1000 ಕೋಟಿ ರೂ. ಕ್ಲಬ್ ಸೇರಿದ 7ನೇ ಚಿತ್ರ 'ಕಲ್ಕಿ'; ಈ ಲಿಸ್ಟ್‌ನಲ್ಲಿರುವ ಇನ್ನು 6 ಚಿತ್ರಗಳು ಯಾವುವು?

ಒಂದ್ಕಾಲದಲ್ಲಿ ಭಾರತೀಯ ಸಿನಿಮಾಗಳು 100 ಕೋಟಿ ರೂ. ಕಲೆಕ್ಷನ್ ಮಾಡುವುದೇ ಕನಸಿನ ಮಾತಾಗಿತ್ತು. ಸೌತ್ ಸಿನಿಮಾಗಳಂತೂ ಈ ಹಾದಿಯಲ್ಲಿ ಬಹಳ ಹಿಂದೆ ಉಳಿದಿದ್ದವು. ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಶುರುವಾದ ಬಳಿಕ 500 ಕೋಟಿ ರೂ, 1000 ಕೋಟಿ ರೂ. ಕೂಡ ಕಷ್ಟ ಅಲ್ಲ ಎನ್ನುವಂತಾಗಿದೆ.

ಇದೀಗ 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಟಾರ್ಗೆಟ್ ಮಾಡಿ ಸಿನಿಮಾಗಳನ್ನು ನಿರ್ಮಿಸುವ ಲೆಕ್ಕಾಚಾರ ಶುರುವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯೂನಿವರ್ಸಲ್ ಸಬ್ಜೆಕ್ಟ್‌ಗಳನ್ನು ತೆರೆಗೆ ತಂದು ಗೆಲ್ಲುವ ಪ್ರಯತ್ನ ನಡೀತಿದೆ. ಒಂದೇ ಕಥೆಯನ್ನು ಎರಡು ಭಾಗವಾಗಿ ತೆರೆಗೆ ತರುವುದು. ಮೊದಲ ಭಾಗದಿಂದ 2ನೇ ಭಾಗದ ಬಗ್ಗೆ ಹೆಚ್ಚಿನ ನಿರೀಕ್ಷೆ ಹುಟ್ಟುವಂತೆ ಮಾಡಿ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ತಂತ್ರಗಾರಿಕೆ ಕೂಡ ಇದೆ.

Kalki 2898 ad and 6 other indian films crossed Rs 1000 crore at box office

ನಾಗ್ ಅಶ್ವಿನ್ ನಿರ್ದೇಶನದಲ್ಲಿ ಪ್ರಭಾಸ್ ನಟನೆಯ 'ಕಲ್ಕಿ 2898 AD' ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿದೆ. 16 ದಿನಕ್ಕೆ ಸಿನಿಮಾ ವಿಶ್ವದಾದ್ಯಂತ 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಕಂಡಿದ್ದು ಹಿಂದಿ ಬೆಲ್ಟ್‌ನಲ್ಲಿ 250 ಕೋಟಿ ರೂ. ಗಳಿಸಿರುವ ಅಂದಾಜಿದೆ. 'ಕಲ್ಕಿ 2898 AD' ಚಿತ್ರಕ್ಕೂ ಮುನ್ನ ಭಾರತದ ಇನ್ನು 6 ಸಿನಿಮಾಗಳು 1000 ಕೋಟಿ ರೂ. ಕ್ಲಬ್ ಸೇರಿದ್ದವು.

1. ಪಠಾನ್

ಶಾರುಖ್ ಖಾನ್ ನಟನೆಯ 'ಪಠಾನ್' ಸಿನಿಮಾ ಕಳೆದ ವರ್ಷ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಸಿದ್ದಾರ್ಥ್ ಆನಂದ್ ನಿರ್ದೇಶನದ ಈ ಸ್ಪೈ ಥ್ರಿಲ್ಲರ್ ಸಿನಿಮಾ ಧೂಳೆಬ್ಬಿಸಿತ್ತು. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿತ್ತು. 'ಜೀರೊ' ಸಿನಿಮಾ ಸೋಲಿನ ಬಳಿಕ ಕಿಂಗ್ ಖಾನ್ ಸೈಲೆಂಟ್ ಆಗಿದ್ದರು. 'ಪಠಾನ್' ಆಗಿ ಭರ್ಜರಿ ಕಂಬ್ಯಾಕ್ ಮಾಡಿದ್ದರು. ಸಿನಿಮಾ ಒಟ್ಟಾರೆ 1050 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು.

2. ಜವಾನ್

ಒಂದೇ ವರ್ಷ ಶಾರುಖ್ ಖಾನ್ ಎರಡು 1000 ಕೋಟಿ ರೂ. ಕಲೆಕ್ಷನ್ ಸಿನಿಮಾಗಳನ್ನು ನೀಡಿದ್ದರು. ಜನವರಿಯಲ್ಲಿ 'ಪಠಾನ್' ಆಗಿ ಅಬ್ಬರಿಸಿದ ಬಾಲಿವುಡ್ ಬಾದ್‌ಶಾ ಸೆಪ್ಟೆಂಬರ್‌ನಲ್ಲಿ 'ಜವಾನ್' ಆಗಿ ಪ್ರೇಕ್ಷಕರನ್ನು ರಂಜಸಿದ್ದರು. ತಮಿಳು ನಿರ್ದೇಶಕ ಅಟ್ಲಿ ಸಾರಥ್ಯದ ಚಿತ್ರದಲ್ಲಿ ಶಾರುಖ್ ತಂದೆ, ಮಗನಾಗಿ ಡಬಲ್ ರೋಲ್ ಪ್ಲೇ ಮಾಡಿದ್ದರು. ತಮ್ಮದೇ ರೆಡ್ ಚಿಲ್ಲೀಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಿಸಿದ್ದರು. 'ಜವಾನ್' ವಿಶ್ವದಾದ್ಯಂತ 1,148 ಕೋಟಿ ರೂ. ಗಳಿಸಿದ್ದಾಗಿ ವರದಿಯಾಗಿತ್ತು.

