For Quick Alerts
  ALLOW NOTIFICATIONS  
  For Daily Alerts

  ಜಾತಕ ಅಡ್ಡಿಯಾಗಿದ್ದರೂ ಮೋಹನ್ ಲಾಲ್-ಸುಚಿತ್ರಾ ಪ್ರೀತಿ ದಕ್ಕಿಸಿಕೊಂಡಿದ್ದು ಹೇಗೆ? ಇಂಟರಸ್ಟಿಂಗ್ ಲವ್ ಸ್ಟೋರಿ

  By ಫಿಲ್ಮಿಬೀಟ್ ಡೆಸ್ಕ್
  |

  ಮಲಯಾಳಂ ಸಿನಿಮಾರಂಗದ ಅತ್ಯಂತ ಪ್ರೀತಿಯ ಮತ್ತು ಜನಪ್ರಿಯ ಜೋಡಿಗಳಲ್ಲಿ ಖ್ಯಾತ ನಟ ಮೋಹನ್ ಲಾಲ್ ಮತ್ತು ಸುಚಿತ್ರಾ ಜೋಡಿ ಕೂಡ ಒಂದು. ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಹೆಚ್ಚು ಪ್ರೀತಿಸುವ ಸ್ಟಾರ್ ಜೋಡಿ ಅಂದರೆ ಮೋಹನ್ ಲಾಲ್ ಮತ್ತು ಸುಚಿತ್ರಾ ಜೋಡಿ.

  ಅಂದಹಾಗೆ ಸುಚಿತ್ರಾ ದಕ್ಷಿಣ ಭಾರತದ ಸ್ಟಾರ್ ನಟನ ಪತ್ನಿಯಾಗಿದ್ದರೂ ಸಹ ಯಾವಾಗಲು ಕ್ಯಾಮರಾ ಕಣ್ಣಿನಿಂದ ದೂರ ಇರಲು ಬಯಸುತ್ತಾರೆ. ಮೋಹನ್ ಲಾಲ್ ಪತ್ನಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ತೀರ ವಿರಳ. ಮುಖ್ಯವಾಹಿನಿಯಿಂದ ಅಂತರ ಕಾಯ್ದುಕೊಂಡಿರುವ ಸುಚಿತ್ರಾ ಇತ್ತೀಚಿಗೆ ಪತಿ ಮೋಹನ್ ಲಾಲ್ ಚೊಚ್ಚಲ ನಿರ್ದೇಶನದ ಸಿನಿಮಾ ಮುಹೂರ್ತ ಸಮಾರಂಭದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಎಲ್ಲರಿಂದ ಅತೀ ಹೆಚ್ಚು ಪ್ರೀತಿಸಲ್ಪಡುವ ಈ ಜೋಡಿಯ ಪ್ರೇಮ ಕತೆ ಕೂಡ ಅಷ್ಟೆ ಇಂಟರಸ್ಟಿಂಗ್ ಆಗಿದೆ. ಮುಂದೆ ಓದಿ...

  ನಿರ್ದೇಶನಕ್ಕೆ ಕೈ ಹಾಕಿದ ಮೋಹನ್‌ಲಾಲ್: ಗುಡ್‌ಲಕ್ ಎಂದ ಅಮಿತಾಬ್ನಿರ್ದೇಶನಕ್ಕೆ ಕೈ ಹಾಕಿದ ಮೋಹನ್‌ಲಾಲ್: ಗುಡ್‌ಲಕ್ ಎಂದ ಅಮಿತಾಬ್

  32 ವರ್ಷಗಳ ಸುಂದರ ದಾಂಪತ್ಯ

  32 ವರ್ಷಗಳ ಸುಂದರ ದಾಂಪತ್ಯ

  ಮೋಹನ್ ಲಾಲ್ ಮತ್ತು ಸುಚಿತ್ರಾ ದಂಪತಿ ಮದುವೆಯಾಗಿ 32 ವರ್ಷಗಳು ಕಳೆದಿವೆ. ಇವರದ್ದು ಸಂತೋಷಕರವಾದ ದಾಂಪತ್ಯ ಜೀವನ. ಇವರು ಅನೇಕ ಯುವ ಜೋಡಿಗಳಿಗೆ ಮಾದರಿಯಾಗಿದ್ದಾರೆ. 1988ರಲ್ಲಿ ಮೋಹನ್ ಲಾಲ್, ಸುಚಿತ್ರಾ ಜೊತೆ ಹಸೆಮಣೆ ಏರಿದ್ದಾರೆ. ಸಂಪ್ರದಾಯಬದ್ದವಾಗಿ ನಡೆದ ಮದುವೆ ಸಮಾರಂಭದಲ್ಲಿ ಇಬ್ಬರು ಪತಿ-ಪತ್ನಿಯರಾಗಿ ಸುಖಕರ ಜೀವನ ನಡೆಸುತ್ತಿದ್ದಾರೆ.

