ಅಣ್ಣಾವ್ರು ಮಾಡದೇ ಬಿಟ್ಟ ಪಾತ್ರಗಳು; ಈ 5 ಚಿತ್ರ ನಿರ್ಮಿಸಲು ಪಾವರ್ತಮ್ಮ ಯತ್ನಿಸಿ ವಿಫಲ!

ಗಾನ ಗಂಧರ್ವ ನಟಸಾರ್ವಭೌಮ ರಾಜ್‌ಕುಮಾರ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಣ್ಣಾವ್ರ ಬಹುತೇಕ ಚಿತ್ರಗಳು ಗೆದ್ದಿವೆ. ಸಾಕಷ್ಟು ಸಿನಿಮಾಗಳು ಕಪ್ಪು ಬಿಳುಪಿನ ಚಿತ್ರಗಳೇ ಆಗಿದ್ದವು. ಮುತ್ತುರಾಜ ನಟಿಸಲು ಆಸೆಪಟ್ಟಿದ್ದ ಕೆಲ ಸಿನಿಮಾಗಳು ನಿಂತು ಹೋಗಿದ್ದು ಇದೆ. ತಮ್ಮ ಪತಿಯನ್ನು ಹೀರೊ ಪಾರ್ವತಮ್ಮ ಕೂಡ ಕೆಲ ಚಿತ್ರಗಳನ್ನು ನಿರ್ಮಿಸಿದ್ದಾರೆ.

ಪ್ರೇಕ್ಷಕರ ನಾಡಿಮಿಡಿತವನ್ನು ಪಾರ್ವತಮ್ಮ ಚೆನ್ನಾಗಿ ಅರಿತಿದ್ದರು. ಅದೇ ಕಾರಣಕ್ಕೆ ಅವರ ಬ್ಯಾನರ್‌ನಲ್ಲಿ ಬಂದಿದ್ದ ಬಹುತೇಕ ಎಲ್ಲಾ ಚಿತ್ರಗಳು ಗೆದ್ದಿವೆ. ಕಾದಂಬರಿಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದ ಅವರು ಕೆಲ ಕಾದಂಬರಿಗಳನ್ನು ಸಿನಿಮಾ ಕೂಡ ಮಾಡಿದ್ದರು. ಆದರೆ ಅವರು ಬಹಳ ಇಷ್ಟುಪಟ್ಟು ಅಣ್ಣಾವ್ರು ನಟಿಸಬೇಕು ಎಂದುಕೊಂಡಿದ್ದ ಕೆಲ ಚಿತ್ರಗಳು ಸೆಟ್ಟೇರಲೇ ಇಲ್ಲ.

Kannada Actor Dr Rajkumar s incomplete or Shelved movies list

ಅಣ್ಣಾವ್ರು ಸಾಕಷ್ಟು ಸಿನಿಮಾಗಳು ಚರ್ಚೆಯ ಸಮಯದಲ್ಲೇ ನಿಂತು ಹೋಗಿದ್ದರೆ ಕೆಲ ಸಿನಿಮಾಗಳು ಸೆಟ್ಟೇರಿ ಒಂದೆರಡು ದಿನ ಚಿತ್ರೀಕರಣದ ಬಳಿಕ ನಿಂತಿರುವುದು ಇದೆ. ಪಾರ್ವತಮ್ಮ 5 ಸಿನಿಮಾಗಳನ್ನು ಸಿನಿಮಾ ಮಾಡಲು ಬಯಸಿದ್ದರು. ಅದರಲ್ಲಿ ರಾಜ್‌ಕುಮಾರ್ ನಟಿಸಬೇಕು ಎಂದು ಆಸೆ ಪಟ್ಟಿದ್ದರು. ಆದರೆ ಅದಕ್ಕೆ ಎಲ್ಲವೂ ಕೂಡಿ ಬರಲಿದೆ. ಅಣ್ಣಾವ್ರ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ್ದ ಹಾಲು ಜೇನು ರಾಮ್‌ಕುಮಾರ್ ಈ ಬಗ್ಗೆ ಟೋಟಲ್ ಕನ್ನಡ ಯೂಟ್ಯೂಬ್‌ ಚಾನಲ್‌ ಸಂದರ್ಶನದಲ್ಲಿ ಮಾಹಿತಿ ನೀಡಿದ್ದರು.

