twitter
    For Quick Alerts
    ALLOW NOTIFICATIONS  
    For Daily Alerts

    'ರಾಜ್'ಗೂ ಮೊದಲು 'ಕಸ್ತೂರಿ ನಿವಾಸ' ಈ ನಟ ಮಾಡಬೇಕಿತ್ತು! ಆ ಹೀರೋ ರಿಜೆಕ್ಟ್ ಮಾಡಿದ್ದೇಕೆ?

    |

    1971ರಲ್ಲಿ ಬಿಡುಗಡೆಯಾಗಿದ್ದ ಸೂಪರ್ ಹಿಟ್ ಚಿತ್ರ ಕಸ್ತೂರಿ ನಿವಾಸ. ರಾಜ್ ಕುಮಾರ್ ವೃತ್ತಿ ಜೀವನದಲ್ಲಿ ಅತಿ ದೊಡ್ಡ ಮೈಲಿಗಲ್ಲು, ಕೀರ್ತಿ ತಂದುಕೊಟ್ಟ ಅತ್ಯುತ್ತಮ ಚಿತ್ರ. ದೊರೆ-ಭಗವಾನ್ ಈ ಚಿತ್ರ ನಿರ್ದೇಶನ ಮಾಡಿದ್ದರು.

    ಇಂದಿಗೂ ರಾಜ್ ಕುಮಾರ್ ಅವರ ದಿ ಬೆಸ್ಟ್ ಚಿತ್ರಗಳನ್ನು ಪಟ್ಟಿ ಮಾಡಿ ಎಂದರೆ ಕಸ್ತೂರಿ ನಿವಾಸ ಮೊದಲ ಸಾಲಿನಲ್ಲಿ ಇರುತ್ತೆ. ಈ ಸಿನಿಮಾ ನೋಡಿದ್ಮೇಲೆ ಅಣ್ಣಾವ್ರು ಬಿಟ್ಟರೆ ಬೇರೆ ಯಾರೂ ಈ ಪಾತ್ರಕ್ಕೆ ಸೂಕ್ತವಾಗುತ್ತಿರಲಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು.

    ನಾ ನೋಡಿದ ಕಸ್ತೂರಿ ನಿವಾಸ: ಕಾಡುವ ರಾಜ್ ಅಭಿನಯನಾ ನೋಡಿದ ಕಸ್ತೂರಿ ನಿವಾಸ: ಕಾಡುವ ರಾಜ್ ಅಭಿನಯ

    ಆದರೆ, ಡಾ ರಾಜ್ ಕುಮಾರ್ ಗೂ ಮೊದಲು ಕಸ್ತೂರಿ ನಿವಾಸ ಸಿನಿಮಾವನ್ನು ಬೇರೆ ನಟ ಮಾಡಬೇಕಿತ್ತಂತೆ. ಆದರೆ, ಆ ನಟ ಈ ಚಿತ್ರವನ್ನು ರಿಜೆಕ್ಟ್ ಮಾಡಿದ್ದರು. ಯಾರದು? ಮುಂದೆ ಓದಿ....

    ಶಿವಾಜಿ ಗಣೇಶನ್ ಬೇಡ ಎಂದಿದ್ದರು

    ಶಿವಾಜಿ ಗಣೇಶನ್ ಬೇಡ ಎಂದಿದ್ದರು

    ಕಸ್ತೂರಿ ನಿವಾಸ ಚಿತ್ರಕ್ಕೆ ಕಥೆ ಬರೆದಿದ್ದು ಜಿ ಬಾಲಸುಬ್ರಮಣ್ಯಂ. ಆರಂಭದಲ್ಲಿ ತಮಿಳು ನಟ ಶಿವಾಜಿ ಗಣೇಶನ್ ಬಳಿ ಈ ಕಥೆ ಹೇಳಲಾಯಿತು. ಪೂರ್ತಿ ಕಥೆ ಕೇಳಿದ ನಂತರ ಶಿವಾಜಿ ಗಣೇಶನ್ ಈ ಸಿನಿಮಾ ಮಾಡಲ್ಲ ಎಂದು ತಿರಸ್ಕರಿಸಿದರು. ಕಥೆಯ ಕೊನೆಯಲ್ಲಿ ನಾಯಕ ಸಾಯುವ ದೃಶ್ಯವಿದೆ. ಇದನ್ನು ಸಿನಿಮಾ ಮಾಡಿದ್ರೆ ಓಡಲ್ಲ ಎಂಬ ಕಾರಣ ನೀಡಿದರು.

    ಅಣ್ಣಾವ್ರ 'ಕಸ್ತೂರಿ ನಿವಾಸ' ಮನಮೋಹಕ ವಿಡಿಯೋಅಣ್ಣಾವ್ರ 'ಕಸ್ತೂರಿ ನಿವಾಸ' ಮನಮೋಹಕ ವಿಡಿಯೋ

    ಕಥೆ ಖರೀದಿಸಿದ ದೊರೆ-ಭಗವನ್

    ಕಥೆ ಖರೀದಿಸಿದ ದೊರೆ-ಭಗವನ್

    ಕಸ್ತೂರಿ ನಿವಾಸ ಕಥೆ ಶಿವಾಜಿ ಗಣೇಶನ್ ಬೇಡ ಎಂದು ಕೈಬಿಟ್ಟ ಮೇಲೆ ಈ ವಿಷಯ ಕನ್ನಡ ನಿರ್ದೇಶಕರಾದ ದೊರೆ-ಭಗವಾನ್ ಅವರಿಗೆ ತಿಳಿಯಿತು. ಕಥೆ ತುಂಬಾ ಇಷ್ಟ ಆದ ಕಾರಣ ಖರೀದಿ ಮಾಡಲು ನಿರ್ಧರಿಸಿದರು. ಈ ಚಿತ್ರವನ್ನು ರಾಜ್ ಕುಮಾರ್ ಜೊತೆ ಮಾಡಿದ್ರೆ ಸಿನಿಮಾ ಹಿಟ್ ಆಗುತ್ತೆ ಎಂದು ಭಾವಿಸಿದರು. ಆದರೂ, ಅಣ್ಣಾವ್ರು ಈ ಕಥೆ ಒಪ್ಪುತ್ತಾರಾ ಎಂಬ ಆತಂಕ ಇತ್ತು.

