"ಅಲ್ಪಾಯುಷಿಗಳು ದೈವ ಸಮಾನರು"; ಪುನೀತ್ ಹಠಾತ್ ನಿಧನದ ಬಗ್ಗೆ ಜ್ಯೋತಿಷಿ ನಾಗರಾಜ್ ಕೋಟೆ ಹೇಳಿದ್ದೇನು?
ಪುನೀತ್ ರಾಜ್‌ಕುಮಾರ್ ಅಗಲಿಕೆ ಇನ್ನೂ ಅವರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗಿಲ್ಲ. ಅಪ್ಪು ದಿಢೀರನೇ ಇಹಲೋಕವನ್ನು ತ್ಯಜಿಸಿದ ಶಾಕ್‌ನಲ್ಲಿ ಫ್ಯಾನ್ಸ್ ಇದ್ದಾರೆ. ಮೂರು ವರ್ಷಗಳ ಬಳಿಕವೂ ಆ ಕಹಿ ಘಟನೆಯನ್ನು ಮರೆಯುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಇಂದಿಗೂ ಅವರನ್ನು ಕಾಡುವ ಪ್ರಶ್ನೆ ಅಷ್ಟೊಂದು ಫಿಟ್ ಆಗಿದ್ದ ಅಪ್ಪುಗೆ ಹೀಗಾಗುವುದಕ್ಕೆ ಹೇಗೆ ಸಾಧ್ಯ?
ಈ ಮಧ್ಯೆ ಆತ್ಮಗಳ ಜೊತೆ ಮಾತಾಡುವವವರು, ಜ್ಯೋತಿಷಿಗಳು ತಮ್ಮದೇ ರೀತಿಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ಅಗಲಿಕೆ ಬಗ್ಗೆ ವಿಶ್ಲೇಷಣೆ ಕೊಟ್ಟಿದ್ದಾರೆ. ಇಂದಿಗೂ ಕೊಡುತ್ತಲೇ ಇದ್ದಾರೆ. ಈಗ ಕನ್ನಡ ಚಿತ್ರರಂಗದ ನಟ ಹಾಗೂ ಜ್ಯೋತಿಷಿಯಾಗಿರುವ ನಾಗರಾಜ್ ಕೋಟೆ ಕೂಡ ಅಪ್ಪು ಅಗಲಿಕೆ ಬಗ್ಗೆ ತಮ್ಮ ಅಭಿಪ್ರಾಯ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

ಪುನೀತ್ ರಾಜ್‌ಕುಮಾರ್ ಅಲ್ಪಾಯುಷಿ ಆಗಿದ್ದರು. ಅಲ್ಪಯುಷಿಗಳನ್ನು ಏನಂದು ಕರೆಯುತ್ತಾರೆ ಅನ್ನುವುದನ್ನು ಸುದ್ದಿಮನೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಈ ಸಂದರ್ಶನದ ವೇಳೆ ಪುನೀತ್ ರಾಜ್‌ಕುಮಾರ್ ಬಗ್ಗೆ ಹೇಳಿದ ಕೆಲವು ಸಂಗತಿಗಳ ಝಲಕ್ ಇಲ್ಲಿದೆ.
"ಹುಟ್ಟು, ಸಂಗಾತಿ, ಸಾವು"
ಸಿನಿಮಾ, ಧಾರಾವಾಹಿಗಳಲ್ಲಿ ನಟಿಸುವುದರ ಜೊತೆಗೆ ಜ್ಯೋತಿಷಿಯಾಗಿ ಜನಪ್ರಿಯರಾಗಿರುವ ನಾಗರಾಜ್ ಕೋಟೆ ಹುಟ್ಟು, ಸಾವು, ಸಂಗಾತಿ ಬಗ್ಗೆ ರಹಸ್ಯವನ್ನು ಹಂಚಿಕೊಂಡಿದ್ದಾರೆ. "ನಾವು ಒಬ್ಬ ವ್ಯಕ್ತಿಯ ಬಗ್ಗೆ ಎಲ್ಲದನ್ನೂ ಹೇಳುತ್ತೇವೆ. ಸಂಪತ್ತು ಹೇಳ್ತೀವಿ, ಮದುವೆ ಹೇಳ್ತೀವಿ, ಬ್ಯುಸಿನೆಸ್ ಬಗ್ಗೆ ಹೇಳ್ತೀವಿ. ಆದರೆ, ಆಯಸ್ಸು ನಮ್ಮ ಕೈಗೆ ಸಿಗುವುದಿಲ್ಲ. ಯಾಕೆ ಸಿಗಲ್ಲ ಅಂದರೆ, ಬ್ರಹ್ಮ ಮೂರು ಖಾತೆಯನ್ನು ಅವನ ಹತ್ತಿರ ಇಟ್ಟುಕೊಂಡು ಆ ರಹಸ್ಯವನ್ನು ಯಾರಿಗೂ ಬಿಟ್ಟು ಕೊಡುವುದಿಲ್ಲ. ಹುಟ್ಟು, ಸಂಗಾತಿ, ಸಾವು ಈ ಮೂರು ಯಾವ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ಅದು ಯಾರ ಕೈನಲ್ಲೂ ಇಲ್ಲ." ಎಂದು ನಾಗರಾಜ್ ಕೋಟೆ ಹೇಳಿದ್ದಾರೆ.

