ಪ್ರಭಾಸ್ ಕೇಳಿದ್ರು ಆ ಚಿತ್ರ ನಿರ್ದೇಶನಕ್ಕೆ ಪ್ರೇಮ್ ಒಲ್ಲೆ ಎಂದಿದ್ದೇಕೆ?

ಜೋಗಿ ಪ್ರೇಮ್ ನಿರ್ದೇಶನದ 'KD' ಸಿನಿಮಾ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಪ್ಯಾನ್ ಇಂಡಿಯಾ ಟೂರ್ ಮಾಡಿ 5 ಭಾಷೆಗಳಲ್ಲಿ ಪ್ರಚಾರ ಆರಂಭಿಸಿದೆ ಚಿತ್ರತಂಡ. ಮುಂಬೈ ಬಳಿಕ ಹೈದರಾಬಾದ್‌ನಲ್ಲಿ ಟೀಸರ್ ರಿಲೀಸ್ ಕಾರ್ಯಕ್ರಮ ನಡೀತು.

ಧ್ರುವ ಸರ್ಜ ಜೊತೆಗೆ ಸಂಜಯ್ ದತ್, ರವಿಚಂದ್ರನ್, ಶಿಲ್ಪಾ ಶೆಟ್ಟಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. 'ಏಕ್ ಲವ್‌ ಯಾ' ಬಳಿಕ ಪ್ರೇಮ್ ಆಕ್ಷನ್ ಕಟ್ ಹೇಳಿರುವ ಸಿನಿಮಾ ಇದು. ಹಾಗಾಗಿ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಟೀಸರ್ ಮಾತ್ರ ಬಿಡುಗಡೆಯಾಗಿದ್ದು ಸಿನಿಮಾ ರಿಲೀಸ್ ಡೇಟ್ ಫೈನಲ್ ಆಗಿಲ್ಲ.

Jogi Prem opens up about refusing to direct the Telugu remake Prabhas Yogi due to language barriers

'ಕರಿಯ' ಚಿತ್ರದ ಮೂಲಕ ನಿರ್ದೇಶಕರಾಗಿ ಪ್ರೇಮ್ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಬಳಿಕ 'ಎಕ್ಸ್‌ಕ್ಯೂಸ್‌ಮಿ' ಹಾಗೂ 'ಜೋಗಿ' ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದರು. ಶಿವರಾಜ್‌ಕುಮಾರ್ ನಟನೆಯ 'ಜೋಗಿ' ಸಿನಿಮಾ ದಾಖಲೆ ಬರೀತು. ಕಲ್ಟ್ ಹಿಟ್ ಎನಿಸಿಕೊಳ್ತು. ಸ್ವತಃ ಪ್ರೇಮ್ ಕೈಯಲ್ಲಿ ಅಂತಹ ಮ್ಯಾಜಿಕ್ ರಿಪೀಟ್ ಮಾಡೋಕೆ ಆಗ್ತಲ್ಲ.

ಕನ್ನಡದಲ್ಲಿ ಸಕ್ಸಸ್ ಕಂಡಿದ್ದ 'ಜೋಗಿ' ಸಿನಿಮಾ ಬಳಿಕ ತೆಲುಗು ಹಾಗೂ ತಮಿಳಿಗೆ ರೀಮೆಕ್ ಆಗಿತ್ತು. ಅಣ್ಣಾವ್ರ ಜೊತೆ ಸಿನಿಮಾ ನೋಡಿದ್ದ ರಜನಿಕಾಂತ್ ಬಹಳ ಇಷ್ಟಪಟ್ಟು ರೀಮೆಕ್ ಮಾಡಲು ಆಸೆ ಪಟ್ಟಿದ್ದರು. ಬಳಿಕ ಧನುಷ್ ಆ ಚಿತ್ರದಲ್ಲಿ ನಟಿಸುವಂತಾಯಿತು. ಇದೇ ಸಿನಿಮಾ ತೆಲುಗಿನಲ್ಲಿ ಪ್ರಭಾಸ್ 'ಯೋಗಿ' ರೀಮೆಕ್ ಮಾಡಿದ್ದರು. ವಿ.ವಿ ವಿನಾಯಕ್ ನಿರ್ದೇಶನದ ಸಿನಿಮಾ ಅಲ್ಲಿ ಅಷ್ಟೇನು ಸದ್ದು ಮಾಡಲಿಲ್ಲ.

Jogi Prem opens up about refusing to direct the Telugu remake Prabhas Yogi due to language barriers

