For Quick Alerts
  ALLOW NOTIFICATIONS  
  For Daily Alerts

  Jr.NTR ರಿಜೆಕ್ಟ್ ಮಾಡಿದ ಈ ಸೂಪರ್ ಹಿಟ್ ಸಿನಿಮಾದಿಂದ ಅಲ್ಲು ಅರ್ಜುನ್ ರಾತ್ರೋ ರಾತ್ರಿ ಸ್ಟಾರ್ ಆದರು

  |

  ಟಾಲಿವುಡ್ ನ ಸ್ಟಾರ್ ನಟರಲ್ಲಿ Jr.NTR ಮತ್ತು ಅಲ್ಲು ಅರ್ಜುನ್ ಕೂಡ ಹೌದು. ಇಬ್ಬರೂ ಗಡಿಗೂ ಮೀರಿ ತನ್ನದೆ ಆದ ಅಭಿಮಾನಿ ಬಳಗ ಸಂಪಾದನೆ ಮಾಡಿದ್ದಾರೆ. ಇಬ್ಬರೂ ಬಾಲ ಕಲಾವಿದರಾಗಿ ಸಿನಿಮಾರಂಗ ಪ್ರವೇಶ ಮಾಡಿದವರು ಬಳಿಕ ಸುಮಾರು ಎರಡು ವರ್ಷಗಳ ಅಂತರದಲ್ಲಿ ಇಬ್ಬರೂ ನಾಯಕನಾಗಿ ಬೆಳ್ಳೆಪರದೆ ಮೇಲೆ ಮಿಂಚಲು ಶುರು ಮಾಡಿದರು.

  2001ರಲ್ಲಿ ಬಂದ 'ನಿನ್ನು ಚೂಡಲಾನಿ' ಸಿನಿಮಾ ಮೂಲಕ ಜೂ.ಎನ್ ಟಿ ಆರ್ ನಾಯಕನಾಗಿ ಮೊದಲು ಕಾಣಿಸಿಕೊಂಡ್ರೆ, ಅಲ್ಲು ಅರ್ಜುನ್ 2003ರಲ್ಲಿ 'ಗಂಗೋತ್ರಿ' ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟರು. ಬಳಿಕ ಇಬ್ಬರೂ ಹಿಂದೆ ತಿರುಗಿ ನೋಡಿದ್ದೆ ಇಲ್ಲ. ಇಂದು ಭಾರತೀಯ ಸಿನಿಮಾರಂಗವೇ ತನ್ನತ್ತ ಸೆಳೆಯುವಂತೆ ಸ್ಟಾರ್ ಆಗಿ ಬೆಳೆದು ನಿಂತಿದ್ದಾರೆ. ಅಂದಹಾಗೆ ನಟ ಜೂ.ಎನ್ ಟಿ ಆರ್ ಅನೇಕ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದಾರೆ. ಆರ್ ಆರ್ ಆರ್ ಸಿನಿಮಾ ಹೀರೋ ತಿರಸ್ಕರಿಸಿದ ಅನೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ.

  ವಿಶೇಷ ಎಂದರೆ ಜೂ ಎನ್ ಟಿ ಆರ್ ತಿರಸ್ಕರಿಸಿದ ಒಂದು ಸಿನಿಮಾದಿಂದ ಅಲ್ಲು ಅರ್ಜುನ್ ರಾತ್ರೋ ರಾತ್ರಿ ಸ್ಟಾರ್ ಆಗಿ ಹೊರಹೊಮ್ಮಲು ಸಾಧ್ಯವಾಯ್ತು. ಯಾವುದು ಆ ಸಿನಿಮಾ? Jr.NTR ರಿಜೆಕ್ಟ್ ಮಾಡಿದ ಸಿನಿಮಾಗಳು ಯಾವುವು? ಇಲ್ಲಿದೆ ಮಾಹಿತಿ...

