twitter
    For Quick Alerts
    ALLOW NOTIFICATIONS  
    For Daily Alerts

    ಇಂದ್ರಜಿತ್ ಲಂಕೇಶ್ ಕುರಿತು ತಿಳಿಯಬೇಕಾದ ಸಂಗತಿಗಳು

    |

    ನಟ ದರ್ಶನ್ ವಿಚಾರದಲ್ಲಿ ಕೇಂದ್ರಬಿಂದುವಾಗಿರುವ ಇಂದ್ರಜಿತ್ ಲಂಕೇಶ್ ಓರ್ವ ಸಿನಿಮಾ ನಿರ್ದೇಶಕ, ಪತ್ರಕರ್ತ. ಇದಕ್ಕೂ ಮುಂಚೆ ಡ್ರಗ್ಸ್ ಪ್ರಕರಣದಲ್ಲಿ ಪ್ರಭಾವಿ ಸೆಲೆಬ್ರಿಟಿಗಳು, ಹಿರಿಯ ನಟರ ಪುತ್ರರು ಡ್ರಗ್ಸ್ ಜಾಲದಲ್ಲಿದ್ದಾರೆ ಎಂದು ಹೇಳಿ ಕೋಲಾಹಲ ಸೃಷ್ಟಿಸಿದವರು. ಆದರೆ, ಅದನ್ನು ಸಾಬೀತುಪಡಿಸುವಲ್ಲಿ ಇಂದ್ರಜಿತ್‌ಗೆ ಹಿನ್ನಡೆಯಾಗಿದ್ದು ಸ್ಮರಿಸಬಹುದು.

    ಈಗ ದರ್ಶನ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಡಿ-ಬಾಸ್ ಆಪ್ತರ ಬಳಗದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಸೆಲೆಬ್ರಿಟಿಗಳ ಪಾಲಿಗೆ 'ಖಳನಾಯಕ'ನಂತೆ ನಿಲ್ಲುತ್ತಿರುವ ಇಂದ್ರಜಿತ್ ಲಂಕೇಶ್ ಕುರಿತು ಹೆಚ್ಚಾಗಿ ತಿಳಿಯದವರು ಇರಬಹುದು. ಕನ್ನಡ ಪತ್ರಿಕೋದ್ಯಮದ ದೊಡ್ಡ ಹೆಸರು ಪಿ ಲಂಕೇಶ್. ಲಂಕೇಶ್ ಪತ್ರಿಕೆಯ ಸಂಸ್ಥಾಪಕರು. ಇವರ ಪುತ್ರ ಇಂದ್ರಜಿತ್. ಗೌರಿ ಮತ್ತು ಕವಿತಾ ಲಂಕೇಶ್ ಇವರ ಸಹೋದರಿಯರು. ಇಂದ್ರಜಿತ್ ಬಗ್ಗೆ ಕುತೂಹಲಕಾರಿ ವಿಷಯಗಳು ಇಲ್ಲಿದೆ. ಮುಂದೆ ಓದಿ...

    ನನ್ನದು ಏಕಾಂಗಿ ಹೋರಾಟ, ಯಾವುದೇ ರಾಜಕೀಯ ಇಲ್ಲ- ಇಂದ್ರಜಿತ್ ಲಂಕೇಶ್ ನನ್ನದು ಏಕಾಂಗಿ ಹೋರಾಟ, ಯಾವುದೇ ರಾಜಕೀಯ ಇಲ್ಲ- ಇಂದ್ರಜಿತ್ ಲಂಕೇಶ್

    ಉತ್ತಮ ಕ್ರಿಕೆಟ್ ಆಟಗಾರ

    ಉತ್ತಮ ಕ್ರಿಕೆಟ್ ಆಟಗಾರ

    ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಇಂದ್ರಜಿತ್ ಉತ್ತಮ ಕ್ರಿಕೆಟ್ ಆಟಗಾರ. ಕರ್ನಾಟಕ ರಾಜ್ಯ ಜೂನಿಯರ್ ತಂಡ ಹಾಗೂ ದಕ್ಷಿಣ ವಲಯ ತಂಡವನ್ನು ಪ್ರತಿನಿಧಿಸಿದ್ದರು. ಅತ್ಯುತ್ತಮ ವಿಕೆಟ್ ಕೀಪಿಂಗ್ ವಿಭಾಗದಲ್ಲಿ ಪ್ರಶಸ್ತಿ ಸಹ ಪಡೆದಿದ್ದರು. ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು.

    ಇಂದ್ರಜಿತ್ ಕೊಟ್ಟ ದೂರಿನಲ್ಲಿ ದರ್ಶನ್ ಹೆಸರೇ ಇಲ್ಲ: ಮನವಿ ಪತ್ರದಲ್ಲಿ ಏನಿದೆ?ಇಂದ್ರಜಿತ್ ಕೊಟ್ಟ ದೂರಿನಲ್ಲಿ ದರ್ಶನ್ ಹೆಸರೇ ಇಲ್ಲ: ಮನವಿ ಪತ್ರದಲ್ಲಿ ಏನಿದೆ?