ಅಂದಹಾಗೆ 'ಯೋಗಿ' ಸಿನಿಮಾ ತೆಲುಗಿನಲ್ಲಿ ಗೆಲ್ಲಲಿಲ್ಲ. ಕನ್ನಡದ ನೇಟಿವಿಟಿಗೆ ತಕ್ಕಂತೆ ಇದ್ದ ಚಿತ್ರವನ್ನು ಕೆಲ ಬದಲಾವಣೆಯೊಂದಿಗೆ ತೆಲುಗು ಪ್ರೇಕ್ಷಕರ ಮುಂದಿಟ್ಟಿದ್ದರು. ನಯನತಾರಾ ನಾಯಕಿಯಾಗಿ ನಟಿಸಿದ್ದರೆ ಹಿರಿಯ ನಟಿ ಶಾರದಾ ಚಿತ್ರದಲ್ಲಿ ಪ್ರಭಾಸ್ ತಾಯಿ ಪಾತ್ರ ಮಾಡಿದ್ದರು. ಈ ಚಿತ್ರವನ್ನು ತೆಲುಗಿನಲ್ಲಿ ನೀವೇ ನಿರ್ದೇಶನ ಮಾಡಿ ಎಂದು ಪ್ರಭಾಸ್ ಕೇಳಿದ್ದರಂತೆ. ಈ ವಿಚಾರವನ್ನು ಇದೀಗ ಪ್ರೇಮ್ ನೆನಪು ಮಾಡಿಕೊಂಡಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ 'KD' ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಪ್ರೇಮ್ ಭಾಗಿ ಆಗಿದ್ದರು. "ನನಗೆ ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡಲು ಗೊತ್ತಿಲ್ಲ, ನಾನು ಕರ್ನಾಟಕದಲ್ಲಿ ಹಳ್ಳಿಯೊಂದರಿಂದ ಬಂದವನು. ಹಾಗಾಗಿ ಬೇರೆ ಭಾಷೆ ಕಲಿಯಲು ಹೋಗಲಿಲ್ಲ. ಇದೇ ಕಾರಣಕ್ಕೆ ತೆಲುಗಿನಲ್ಲಿ 'ಯೋಗಿ' ಸಿನಿಮಾ ಮಾಡ್ಲಿಲ್ಲ. ಕನ್ನಡದಲ್ಲಿ 'ಜೋಗಿ' ಸಿನಿಮಾ ಮಾಡಿದ್ದೆ. ಆಗ ಇಲ್ಲಿ 'ಯೋಗಿ' ಸಿನಿಮಾ ಮಾಡಲು ಕರೆದರು, ಆದರೆ ನನಗೆ ತೆಲುಗು ಭಾಷೆ ಗೊತ್ತಿಲ್ಲ. ಹಾಗಾಗಿ ಆಗುವುದಿಲ್ಲ, ರೀಮೆಕ್ ರೈಟ್ಸ್ ಕೊಡ್ತೀನಿ ನೀವೇ ಮಾಡ್ಕೊಳಿ ಎಂದೆ. ಭಾಷೆ ಗೊತ್ತಿಲ್ಲದೇ ಹೇಗೆ ಮಾಡ್ಲಿ ಅಂತ ಸುಮ್ಮನಾದೆ" ಎಂದು ಪ್ರೇಮ್ ಹೇಳಿದ್ದಾರೆ.

'ಯೋಗಿ' ಸಿನಿಮಾ ಮಾಡುವ ವೇಳೆಗೆ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿರಲಿಲ್ಲ. ಆಗಷ್ಟೆ ಸ್ಟಾರ್ ಆಗಿ ಬೆಳೆಯುತ್ತಿದ್ದರು. ರಾಜಮೌಳಿ ನಿರ್ದೇಶದ 'ಛತ್ರಪತಿ' ಮಾಡಿ ಗೆದ್ದಿದ್ದರು. ಬಳಿಕ ಮಾಡಿದ್ದ 'ಪೌರ್ಣಮಿ' ಸಿನಿಮಾ ಸೋತಿತ್ತು. ಅಂತಹ ಸಮಯದಲ್ಲಿ ಕನ್ನಡದ 'ಜೋಗಿ' ಸಿನಿಮಾ ನೋಡಿ ರೀಮೆಕ್ ಮಾಡುವ ಪ್ರಯತ್ನ ಮಾಡಿದ್ದರು. ಅದ್ಯಾಕೋ ಕನ್ನಡದಲ್ಲಿ ಸಕ್ಸಸ್ ಕಂಡಂತೆ ತೆಲುಗು, ತಮಿಳಿನಲ್ಲಿ 'ಜೋಗಿ' ಸಿನಿಮಾ ರೀಮೆಕ್ ಆಗಿ ಸದ್ದು ಮಾಡಲಿಲ್ಲ.

ಇನ್ನು 'ಜೋಗಿ' ಸೀಕ್ವೆಲ್ 'ಜೋಗಯ್ಯ' ಸಿನಿಮಾ ಮಾಡಿ ಪ್ರೇಮ್ ಗೆಲ್ಲಲು ಸಾಧ್ಯವಾಗಲಿಲ್ಲ. ಆ ಬಳಿಕ ಶಿವಣ್ಣ ಹಾಗೂ ಸುದೀಪ್ ನಟನೆಯ 'ದಿ ವಿಲನ್' ಸಿನಿಮಾ ಮಾಡಿ ಪ್ರೇಮ್ ನಿರಾಸೆ ಅನುಭವಿಸಿದ್ದರು. ಈಗ 'KD' ಚಿತ್ರದ ಮೇಲೆ ಬಹಳ ಭರವಸೆಯಿಂದ ಇದ್ದಾರೆ.

More from Filmibeat

English summary
Prem chose not to direct 'Yogi', saying he preferred to stick with Kannada, the language he knows best.
Read more about: prem prabhas telugu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X