ಶಬರಶಂಕರ ವಿಳಾಸ

ಕವಿ ಷಡಕ್ಷರದೇವ ಬರೆದ 'ಶಬರಶಂಕರ ವಿಳಾಸ' ಕಾವ್ಯ ಆಧರಿಸಿ ಸಿನಿಮಾ ಮಾಡಲು ಪಾರ್ವತಮ್ಮ ರಾಜ್‌ಕುಮಾರ್ ಆಸೆ ಪಟ್ಟಿದ್ದರು. ಅರ್ಜುನ ಶಿವನ ವಿರುದ್ಧ ಯುದ್ಧ ಮಾಡಿ ಪಾಶುಪತಾಸ್ತ್ರವನ್ನು ಪಡೆದ ಕಥೆ ಈ ಕಾವ್ಯದಲ್ಲಿದೆ. ಈ ಚಿತ್ರದಲ್ಲಿ ಅರ್ಜುನ ಹಾಗೂ ಶಿವನಾಗಿ ಅಣ್ಣಾವ್ರು ನಟಿಸಬೇಕು ಎನ್ನುವ ಮಾತುಕತೆ ನಡೆಸಿತ್ತು. ಆದರೆ ಅರ್ಜುನನ ಪಾತ್ರದಲ್ಲಿ ಶಿವರಾಜ್‌ಕುಮಾರ್ ನಟಿಸಿದ್ದರೆ ಚೆನ್ನಾಗಿರುತ್ತೆ ಎಂದು ಕೆಲವರು ಸಲಹೆ ಕೊಟ್ಟಿದ್ದರು.

ಅದ್ಯಾಕೋ 'ಶಬರಶಂಕರ ವಿಳಾಸ' ಕಾವ್ಯವನ್ನು ಸಿನಿಮಾ ಮಾಡುವ ಪ್ರಯತ್ನ ಕೈಗೂಡಲಿಲ್ಲ. ರೇಣುಕಾಶರ್ಮಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕಿತ್ತು. ಆದರೆ 'ಶಿವಮೆಚ್ಚಿದ ಕಣ್ಣಪ್ಪ' ಚಿತ್ರದಲ್ಲಿ ಶಿವನಾಗಿ ರಾಜ್ ಹಾಗೂ ಅರ್ಜುನನಾಗಿ ಶಿವಣ್ಣ ನಟಿಸಿದ್ದರು. ಹಾಗಾಗಿ ಮತ್ತೆ ಅದೇ ಪಾತ್ರಗಳಲ್ಲಿ ಅವರು ನಟಿಸಿದರೆ ಪ್ರಯೋಜನವಿಲ್ಲ ಎಂದು ಸುಮ್ಮನಾಗಿದ್ದರು ಎಂದು ರಾಮ್‌ಕುಮಾರ್ ವಿಶ್ಲೇಷಿಸಿದ್ದಾರೆ.

Kannada Actor Dr Rajkumar s incomplete or Shelved movies list

ಅಮೃತವರ್ಷಿಣಿ

ಅಶ್ವಥ್ ಹಾಗೂ ರಾಜ್‌ಕುಮಾರ್ ತಂದೆ ಮಗನಾಗಿ 'ಅಮೃತವರ್ಷಿಣಿ' ಎಂಬ ಸಂಗೀತ ಪ್ರಧಾನ ಸಿನಿಮಾ ಮಾಡಲು ಚರ್ಚೆ ನಡೆದಿತ್ತು. ತಂದೆ ಪಾಶ್ಚಾತ್ಯ ಸಂಗೀತ ಪ್ರೇಮಿ ಹಾಗೂ ಮಗ ಹಿಂದೂಸ್ತಾನಿ ಕರ್ನಾಟಕ ಸಂಗೀತ ಪ್ರೇಮಿಯಾಗಿರುವ ಕಥೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಸಂಘರ್ಷ ನಡೆದು ಯಾರು ಗೆಲ್ಲುತ್ತಾರೆ ಎನ್ನುವುದು ಈ ಚಿತ್ರದ ಕಥೆಯಾಗಿತ್ತು.

