ಹೆಸರೇಳದೇ ಸೋನು ಶ್ರೀನಿವಾಸ್ ಗೌಡರನ್ನು 'ಯುಐ' ಸಾಂಗ್‌ನಲ್ಲಿ ಟ್ರೋಲ್ ಮಾಡಿದ್ರಾ ಉಪ್ಪಿ?

By ಫಿಲ್ಮಿಬೀಟ್ ಡೆಸ್ಕ್

ಮೂರು ದಿನ ಕಳೆದರೂ 'ಯುಐ' ಚಿತ್ರದ ಟ್ರೋಲ್ ಸಾಂಗ್ ಹವಾ ಮಾತ್ರ ಕಮ್ಮಿ ಆಗಿಲ್ಲ. ಅಭಿಮಾನಿಗಳು ಪದೇ ಪದೆ ಸಾಂಗ್ ಕೇಳಿ, ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಜನಪ್ರಿಯ ಟ್ರೋಲ್ ಪದಗಳನ್ನು ಸೇರಿಸಿ ಉಪ್ಪಿ ಅಂಡ್ ಟೀಂ ಕಟ್ಟಿಕೊಟ್ಟಿರುವ ಟ್ರೋಲ್‌ ಸಾಂಗ್‌ ಸಿನಿರಸಿಕರ ಮನಗೆದ್ದಿದೆ. ರಿಯಲ್ ಸ್ಟಾರ್ ಎಂದಿನಂತೆ ತಮ್ಮ ವಿಭಿನ್ನ ಆಲೋಚನೆಯಿಂದ ಗೆದ್ದಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಅಜನೀಶ್ ಲೋಕನಾಥ್ ಟ್ಯೂನ್‌ಗೆ ನರೇಶ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಆದರೆ ಈ ಸಾಂಗ್ ಹಿಂದಿನ ಮಾಸ್ಟರ್ ಮೈಂಡ್ ಉಪೇಂದ್ರ ಎನ್ನುವುದು ಅಭಿಮಾನಿಗಳಿಗೆ ಗೊತ್ತು. 'ನಾನು ನಂದಿನಿ', 'ಜೋಡೆತ್ತು', 'ಎಲ್ಲಿದ್ದಿಯಪ್ಪಾ', 'ಹೆಂಗ್‌ ಪುಂಗ್ಲಿ', 'ಆರ್‌. ಚಂದ್ರು ಹೈಪ್', 'ರಾಜ್ಯವೇ ಖುಷಿಪಡುವ ಸುದ್ದಿ', 'ಬೆಳ್ಳುಳ್ಳಿ ಕಬಾಬ್', 'ಮರ ಯಾಕೆ', 'ಬಡವರು ಮಕ್ಕಳು ಬೆಳಿಬೇಕು', 'ಕರಿಮಣಿ ಮಾಲೀಕ', 'ನಾ ಡ್ರೈವರಾ', ತಗಡು, ಗುಮ್ಮಿಸ್ಕೊತಿಯಾ ಹೀಗೆ ಹಲವು ಟ್ರೋಲ್‌ಗಳು ಹಾಡಿನಲ್ಲಿದೆ.

Is Sonu Srinivas gowda also Trolled in Upendra s UI Troll Song

ಇನ್ನು ಕೆಲವು ಜನಪ್ರಿಯ ಟ್ರೋಲ್‌ಗಳನ್ನು ಉಪೇಂದ್ರ ಮಿಸ್ ಮಾಡಿದ್ದಾರೆ. ಬೇಕು ಅಂತ್ಲೇ ಬಳಸಲಿಲ್ವಾ? ಅಥವಾ ಮೊದಲು ಹಾಡಿನಲ್ಲಿ ಸೇರಿಸಿ ನಂತರ ತೆಗದು ಇತ್ತೀಚೆಗೆ ಟ್ರೆಂಡ್ ಆಗಿರುವ ಪದಗಳನ್ನು ಸೇರಿಸಿದ್ರಾ? ಎನ್ನುವ ಅನುಮಾನವೂ ಅಭಿಮಾನಿಗಳಲ್ಲಿದೆ. ಇನ್ನು ಟ್ರೋಲ್‌ಗಳನ್ನು ಪಕ್ಕಕ್ಕಿಟ್ಟರೆ ವೀಡಿಯೋ ಸಾಂಗ್‌ನಲ್ಲಿ ಸಾಖಷ್ಟು ಬೇರೆ ವಿಚಾರಗಳನ್ನು ಉಪೇಂದ್ರ ಹೇಳುವ ಪ್ರಯತ್ನ ಮಾಡಿದ್ದಾರೆ.

ನೀರಿಗೆ ಹಾಹಾಕಾರ, ಗುಂಡಿಬಿದ್ದ ರಸ್ತೆಗಳು, ಕಸದ ಸಮಸ್ಯೆ ಇದೆಲ್ಲದರ ಬಗ್ಗೆ ಗಮನ ಹರಿಸದೇ ಸೋಶಿಯಲ್ ಮೀಡಿಯಾದಲ್ಲಿ ಮುಳುಗಿದ ಜನ, ಯಾರಾದರೂ ಸಮಸ್ಯೆಗೆ ಸಿಲುಕಿದರೆ ಕಾಪಾಡುವ ಬದಲು ವೀಡಿಯೋ ಮಾಡುವವರನ್ನು ಉಪೇಂದ್ರ ಹಾಡಿನಲ್ಲಿ ಟ್ರೋಲ್ ಮಾಡಿದ್ದಾರೆ. ವಿಡಂಬನೆ ಮಾಡಿ ಕಿವಿ ಹಿಂಡುವ ಪ್ರಯತ್ನ ಮಾಡಿದ್ದಾರೆ. ಇನ್ನು ಸಾಕಷ್ಟು ಟ್ರೋಲ್ ಪದಗಳನ್ನು ಸಾಹಿತ್ಯದಲ್ಲಿ ಬಳಸಿರುವುದು ಮಾತ್ರವಲ್ಲ, ನಾಯಕಿಯ ಹಾವಭಾವ, ಡ್ಯಾನ್ಸ್‌ನಲ್ಲಿ ಕೂಡ ಕೆಲವರನ್ನು ಟ್ರೋಲ್ ಮಾಡಲಾಗಿದೆ.