"ದೈವ ಸಮಾನರು"
"ಪುನೀತ್ ರಾಜ್‌ಕುಮಾರ್ ಅವರು ಅಗಲಿದ ನೋವು ಇದೆ. ಆದರೆ, ನೀವು ಹಿಂದಕ್ಕೆ ಹೋದರೆ, ಶಂಕರಾಚಾರ್ಯರನ್ನು ತೆಗೆದುಕೊಳ್ಳಿ ಎಲ್ಲ ಅಲ್ಪ ಆಯುಷಿಗಳು. ಅಲ್ಪಾಯುಷಿಗಳನ್ನು ದೈವ ಸಮಾನರು ಎಂದು ಕರೆಯುತ್ತೇವೆ. ವಿವೇಕಾನಂದ ಇವರನ್ನೆಲ್ಲ ನೋಡಿಕೊಂಡು ಬಂದಿದ್ದರಿಂದ ಇವರಿಗೆಲ್ಲ ಯಾಕೆ ಅಲ್ಪ ಆಯುಷಿಗಳು? ಅವರು ಇದ್ದಿದ್ದರೆ ಇನ್ನೂ ದೇಶವನ್ನು ಎಷ್ಟು ತಿದ್ದಿಬಿಡುತ್ತಿದ್ದರು ಅಂತ ಅನಿಸುತ್ತೆ? ಅದೊಂದು ಪ್ರಶ್ನೆಯನ್ನು ದೈವಕ್ಕೆ ಬಿಡಬೇಕು." ಎಂದಿದ್ದಾರೆ.
"ಪುನೀತ್ ರಾಜ್‌ಕುಮಾರ್ ದೈವ ಸಮಾನರು"
ಇದೇ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್ ದೈವ ಸಮಾನರು. ಅವರ ಫೋಟೊ ನೋಡಿದರೇ ಅಂತ ಭಾವನೆ ಬಂದು ಬಿಡುತ್ತೆ ಎಂದಿದ್ದಾರೆ. "ಅಪಘಾತದಲ್ಲಿ ತೀರಿ ಹೋಗುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಇದು ತಪ್ಪು. ಯಾವುದೇ ಹಳೆಯ ಪಾಪ. ಪುನೀತ್ ರಾಜ್‌ಕುಮಾರ್ ದೈವ ಸಮಾನರು. ಅವರ ಫೋಟೊ ಇಲ್ಲದ ಅಂಗಡಿಗಳಿಲ್ಲ. ಕೆಲವರು ದೇವಸ್ಥಾನ ಕಟ್ಟಿದ್ದಾರೆ. ಅವರು ಫೋಟೋ ನೋಡಿದರೆ, ನೋಡಿಸಿಕೊಳ್ಳುತ್ತೆ" ಎಂದು ನಾಗರಾಜ್ ಕೋಟೆ ಹೇಳಿದ್ದಾರೆ.
ಪುನೀತ್ ರಾಜ್‌ಕುಮಾರ್ ಅಗಲಿಗೆ ಅಭಿಮಾನಿಗಳು, ಆಪ್ತರಿಗೆ ಇನ್ನೂ ದೊಡ್ಡ ಶಾಕ್. ಹುಟ್ಟುಹಬ್ಬ ಬಂತು ಅಂದರೆ, ಅಪ್ಪು ನೆನೆದು ಭಾವುಕರಾಗುತ್ತಾರೆ. ಪುನೀತ್ ಮಾಡಿದ ಸಾಮಾಜಿಕ ಕಾರ್ಯಗಳನ್ನು ನೆನೆದು ಮುಂದೆ ಸಾಗುತ್ತಿದ್ದಾರೆ. ತಾವಿದ್ದಲ್ಲಿಂದಲೇ ಪುನೀತ್ ರಾಜ್‌ಕುಮಾರ್ ನೆನೆದು ಅವರೂ ಕೂಡ ಸಮಾಜಮುಖಿ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದಾರೆ.


Click it and Unblock the Notifications











