For Quick Alerts
  ALLOW NOTIFICATIONS  
  For Daily Alerts

  ನದಿಗೆ ಬೀಳಲು ಅನು ಅಲಿಯಾಸ್ ಮೇಘಾ ಶೆಟ್ಟಿ ಪಟ್ಟ ಪಾಡು ಅಷ್ಟಿಷ್ಟಲ್ಲ!

  By ಎಸ್ ಸುಮಂತ್
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಈಗ ಅನು ಸ್ಥಿತಿ ಭಯಾನಕವಾಗಿದೆ. ಒಂದು ಕಡೆ ತಾಯಿಯಾಗುತ್ತಿದ್ದಾಳೆ. ಇನ್ನೊಂದು ಕಡೆ ಆರ್ಯನಿಲ್ಲ ಎಂಬ ನೋವು ಅವಳನ್ನು ಕಾಡುತ್ತಿದೆ. ಇದೇ ಕಾರಣಕ್ಕಾಗಿಯೇ ಊಟ, ತಿಂಡಿ, ನಿದ್ದೆ ಏನನ್ನು ಸರಿಯಾಗಿ ಮಾಡದೆ ಸೊರಗಿ ಹೋಗಿದ್ದಾಳೆ. ಮನೆಯವರಿಗೂ ಅನುಳನ್ನು ನೋಡಿ ನೋಡಿ ಭಯವಾಗುತ್ತಿದೆ. ಅನು ಇದೇ ರೀತಿ ಆರೋಗ್ಯ ನಿರ್ಲಕ್ಷ್ಯ ಮಾಡಿದರೆ ಗತಿ ಏನು ಎಂಬ ಆತಂಕ ಎಲ್ಲರನ್ನು ಕಾಡುತ್ತಿದೆ.

  ಇದೆಲ್ಲದರ ನಡುವೆ ನೋಡುವುದಕ್ಕೆ ತುಂಬಾ ಎನಿಸುವ ದೃಶ್ಯ, ಆದರೆ ಅದನ್ನು ಮಾಡುವುದಕ್ಕೆ ಎಷ್ಟೆಲ್ಲಾ ಕಷ್ಟ ಪಡಬೇಕಾಗಿತ್ತು ಎಂಬುದನ್ನು ಅನು ಅಲಿಯಾಸ್ ಮೇಘಾ ಶೆಟ್ಟಿ ಹಂಚಿಕೊಂಡಿದ್ದಾರೆ. ನದಿಗೆ ಬಿದ್ದು, ಸ್ವಲ್ಪ ದೂರ ಈಜಿ ಹೋಗುವ ದೃಶ್ಯ ಇಷ್ಟು ಕಷ್ಟವಾಯಿತಾ ಎಂಬುದನ್ನು ಆ ದೃಶ್ಯ ಅರಿವು ಮಾಡಿದೆ.

  BBK 9 : ಹಬ್ಬದ ಖುಷಿ ಉಳಿಯಲಿಲ್ಲ ಹೆಚ್ಚು ಹೊತ್ತುBBK 9 : ಹಬ್ಬದ ಖುಷಿ ಉಳಿಯಲಿಲ್ಲ ಹೆಚ್ಚು ಹೊತ್ತು

  ಕೇಡಿಗಳಿಂದಾಗಿ ನೀರಿಗೆ ಬಿದ್ದ ಅನು

  ಕೇಡಿಗಳಿಂದಾಗಿ ನೀರಿಗೆ ಬಿದ್ದ ಅನು

  ಇತ್ತೀಚೆಗೆ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಒಂದು ದೃಶ್ಯ ನೋಡಿದ್ದೀರಿ. ಆರ್ಯನ ಅಸ್ತಿ ಬಿಡುವುದಕ್ಕೆ ನದಿ ತೀರಕ್ಕೆ ಮನೆ ಮಂದಿಯೆಲ್ಲಾ ಹೋಗಿದ್ದರು. ಝೇಂಡೆ ಅನುಳನ್ನು ಕೊಲ್ಲುವುದಕ್ಕೆ ಸ್ಕೆಚ್ ಹಾಕಿದ್ದಾನೆ. ಇದೇ ಕಾರಣಕ್ಕಾಗಿಯೇ ಅನು ಕಾಲಿಗೆ ದಾರ ತಗಲಾಕಿಕೊಳ್ಳುವಂತೆ ಮಾಡಿ, ನದಿ ನೀರಿಗೆ ಬೀಳುವಂತೆ ಮಾಡಿದ್ದನು. ಪ್ಲ್ಯಾನ್‌ನಂತೆಯೇ ಅನು ನದಿಗೆ ಬಿದ್ದಳು. ವಿಶ್ವಾಸ್ ರೂಪದಲ್ಲಿ ಆರ್ಯ ತಕ್ಷಣ ಅನುಳನ್ನು ಕಾಪಾಡಿದನು.

  ಮೇಘಾ ಶೆಟ್ಟಿ ತೆಗೆದುಕೊಂಡ ಟೇಕ್ ಎಷ್ಟು ಗೊತ್ತಾ?

  ಮೇಘಾ ಶೆಟ್ಟಿ ತೆಗೆದುಕೊಂಡ ಟೇಕ್ ಎಷ್ಟು ಗೊತ್ತಾ?