Is Sonu Srinivas gowda also Trolled in Upendra s UI Troll Song

ಬಿಗ್‌ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡರನ್ನು ಕೂಡ ಟ್ರೋಲ್ ಮಾಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಹಾಡಿನಲ್ಲಿ ಆಕೆಯ ಪದ ಬಳಸದಿದ್ದರೂ ಆಕೆಯ ವೈರಲ್ ವಿಡಿಯೋವನ್ನು ರೀ ಕ್ರಿಯೇಟ್ ಮಾಡಿ ಟ್ರೋಲ್ ಮಾಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಟ್ರೋಲ್ ಆದ್ರು ಪರವಾಗಿಲ್ಲ ಲೈಕ್ಸ್ ಬರಲಿ, ಜಾಸ್ತಿ ಶೇರ್ ಆಗಲಿ ಒಟ್ನಲ್ಲಿ ಟ್ರೆಂಡ್ ಆಗಬೇಕು, ಫೇಮಸ್ ಆಗಬೇಕು ಎಂದು ನಾಯಕಿ ಆರಂಭದಲ್ಲೇ ಹೇಳುತ್ತಾಳೆ.

ಇನ್ನು ಸೋನು ಶ್ರೀನಿವಾಸ್ ಗೌಡ ಮಾಲ್ಡೀವ್ಸ್ ಪ್ರವಾಸದ ವೇಳೆ ಹಾಟ್ ಹಾಟ್ ಫೋಟೊ, ವಿಡಿಯೋಗಳನ್ನು ಹಂಚಿಕೊಂಡು ಭಾರೀ ಸುದ್ದಿ ಆಗಿದ್ದರು. ಇದೇ ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಸಾಕಷ್ಟು ನೆಗೆಟಿವ್ ಕಾಮೆಂಟ್ ಬಂದಿತ್ತು. ಆದರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ. ಮತ್ತಷ್ಟು ಹಾಟ್ ಫೋಟೊ, ವಿಡಿಯೋ ತೇಲಿಬಿಟ್ಟಿದ್ದರು.

ಸೋನು ಮಾಲ್ಡೀವ್ಸ್ ಬೀಚ್‌ ಪಕ್ಕದ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು. ಬೀಚ್ ಪಕ್ಕದ ರ್ಯಾಂಪ್ ಮೇಲೆ ನಡೆದು ಬರುತ್ತಾ ಟಾಪ್ ತೆಗೆದು ಹಾಟ್ ಆಗಿ ಪೋಸ್ ಕೊಟ್ಟಿದ್ದರು. ಈ ವಿಡಿಯೋ ಭಾರೀ ವೈರಲ್ ಆಗಿತ್ತು. ಕಾಮೆಂಟ್ ಮಾಡುವವರಿಗೆ ವ್ಯಂಗ್ಯವಾಗಿ ತಿರುಗೇಟು ನೀಡಿದ್ದರು. "ಡಿಯರ್ ಹೇಟರ್ಸ್, ಕಾಮೆಂಟ್ ಬಾಕ್ಸ್ ನಿಮ್ದೆ. ನೆಗೆಟಿವ್ ಆದ್ರು ಸರಿ ಪಾಸಿಟಿವ್ ಆದ್ರು ಸರಿ, ಪಾಪ ನಿಮ್ಮ ಸಮಯ ನನ್ನ ಕಾಮೆಂಟ್ ಬಾಕ್ಸ್‌ಗೆ ಕೊಡ್ತೀರಾ ಅಂದ್ರೆ ನಿಜಕ್ಕೂ ಗ್ರೇಟ್" ಎಂದು ಬರೆದುಕೊಂಡಿದ್ದರು.

ಸದ್ಯ 'ಟ್ರೋಲ್‌' ಸಾಂಗ್‌ನಲ್ಲಿ ನಾಯಕಿ ರೀಷ್ಮಾ ನಾಣಯ್ಯ ಕೂಡ ಸ್ನೇಹಿತೆ ಮಾತು ಕೇಳದೇ ಟ್ರೋಲ್ ಆದ್ರು ಪರವಾಗಿಲ್ಲ ಟ್ರೆಂಡ್ ಆಗಬೇಕು, ಫೇಮಸ್ ಆದರೆ ಟ್ರೋಲ್ ಆಗೋದು ಸಹಜ ಕಣೆ ಎನ್ನುತ್ತ ಬಂದು ತಾವು ತೊಟ್ಟಿರುವ ಟಾಪ್ ಕಿತ್ತು ಎಸೆಯುವಂತೆ ತೋರಿಸಲಾಗಿದೆ. ಇದು ಸೋನು ಶ್ರೀನಿವಾಸ್ ಗೌಡ ವೈರಲ್ ವಿಡಿಯೋ ರೀ ಕ್ರಿಯೇಟ್ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ವೈರಲ್ ಮಾಡುತ್ತಿದ್ದಾರೆ.

More from Filmibeat

English summary
Netizen Compared Troll Song bit with Sonu Srinivas gowda viral video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X