"ನನಗೆ ಪಾರ್ಶ್ವವಾಯು ತಗುಲಿರಲಿಲ್ಲ, ಸುಳ್ಳು ವದಂತಿ ಹಬ್ಬಿತ್ತು"; ನಟಿ ಮಾನ್ಯ

ಆಂಧ್ರದಲ್ಲಿ ಹುಟ್ಟಿ ಲಂಡನ್‌ನಲ್ಲಿ ಓದಿ ಬೆಳೆದ ನಟಿ ಮಾನ್ಯಾ ಬಳಿಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಕನ್ನಡ, ತೆಲುಗು, ಮಲಯಾಳಂ ಸೇರಿ 40 ಸಿನಿಮಾಗಳಲ್ಲಿ ನಟಿಸಿದ ಚೆಲುವೆ ಬಳಿಕ ಚಿತ್ರರಂಗದಿಂದ ದೂರಾದರು. ಮದುವೆ ಮಕ್ಕಳು ಎಂದು ಫ್ಯಾಮಿಲಿ ಜೊತೆ ವಿದೇಶದಲ್ಲಿ ನೆಲೆಸಿದ್ದಾರೆ.

ಕನ್ನಡದಲ್ಲಿ 'ಶಾಸ್ತ್ರಿ', 'ವರ್ಷ', 'ಶಂಬು' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಮಾನ್ಯ ನಾಯಕಿಯಾಗಿ ನಟಿಸಿದ್ದರು. ಇತ್ತೀಚೆಗೆ ದರ್ಶನ್, ಮಾನ್ಯ ನಟನೆಯ 'ಶಾಸ್ತ್ರಿ' ರೀ ರಿಲೀಸ್ ಆಗಿತ್ತು. ಇದೇ ಸಮಯದಲ್ಲಿ ಆಕೆ ಬೆಂಗಳೂರಿಗೆ ಬಂದಿದ್ದರು. ಶ್ರೀಮುರಳಿ ದಂಪತಿಯನ್ನು ಭೇಟಿ ಮಾಡಿದ್ದರು. ರಘುರಾಮ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಭಾಗಿ ಆಗಿದ್ದರು. ಈ ವೇಳೆ ತಮ್ಮ ವೈಯಕ್ತಿಕ ಜೀವನ, ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Its not Paralysis Actress manya Clears The Air On Her Health

3 ವರ್ಷಗಳ ಹಿಂದೆ ನಟಿ ಮಾನ್ಯ ಕಾಲಿಗೆ ಪಾರ್ಶ್ವವಾಯು ತಲುಲಿದೆ ಎಂದು ಸುದ್ದಿಯಾಗಿತ್ತು. ಅಂದು ತಮ್ಮ ಕಾಲಿಗೆ ಆಗಿದ್ದ ಸಮಸ್ಯೆ ಬಗ್ಗೆ ಮಾನ್ಯ ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದರು. ಆದರೆ ಅದು ಪಾರ್ಶ್ವವಾಯು ಎಂದು ತಪ್ಪಾಗಿ ಸುದ್ದಿ ಆಗಿತ್ತು. ಈ ಬಗ್ಗೆ ಇದೀಗ ಖುದ್ದು ಮಾನ್ಯ ಪ್ರತಿಕ್ರಿಯೆ ನೀಡಿದ್ದಾರೆ. ರಘುರಾಮ್ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿ ಏನಾಗಿತ್ತು ಎನ್ನುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

"ಸುಳ್ಳು ಸುದ್ದಿ ಹಬ್ಬಿದ್ದು ಬಹಳ ಬೇಸರವಿದೆ. ಕೋವಿಡ್ ಸಮಯದಲ್ಲಿ ಮನೆ ಕೆಲಸದವರು ಮನೆಗೆ ಬರುತ್ತಿರಲಿಲ್ಲ. ಅಮ್ಮನ ಆರೋಗ್ಯ ಕೂಡ ಸರಿಯಿರಲಿಲ್ಲ. ಹಾಗಾಗಿ ನಾನೇ ಮನೆ ಕ್ಲೀನ್ ಮಾಡುತ್ತಿದ್ದೆ. ನಾನು ಮಂಚ ಹತ್ತಿ ತಿರುಗಿದೆ. ಡಿಸ್ಕರ್ನಿಯಾ ಆಗಿ ಸಯಾಟಿಕ್ ನರದ ಮೇಲೆ ಒತ್ತಡ ಬಿದ್ದು ಹಾಗಾಗಿ ಎಡಗಾಲು ನಡೆಯಲು ಸಾಧ್ಯವಾಗದಂತೆ ಆಯಿತು"

