For Quick Alerts
  ALLOW NOTIFICATIONS  
  For Daily Alerts

  ಮಂಡ್ಯ to ಆರ್‌ಆರ್ ನಗರ: ಬದಲಾಯಿತೆ ದರ್ಶನ್ ರಾಜಕೀಯ ಆದರ್ಶ?

  By ಫಿಲ್ಮ್ ಡೆಸ್ಕ್‌
  |

  ನಟ ದರ್ಶನ್ ತಮ್ಮ ಗೆಳೆಯ, ನಿರ್ಮಾಪಕ ಮುನಿರತ್ನ ಗಾಗಿ ಆರ್‌ಆರ್ ನಗರದಲ್ಲಿ ಚುನಾವಣೆ ಪ್ರಚಾರದಲ್ಲಿ ಇಂದು ಭಾಗವಹಿಸಿದ್ದಾರೆ. ರಾಜಕೀಯ ರಂಗದಲ್ಲಿ ಹಲವಾರು ಗೆಳೆಯರನ್ನು ಹೊಂದಿರುವ ದರ್ಶನ್ ಕೆಲವರಿಗಷ್ಟೆ ಚುನಾವಣೆ ಪ್ರಚಾರ ಮಾಡಿದ್ದಾರೆ.

  ಕಳೆದ ಬಾರಿ ದರ್ಶನ್, ಸುಮಲತಾ ಅವರಿಗಾಗಿ ಚುನಾವಣಾ ಪ್ರಚಾರ ಮಾಡಿದ್ದರು. ದೇಶದ ಗಮನ ಸೆಳೆದಿದ್ದ ಆ ಚುನಾವಣೆಯಲ್ಲಿ ಸುಮಲತಾ ಜಯಭೇರಿ ಭಾರಿಸಿದ್ದರು. ಎದುರಾಳಿ ನಿಖಿಲ್ ಕುಮಾರಸ್ವಾಮಿ ಸೋತಿದ್ದರು.

  ಮುನಿರತ್ನ ಪರ ನಟ ದರ್ಶನ್ ಪ್ರಚಾರ ಮಾಡೋದಕ್ಕೆ ಅದೊಂದೇ ಕಾರಣ!ಮುನಿರತ್ನ ಪರ ನಟ ದರ್ಶನ್ ಪ್ರಚಾರ ಮಾಡೋದಕ್ಕೆ ಅದೊಂದೇ ಕಾರಣ!

  ಸುಮಲತಾ ಪರ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದಾಗ ದರ್ಶನ್ ಅವರಿಗೆ ಅತೀವ ಬೆಂಬಲ ವ್ಯಕ್ತವಾಗಿತ್ತು. ಆದರೆ ಈ ಬಾರಿ ಸನ್ನಿವೇಶ ಬೇರೆಯೇ ಇದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ದರ್ಶನ್ ಪ್ರಚಾರ ಮಾಡುತ್ತಿರುವ ಬಗ್ಗೆ ಕೆಲವು ಟೀಕೆಗಳು, ವಿಮರ್ಶೆಗಳು ಕೇಳಿಬರುತ್ತಿವೆ.

  ಪ್ರಚಾರದ ನಡುವೆಯೂ ಕೊರೊನಾ ಜಾಗೃತಿ ಮೂಡಿಸಿದ ನಟ ದರ್ಶನ್ಪ್ರಚಾರದ ನಡುವೆಯೂ ಕೊರೊನಾ ಜಾಗೃತಿ ಮೂಡಿಸಿದ ನಟ ದರ್ಶನ್

  ದರ್ಶನ್ ಯಾವಾಗಲೇ ಪ್ರಚಾರದಲ್ಲಿ ಪಾಲ್ಗೊಂಡಾಗಲೂ ರಾಜಕಾರಣಿಯಲ್ಲ, ಗೆಳೆತನಕ್ಕೆ ಕಟ್ಟುಬಿದ್ದು ಪ್ರಚಾರಕ್ಕೆ ಬಂದಿದ್ದೇನೆ ಎಂದೇ ಹೇಳುತ್ತಾರೆ. ಅದರಂತೆಯೇ ನಡೆದುಕೊಂಡಿದ್ದಾರೆ ಸಹ, ಆದರೆ ಈ ಬಾರಿ ತಮ್ಮದೇ ಆದರ್ಶವನ್ನು ಪಕ್ಕಕ್ಕೆ ತಳ್ಳಿದ್ದಾರೆಯೇ ದರ್ಶನ್?