  ಹರ್ಷ ಪೂಜೆ ಮಾಡುತ್ತಾ ಕುಳಿತಿರುತ್ತಾನೆ. ಅನು ನದಿ ದಡಕ್ಕೆ ಬಂದು, ಕಾಲು ಜಾರಿ ನದಿಗೆ ಬೀಳಬೇಕು ಇಷ್ಟೇ ದೃಶ್ಯದ ಕಥೆ. ಆದರೆ ಮೇಘಾ ಶೆಟ್ಟಿ ಆ ದೃಶ್ಯಕ್ಕಾಗಿ ಮೂರು ನಾಲ್ಕು ಬಾರಿ ಪ್ರಯತ್ನ ಪಟ್ಟಿದ್ದಾರೆ. ಮುಳುಗಿ ಮುಳುಗಿ ಅಭ್ಯಾಸ ಮಾಡಿಕೊಂಡಿದ್ದಾರೆ. ಚಳಿಯಲ್ಲಿ, ಆ ಕೊರೆಯುವ ನದಿ ನೀರಿನಲ್ಲಿ ಒಮ್ಮೆ ಮುಳುಗೋದು, ದಡದಲ್ಲಿ ಬಂದು ನಡುಗುತ್ತಾ ಕೂರುವುದು. ಮೇಘಾ‌ಶೆಟ್ಟಿ ಆ ಒಂದು ದೃಶ್ಯಕ್ಕಾಗಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಅದಕ್ಕೆ ಸಂಬಂಧಿಸಿದ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಅದರ ಹಿಂದಿನ ಪರಿಶ್ರಮ ಕಾಣುತ್ತಿದೆ.

  ನೋಡುವಷ್ಟು ಸುಲಭವಲ್ಲ ಕಲಾವಿದರ ಕಷ್ಟ

  ನೋಡುವಷ್ಟು ಸುಲಭವಲ್ಲ ಕಲಾವಿದರ ಕಷ್ಟ

  ಮೇಘಾ ಶೆಟ್ಟಿ ಆ ದೃಶ್ಯದಲ್ಲಿ ಅದೆಷ್ಟು ನೈಜವಾಗಿ ಅಭಿನಯಿಸಿದ್ದಾರೆ ಎಂದರೆ ರಿಯಾಲಿಟಿ ಏನೋ ಎಂಬಂತೆ ಫೀಲ್ ಆಗುತ್ತೆ. ಆದರೆ ಅದಕ್ಕೂ ಹಿಂದೆ ಮೇಘಾ ಶೆಟ್ಟಿಗೆ ಚಳಿಯ ಅನುಭವವಾಗಿದೆ. ಆ ಒಂದು ದೃಶ್ಯಕ್ಕಾಗಿ ಅವರ ಹಿಂದೆ ಮುಂದೆ, ಅಕ್ಕ ಪಕ್ಕಕ್ಕೆ ಹಲವಾರು ತಂತ್ರಜ್ಞರು ನೀರಿಗೆ ಇಳಿದಿದ್ದಾರೆ. ಯಾರು ಕೂಡ ಪ್ರತಿದಿನ ತಣ್ಣೀರಿನಲ್ಲಿ ಆಡುವ ಅಭ್ಯಾಸವೇನು ಇರುವುದಿಲ್ಲ. ಆದರೆ ಒಂದೇ ಸಲ ನದಿ ನೀರಿನಲ್ಲಿ ಮುಳುಗಿ ಏಳಬೇಕು ಎಂದಾಗ ಕಷ್ಟವೇ. ಮೇಘಾ ಅಂತು ಮುಳುಗಿ ಎದ್ದಾಗ ಅದೆಷ್ಟು ಚಳಿಯಾಗುತ್ತಿತ್ತು ಎಂಬುದನ್ನು ಆ ದೃಶ್ಯದಲ್ಲಿ ಸೆರೆಹಿಡಿಯಲಾಗಿದೆ.

  ನೆಟ್ಟಿಗರಿಂದ ಮೇಘಾ ಶೆಟ್ಟಿಗೆ ಹೊಗಳಿಕೆ

  ನೆಟ್ಟಿಗರಿಂದ ಮೇಘಾ ಶೆಟ್ಟಿಗೆ ಹೊಗಳಿಕೆ

  ನದಿಯಲ್ಲಿ ಇಳಿಯುವ ಆ ದೃಶ್ಯ ಸಾಕಷ್ಟು ಶ್ರಮ ಹಾಕಲಾಗಿದೆ. ಮೇಘಾ ಹಂಚಿಕೊಂಡಿರುವ ವಿಡಿಯೋ ನೋಡಿದರೇನೆ ಗೊತ್ತಾಗುತ್ತಿದೆ. ನೋಡುಗರು ಕೂಡ ಅದನ್ನೇ ಲೈಕ್ ಮಾಡಿದ್ದಾರೆ. ನಿಮ್ಮ ಡೆಡಿಕೇಷನ್‌ಗೆ ಒಂದು ಸಲಾಂ ಎಂದಿದ್ದಾರೆ. ನಿಮ್ಮ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದೀರಿ ಎಂದು ಹಲವರು ಹೇಳಿದ್ದಾರೆ. ಅಟ್ ದಿ ಸೇಮ್ ಟೈಮ್ ಆರ್ಯವರ್ಧನ್ ಅನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅವರಿಲ್ಲದೆ ನಿಮ್ಮನ್ನು ನೋಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  English summary
  Jothe Jotheyali Serial Actress Megha Shetty Share Making Video. Here is the details.
  Tuesday, October 4, 2022, 22:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X