Its not Paralysis Actress manya Clears The Air On Her Health

"2 ತಿಂಗಳ ಕಾಲ ನಾನು ನಡೆದಾಡಲು ಸಾಧ್ಯವಾಗಲಿಲ್ಲ. ಅದು ಪಾರ್ಶ್ವವಾಯು ಅಲ್ಲ. ಆದರೆ ಆ ರೀತಿ ಸುದ್ದಿ ಆಯಿತು ಅಷ್ಟೇ. ಸಯಾಟಿಕ್ ನರದ ಮೇಲಿನ ಒತ್ತಡದಿಂದ ಆ ರೀತಿ ಆಯಿತು. ನನ್ನ ಬೆನ್ನುಮೂಳೆಯಲ್ಲಿ ಸ್ಟೀರಾಯ್ಡ್ ಚುಚ್ಚುಮದ್ದು ತೆಗೆದುಕೊಂಡೆ. ಆ ಸಮಯದಲ್ಲಿ ಬಹಳ ಕಷ್ಟ ಅನುಭವಿಸಿದೆ. ತಾಯಿಗೆ ಹುಷಾರಿರಲಿಲ್ಲ. ಅವರನ್ನು ನಾನೇ ನೋಡಿಕೊಳ್ಳಬೇಕಿತ್ತು. ಪತಿ ದುಬೈನಲ್ಲಿದ್ದರು. ನಿಜಕ್ಕೂ ಬಹಳ ಕಷ್ಟವಾಯಿತು"

"ಅದೇ ಸಮಯದಲ್ಲಿ ನಾನು ಆಫೀಸ್ ಕೆಲಸ ಕೂಡ ಮಾಡಬೇಕಿತ್ತು. ವಾಕರ್ ಹಿಡಿದುಕೊಂಡು ಕೆಲಸ ಮಾಡುವಂತಾಯಿತು. ನನಗೆ ಮೊದಲಿನಂತೆ ನಡೆಯೋಕೆ ಡ್ಯಾನ್ಸ್ ಮಾಡೋಕೆ ಸಾಧ್ಯನಾ? ಎನ್ನುವ ಭಯ ಆಗಿತ್ತು. ಫಿಸಿಕಲ್ ಥೆರಫಿ ಮಾಡಿತ್ತಿದ್ದೆ. ಬಾಬಾ ದಯೆಯಿಂದ ನಾನು ಚೇತರಿಸಿಕೊಂಡೆ" ಎಂದು ನಟಿ ಮಾನ್ಯ ವಿವರಿಸಿದ್ದಾರೆ.

"ಸಿನಿಮಾಗಳನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನ್ಯೂಯಾರ್ಕ್‌ನಲ್ಲಿ ಯಾವುದಾದರೂ ಚಿತ್ರೀಕರಣ ನಡೆದಾಗ ಅಲ್ಲಿ ಕ್ಯಾರವಾನ್‌ಗಳನ್ನು ನೋಡಿ ನನಗೆ ಬೇಸರವಾಗುತ್ತದೆ. ಯಾಕೆ ಚಿತ್ರರಂಗ ಬಿಟ್ಟೆ ಎನಿಸುತ್ತದೆ. ಆದರೂ 40 ಸಿನಿಮಾ ಮಾಡುವಂತೆ ಆಯಿತು. ಚಿತ್ರರಂಗದಲ್ಲಿ ಒಳ್ಳೆ ಆದಾಯ ಇಲ್ಲಿದೆ. ನ್ಯೂಯಾರ್ಕ್‌ನಲ್ಲಿ ಸಿಟಿ ಬ್ಯಾಂಕ್ ಮುಖ್ಯ ಕಛೇರಿಯಲ್ಲಿ ಆಡಿಟರ್ ಆಗಿ ಕೆಲಸ ಮಾಡುತ್ತಿದ್ದೇನೆ" ಎಂದಿದ್ದಾರೆ.

ಗುರಿ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದಿದ್ದಾರೆ. ಹೈಸ್ಕೂಲ್‌ನಲ್ಲೇ ಓದುವುದು ಬಿಟ್ಟ ಮಾನ್ಯ ಬಳಿಕ ನ್ಯೂಯಾರ್ಕ್‌ಗೆ ಹೋಗಿ ಓದಿ ಅಲ್ಲೇ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಮಾನ್ಯಗೆ ಒಬ್ಬ ಮಗಳು ಕೂಡ ಇದ್ದಾಳೆ.

More from Filmibeat

English summary
Actress manya makes an important clarification on health rumour;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X