  ಸೂಪರ್ ಹಿಟ್ 'ಆರ್ಯ' ಸಿನಿಮಾ ರಿಜೆಕ್ಟ್ ಮಾಡಿದ್ದ Jr.NTR

  ಸೂಪರ್ ಹಿಟ್ 'ಆರ್ಯ' ಸಿನಿಮಾ ರಿಜೆಕ್ಟ್ ಮಾಡಿದ್ದ Jr.NTR

  ತೆಲುಗು ಸಿನಿಮಾರಂಗದ ಸೂಪರ್ ಹಿಟ್ ಸಿನಿಮಾಗಳಲ್ಲಿ ಆರ್ಯ ಕೂಡ ಒಂದು. ರೊಮ್ಯಾಂಟಿಕ್ ಸಿನಿಮಾಗೆ ಚಿತ್ರಪ್ರಿಯರು ಫಿದಾ ಆಗಿದ್ದರು. ಈ ಸಿನಿಮಾ ಅಲ್ಲು ಅರ್ಜುನ್ ಸಿನಿಮಾ ಜೀವನವನ್ನೇ ಬದಲಾಯಿಸಿತು. ಅಲ್ಲು ಅರ್ಜುನ್ ರಾತ್ರೋ ರಾತ್ರಿ ಸ್ಟಾರ್ ಆಗಿ ಹೊರಹೊಮ್ಮಲು ಸಾಧ್ಯವಾದ ಸಿನಿಮಾವಿದು. ಈ ಸಿನಿಮಾಗೆ ಮೊದಲು ಆಯ್ಕೆ ಯಾಗಿದ್ದು Jr.NTR.

  ಸುಕುಮಾರ್ ನಿರ್ದೇಶನದ 'ಆರ್ಯ'

  ಸುಕುಮಾರ್ ನಿರ್ದೇಶನದ 'ಆರ್ಯ'

  2004ರಲ್ಲಿ ರಿಲೀಸ್ ಆಗಿದ್ದ ಆರ್ಯ ಸಿನಿಮಾಗೆ ಮೊದಲು ಆಯ್ಕೆ Jr.NTR ಆಗಿದ್ದರು. ಸುಕುಮಾರ್ ಸಾರಥ್ಯದಲ್ಲಿ ಬಂದ ಈ ಸಿನಿಮಾದಲ್ಲಿ ನಟಿಸಲು Jr.NTR ತಿರಸ್ಕರಿಸಿದರು. ಬಳಿಕ ಈ ಸಿನಿಮಾ ಅಲ್ಲು ಅರ್ಜುನ್ ಪಾಲಾಯಿತು. ಈ ಸಿನಿಮಾದಿಂದ ಅಲ್ಲು ಅರ್ಜುನ್ ಸ್ಟಾರ್ ಆಗಿ ಗುರುತಿಸಿಕೊಂಡರು. ಸಿನಿಮಾರಂಗದಲ್ಲಿ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಾಯಿತು.

  ನಿತಿನ್ 'ದಿಲ್'

  ನಿತಿನ್ 'ದಿಲ್'

  Jr.NTR ರಿಜೆಕ್ಟ್ ಮಾಡಿದ ಸಿನಿಮಾ ಲಿಸ್ಟ್ ನಲ್ಲಿ ದಿಲ್ ಸಿನಿಮಾ ಕೂಡ ಇದೆ. 2003ರಲ್ಲಿ ಬಂದ ದಿಲ್ ಸಿನಿಮಾದಲ್ಲಿ ನಿತಿನ್ ನಾಯಕನಾಗಿ ಮಿಂಚಿದರು. ನಿತಿನ್ ಗೂ ಮೊದಲು ಈ ಸಿನಿಮಾ Jr.NTR ಬಳಿ ಹೋಗಿತ್ತು. ಆದರೆ ವಿದ್ಯಾರ್ಥಿ ಪಾತ್ರ ಮಾಡಲು Jr.NTR ತಿರಸ್ಕರಿಸಿದ ಕಾರಣ ನಿತಿನ್ ರನ್ನು ಆಯ್ಕೆ ಮಾಡಲಾಗಿತು. ಬಳಿಕ ಈ ಸಿನಿಮಾ ತೆಲುಗಿನಲ್ಲಿ ದೊಡ್ಡ ಸಕ್ಸಸ್ ಕಂಡಿತು. ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಮಾಯಿ ಮಾಡಿತ್ತು.