  ಮೋಹನ್ ಲಾಲ್ ಅವರನ್ನು ದ್ವೇಷಿಸುತ್ತಿದ್ದ ಸುಚಿತ್ರಾ

  ಮೋಹನ್ ಲಾಲ್ ಅವರನ್ನು ದ್ವೇಷಿಸುತ್ತಿದ್ದ ಸುಚಿತ್ರಾ

  ಅಂದಹಾಗೆ ಸುಚಿತ್ರಾ ಅವರಿಗೆ ಮೊದಲು ಮೋಹನ್ ಲಾಲ್ ಕಂಡರೆ ಆಗುತ್ತಿರಲಿಲ್ವಂತೆ. ಕಾರಣ ಮೋಹನ್ ಲಾಲ್ ಮೊದಲು ಖಳನಟನಾಗಿ ಮಿಂಚುತ್ತಿದ್ದರು. ಮೋಹನ್ ಲಾಲ್ ಮೊದಲ ಸಿನಿಮಾ ನೋಡಿ ಸುಚಿತ್ರಾ ತುಂಬಾ ದ್ವೇಷಮಾಡಿದ್ದರಂತೆ. ವಿಲನ್ ಆಗಿ ತೆರೆಮೇಲೆ ಬಂದಾಗಲೆಲ್ಲಾ ಸುಚಿತ್ರಾ ಅವರಿಗೆ ಮೋಹನ್ ಲಾಲ್ ಮೇಲೆ ವಿಪರೀತ ಕೋಪ ಬರುತ್ತಿತ್ತು. ಆದರೆ ಒಬ್ಬ ವಿಲನ್ ನನ್ನು ಅಷ್ಟು ದ್ವೇಷ ಮಾಡುತ್ತಾರೆ ಎಂದರೆ ಅವರು ಪರಿಪೂರ್ಣ ನಟ ಎನ್ನುವುದು ಸುಚಿತ್ರ ಅವರಿಗೂ ಗೊತ್ತಿತ್ತು.

  ಮೋಹನ್ ಲಾಲ್ ಮಡದಿ ಸುಚಿತ್ರಾ ಬಗ್ಗೆ

  ಮೋಹನ್ ಲಾಲ್ ಮಡದಿ ಸುಚಿತ್ರಾ ಬಗ್ಗೆ

  ಬಳಿಕ ನಿಧಾನವಾಗಿ ಇಷ್ಟವಾಗಲು ಪ್ರಾರಂಭವಾಗುತ್ತಾರೆ. ಅಪ್ಪಟ ಅಭಿಮಾನಿಯಾಗಿ ಬದಲಾಗುತ್ತಾರೆ. ನಂತರ ಮೋಹನ್ ಲಾಲ್ ಅವರಿಗೆ ಶುಭಾಶಯ ಕಳುಹಿಸಲು ಪ್ರಾರಂಭಿಸುತ್ತಾರೆ. ಅಲ್ಲಿಂದ ಸುಚಿತ್ರ ಅವರಿಗೆ ಮೋಹನ್ ಲಾಲ್ ಮೇಲೆ ವಿಶೇಷವಾದ ಅಭಿಮಾನ. ಅಂದಹಾಗೆ ಸುಚಿತ್ರಾ ಹಿರಿಯ ನಿರ್ಮಾಪಕ ಬಾಲಾಜಿ ಅವರ ಪುತ್ರಿ.

  'ದೃಶ್ಯಂ-2' ನೋಡಿ ನಿರ್ದೇಶಕ ರಾಜಮೌಳಿ ಹೇಳಿದ್ದೇನು?'ದೃಶ್ಯಂ-2' ನೋಡಿ ನಿರ್ದೇಶಕ ರಾಜಮೌಳಿ ಹೇಳಿದ್ದೇನು?

  ಇಬ್ಬರ ಪ್ರೀತಿ ಪ್ರಾರಂಭವಾಗಿದ್ದು ಹೇಗೆ?

  ಇಬ್ಬರ ಪ್ರೀತಿ ಪ್ರಾರಂಭವಾಗಿದ್ದು ಹೇಗೆ?

  ಮೋಹನ್ ಲಾಲ್ ಅವರ ಅಪ್ಪಟ ಅಭಿಮಾನಿಯಾಗಿ ಬದಲಾದ ನಂತರ ಸುಚಿತ್ರಾ ಅಭಿಮಾನಿಯಾಗಿಯೇ ಮೊದಲು ಮೋಹನ್ ಲಾಲ್ ಅವರನ್ನು ಭೇಟಿಯಾಗುತ್ತಾರೆ. ಬಳಿಕ ಇಬ್ಬರು ಕಾಮನ್ ಸ್ನೇಹಿತರ ಮೂಲಕ ಪರಿಚಯವಾಗಿ ಗೆಳೆತನ ಬೆಳೆಸಿಕೊಳ್ಳುತ್ತಾರೆ. ಇಬ್ಬರ ಸ್ನೇಹ ಬಳಿಕ ಪ್ರೀತಿಗೆ ತಿರುಗಿ ಮದುವೆಯಾಗಲು ನಿರ್ಧರಿಸುತ್ತಾರೆ.