    ಲಂಕೇಶ್ ಪತ್ರಿಕೆಯಲ್ಲಿ ಕೆಲಸ

    ಲಂಕೇಶ್ ಪತ್ರಿಕೆಯಲ್ಲಿ ಕೆಲಸ

    1992-93 ಸಮಯದಲ್ಲಿ ಲಂಕೇಶ್ ಪತ್ರಿಕೆಯಲ್ಲಿ ಇಂದ್ರಜಿತ್ ಕೆಲಸಕ್ಕೆ ಸೇರಿದರು. ಪಬ್ಲಿಷರ್ ಆಗಿ, ಹಿರಿಯ ಉಪ ಸಂಪಾದಕರಾಗಿದ್ದ ಇಂದ್ರಜಿತ್ ಪ್ರಸ್ತುತ ಮ್ಯಾನೇಜಿಂಗ್ ಎಡಿಟರ್ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ತಂದೆ ಬಿಟ್ಟು ಹೋದ ಪತ್ರಿಕೆಯ ಜವಾಬ್ದಾರಿ ಮುಂದುವರಿಸುತ್ತಿದ್ದಾರೆ.

    'ತುಂಟಾಟ' ಚೊಚ್ಚಲ ಸಿನಿಮಾ

    'ತುಂಟಾಟ' ಚೊಚ್ಚಲ ಸಿನಿಮಾ

    ಕ್ರೀಡೆ, ಪತ್ರಕರ್ತರಾಗಿದ್ದ ಇಂದ್ರಜಿತ್ ಲಂಕೇಶ್ ಚಿತ್ರರಂಗ ಪ್ರವೇಶ ಮಾಡ್ತಾರೆ. 2001 'ತುಂಟಾಟ' ಸಿನಿಮಾ ನಿರ್ದೇಶಿಸುವ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟರು. ಈ ಚಿತ್ರದಲ್ಲಿ ಅನಿರುದ್ಧ, ರೇಖಾ, ಛಾಯಾ ಸಿಂಗ್ ನಟಿಸಿದ್ದರು. ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತು.

    ದರ್ಶನ್ ಜೊತೆ 'ಲಂಕೇಶ್ ಪತ್ರಿಕೆ'

    ದರ್ಶನ್ ಜೊತೆ 'ಲಂಕೇಶ್ ಪತ್ರಿಕೆ'

    ಈಗ ದರ್ಶನ್ ವಿರುದ್ಧ ಸಮರ ಸಾರಿರುವ ಇಂದ್ರಜಿತ್ ಲಂಕೇಶ್ ಅದಾಗಲೇ ಡಿ ಬಾಸ್ ಜೊತೆ ಸಿನಿಮಾವೊಂದು ಮಾಡಿದ್ದಾರೆ. 2003ರಲ್ಲಿ 'ಲಂಕೇಶ್ ಪತ್ರಿಕೆ' ಹೆಸರಿನಲ್ಲಿಯೇ ಸಿನಿಮಾ ಬಂದಿದೆ. ಆದರೆ, ಈ ಚಿತ್ರದ ಅಷ್ಟು ಸಕ್ಸಸ್ ಕಾಣಲಿಲ್ಲ.

    'ಇಂದ್ರಜಿತ್ ದೊಡ್ಡ ತನಿಖೆಗಾರರು, ಏನೋ ಮಾಡಲಿ': ದರ್ಶನ್ ಪ್ರತಿಕ್ರಿಯೆ'ಇಂದ್ರಜಿತ್ ದೊಡ್ಡ ತನಿಖೆಗಾರರು, ಏನೋ ಮಾಡಲಿ': ದರ್ಶನ್ ಪ್ರತಿಕ್ರಿಯೆ

    ಮೊನಲಿಸಾ-ಐಶ್ವರ್ಯ

    ಮೊನಲಿಸಾ-ಐಶ್ವರ್ಯ

    2004 'ಮೊನಾಲಿಸ' ಸಿನಿಮಾ ನಿರ್ದೇಶಿಸಿದರು. ಈ ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ, ಅತ್ಯತ್ತುಮ ಸಿನಿಮಾ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. 20೦6ರಲ್ಲಿ 'ಐಶ್ವರ್ಯ' ಸಿನಿಮಾ ಮಾಡಿದ್ರು. ಉಪೇಂದ್ರ ಜೊತೆ ದೀಪಿಕಾ ಪಡುಕೋಣೆ ನಟಿಸಿದ್ದರು. ಈಗ ಬಾಲಿವುಡ್ ಆಳುತ್ತಿರುವ ದೀಪಿಕಾರನ್ನು ಪರಿಚಯ ಮಾಡಿದ್ದು ಇದೇ ಇಂದ್ರಜಿತ್. ಆಮೇಲೆ 'ಹುಡುಗ ಹುಡುಗಿ', 'ದೇವ್ ಸನ್ ಆಫ್ ಮುದ್ದೇಗೌಡ' ಚಿತ್ರಗಳು ಬಂದರೂ ಸೋಲು ಕಂಡವು.

