ವಿಜ್ಞಾನಿಗಳ ಪ್ರಯೋಗವೊಂದು ಕೋಟಿಗಟ್ಟಲೆ ಬಾಚುವ 'ಬಿಗ್‌ ಬಾಸ್' ಆಗಿ ಬದಲಾಗಿದ್ದು ಹೇಗೆ?

ಭಾರತದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ 'ಬಿಗ್‌ ಬಾಸ್' ಸಹ ಒಂದು. 'ಬಿಗ್‌ ಬಾಸ್' ಸುತ್ತ 'ನೈತಿಕತೆ' ಚರ್ಚೆಗಳೇನೇ ಇದ್ದರು ಈ ಶೋ ಗೆದ್ದಿರುವುದು, ಆಗಾಗ್ಗೆ ಮುಗ್ಗರಿಸಿರುವುದು ಹಾಗೂ ಇವತ್ತಿಗೂ ಮುಂದುವರಿಯುತ್ತಿರುವುದು ಸತ್ಯ.

ಕನ್ನಡ ಸೇರಿದಂತೆ ಭಾರತದ ಹಲವು ಭಾಷೆಗಳಲ್ಲಿ ಬಿಗ್‌ಬಾಸ್ ಪ್ರಸಾರವಾಗುತ್ತಿದೆ. ಭಾರತ ಮಾತ್ರವೇ ಅಲ್ಲದೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಇದೇ ಮಾದರಿಯ ಶೋ ವಿವಿಧ ಹೆಸರುಗಳಲ್ಲಿ ಪ್ರಸಾರವಾಗುತ್ತಿವೆ.

ಭಾರತ ಸೇರಿದಂತೆ ವಿಶ್ವದಾದ್ಯಂತ ಕೋಟ್ಯಂತರ ಮಂದಿಯಿಂದ ವೀಕ್ಷಣೆಗೆ ಒಳಗಾಗುತ್ತಿರುವ, ಸಾವಿರಾರು ಕೋಟಿ ಆದಾಯ ಗಳಿಸಲು ಕಾರಣವಾಗಿರುವ ಈ ಶೋ, ಕೆಲವು ವಿಜ್ಞಾನಿಗಳ ಪ್ರಯೋಗದಿಂದ ಜನಿಸಿದ್ದು ಎಂಬುದು ಆಸಕ್ತಿಕರ.

'ಬಿಗ್‌ ಬಾಸ್' ಪ್ರಾರಂಭವಾಗಿದ್ದು ಹೇಗೆಂದರೆ ಎಲ್ಲರೂ ಬೊಟ್ಟು ಮಾಡುವುದು ಯುರೋಪಿನಲ್ಲಿ ಹುಟ್ಟಿದ 'ಬಿಗ್‌ ಬ್ರದರ್' ಶೋ ಕಡೆಗೆ. ಅದು ನಿಜವೂ ಹೌದು, ಜಾನ್ ಡೆ ಮೊಲ್‌ ಎಂಬ ಡಚ್ ಟಿವಿ ನಿರ್ಮಾಪಕನ ಜಾನ್ ಡೆ ಮೊಲ್ ಪ್ರೊಡಕ್ಟೀವ್ಸ್ ಸಂಸ್ಥೆ ಮೊದಲ ಬಾರಿಗೆ 'ಬಿಗ್ ಬ್ರದರ್' ರಿಯಾಲಿಟಿ ಶೋ ನಿರ್ಮಿಸಿ, ಪ್ರಸಾರ ಮಾಡಿತು. ಆದರೆ ಹೀಗೆ ಒಂದು ಮನೆಯಲ್ಲಿ ಜನರನ್ನು ತುಂಬಿ ಕ್ಯಾಮೆರಾ ಇಡುವ ಐಡಿಯಾ ಇವರಿಗೆ ಹೊಳೆದಿದ್ದು ವಿಜ್ಞಾನಿಗಳ ಪ್ರಯೋಗವೊಂದರಿಂದ ಎಂಬುದು ಹೆಚ್ಚು ಮಂದಿಗೆ ತಿಳಿಯದ ಸಂಗತಿ.

