ಕಿರುತೆರೆಯಿಂದ ಆರಂಭಿಸಿದ ಪ್ರಮೋದ್ ಜರ್ನಿ 'ಸಲಾರ್'ವರೆಗೂ ಬಂದಿದ್ದೇಗೆ?

By ಅನಿತಾ ಬನಾರಿ

ಪ್ಯಾನ್ ಇಂಡಿಯಾ ಸಿನಿಮಾ ಆಗಿ ಸದ್ದು ಮಾಡಿರುವ 'ಸಲಾರ್; ಸೀಸ್‌ಫೈರ್‌ನಲ್ಲಿ ಅಭಿನಯಿಸಿ ಜನ ಮೆಚ್ಚುಗೆ ಪಡೆದಿರುವ ನಟ ಪ್ರಮೋದ್. ಇವರ ಪಾತ್ರ 'ಸಲಾರ್ ಪಾರ್ಟ್ 2'ನಲ್ಲಿಯೂ ನಟಿಸಲಿದ್ದಾರೆ.

ದಶಕದಿಂದಲೂ ಬೇರೆ ಬೇರೆ ಪಾತ್ರಗಳ ಮೂಲಕ ಜನರ ಮನಸ್ಸಿನಲ್ಲಿ ತಮ್ಮದೇ ಆದ ಸ್ಥಾನಗಿಟ್ಟಿಸಿಕೊಂಡಿರುವ ನಟ ಪ್ರಮೋದ್ ಹಲವಾರು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ಸ್ಟಾರ್ ಸುವರ್ಣ ವಾಹಿನಿಯ 'ಲಕುಮಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಪ್ರಮೋದ್ ಮುಂದೆ 'ಚುಕ್ಕಿ', 'ಪುನರ್ ವಿವಾಹ', 'ಮಹಾದೇವಿ' ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು.

Actor Pramod cinema journey serial to salaar

ಮುಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸಂಜು ಮತ್ತು ನಾನು' ವೆಬ್ ಸಿರೀಸ್‌ನಲ್ಲಿ ಬಣ್ಣ ಹಚ್ಚಿದ ಪ್ರಮೋದ್ 'ಗೀತಾ ಬ್ಯಾಂಗಲ್ ಸ್ಟೋರಿ' ಸಿನಿಮಾದ ಮೂಲಕ ಸಿನಿಮಾಗೆ ಪಾದಾರ್ಪಣೆ ಮಾಡಿದರು. ನಂತರ 'ಪ್ರೀಮಿಯರ್ ಪದ್ಮಿನಿ' ಸಿನಿಮಾದಲ್ಲಿ ಡ್ರೈವರ್ ನಂಜುಂಡಿಯಾಗಿ ನಟಿಸಿದ್ದು, ಸಿನಿಮಾ ಪ್ರಿಯರನ್ನು ರಂಜಿಸಿದ್ದರು. 'ಮತ್ತೆ ಉದ್ಭವ', 'ರತ್ನನ್ ಪ್ರಪಂಚ', 'ಬಾಂಡ್ ರವಿ' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. 'ಸಲಾರ್ ಪಾರ್ಟ್ 1'ರಲ್ಲಿ ಅಭಿನಯಿಸಿ ಸಿನಿಮಾ ಪ್ರಿಯರನ್ನು ರಂಜಿಸಿರುವ ಪ್ರಮೋದ್ 'ಇಂಗ್ಲೀಷ್ ಮಂಜ' ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ.