  ಸುಮಲತಾ ಬೆನ್ನಿಗೆ ನಿಂತಿದ್ದಕ್ಕೆ ದರ್ಶನ್‌ಗೆ ಅಪಾರ ಜನಬೆಂಬಲ

  ಸುಮಲತಾ ಬೆನ್ನಿಗೆ ನಿಂತಿದ್ದಕ್ಕೆ ದರ್ಶನ್‌ಗೆ ಅಪಾರ ಜನಬೆಂಬಲ

  ಮಂಡ್ಯ ಚುನಾವಣೆ ಪ್ರಸಂಗ ಏಕಮುಖವಾದುದು. ಸುಮಲತಾ-ಅಂಬರೀಶ್ ಹಾಗೂ ದರ್ಶನ್ ಅವರ ನಡುವಿನ ಆಪ್ತ ಸಂಬಂಧ ರಾಜ್ಯಕ್ಕೆ ಗೊತ್ತಿರುವುದು. ಸುಮಲತಾ, ದರ್ಶನ್ ಅನ್ನು ಮಗನಂತೆ ಕಾಣುತ್ತಾರೆ. ಅಂಬರೀಶ್ ಇಲ್ಲದ ಸಮಯದಲ್ಲಿ ಮಗನ ಸ್ಥಾನದಲ್ಲಿದ್ದ ದರ್ಶನ್ ಸುಮಲತಾ ಬೆಂಬಲಕ್ಕೆ ನಿಂತಿದ್ದು ಎಲ್ಲ ಕೋನಗಳಿಂದಲೂ ಸರಿ. ಕಾಂಗ್ರೆಸ್ ಟಿಕೆಟ್ ನಿರಾಕರಿಸಿ, ಜೆಡಿಎಸ್ ಮುಖಂಡರು ಮಹಿಳೆಯೆಂಬ ಗೌರವ ಇಲ್ಲದಂತೆ ಮಾತನಾಡಿದ ಸಂದರ್ಭದಲ್ಲಿ ದರ್ಶನ್ ಸುಮಲತಾ ಬೆನ್ನಿಗೆ ನಿಂತರು, ಯಶ್ ಜೊತೆ ಸೇರಿ ಗೆಲ್ಲಿಸಿಕೊಂಡು ಬಂದರು.

  ರಾಜಕೀಯೇತರ ವ್ಯಕ್ತಿಗೆ ಮುನಿರತ್ನ 'ಸ್ವಹಿತದ ರಾಜಕಾರಣಿ' ಎನಿಸದೇ?

  ರಾಜಕೀಯೇತರ ವ್ಯಕ್ತಿಗೆ ಮುನಿರತ್ನ 'ಸ್ವಹಿತದ ರಾಜಕಾರಣಿ' ಎನಿಸದೇ?

  ಆದರೆ ಆರ್‌ಆರ್‌ ನಗರ ಉಪಚುನಾವಣೆ ಸಂದರ್ಭ ಪೂರ್ಣ ಭಿನ್ನ. ಮುನಿರತ್ನ ಕಾಂಗ್ರೆಸ್‌ನಲ್ಲಿ ಬೆಳೆದ ಮರವಾಗಿದ್ದರು. ಆದರೆ ಪಕ್ಷ ಬಿಟ್ಟು ಬಂದು ಸರ್ಕಾರ ಉರುಳಿಸಿ ಬಿಜೆಪಿ ಸೇರ್ಪಡೆಗೊಂಡರು, ಪಕ್ಷ ಬಿಟ್ಟು ಬರುವ ಮುನ್ನವೇ ಅವರ ಮೇಲೆ ರಾಜಕೀಯ ಅಪರಾಧ ಪ್ರಕರಣ ದಾಖಲಾಗಿತ್ತು. ಈಗ ಬಿಬಿಎಂಪಿ ಹಗರಣವೊಂದು ಜೊತೆ ಸೇರುತ್ತಿದೆ. ಒಬ್ಬ ರಾಜಕೀಯೇತರ ವ್ಯಕ್ತಿಗೆ ಮುನಿರತ್ನ ಅವರದ್ದು ಸ್ವಹಿತಾಸಕ್ತಿ ರಾಜಕೀಯ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಹಾಗಿದ್ದ ಮೇಲೆ ಇದು ರಾಜಕೀಯವಾಗಿ ನ್ಯೂಟ್ರಲ್ ಆಗಿರುವ ದರ್ಶನ್ ಗಮನಕ್ಕೆ ಬರಲಿಲ್ಲವೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ.

  ಆರ್‌ಆರ್‌ ನಗರ 'ಕುರುಕ್ಷೇತ್ರ' ಅಖಾಡಕ್ಕೆ ಶುಕ್ರವಾರ 'ಸುಯೋಧನ' ದರ್ಶನ್ ಎಂಟ್ರಿಆರ್‌ಆರ್‌ ನಗರ 'ಕುರುಕ್ಷೇತ್ರ' ಅಖಾಡಕ್ಕೆ ಶುಕ್ರವಾರ 'ಸುಯೋಧನ' ದರ್ಶನ್ ಎಂಟ್ರಿ