  ಮದುವೆಗೆ ಮನೆಯವರ ವಿರೋಧ

  ಮದುವೆಗೆ ಮನೆಯವರ ವಿರೋಧ

  ಆದರೆ ಇಬ್ಬರ ಮದುವೆ ಕುಟುಂಬದವರ ಒಪ್ಪಿಗೆ ಸಿಗುವುದಿಲ್ಲ. ಇದಕ್ಕೆ ಕಾರಣ ಇಬ್ಬರ ಜಾತಕ ಹೊಂದಿಕೆಯಾಗುತ್ತಿರುವುದಿಲ್ಲ. ಬಳಿಕ ಇದು ಜ್ಯೋತಿಷಿ ಅವರ ಕಡೆಯಿಂದ ಆದ ತಪ್ಪು ಎಂದು ಗೊತ್ತಾದ ಬಳಿಕ ಇಬ್ಬರ ಮನೆಯಲ್ಲೂ ಮದುವೆಗೆ ಗ್ರೀನ್ ಸಿಗ್ನಲ್ ಸಿಗುತ್ತೆ. ನಂತರ ಇಬ್ಬರು 1988 ಏಪ್ರಿಲ್ 28 ರಂದು ಮೋಹನ್ ಲಾಲ್ ಹೋಮ್ ಟೌನ್ ಮುದವನ್ಮುಗಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

  ಸುಂದರ ದಂಪತಿಗೆ ಇಬ್ಬರು ಮಕ್ಕಳು

  ಸುಂದರ ದಂಪತಿಗೆ ಇಬ್ಬರು ಮಕ್ಕಳು

  ಮೋಹನ್ ಲಾಲ್ ಮತ್ತು ಸುಚಿತ್ರಾ ದಂಪತಿಗೆ ಇಬ್ಬರು ಮಕ್ಕಳು. ಮಗ ಪ್ರಣವ್ ಮೋಹನ್ ಲಾಲ್ ಮತ್ತು ಮಗಳು ವಿಸ್ಮಯಾ. ಪ್ರಣವ್ ಬಾಲನಟನಾಗಿ ಮೊದಲು ತೆರೆಮೇಲೆ ಮಿಂಚಿದ್ದಾರೆ. ಬಳಿಕ 2018ರಲ್ಲಿ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಗಳು ಇತ್ತೀಚಿಗಷ್ಟೆ ವಿದೇಶದಲ್ಲಿ ಉನ್ನತ ವ್ಯಾಸಂಗ ಮುಗಿಸಿ ವಾಪಸ್ ಆಗಿದ್ದಾರೆ. ಮಗಳು ಕಥೆ, ಕವನ ಬರೆಯುತ್ತಿದ್ದು ಮೊದಲ ಪುಸ್ತಕ ಬಿಡುಗಡೆಗೆ ಸಜ್ಜಾಗಿದ್ದಾರೆ.

  ಶಕೀಲಾ ಬಾಳಲ್ಲಿ 15 ಜನ ಪುರುಷರು ಬಂದು ಹೋದರು,ಆದ್ರೆ... | Filmibeat Kannada
  ಪತಿಯ ಬಗ್ಗೆ ಸುಚಿತ್ರಾ ಮಾತು

  ಪತಿಯ ಬಗ್ಗೆ ಸುಚಿತ್ರಾ ಮಾತು

  ಸುಚಿತ್ರಾ ಇತ್ತೀಚಿಗೆ ಮೋಹನ್ ಲಾಲ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಮಾಧ್ಯಮದ ಮುಂದೆ ಮಾತನಾಡಿದ್ದರು. ಈ ಮೊದಲು ಪುತ್ರ ಪ್ರಣವ್ ನಾಯಕನಾಗಿ ಎಂಟ್ರಿ ಕೊಡವ ಸಮಯದಲ್ಲಿ ಮಾತನಾಡಿದ್ದೆ ಬಳಿಕ ಪತಿ ಚೊಚ್ಚಲ ನಿರ್ದೇಶನದ ಸಿನಿಮಾ ಮುಹೂರ್ತದಲ್ಲಿ ಮಾತನಾಡುತ್ತಿರುವುದಾಗಿ ಹೇಳಿದ್ದರು. ಪತಿಯ ಅತ್ಯುತ್ತಮವಾದ ಕ್ಷಣ ಎಂದು ಹೇಳಿ ತುಂಬಾ ಸಂತಸ ಪಟ್ಟಿದ್ದರು.

  English summary
  Interesting love story about Malayalam Superstar Mohanlal and Suchitra couple.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X