ವಿಜ್ಞಾನಿಗಳ ಪ್ರಯೋಗದಿಂದ ಸ್ಪೂರ್ತಿ

ವಿಜ್ಞಾನಿಗಳ ಪ್ರಯೋಗದಿಂದ ಸ್ಪೂರ್ತಿ

ಅಮೆರಿಕದ ಅರಿಜೋನಾದಲ್ಲಿ ಸ್ಥಿತವಾಗಿರುವ 'ಬೈಯೋಸ್ಪೇರ್ 2' ಹೆಸರಿನ ಭೂವಿಜ್ಞಾನ ಸಂಶೋಧನಾ ಕೇಂದ್ರದಲ್ಲಿ ಕೆಲವು ವಿಜ್ಞಾನಿಗಳು 1991ರಲ್ಲಿ ಎಂಟು ಮಂದಿ ಗಂಡು-ಹೆಣ್ಣುಗಳನ್ನು ಭೂಮಿ ಆಕಾರ ಹೋಲುವ ಒಂದು ಮೇಲ್ಮೈ ದುಂಡಗಿರುವ ಕೋಣೆಯೊಳಗೆ ಇಟ್ಟಿದ್ದರು. ಭೂಮಿಯ ವಾತಾವಾರಣವನ್ನು ಆ ಕೋಣೆಯೊಳಗೆ ಸೃಷ್ಟಿಸಿ, ನಿಯಮಿತ ಆಹಾರ, ನಿಯಂತ್ರಿತ ವಾತಾಯನ ವ್ಯವಸ್ಥೆಯನ್ನು ಇಡಲಾಗಿತ್ತು. ಭೂಮಿಯ ವಾತಾವರಣದಲ್ಲಿ ಬದಲಾವಣೆಯಿಂದ ಮನುಷ್ಯನ ವ್ಯಕ್ತಿತ್ವ, ಆರೊಗ್ಯದ ಮೇಲಾಗುವ ಪರಿಣಾಮ ಅಧ್ಯಯನ ಮಾಡುವುದು ಈ ಪ್ರಯೋಗದ ಉದ್ದೇಶವಾಗಿತ್ತು.

ಹೊಸ ರಿಯಾಲಿಟಿ ಶೋ

ಹೊಸ ರಿಯಾಲಿಟಿ ಶೋ

1997ರಲ್ಲಿ ಜಾನ್ ಡೆ ಮೊಲ್‌ ನ ಪ್ರೊಡಕ್ಷನ್ ಸಂಸ್ಥೆಯ ಸಿಬ್ಬಂದಿ ಹೊಸ ರಿಯಾಲಿಟಿ ಶೋ ಪ್ರಾರಂಭ ಮಾಡಬೇಕೆಂದು ಯೋಚಿಸುವಾಗ ಅರಿಜೋನಾದ ವಿಜ್ಞಾನಿಗಳ ಪ್ರಯೋಗವನ್ನು ಸ್ಪೂರ್ತಿಯಾಗಿ ಪಡೆದು, ಒಂದು ಐಶಾರಾಮಿ ಕೋಣೆಯಲ್ಲಿ ಆರು ಮಂದಿಯನ್ನು ಸಾವಿರ ದಿನಗಳವರೆಗೆ ಕೂಡಿಹಾಕಿ ಕ್ಯಾಮೆರಾಗಳನ್ನಿಟ್ಟು ಅವರ ನಡುವೆ ನಡೆವ ಡ್ರಾಮಾಗಳನ್ನು ಸೆರೆ ಹಿಡಿಯಲು ಉದ್ದೇಶಿಸಿತು. ಆರಂಭದಲ್ಲಿ ಈ ಶೋ ಗೆ 'ದಿ ಗೋಲ್ಡನ್ ಕೇಜ್' ಎಂದು ಹೆಸರಿಡಲಾಯಿತು. 'ಬಿಗ್ ಬ್ರದರ್ ಜನಪ್ರಿಯವಾದ ಬಳಿಕ 'ದಿ ಗೋಲ್ಡನ್ ಕೇಜ್' ಹೆಸರಿನ ರಿಯಾಲಿಟಿ ಶೋ ಅನ್ನೂ ಆರಂಭಿಸಿತು ಜಾನ್ ಡೆ ಮೊಲ್‌ ಪ್ರೊಡಕ್ಷನ್ ಹೌಸ್.

ಎಂಟಿವಿ ಶೋ ಇಂದಲೂ ಸ್ಪೂರ್ತಿ

ಎಂಟಿವಿ ಶೋ ಇಂದಲೂ ಸ್ಪೂರ್ತಿ

ಬಿಗ್‌ ಬ್ರದರ್‌ ಶೋಗೆ ಕೇವಲ ಅರಿಜೋನಾದ ವಿಜ್ಞಾನಿಗಳ ಪ್ರಯೋಗವೊಂದೇ ಸ್ಪೂರ್ತಿಯಲ್ಲ. 1992 ರಲ್ಲಿ ಉಚ್ರಾಯ ಸ್ಥಿತಿಯಲ್ಲಿದ್ದ ಎಂಟಿವಿ 'ದಿ ರಿಯಲ್ ವರ್ಲ್ಡ್' ಹೆಸರಿನ ಶೋ ಅನ್ನು ಪ್ರಾರಂಭಿಸಿತ್ತು. ಕೆಲವು ಮಂದಿ ಅಪರಿಚಿತರನ್ನು ಒಟ್ಟಿಗೆ ಬಿಟ್ಟು ಅವರ ನಡುವೆ ನಡೆವ ಪ್ರೀತಿ, ಜಗಳಗಳನ್ನು ರೆಕಾರ್ಡ್ ಮಾಡಿಕೊಂಡು ಅದನ್ನು ಪ್ರಸಾರ ಮಾಡುತ್ತಿತ್ತು. ಇದು ಸಹ ಬಿಗ್ ಬ್ರದರ್‌ ಶೋಗೆ ಸ್ಪೂರ್ತಿಯಾಯಿತು. 'ಸರ್ವೈವರ್' ಎಂಬ ಶೋ ನಲ್ಲಿನ ಎಲಿಮಿನೇಶನ್ ಮಾದರಿಯನ್ನು 'ಬಿಗ್ ಬ್ರದರ್' ಶೋ ಎತ್ತಿಕೊಂಡಿತು. ಇದರಿಂದ ಮುಂದೆ ಕಾನೂನು ಸಮಸ್ಯೆಯನ್ನೂ ಎದುರಿಸಿತು.