ಎರಡು ಹಾಡುಗಳು ಕೂಡ ಚಿತ್ರಕ್ಕಾಗಿ ರೆಕಾರ್ಡಿಂಗ್ ಮಾಡಿದ್ದರು. 'ಜೀವನಚೈತ್ರ' ಚಿತ್ರದ 'ನಾದಮಯಾ' ಹಾಡನ್ನು ಇದೇ ಚಿತ್ರಕ್ಕಾಗಿ ಮೊದಲು ಕಂಪೋಸ್ ಮಾಡಲಾಗಿತ್ತು. 'ಅಮೃತವರ್ಷಿಣಿ' ಚಿತ್ರ ನಿಂತ ಬಳಿಕ 'ಜೀವನಚೈತ್ರ' ಚಿತ್ರಕ್ಕೆ ಬಳಸಿಕೊಳ್ಳಲಾಗಿತ್ತು. ಅಶ್ವಥ್ ಅವರು ಕೂಡ ಪದೇ ಪದೆ ಈ ಚಿತ್ರದ ಬಗ್ಗೆ ಮಾತನಾಡುತ್ತಿದ್ದರು. ಬಹಳ ಒಳ್ಳೆ ಪಾತ್ರ ಕೈ ತಪ್ಪಿತು ಎಂದು ಹೇಳುತ್ತಿದ್ದರಂತೆ.

ಶ್ರೀಕೃಷ್ಣ- ಸುಧಾಮ

70ರ ದಶಕದಲ್ಲಿ 'ಶ್ರೀಕೃಷ್ಣ- ಸುಧಾಮ' ಸಿನಿಮಾ ಮಾಡುವ ಪ್ರಯತ್ನ ನಡೆದಿತ್ತು. ಸುಧಾಮನಾಗಿ ಅಶ್ವಥ್, ಕೃಷ್ಣನಾಗಿ ಅಣ್ಣಾವ್ರು ನಟಿಸಬೇಕು ಎಂದು ಚರ್ಚೆ ನಡೆದಿತ್ತು. ಚಿ. ಉದಯಶಂಕರ್ ಸಂಭಾಷಣೆ ಆ ಚಿತ್ರಕ್ಕೆ ಸರಿಯಾಗಿ ಹೊಂದುತ್ತಿಲ್ಲ ಎಂದು ಅಣ್ಣಾವ್ರಿಗೆ ಅನಿಸಿತ್ತು ಅನ್ನಿಸುತ್ತದೆ.

ಬಸವಣ್ಣ

'ಜಗಜ್ಯೋತಿ ಬಸವೇಶ್ವರ' ಚಿತ್ರವನ್ನು ಸ್ವತಃ ರಾಜ್‌ಕುಮಾರ್ ಬಿಟ್ಟುಕೊಟ್ಟಿದ್ದರು. ಹೊನ್ನಪ್ಪ ಭಾಗವತರ್ ಚಿತ್ರದಲ್ಲಿ ನಟಿಸಿದ್ದರು. ನಾಟಕಗಳಲ್ಲಿ ಬಸವಣ್ಣನ ಪಾತ್ರವನ್ನು ಅಣ್ಣಾವ್ರು ಬಹಳ ಸೊಗಸಾಗಿ ನಿಭಾಯಿಸುತ್ತಿದ್ದರು. ಹೆಂಡ ಇಳಿಸುವವನು ಬಸವಣ್ಣನ ಪಾತ್ರ ಮಾಡೋದು ಬೇಡ ಎಂದು ಕೆಲವರು ಚಕಾರ ಎತ್ತಿದ್ದರಂತೆ. ಪಾರ್ವತಮ್ಮ ಅವರ ತಂದೆ ಅಪ್ಪಾಜಿ ಗೌಡ ಅವರಿಗೆ ಅಳಿಯನ 'ಬಸವಣ್ಣ' ನಾಟಕ ಬಹಳ ಇಷ್ಟವಾಗಿತ್ತು.

ಅಪ್ಪಾಜಿ ಗೌಡರು ಪಾರ್ವತಮ್ಮ ಬಳಿಕ ರಾಜ್‌ಕುಮಾರ್‌ನ ಬಸವಣ್ಣ ಚಿತ್ರದಲ್ಲಿ ನೋಡುವ ಆಸೆ ಇದೆ ಎಂದು ಹೇಳಿದ್ದರಂತೆ. ಹಾಗಾಗಿ ಪಾರ್ವತಮ್ಮ ಕೂಡ ಈ ಚಿತ್ರ ಮಾಡಲು ಬಹಳ ಪ್ರಯತ್ನಿಸಿದ್ದರು. 'ಮಾತೆ ಮಹಾದೇವಿ' ಚಿತ್ರದಲ್ಲಿ ಬಸವಣ್ಣನ ಪಾತ್ರ ಮಾಡು ಅಣ್ಣಾವ್ರನ್ನು ಕೇಳಿದ್ದರು. ಆದರೆ ಅವರಿಗೆ ಚಿತ್ರಕಥೆ ಇಷ್ಟವಾಗದೇ ಬೇಡ ಎಂದುಬಿಟ್ಟಿದ್ದರು. ಬಳಿಕ ಅಶ್ವಥ್ ಆ ಪಾತ್ರ ಮಾಡುವಂತಾಯಿತು.