  ರವಿ ತೇಜ ನಟನೆಯ 'ಭದ್ರ'

  ರವಿ ತೇಜ ನಟನೆಯ 'ಭದ್ರ'

  ಮಾಸ್ ಮಹಾರಾಜ ರವಿತೇಜ ನಟನೆಯ ಭದ್ರ ಸಿನಿಮಾವನ್ನು Jr.NTR ರಿಜೆಕ್ಟ್ ಮಾಡಿದ್ದರು. ಬೊಯಪತಿ ಶ್ರೀನು ಸಾರಥ್ಯದಲ್ಲಿ ಬಂದ ಈ ಸಿನಿಮಾದ ಕಥೆಯನ್ನು ಮೊದಲು ಅಲ್ಲು ಅರ್ಜುನ್ ಬಳಿ ತೆಗೆದುಕೊಂಡು ಹೋಗಿದ್ದರು. ಬಳಿಕ Jr.NTR ಬಳಿ ಹೋಗಿದ್ದರು. ಅಂತಿಮವಾಗಿ ರವಿ ತೇಜ ಕಾಣಿಸಿಕೊಂಡರು. ತೆಲುಗು ಬಳಿಕ ತಮಿಳು ಮತ್ತು ಕನ್ನಡಕ್ಕೂ ರಿಮೇಕ್ ಆಗಿದೆ. ಕನ್ನಡದಲ್ಲಿ ಗಜ ಹೆಸರಿನಲ್ಲಿ ಬಂದ ರಿಮೇಕ್ ನಲ್ಲಿ ದರ್ಶನ್ ಮಿಂಚಿದ್ದರು.

  ರವಿ ತೇಜ 'ಕಿಕ್'

  ರವಿ ತೇಜ 'ಕಿಕ್'

  ರವಿ ತೇಜ ನಟನೆಯ ಕಿಕ್ ಸಿನಿಮಾವನ್ನು ಸಹ Jr.NTR ತಿರಸ್ಕರಿಸಿದ್ದರು. ನಿರ್ದೇಶಕ ಸುರೇಂದರ್ ರೆಡ್ಡಿ ಕಿಕ್ ಮಾಡುವ ಮೊದಲು ಮಾಡಿದ್ದ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸಕ್ಸಸ್ ಕಂಡಿರಲಿಲ್ಲ. ಹಾಗಾಗಿ ಕಿಕ್ ಸಿನಿಮಾದಲ್ಲಿ ನಟಿಸಲು Jr.NTR ಹಿಂದೇಟು ಹಾಕಿದರು. ಆದರೆ ಈ ಸಿನಿಮಾ ತೆಲುಗಿನಲ್ಲಿ ಸೂಪರ್ ಹಿಟ್ ಆಗಿ ಆಯ್ತು. ಬಳಿಕ ತಮಿಳು, ಕನ್ನಡ ಮತ್ತು ಹಿಂದಿಗೂ ಕಿಕ್ ರಿಮೇಕ್ ಆಗಿ ಸಕ್ಸಸ್ ಕಂಡಿತು.

  ನಾಗಾರ್ಜುನ-ಕಾರ್ತಿ ನಟನೆಯ 'ಊಪಿರಿ'

  ನಾಗಾರ್ಜುನ-ಕಾರ್ತಿ ನಟನೆಯ 'ಊಪಿರಿ'

  ವಂಶಿ ಪೈಡಿಪಲ್ಲಿ ನಿರ್ದೇಶನದಲ್ಲಿ ಬಂದ ಊಪಿರಿ ಸಿನಿಮಾವನ್ನು Jr.NTR ರಿಜೆಕ್ಟ್ ಮಾಡಿದ ಲಿಸ್ಟ್ ನಲ್ಲಿದೆ. ಚಿತ್ರದಲ್ಲಿ ನಟ ನಾಗಾರ್ಜುನ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜೂ.ಎನ್ ಟಿ ಆರ್ ಈ ಪಾತ್ರವನ್ನು ತಿರಸ್ಕರಿಸಲು ಕಾರಣ, ಚಿತ್ರದ ಒಂದು ದೃಶ್ಯದಲ್ಲಿ ನಾಗಾರ್ಜುನ ಪಾದಗಳನ್ನು ಮಟ್ಟಬೇಕಿತ್ತು. ಅವರ ಅಭಿಮಾನಿಗಳು ಇಷ್ಟಪಡದ ಕಾರಣ ಈ ಸಿನಿಮಾ ರಿಜೆಕ್ಟ್ ಮಾಡಿದರು ಎಂದು ಹೇಳಲಾಗುತ್ತಿದೆ. ಬಳಿಕ ಆ ಪಾತ್ರದಲ್ಲಿ ತಮಿಳು ನಟ ಕಾರ್ತಿ ಕಾಣಿಸಿಕೊಂಡರು. ಬಳಿಕ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಸಕ್ಸಸ್ ಆಗಿ ಹೊರಹೊಮ್ಮಿತು.

  English summary
  Tollywood Actor Jr NTR Rejected Movies: Blockbuster Movies that were rejected by Jr NTR.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X