  ಕೊರೊನಾ ಕಾಲದಲ್ಲಿ ಮುನಿರತ್ನ ಸೇವೆ ನೋಡಿ ಮೆಚ್ಚಿಕೊಂಡಿದ್ದೇನೆ: ದರ್ಶನ್

  ಕೊರೊನಾ ಕಾಲದಲ್ಲಿ ಮುನಿರತ್ನ ಸೇವೆ ನೋಡಿ ಮೆಚ್ಚಿಕೊಂಡಿದ್ದೇನೆ: ದರ್ಶನ್

  ದರ್ಶನ್ ಅವರೇ ಇಂದು ನೀಡಿರುವ ಹೇಳಿಕೆಯಂತೆ, 'ಮುನಿರತ್ನ, ಕೊರೊನಾ ಸಮಯದಲ್ಲಿ ಬಹಳ ಚೆನ್ನಾಗಿ ಜನಸೇವೆ ಮಾಡಿದ್ದಾರೆ, ಹಾಗಾಗಿ ನಾನು ಅವರ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ, ಅವರ ದೊಡ್ಡ ಗುಣ ನೋಡಿ ಬಂದಿದ್ದೇನೆ' ಎಂದಿದ್ದಾರೆ. ದರ್ಶನ್ ಅವರ ಈ ಹೇಳಿಕೆ 'ಸಮಯಕ್ಕೆ ಹೊಳೆದ ಉತ್ತರ'ದಂತೆ ಕಾಣುತ್ತದೆ. ಏಕೆಂದರೆ ಹಲವಾರು ಮಂದಿ ರಾಜಕಾರಣಿಗಳು ಕೊರೊನಾ ಸಮಯದಲ್ಲಿ ಚೆನ್ನಾಗಿ ಕೆಲಸ ಮಾಡಿದವರಿದ್ದಾರೆ. ಹಾಗೆಂದು ಮುಂದಿನ ಚುನಾವಣೆಯಲ್ಲಿ ಅವರ ಪರವಾಗಿಯೂ ದರ್ಶನ್ ಪ್ರಚಾರ ಮಾಡುತ್ತಾರೆಯೇ? ಖಂಡಿತ ಸಾಧ್ಯವಿಲ್ಲ ಎನಿಸುತ್ತದೆ.

  ದರ್ಶನ್‌ಗೆ ರಾಜಕೀಯ ಸ್ಪಷ್ಟತೆ ಇಲ್ಲವೆ?

  ದರ್ಶನ್‌ಗೆ ರಾಜಕೀಯ ಸ್ಪಷ್ಟತೆ ಇಲ್ಲವೆ?

  2018 ರ ಚುನಾವಣೆಯಲ್ಲಿ ನಟ ದರ್ಶನ್ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು. ಆಗ ದರ್ಶನ್ ಅವರ ರಾಜಕೀಯ ಅಸ್ಪಷ್ಟತೆ ಬಗ್ಗೆ ಸಣ್ಣ ಚರ್ಚೆ ಎದ್ದಿತ್ತು. ಒಬ್ಬನೇ ವ್ಯಕ್ತಿ, ಎರಡು ಭಿನ್ನ ಆದರ್ಶ ಹೊಂದಿದ, ಭಿನ್ನ ಗುರಿ ಹೊಂದಿರುವ ಪಕ್ಷಗಳ ಅಭ್ಯರ್ಥಿಗೆ ಹೇಗೆ ಬೆಂಬಲ ನೀಡಬಲ್ಲ? ದರ್ಶನ್‌ಗೆ ರಾಜಕೀಯ ಸ್ಪಷ್ಟತೆ ಇಲ್ಲದ ಕಾರಣ ಹೀಗೆ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ದರ್ಶನ್ ಮೊದಲಿನಿಂದಲೂ ಹೇಳಿಕೊಂಡು ಬಂದಿರುವುದು ಒಂದೇ, 'ನನಗೆ ಪಕ್ಷ ಮುಖ್ಯವಲ್ಲ ವ್ಯಕ್ತಿ ಮುಖ್ಯ' ಎಂದು.

  ಪಕ್ಷದ ಚಿಹ್ನೆ ಧರಿಸುವುದಿಲ್ಲ ದರ್ಶನ್

  ಪಕ್ಷದ ಚಿಹ್ನೆ ಧರಿಸುವುದಿಲ್ಲ ದರ್ಶನ್

  ಈವರೆಗೆ ಹಲವಾರು ಬಾರಿ ನಟ ದರ್ಶನ್ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ ಆದರೆ ಒಂದು ಬಾರಿಯೂ ಯಾವುದೇ ಪಕ್ಷದ ಚುನಾವಣಾ ಚಿಹ್ನೆಯನ್ನು ಅವರು ಹಿಡಿದಿಲ್ಲ, ಅಥವಾ ಚುನಾವಣಾ ಚಿಹ್ನೆ ಇರುವ ಶಾಲನ್ನು ಅವರು ಧರಿಸಿಲ್ಲ. ಮಂಡ್ಯ ಚುನಾವಣಾ ವೇಳೆ ಸಮಯ ಹಸಿರು ಶಾಲನ್ನು ಧರಿಸುತ್ತಿದ್ದರಷ್ಟೆ.

  English summary
  Actor Darshan campaigning for Munirathna in RR Nagar by elections. Is Darshan's political interests changed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X