ಅಕ್ಕ ಮಹಾದೇವಿ ಚಿತ್ರದಲ್ಲಿ ಬಸವಣ್ಣನಾಗಿ ರಾಜ್‌ಕುಮಾರ್ ನಟಿಸುವ ಚರ್ಚೆ ನಡೆದಿತ್ತು. ಚಿಕ್ಕ ಪಾತ್ರ ಎಂದು ಅಣ್ಣಾವ್ರು ಹೇಳಿದ್ದರಂತೆ. ಬಳಿಕ ಅಕ್ಕಮಹಾದೇವಿ ಗಂಡ ಪ್ರಭುದೇವ ಹಾಗೂ ಬಸವಣ್ಣ ಹೀಗೆ ದ್ವಿಪಾತ್ರದಲ್ಲಿ ಅಣ್ಣಾವ್ರನ್ನು ತೋರಿಸಲು ಪ್ರಯತ್ನ ನಡೀಯಿತು. ಸಿನಿಮಾ ಶುರುವಾಗುವ ವೇಳೆಗೆ ಬೇರೆ ಯಾರೋ ಬಂದ ನಾವು ಇದೇ ಸಿನಿಮಾ ಮಾಡುತ್ತಿದ್ದೇವೆ, ದಯವಿಟ್ಟು ಸಿನಿಮಾ ಮಾಡಬೇಡಿ ಎಂದು ಅಣ್ಣಾವ್ರ ಬಳಿಕ ಮನವಿ ಮಾಡಿಕೊಂಡಿದ್ದರು. ಹಾಗಾಗಿ ಮುತ್ತುರಾಜ್ ಬಸವಣ್ಣ ಪಾತ್ರದಲ್ಲಿ ಸಿನಿಮಾದಲ್ಲಿ ನಟಿಸೋ ಅವಕಾಶ ಸಿಗಲೇಯಿಲ್ಲ.

ಅಣ್ಣಾವ್ರು ಇಷ್ಟದ ಪಾತ್ರಗಳು

ಶ್ರೀರಾಮನಾಗಿ ಸಿನಿಮಾದಲ್ಲಿ ನಟಿಸಬೇಕು ಎನ್ನುವುದು ರಾಜ್‌ಕುಮಾರ್ ಅವರ ಮಹದಾಸೆ ಆಗಿತ್ತು. ಸಂಪೂರ್ಣ ರಾಮಾಯಣ ಸಿನಿಮಾ ಮಾಡಲು ಎರಡೆರಡು ಬಾರಿ ಪ್ರಯತ್ನ ನಡೆದಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಬಳಿಕ 'ಲವ-ಕುಶ' ಸಿನಿಮಾದಲ್ಲಿ ನಿರ್ಮಿಸುವ ಪ್ರಯತ್ನಗಳು ನಡೀತು. ಒಮ್ಮೆ ಮುಹೂರ್ತ ಮಾಡಿ 3 ದಿನಗಳ ಕಾಲ ಚಿತ್ರೀಕರಣ ಕೂಡ ಮಾಡಲಾಗಿತ್ತು.

ರಾಮನಾಗಿ ಅಣ್ಣಾವ್ರು, ಲಕ್ಷ್ಮಣನಾಗಿ ರಾಮಕೃಷ್ಣ, ಸೀತೆಯಾಗಿ ಜಯಪ್ರದ ನಟಿಸಬೇಕಿದ್ದ ಸಿನಿಮಾ ಅದು. ತೆಲುಗಿನ ನಟ, ನಿರ್ಮಾಪಕರ ಘಟ್ಟಮನೇನಿ ಕೃಷ್ಣ ಚಿತ್ರಕ್ಕೆ ಹಣ ಹೂಡಲು ಮುಂದೆ ಬಂದಿದ್ದರು. 3 ದಿನಗಳ ಕಾಲ ಚಿತ್ರೀಕರಣ ಕೂಡ ನಡೆದಿತ್ತು. ಆದರೆ ಕೆಲ ಭಿನ್ನಾಭಿಪ್ರಾಯಗಳಿಂದ ಸಿನಿಮಾ ನಿಂತು ಹೋಗಿತ್ತು. ಚಿತ್ರದಲ್ಲಿ 'ಲವ- ಕುಶ'ರ ಪಾತ್ರಗಳಲ್ಲಿ ಪುನೀತ್ ರಾಜ್‌ಕುಮಾರ್ ಹಾಗೂ ನಟ ಶ್ರೀನಾಥ್ ಪುತ್ರ ರೋಹಿತ್ ನಟಸುತ್ತಾರೆ ಎನ್ನಲಾಗಿತ್ತು.