106 ದಿನಗಳ ಕಾಲ ಪ್ರಸಾರವಾಗಿದ್ದ ಶೋ

106 ದಿನಗಳ ಕಾಲ ಪ್ರಸಾರವಾಗಿದ್ದ ಶೋ

1999 ರಲ್ಲಿ ಮೊದಲ ಬಾರಿಗೆ 'ಬಿಗ್ ಬ್ರದರ್' ಶೋ ಪ್ರಸಾರವಾಯಿತು. ಬರೋಬ್ಬರಿ 106 ದಿನಗಳ ವರೆಗೆ ಈ ಶೋ ಪ್ರಸಾರವಾಯಿತು. ನೆದರ್‌ಲ್ಯಾಂಡ್ಸ್‌ನ ಅಲ್‌ಮೆರಾ ಎಂಬ ನಗರದ ಕೈಗಾರಿಕಾ ಪ್ರದೇಶದಲ್ಲಿ ವಿಶೇಷ ಮನೆಯೊಂದನ್ನು ನಿರ್ಮಿಸಲಾಗಿತ್ತು. ಮೊದಲ ಬಿಗ್‌ ಬ್ರದರ್‌ ಶೋನಲ್ಲಿ 12 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ಪ್ರತಿ ವಾರ ನಿಯಮಿತ ಬಜೆಟ್ ನೀಡಿ ಅದರಲ್ಲೇ ಜೀವನ ಮಾಡುವಂತೆ ಸ್ಪರ್ಧಿಗಳಿಗೆ ಸೂಚಿಸಲಾಗಿತ್ತು. ಸ್ಪರ್ಧಿಗಳ ಆಟ, ವರ್ತನೆ ನೋಡಿ ಜನ ವೋಟ್ ಮಾಡಬೇಕಿತ್ತು. ಮೊದಲ ಶೋನಲ್ಲಿ ಸ್ಪರ್ಧಿಗಳೇ ಪರಸ್ಪರ ನಾಮಿನೇಟ್ ಮಾಡುವ ವ್ಯವಸ್ಥೆ ಇರಲಿಲ್ಲ.

ಸಾಕಷ್ಟು ಕಾನೂನು ತೊಡಕು ಎದುರಿಸಿದ ಶೋ

ಸಾಕಷ್ಟು ಕಾನೂನು ತೊಡಕು ಎದುರಿಸಿದ ಶೋ

ಮೊದಲ ಶೋ ಪ್ರಸಾರವಾದ ಬೆನ್ನಲ್ಲೆ ಸಾಕಷ್ಟು ಕಾನೂನು ಸಮಸ್ಯೆಗಳನ್ನೂ ಸಹ ಈ ಶೋ ಎದುರಿಸಿತು. ವಿಶೇಷವೆಂದರೆ ಒಂದು ನೀಲಿ ಚಿತ್ರ ತಯಾರಿಕಾ ಸಂಸ್ಥೆಯೂ ಕೇಸ್ ಹಾಕಿ, ಇದು ನಮ್ಮ ಐಡಿಯಾ ಎಂದಿತು. ಏನೇ ಆಗಲಿ ಶೋ ಭಾರಿ ದೊಡ್ಡ ಹಿಟ್ ಆಗಿದ್ದು ಈಗ ಇತಿಹಾಸ. ನೆದರ್‌ಲೆಂಡ್‌ನಲ್ಲಿ ಪ್ರಾರಂಭವಾದ ಈ ಶೋ ಈಗ ವಿಶ್ವದಾದ್ಯಂತ ಹಲವು ಹೆಸರುಗಳಲ್ಲಿ ಆದರೆ ಅದೇ ರೂಪು-ರೇಷೆಯಲ್ಲಿ ಪ್ರಸಾರವಾಗುತ್ತಿದೆ. ಕನ್ನಡದಲ್ಲಿಯೂ 'ಬಿಗ್‌ ಬಾಸ್‌'ನ ಓಟಿಟಿ ಅವತರಿಣಿಕೆಯೊಂದು ತಯಾರಿಯಲ್ಲಿದೆ ಎಂಬ ಸುದ್ದಿ ಬಂದಿದೆ. ಈ ಹಿನ್ನೆಲೆಯಲ್ಲಿ, ಜನಪ್ರಿಯ ರಿಯಾಲಿ ಶೋನ ಆಳ- ಅಗಲಗಳ ಕುರಿತು ಸರಣಿ ಟಿಪ್ಪಣಿಗಳು ಹೊರಬರಲಿವೆ, ನಿರೀಕ್ಷಿಸಿ.

More from Filmibeat

English summary
How Big Brother reality show started in Netherlands in year 1999. Big Brother show is inspiration for Indian famous reality show Bigg Boss.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X