    ಸನ್ನಿ ಲಿಯೋನ್-ಶಕೀಲಾ

    ಸನ್ನಿ ಲಿಯೋನ್-ಶಕೀಲಾ

    2015ರಲ್ಲಿ 'ಲವ್ ಯೂ ಆಲಿಯಾ' ಸಿನಿಮಾ ಮಾಡಿದರು. ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ವಿಶೇಷ ಅಂದ್ರೆ ಈ ಚಿತ್ರಕ್ಕಾಗಿ ಸನ್ನಿ ಲಿಯೋನ್ ಅವರನ್ನು ಕನ್ನಡಕ್ಕೆ ಕರತಂದರು. ಇದು ದೊಡ್ಡ ಪ್ರಚಾರ ತಂದುಕೊಡ್ತು. ಸಿನಿಮಾ ಹಿಟ್ ಆಗಲಿಲ್ಲ. 2020ರಲ್ಲಿ 'ಶಕೀಲಾ' ಅವರ ಬಯೋಪಿಕ್ ತೆರೆಗೆ ಬಂತು.

    ವಿಶೇಷ ಚೇತನ ಮಕ್ಕಳಿಗೆ ನೆರವು

    ವಿಶೇಷ ಚೇತನ ಮಕ್ಕಳಿಗೆ ನೆರವು

    ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಮಾನಸಿಕವಾಗಿ ತೊಂದರೆಯಲ್ಲಿದ್ದ ಮಕ್ಕಳು, ವಿಶೇಷ ಚೇತನ ಮಕ್ಕಳಿಗೆ ಇಂದ್ರಜಿತ್ ಸಹಾಯ ಮಾಡಿರುವ ಬಗ್ಗೆ ವರದಿಗಳಿವೆ. ತಮ್ಮ ಹುಟ್ಟುಹಬ್ಬವನ್ನು ಇಂತಹ ಮಕ್ಕಳ ಜೊತೆ ಸೆಲೆಬ್ರೆಟ್ ಮಾಡಿ ಗಮನ ಸೆಳೆದಿದ್ದರು. ಮಕ್ಕಳಿಗೆ ಪುಸ್ತಕ, ಬಟ್ಟೆ ಕೊಡಿಸಿದ್ದಾರೆ. 2005ರಲ್ಲಿ ಇಬ್ಬರು ಬುಡಕಟ್ಟು ಮಕ್ಕಳಿಗೆ ಪೂರ್ಣ ಪ್ರಮಾಣದ ಶಿಕ್ಷಣ ಜವಾಬ್ದಾರಿ ವಹಿಸಿಕೊಂಡರು. ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಪತ್ನಿಗೆ ಒಂದು ಲಕ್ಷ ಪರಿಹಾರ ಕೊಟ್ಟಿದ್ದರು.

    ಹೋರಾಟಗಾರ ಇಂದ್ರಜಿತ್

    ಹೋರಾಟಗಾರ ಇಂದ್ರಜಿತ್

    ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ನಡೆದ ಕೊಲೆಗಳನ್ನು ಇಂದ್ರಜಿತ್ ಖಂಡಿಸಿರುವ ಉದಾಹರಣೆಗಳಿವೆ. ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಬಡವರಿಗೆ ಮತ್ತು ನಿರ್ಗತಿಕರಿಗೆ ಉಚಿತ ಆಹಾರ ಕಿಟ್‌ಗಳನ್ನು ವಿತರಿಸಿದರು. ಕೆಲಸವಿಲ್ಲದೇ ಹೆಣಗಾಡುತ್ತಿರುವ 60 ವರ್ಷಕ್ಕಿಂತ ಮೇಲ್ಪಟ್ಟ ಕನ್ನಡ ಚಲನಚಿತ್ರೋದ್ಯಮದ ಹಿರಿಯ ನಟರನ್ನು ಅವರು ಸನ್ಮಾನಿಸಿದರು.

    ಆರೋಪ, ಟೀಕೆಗಳು ಇವೆ

    ಆರೋಪ, ಟೀಕೆಗಳು ಇವೆ

    ಇಂದ್ರಜಿತ್ ಲಂಕೇಶ್ ಪ್ರಚಾರ ಪ್ರಿಯರು. ಸುದ್ದಿಯಲ್ಲಿರಬೇಕು ಎಂಬ ಕಾರಣಕ್ಕೆ ಸಮಾಜದಲ್ಲಿ ನಡೆಯುವ ಕೆಲವು ಘಟನೆಗಳಲ್ಲಿ ಭಾಗಿಯಾಗ್ತಾರೆ. ಅನವಶ್ಯಕವಾಗಿ ಮಧ್ಯ ಪ್ರವೇಶ ಮಾಡ್ತಾರೆ ಎಂಬ ಟೀಕೆಯೂ ಇದೆ. ರಾಜಕಾರಣಿಗಳನ್ನು, ಸೆಲೆಬ್ರಿಟಿಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ ಎಂಬ ಆರೋಪವೂ ಇದೆ.

    English summary
    Interesting Facts about Film director, journalist Indrajit Lankesh.
    Saturday, July 17, 2021, 14:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X