ಆ ವ್ಯಕ್ತಿಯನ್ನ ನಂಬಬಾರದಿತ್ತು ; ಸಿಲ್ಕ್ ಸ್ಮಿತಾ ಸಾವಿಗೆ ಕಾರಣ ಹೇಳಿದ ಜಯಮಾಲಿನಿ...!

ಸಿಲ್ಕ್ ಸ್ಮಿತಾ.. ಅಂದಕಾಲತ್ತಿಲ್ ಪಡ್ಡೆ ಹುಡುಗರಿಂದ ಹಿಡಿದು ಹಣ್ಣು, ಹಣ್ಣು ಮುದುಕರ ಹೃದಯಕ್ಕೆ ಕಿಚ್ಚು ಹಚ್ಚಿದ್ದ ಮಾದಕ ನಟಿ. ತೆರೆಯ ಮೇಲೆ ಸೆಕ್ಸಿ ಗ್ಲ್ಯಾಮರ್ ಇಮೇಜಿನಿಂದ ಕಂಗೊಳಿಸಿದ್ದ ಸಿಲ್ಕ್ ಸ್ಮಿತಾ, ಆತ್ಮಹತ್ಯೆ ಮಾಡಿಕೊಂಡು 28 ವರ್ಷಗಳಾಗಿವೆ. ಆದರೂ ಇವತ್ತು ಕೂಡ ಸಿಲ್ಕ್ ಸ್ಮಿತಾ ಬದುಕು ಅನೇಕರ ಪಾಲಿಗೆ ಅಧ್ಯಯನದ ವಸ್ತು.

ಸಿಲ್ಕ್ ಸ್ಮಿತಾ ಸಾವಿನ ಸುತ್ತ ಮುತ್ತ ಇವತ್ತು ಅನೇಕರಲ್ಲಿ ಕುತೂಹಲ ಇದೆ. ಡರ್ಟಿ ಪಿಕ್ಚರ್ ಮೂಲಕ ಈ ಕುತೂಹಲ ತಣಿಸುವ ಪ್ರಯತ್ನವನ್ನೂ ಹಿಂದಿ ಉದ್ಯಮ ಮಾಡಿದೆ. ಆದರೂ.. ಸಿಲ್ಕ್ ಸ್ಮಿತಾ ವೈಯಕ್ತಿಕ ಬದುಕು ಹೇಗಿತ್ತು? ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ಆಕೆ ಆತ್ಮಹತ್ಯೆಗೆ ಶರಣಾಗಿದ್ದೇಕೆ ? ಕಲಾವಿದೆಯಾಗಿ ಚಿತ್ರರಂಗದಲ್ಲಿ ಆಕೆಗಿದ್ದ ಸ್ಥಾನಮಾನವೇನು..? ಹೀಗೆ ಹತ್ತು ಹಲವು ನಿಖರವಾದ ಉತ್ತರ ಇರದ ಪ್ರಶ್ನೆಗಳು ಅನೇಕರ ತಲೆಯಲ್ಲಿ ಆಗಾಗ ಗಿರಕಿ ಹೊಡೆಯುತ್ತಾನೇ ಇರುತ್ತವೆ. ಒಂದಲ್ಲಾ ಒಂದು ಕಾರಣಕ್ಕೆ ಸಿಲ್ಕ್ ಸ್ಮಿತಾ ಅವರನ್ನ ನೆನಪು ಮಾಡಿಕೊಳ್ತಾನೇ ಇರ್ತಾರೆ. ಇದಕ್ಕೆ ಇನ್ನೊಂದು ಪುರಾವೆ ಅನ್ನುವಂತೆ ದಕ್ಷಿಣದ ಹಿರಿಯ ನಟಿ ಜಯಮಾಲಿನಿ ಸಿಲ್ಕ್ ಸ್ಮಿತಾ ಬಗ್ಗೆ ಮಾತನಾಡಿದ್ದಾರೆ. ಅನುಕಂಪ ವ್ಯಕ್ತಪಡಿಸಿದ್ದಾರೆ.

