿಮಾಕ್ಕೆ ಮೊದಲಿಗೆ 'ಮುಗಿಯದ ಮಾತು' ಎಂದು ಹೆಸರಿಡಲಾಗಿತ್ತು. ಕಾಶ್ಮೀರದಲ್ಲಿ ಚಿತ್ರೀಕರಣ ನಡೆಯುವಾಗ ಜನರು ಸಿನಿಮಾ ಹೆಸರು ಕೇಳುತ್ತಿದ್ದರು, ಅವರಿಗೆ 'ಮುಗಿಯದ ಮಾತು' ಎಂದು ಹೇಳಿದಾಗ ಹಲವರಿಗೆ ಅರ್ಥವಾಗುತ್ತಿರಲಿಲ್ಲ. ಆಗ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದ ಸ್ಥಳೀಯ ಡ್ರೈವರ್‌ಗಳು ಸಿನಿಮಾದ ಇಬ್ಬರು ನಾಯಕರ ಹೆಸರನ್ನು ಸೇರಿಸಿ 'ಶಂಕರ್-ಗುರು' ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಹೇಳುತ್ತಿದ್ದರು. ಈ ಹೆಸರೇ ಹೆಚ್ಚು 'ಕ್ಯಾಚಿ' ಎನಿಸಿದ್ದರಿಂದ ಅದೇ ಹೆಸರನ್ನು ಸಿನಿಮಾಕ್ಕೆ ಇಡಲಾಯಿತು.

    *(ಮಾಹಿತಿ: ಫೇಸ್‌ಬುಕ್ ಮತ್ತು ಶ್ರೀಧರಮೂರ್ತಿ)

    English summary
    Here is some Interesting facts about Dr Rajkumar and some Interesting stories about Rajkumar movies and songs.
    Monday, April 12, 2021, 17:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X