Kalki 2898 ad and 6 other indian films crossed Rs 1000 crore at box office

3. ಕೆಜಿಎಫ್-2

ಕನ್ನಡ ಸಿನಿಮಾಗಳು 100 ಕೋಟಿ. ರೂ ಗಳಿಸುವುದೇ ಕಷ್ಟ ಎನ್ನುವ ಸಮಯದಲ್ಲಿ 'ಕೆಜಿಎಫ್' ಸಿನಿಮಾ ದಾಖಲೆ ಬರೆದಿತ್ತು. ಸರಣಿಯ ಮೊದಲ ಸಿನಿಮಾ 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ರೆ ಸೀಕ್ವೆಲ್ 1000 ಕೋಟಿ ರೂ. ಕ್ಲಬ್ ಸೇರಿಕೊಂಡಿತ್ತು. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ದರ್ಬಾರ್ ಮರೆಯೋಕೆ ಸಾಧ್ಯವಿಲ್ಲ. ಹೊಂಬಾಳೆ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ತೆರೆಕಂಡಿದ್ದ ಸಿನಿಮಾ 1,250 ಕೋಟಿ ರೂ. ದೋಚಿ ಸಂಚಲನ ಸೃಷ್ಟಿಸಿತ್ತು.

4. ಆರ್‌ಆರ್‌ಆರ್

'ಬಾಹುಬಲಿ' ಸರಣಿ ಬಳಿ ರಾಜಮೌಳಿ ಕಟ್ಟಿಕೊಟ್ಟ ದೃಶ್ಯಕಾವ್ಯ ಆರ್‌ಆರ್‌ಆರ್. ಈ ಮೆಗಾ ಮಲ್ಟಿಸ್ಟಾರರ್ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದು ಸದ್ದು ಮಾಡಿತ್ತು. ಜ್ಯೂ. ಎನ್‌ಟಿಆರ್, ರಾಮ್‌ಚರಣ್ ಚಿತ್ರದಲ್ಲಿ ನಟಿಸಿದ್ದರು. ಐತಿಹಾಸಿಕ ಮಹಾಪುರುಷರ ಪಾತ್ರಗಳನ್ನು ಬಳಸಿಕೊಂಡು ಒಂದು ಕಾಲ್ಪನಿಕ ಕಥೆಯನ್ನು ಚಿತ್ರದಲ್ಲಿ ಹೇಳಿ ರಾಜಮೌಳಿ ಮತ್ತವರ ತಂಡ ಗೆದ್ದಿತ್ತು. ಸಿನಿಮಾ 1,387 ಕೋಟಿ ರೂ. ಗಳಿಕೆ ಕಂಡಿದ್ದಾಗಿ ವರದಿಯಾಗಿತ್ತು.

5. ಬಾಹುಬಲಿ: ದಿ ಕನ್‌ಕ್ಲೂಷನ್

ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಸಿನಿಮಾ 'ಬಾಹುಬಲಿ'. ಪ್ಯಾನ್ ಇಂಡಿಯಾ ಎನ್ನುವ ಕಾನ್ಸೆಪ್ಟ್‌ಗೆ ಹೊಸ ರೂಪ ಕೊಟ್ಟ ಚಿತ್ರ ಇದು. ಬಾಹುಬಲಿ ಸರಣಿಯ 2ನೇ ಸಿನಿಮಾ ವಿಶ್ವದಾದ್ಯಂತ 1,810 ಕೋಟಿ ರೂ. ಗಳಿಕೆ ಕಂಡಿತ್ತು. ಪ್ರಭಾಸ್, ರಾಣಾ ದಗ್ಗುಬಾಟಿ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿ ಗೆದ್ದಿದ್ದರು. ಜಕ್ಕಣ್ಣ ವಿಷನ್, ಮೇಕಿಂಗ್ ಹಾಗೂ ಗ್ರಾಫಿಕ್ಸ್ ಇನ್ನು ಪ್ರೇಕ್ಷಕರ ಮನಸ್ಸಿನಲ್ಲಿದೆ.

6. ದಂಗಲ್

ಆಮೀರ್ ಖಾನ್ ನಟನೆಯ 'ದಂಗಲ್' ಸಿನಿಮಾ ಕೂಡ 1000 ಕೋಟಿ ರೂ. ಕ್ಲಬ್ ಸೇರಿತ್ತು. ಭಾರತದಲ್ಲಿ ಸಿನಿಮಾ 565 ಕೋಟಿ ರೂ. ಬಾಚಿತ್ತು. ಆದರೆ ಓವರ್‌ಸೀಸ್ ಮಾರ್ಕೆಟ್‌ನಲ್ಲಿ ಸಿನಿಮಾ ದಾಖಲೆ ಸೃಷ್ಟಿಸಿತ್ತು. ಮುಖ್ಯವಾಗಿ ಚೀನಾದಲ್ಲಿ ಸಿನಿಮಾ ಸಾವಿರ ಕೋಟಿ ರೂ. ಗಳಿಸಿ ಎಲ್ಲರ ಹುಬ್ಬೇರಿಸಿತ್ತು. ಒಟ್ಟಾರೆಯಾಗಿ ಸಿನಿಮಾ 2,024 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿತ್ತು.

More from Filmibeat

English summary
KGf to Pathaan Indian films that grossed ₹1000 crore worldwide;
Read more about: filmibeat original box office kgf
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X