ಶ್ರೀರಾಮ ಜನನ

ಎರಡೆರಡು ಬಾರಿ 'ಶ್ರೀರಾಮ ಜನನ' ಸಿನಿಮಾ ಘೋಷಣೆ ಮಾಡಿ ಪತ್ರಿಕೆಗಳಲ್ಲಿ ಸುದ್ದಿ ಬಂದಿತ್ತು. ಒಮ್ಮೆ ಶ್ರೀರಾಮನಾಗಿ ಅಣ್ಣಾವ್ರು, ಸೀತೆಯಾಗಿ ಜಮುನಾ ನಟಿಸುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಮತ್ತೊಮ್ಮೆ ಸುದ್ದಿ ಬಂದಾಗ 'ಶ್ರವಣಕುಮಾರ'ನ ಪಾತ್ರದಲ್ಲಿ ಅಣ್ಣಾವ್ರು, ಉಪೇಂದ್ರ ಕುಮಾರ್ ಸಂಗೀತ ಸಂಗೀತ ನಿರ್ದೇಶನ ಮಾಡಬೇಕಿತ್ತು.

ಪತ್ತೇಧಾರಿ ಸಿನಿಮಾ

ಖ್ಯಾತ ನಟಿ ಸೌಂದರ್ಯ ಅವರ ತಂದೆ ಸತ್ಯನಾರಾಯಣ ಅಣ್ಣಾವ್ರ ಕಾಲ್‌ಶೀಟ್ ಪಡೆದು ಸಿನಿಮಾ ಮಾಡಲು ಮುಂದಾಗಿದ್ದರು. ಒಂದು ಪತ್ತೇಧಾರಿನ ಕಥೆ ಸಿದ್ಧವಾಗಿತ್ತು. ಕನ್ನಡದ ಮೊದಲ ಪತ್ತೇಧಾರಿ ಸಿನಿಮಾ ಎಂದೇ ಅದನ್ನು ಹೇಳಲಾಗಿತ್ತು. ಆದರೆ ಕಾಲ್‌ಶೀಟ್ ಪಡೆದು ಸರಿಯಾದ ಸಿದ್ಧತೆ ಮಾಡಿಕೊಳ್ಳದ ಕಾರಣ ಆ ಚಿತ್ರ ಕೂಡ ಅಂದುಕೊಂಡ ಸಮಯದಲ್ಲಿ ಶುರುವಾಗದೇ ನಿಂತು ಹೋಗಿತ್ತು.

ನಮ್ಮ ಗುರು

ರಾಶಿ ಸಹೋದರರು ನಿರ್ಮಾಣ ಮಾಡಬೇಕಿದ್ದ ಸಿನಿಮಾ 'ನಮ್ಮ ಗುರು'. ರಾಜ್‌ಕುಮಾರ್ ಹಾಗೂ ಭಾರತಿ ವಿಷ್ಣುವರ್ಧನ್ ಚಿತ್ರದಲ್ಲಿ ನಟಿಸಬೇಕಿತ್ತು. 'ಶ್ರೀಮಾನ್ ರಾಜ್‌ಕುಮಾರ್', 'ಭಕ್ತ ಧ್ರುವ' ಚಿತ್ರಗಳಲ್ಲಿ ಕೂಡ ಅಣ್ಣಾವ್ರ ನಟಿಸೋ ಬಗ್ಗೆ ಚ್ಚೆ ನಡೆದಿತ್ತು. ಆದರೆ ಸಾಧ್ಯವಾಗಲಿಲ್ಲ. ಹೀಗೆ ಸಾಕಷ್ಟು ಸಿನಿಮಾಗಳ ನಿಂತುಹೋಗಿತ್ತು.

More from Filmibeat

English summary
These films of Dr Rajkumar were never launch, 5 of these films supposed to produce Parvathamma Rajkumar;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X