For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ಚೋಪ್ರಾ ಪತಿ ಈ ವರ್ಷ ಗಳಿಸಿದ್ದಾರೆ ಹುಬ್ಬೇರುವಷ್ಟು ಹಣ!

  |

  ನಟಿ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ಅನ್ನು ವಿವಾಹವಾದಾಗ ಹಲವರು ಕೊಂಕು ನುಡಿದಿದ್ದರು. ಭಾರತದಲ್ಲಿಯೇ ಯಾರಾದರು ಸ್ಟಾರ್ ಅನ್ನು ಮದುವೆಯಾಗುವುದು ಬಿಟ್ಟು ವಿದೇಶಕ್ಕೆ ಹೋಗಿ ಚಿಗುರು ಮೀಸೆ ಹುಡುಗನೊಂದಿಗೆ ವಿವಾಹವಾಗಿದ್ದಾರೆ ಎಂದು.

  ಆದರೆ ಪ್ರಿಯಾಂಕಾ ಪತಿ ನಿಕ್ ಜೋನಸ್ ತಾವು ಸಾಮಾನ್ಯದವರಲ್ಲ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ. ನಿಕ್ ಜೋನಸ್ ಈ ವರ್ಷ ಅತಿ ಹೆಚ್ಚು ಹಣ ಗಳಿಸಿದ 100 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಒಳ್ಳೆಯ ಸ್ಥಾನವನ್ನೇ ಪಡೆದುಕೊಂಡಿದ್ದಾರೆ.

  2020: ಅತಿ ಹೆಚ್ಚು ಹಣ ಗಳಿಸಿದ ವಿಶ್ವದ 100 ಸೆಲೆಬ್ರಿಟಿಗಳಲ್ಲಿ ಒಬ್ಬ ಭಾರತೀಯ!2020: ಅತಿ ಹೆಚ್ಚು ಹಣ ಗಳಿಸಿದ ವಿಶ್ವದ 100 ಸೆಲೆಬ್ರಿಟಿಗಳಲ್ಲಿ ಒಬ್ಬ ಭಾರತೀಯ!

  ಈ ವರ್ಷ ಅತಿ ಹೆಚ್ಚು ಹಣ ಗಳಿಸಿದ 100 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಿಕ್ ಜೋನಸ್ ಹಾಗೂ ಅವರಿಬ್ಬರು ಸಹೋದರರು 20ನೇ ಸ್ಥಾನ ಗಳಿಸಿದ್ದಾರೆ. ವಿಶ್ವ ವಿಖ್ಯಾತ ಹಾಲಿವುಡ್ ನಟ-ನಟಿಯರನ್ನು ಹಿಂದಿಕ್ಕಿ, ಕೊರೊನಾ ಕಾಲದಲ್ಲೂ ಕೋಟ್ಯಂತರ ಹಣ ಬಾಚಿದ್ದಾರೆ ಈ ಭಲೇ ಸೋದರರು.

  ಜೋನಸ್ ಸಹೋದರರು ಈ ವರ್ಷ ಗಳಿಸಿರುವುದು ಬರೋಬ್ಬರಿ 68.5 ಮಿಲಿಯನ್ ಡಾಲರ್. ಭಾರತೀಯ ರುಪಾಯಿ ಲೆಕ್ಕದಲ್ಲಿ 505 ಕೋಟಿ ರುಪಾಯಿಗಳು. ಕೊರೊನಾದ ಸಂಕಷ್ಟದ ಸಮಯದಲ್ಲಿ ಸಹ 505 ಕೋಟಿ ಗಳಿಸಿದ್ದಾರೆ ಜೋನಸ್ ಸಹೋದರರು.

  ನಿಕ್ ಜೋನಸ್, ಜೋ ಜೋನಸ್, ಕೆವಿನ್ ಜೋನಸ್ ಸಹೋದರರು ಜೋನಸ್ ಬ್ರದರ್ಸ್ ಎಂದೇ ಖ್ಯಾತರು. ಇವರ ಮ್ಯೂಸಿಕ್ ವಿಡಿಯೋಗಳು ಕೋಟ್ಯಂತರ ಹಣ ಬಾಚುತ್ತವೆ. ಇದೇ ವರ್ಷಾರಂಭದಲ್ಲಿ ಇವರು ಮಾಡಿದ್ದ ಸಂಗೀತ ಕಾರ್ಯಕ್ರಮ ಭಾರಿ ಹಿಟ್ ಆಗಿತ್ತು, ಕೋಟ್ಯಂತರ ಟಿಕೆಟ್‌ಗಳು ಸೇಲ್ ಆಗಿದ್ದವು.

  English summary
  Priyanka Chopra's husband and his brothers earned 68.5 million dollars in the year 2020.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X