ಸದ್ಯಕ್ಕೆ 'ಸಲಾರ್ 2'ನಲ್ಲಿ ತಮ್ಮ ಅಭಿನಯದ ಬಗ್ಗೆ ನಟ ಪ್ರಮೋದ್ ಫೋಕಸ್ ಮಾಡಿದ್ದಾರೆ. ಈ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ಪ್ರಮೋದ್ "ಹಲವಾರು ವರ್ಷಗಳಿಂದ ನಾನು ನಟನ ಜರ್ನಿಯಲ್ಲಿ ಇದ್ದೇನೆ. ಪ್ರತಿ ವರ್ಷ ಹೊಸ ಹೊಸ ಆಯಾಮಗಳನ್ನು ತಿಳಿದುಕೊಳ್ಳುತ್ತಾ ಒಬ್ಬ ಕಲಾವಿದನಾಗಿ ಬೆಳೆಯುತ್ತಿದ್ದೇನೆ" ಎಂದು ಹೇಳಿದ್ದಾರೆ.

ಇದರ ಜೊತೆಗೆ "ಮೊದ ಮೊದಲು ಸರಿಯಾದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ನಾನು ಸೋಲುತ್ತಿದ್ದೆ. ಆದರೆ, ಈಗಷ್ಟೇ ಆ ವಿಚಾರದಲ್ಲಿ ಅರಿವು ಮೂಡಿಸಿಕೊಳ್ಳುತ್ತಿದ್ದೇನೆ. ಕಥೆ ಹಾಗೂ ನಿರ್ದೇಶನ ಎರಡೂ ಚೆನ್ನಾಗಿದ್ದರೆ ಮಾತ್ರ ನಮ್ಮ ಪಾತ್ರಗಳು ಪ್ರೇಕ್ಷಕರನ್ನು ತಲುಪುವುದು. ಈ ವಿಚಾರದಲ್ಲಿ ಒಬ್ಬ ನಟನಾಗಿ ನಾವು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು" ಪ್ರಮೋದ್ ಎಂದಿದ್ದಾರೆ.

Actor Pramod cinema journey serial to salaar

'ಸಲಾರ್ 2'ನಲ್ಲಿ ತಮ್ಮ ಪಾತ್ರದ ಬಗ್ಗೆಯೂ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಪ್ರಮೋದ್ ಮಾತನಾಡಿದ್ದಾರೆ. "ನಿರ್ದೇಶಕ ರಮೇಶ್ ಇಂದಿರಾ ಅವರ ನಿರ್ದೇಶನದಲ್ಲೇ 'ಸಲಾರ್ 2' ನಡೆಯಲಿದೆ. ಈ ಟೀಮ್ ನನಗೆ ಮೊದಲಿನಿಂದಲೂ ಪರಿಚಯ. ಅಷ್ಟೇ ಅಲ್ಲದೆ ನಿರ್ದೇಶಕಿ ನಟಿ ಶ್ರುತಿ ನಾಯ್ಡು ಅವರೊಂದಿಗೆ ನಾನು ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ನಮ್ಮ ವೇವ್ ಲೆಂತ್ ಚೆನ್ನಾಗಿ ಮ್ಯಾಚ್ ಆಗುತ್ತದೆ." ಎಂದಿದ್ದಾರೆ.

"ಇನ್ನು 'ಸಲಾರ್ 2'ನಲ್ಲಿ ನನ್ನ ಪಾತ್ರಕ್ಕೆ ಒಳ್ಳೆಯ ಪ್ರಾಮುಖ್ಯತೆ ಇದೆ. ಒಳ್ಳೆಯ ಪ್ರಾಮುಖ್ಯತೆ ದೊರೆಯುವಂತಹ ಪಾತ್ರಗಳಿಗೆ ನನ್ನ ಆದ್ಯತೆ. ಇದೇ ರೀತಿ ಸರಿಯಾದ ಸ್ಕ್ರಿಪ್ಟ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನನ್ನನ್ನು ನಾನು ಒಬ್ಬ ಯಶಸ್ವಿ ನಟನಾಗಿ ನೋಡಲು ಇಷ್ಟಪಡುತ್ತೇನೆ" ನಟ ಪ್ರಮೋದ್ ಎಂದಿದ್ದಾರೆ.

More from Filmibeat

English summary
Kannada Actor Pramod says that my first preference is for important roles
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X