Jayamalini Reveals Shocking facts About Silk Smitha

ಸಂದರ್ಶನವೊಂದರಲ್ಲಿ ಮಾತನಾಡಿರುವ ಜಯಮಾಲಿನಿ, ಪೋಷಕರಿಂದ ದೂರ ಇದ್ದಿದ್ದೇ ಸಿಲ್ಕ್ ಸ್ಮಿತಾಗೆ ಮುಳುವಾಯಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ಹಣ.. ಕೀರ್ತಿ.. ಎಲ್ಲವೂ ಇದ್ದರೂ ಕೂಡ ಸಿಲ್ಕ್ ಸ್ಮಿತಾ ಒಂಟಿಯಾಗಿದ್ದರು ಎಂದಿರುವ ಜಯಮಾಲಿನಿ, ಪ್ರೀತಿಯ ಹುಡುಕಾಟದಲ್ಲಿ ಸಿಕ್ಕ ಸಿಕ್ಕವರನ್ನ ಸಿಲ್ಕ್ ಸ್ಮಿತಾ ನಂಬಿದರು ಅಂದಿದ್ದಾರೆ. ಇಷ್ಟೇ ಅಲ್ಲ ತಪ್ಪು ವ್ಯಕ್ತಿಯ ಜೊತೆ ಪ್ರೀತಿಯ ಬಲೆಯಲ್ಲಿ ಸಿಲುಕಿದರು. ಸಿಲ್ಕ್ ಸ್ಮಿತಾ ಅವರನ್ನ ಬಳಿಸಿಕೊಂಡ ಆ ವ್ಯಕ್ತಿ ಆ ನಂತರ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ. ಇದರಿಂದ ಸಿಲ್ಕ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎಂದಿದ್ದಾರೆ ಜಯಮಾಲಿನಿ.

ಈ ಮಾನಸಿಕ ಸಂಘರ್ಷವನ್ನ ಎದುರಿಸಲಾಗದೇ ಸಿಲ್ಕ್ ಸ್ಮಿತಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಜಯಮಾಲಿನಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು, ಪೋಷಕರು ಸಿಲ್ಕ್ ಸ್ಮಿತಾ ಜೊತೆಯಲ್ಲಿ ಇದ್ದಿದ್ದರೆ ಸಿಲ್ಕ್ ಸ್ಮಿತಾ ಬದುಕುಳಿಯುತ್ತಿದ್ದರೇನೋ ಅಂದಿದ್ದಾರೆ. ಇನ್ನೂ ಇದೇ ಸಮಯದಲ್ಲಿ ನಾನು, ನನ್ನ ತಂಗಿ ಜ್ಯೋತಿ ಲಕ್ಷ್ಮೀ ಹಾಗೂ ಸಿಲ್ಕ್ ಸ್ಮಿತಾ ದೊಡ್ಡ ಹೀರೋ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದೆವು ಆ ಸಮಯದಲ್ಲಿ ಸಿಲ್ಕ್ ಸ್ಮಿತಾ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ಕೂಡ ಜಯಮಾಲಿನಿ ಹೇಳಿದ್ದಾರೆ.

ಜಯಮಾಲಿನಿ ಅವರ ಈ ಹೇಳಿಕೆಯ ನಂತರ ಪಕ್ಕದ ಮನೆಗಳಲ್ಲಿ ನಾನಾ ತರಹದ ಅಭಿಪ್ರಾಯ ವ್ಯಕ್ತವಾಗ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕಾಲಿವುಡ್ ನ ಸ್ಟಾರ್ ಹೀರೋ ಸಿಲ್ಕ್ ಸ್ಮಿತಾಗೆ ಮೋಸ ಮಾಡಿದ್ದೇ ಅವರ ಆತ್ಮಹತ್ಯೆಗೆ ಕಾರಣ ಅನ್ನುವ ಚರ್ಚೆ ನಡೆಯುತ್ತಿದೆ. ಆ ಸ್ಟಾರ್ ಹೀರೋ ಯಾರು ಇರಬಹುದು ಎಂಬ ತನಿಖೆಯನ್ನೂ ಕೂಡ ಸಾಮಾಜಿಕ ಜಾಲತಾಣದ ಪ್ರವೀಣರು ಸದ್ಯಕ್ಕೆ ಮಾಡುತ್ತಿದ್ದಾರೆ.

Jayamalini Reveals Shocking facts About Silk Smitha

ಒಟ್ನಲ್ಲಿ ೮೦ರ ಕಾಲದ ಯುವಕರ ಎದೆಮೇಲೆ ತಯ್ಯಾತಕ್ಕ ಅಂಥಾ ಮಾದಕವಾಗಿ ಕುಣಿದು, ಕನಸಿಗೂ ಬಂದು ಅವರ ನಿದ್ದೆಗೆಡಿಸಿದ್ದ ಸಿಲ್ಕ್ ಸ್ಮಿತಾ ಅಗಲಿ 28 ವರ್ಷವಾದರೂ ಇವತ್ತು ಕೂಡ ಚರ್ಚೆಗೀಡಾಗ್ತಾನೇ ಇದ್ದಾರೆ ಅಂದರೆ ಸಿಲ್ಕ್ ಸ್ಮಿತಾ ಹೆಸರಿಗೆ ಇರುವ ಸಮ್ಮೋಹಕ ವ್ಯಕ್ತಿತ್ವ ಎಂಥಾದ್ದಿರಬೇಕು ನೀವೆ ಊಹಿಸಿ

More from Filmibeat

English summary
Veteran Actress Jayamalini Reveals Shocking facts About Late Actress Silk Smitha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X