    ಅಣ್ಣಾವ್ರನ್ನು ಒಪ್ಪಿಸಿದ ವರದಪ್ಪ

    ಅಣ್ಣಾವ್ರನ್ನು ಒಪ್ಪಿಸಿದ ವರದಪ್ಪ

    ರಾಜ್ ಕುಮಾರ್ ಕಥೆ ಒಪ್ಪುತ್ತಾರಾ ಎಂಬ ಆತಂಕದಲ್ಲಿದ್ದ ದೊರೆ-ಭಗವಾನ್ ಗೆ ಸಹಾಯ ಮಾಡಿದ್ದು ರಾಜ್ ಸಹೋದರ ವರದಪ್ಪ ಮತ್ತು ಚಿ ಉದಯ್ ಶಂಕರ್. ನಂತರ ರಾಜ್ ಕೂಡ ಕಸ್ತೂರಿ ನಿವಾಸ ಕಥೆಗೆ ಗ್ರೀನ್ ಸಿಗ್ನಲ ನೀಡಿದರು. ಅನುಪಮ ಮೂವೀಸ್ ಈ ಚಿತ್ರ ನಿರ್ಮಾಣಕ್ಕೆ ಮುಂದಾಯ್ತು. ಕೆಸಿಎನ್ ಗೌಡರು ಬಂಡವಾಳ ಹಾಕಿದರು.

    38 ಸಾವಿರ ರೂಪಾಯಿಗೆ ಕಥೆ ಖರೀದಿ

    38 ಸಾವಿರ ರೂಪಾಯಿಗೆ ಕಥೆ ಖರೀದಿ

    ತಮಿಳಿನಿಂದ ಈ ಕಥೆಯನ್ನು ಆಗಿನ ಸಮಯಕ್ಕೆ 38 ಸಾವಿರ ರೂಪಾಯಿ ನೀಡಿ ದೊರೆ-ಭಗವಾನ್ ಖರೀದಿಸಿದ್ದರು. ಸಿನಿಮಾ ಮಾಡಲು ಎಲ್ಲಾ ತಯಾರಿ ನಡೆಯಿತು. ಸಿನಿಮಾ ಶೂಟಿಂಗ್ ಕೂಡ ಅಂದುಕೊಂಡಂತೆ 19 ದಿನದಲ್ಲಿ ಆಯಿತು. ದಾಖಲೆಗಳ ಪ್ರಕಾರ ಕಸ್ತೂರಿ ಸಿನಿಮಾ ನಿರ್ಮಾಣ ತಗುಲಿದ ವೆಚ್ಚ 5 ಲಕ್ಷ. ಸುಮಾರು 16 ಚಿತ್ರಮಂದಿರಗಳಲ್ಲಿ ಶತದಿನ ಆಚರಿಸಿತು. ಅಣ್ಣಾವ್ರ ಅಭಿನಯ ಕಂಡು ಅಭಿಮಾನಿಗಳು ಸಂಭ್ರಮಿಸಿದರು.

    ಶಿವಾಜಿ ಗಣೇಶನ್ ಬೇಡಿಕೆ

    ಶಿವಾಜಿ ಗಣೇಶನ್ ಬೇಡಿಕೆ

    ಕನ್ನಡದಲ್ಲಿ ಕಸ್ತೂರಿ ನಿವಾಸ ಸಿನಿಮಾ ಹಿಟ್ ಆಗುತ್ತಿದ್ದಂತೆ ಮೊದಲು ಬೇಡ ಎಂದು ನಿರಾಕರಿಸಿದ್ದ ಶಿವಾಜಿ ಗಣೇಶನ್ ಮತ್ತೆ ಈ ಸಿನಿಮಾ ಮಾಡಲು ತೀರ್ಮಾನಿಸಿದರು. ಅಣ್ಣಾವ್ರ ಅಭಿನಯ ನೋಡಿ ಕೊಂಡಾಡಿದರು. 2 ಲಕ್ಷ ನೀಡಿ ರೀಮೇಕ್ ಹಕ್ಕು ಖರೀದಿಸಿದರು. ತಮಿಳಿನಲ್ಲಿ 'ಅವಂದಾನ್ ಮನಿಧನ್' ಹೆಸರಿನಲ್ಲಿ ಶಿವಾಜಿ ಗಣೇಶನ್ ಸಿನಿಮಾ ಮಾಡಿದರು. ಅಲ್ಲಿಯೂ ಆ ಚಿತ್ರ ಗೆದ್ದು ಬೀಗಿತು.

    English summary
    1971s super hit movie Kasturi Nivasa is evergreen movie of Kannada industry. interesting thing is firstly Tamil Actor Sivaji Ganesan rejects this script before Rajkumar.
    Saturday, February 1, 2020, 11:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X