ಸೀರೆ ಉಟ್ಟು ಮುಂಬೈನಲ್ಲಿ 13 ಲಕ್ಷದ ಸ್ಟೈಲಿಶ್ ಬೈಕ್ ಏರಿ ಕನ್ನಡ ನಟಿಯ ಜಬರ್ದಸ್ತ್ ಸವಾರಿ

ಬಣ್ಣದಲೋಕಕ್ಕೆ ಬೈ ಹೇಳಿ ನಟಿ ಡೈಸಿ ಬೋಪಣ್ಣ ಮುಂಬೈನಲ್ಲಿ ಸೆಟ್ಲ್ ಆಗಿದ್ದಾರೆ. ಮದುವೆಯ ನಂತರವೂ ಕೊಡಗಿನ ಚೆಲುವೆ ಚಾರ್ಮ್ ಕಮ್ಮಿ ಆಗಿಲ್ಲ. ಇವತ್ತಿಗೂ ಬಳಕುವ ಬಳ್ಳಿಯಂತೆ ಮಿಂಚುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಚೆಲುವೆ ಅಭಿಮಾನಿಗಳ ಮನ ಗೆಲ್ಲುತ್ತಿರುತ್ತಾರೆ.

ಕೊಡಗಿನ ಬೆಡಗಿ ಡೈಸಿ ಬೋಪಣ್ಣ ತಮಿಳಿನ 'ಇಂದ್ರು ಮುಧಲ್' ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. ಬಳಿಕ 'ರಂಗ ಎಸ್‌ಎಸ್‌ಎಲ್‌ಸಿ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದರು. ಬಳಿಕ ತೆಲುಗು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ಮಿಂಚಿದರು. ಕನ್ನಡದಲ್ಲಿ ಸುದೀಪ್, ದರ್ಶನ್, ಉಪೇಂದ್ರ, ಗಣೇಶ್, ಶಿವರಾಜ್‌ಕುಮಾರ್ ಸಿನಿಮಾಗಳಲ್ಲಿ ಕಾಣಿಸಿಕೊಂಡು ಕಮಾಲ್ ಮಾಡಿದರು. ಕನ್ನಡ ಬಳಿಕ ಡೈಸಿ ಬಾಲಿವುಡ್ ಪ್ರವೇಶಿಸಿದರು.

Kannada Actress bike ride wearing Maharashtrian nauvari saree

'ಬಿಂಬ', 'ಭಗವಾನ್', 'ರಾಮಾ ಶಾಮ ಭಾಮ', 'ಜಾಕ್‌ಪಾಟ್', 'ಐಶ್ವರ್ಯ', 'ತವರಿನ ಸಿರಿ', 'ಸತ್ಯವಾನ್ ಸಾವಿತ್ರಿ', 'ಗಾಳಿಪಟ' ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. 'ರಾಮಾ ಶಾಮ ಭಾಮ' ಚಿತ್ರದ ಪ್ರಿಯಾ ಹಾಗೂ 'ಗಾಳಿಪಟ' ಚಿತ್ರದ ಸೌಮ್ಯ ಪಾತ್ರಗಳು ಕನ್ನಡ ಸಿನಿರಸಿಕರ ನೆನಪಿನಲ್ಲಿ ಉಳಿದಿದೆ.

ಅಮಿತ್ ಜಾಜು ಎಂಬುವವರ ಕೈ ಹಿಡಿದ ಡೈಸಿ ಸದ್ಯ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಕ್ರೇಜಿ ವೀಡಿಯೋಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಇತ್ತೀಚೆ ಡೈಸಿ ಡುಕಾಟಿ ಬೈಕ್ ಖರೀಸಿದ್ದರು. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಸಹ ಮಾಡಿದ್ದರು. ಇದೀಗ ಸೀರೆ ಉಟ್ಟು ಸ್ನೇಹಿತೆ ಜೊತೆ ಆ ಬೈಕ್ ಏರಿ ಡೈಸಿ ಬೋಪಣ್ಣ ಸುತ್ತಾಡಿದ್ದಾರೆ.

ಮಹಿಳೆಯರು ಸೀರೆ ಉಟ್ಟು ಬೈಕ್ ಏರಿ ಸವಾರಿ ಮಾಡುವ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತದೆ. ಅದೇ ರೀತಿ ಡೈಸಿ ಕೆಂಪು ಬಣ್ಣದ ತಮ್ಮ ಹೊಸ ಡುಕಾಟಿ ಏರಿ ಸುತ್ತಾಡಿದ್ದಾರೆ. ಮರಾಠಿ ಮಹಿಳೆಯರು ಕಚ್ಚೆ ರೀತಿಯಲ್ಲಿ ಸೀರೆ ಉಡುತ್ತಾರೆ. "ಮರಾಠಿಯಾಗಿ ನಮ್ಮ ಮುಂಬೈನಲ್ಲಿ" ಎಂದು ಬರೆದು ಡೈಸಿ ವಿಡಿಯೋ ಶೇರ್ ಮಾಡಿದ್ದಾರೆ. ಸಾಕಷ್ಟು ಜನ ಕನ್ನಡಿಗರು ಈ ಪೋಸ್ಟ್ ಮೆಚ್ಚಿ ಕಾಮೆಂಟ್ ಮಾಡಿದ್ದಾರೆ. ಸದ್ಯ ವೀಡಿಯೋ ವೈರಲ್ ಆಗುತ್ತಿದೆ.

Kannada Actress bike ride wearing Maharashtrian nauvari saree

"ಇದು ಕರ್ನಾಟಕದ ಖದರ್ರು" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಒಹೋ ನಮ್ಮ ಕನ್ನಡತಿ ಖದರ್" ಎಂದು ಮತ್ತೊಬ್ಬರು ಬರೆದಿದ್ದರೆ "ಸಕ್ಕತ್ತಾಗಿ ಮೋಟಾರ್ ಬೈಕ್ ಡ್ರೈವ್ ಮಾಡಿದ್ರಿ" ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಡೈಸಿ ಕ್ರೇಜಿ ಬೈಕ್ ರೈಡ್ ವೀಡಿಯೋಗೆ 5 ಸಾವಿರಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ.

ಮುಂಬೈನಲ್ಲಿ ಹೆಲ್ಮೆಟ್ ಕಡ್ಡಾಯ ಇಲ್ವಾ? ಎಚ್ಚರ ಹೆಲ್ಮೆಟ್ ಧರಿಸಿ ಎಂದು ಮತ್ತೆ ಕೆಲವರು ಸಲಹೆ ನೀಡುತ್ತಿದ್ದಾರೆ. ಇನ್ನು ಕೆಲವರು ಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸಿ ಎಂದು ಮನವಿ ಮಾಡುತ್ತಿದ್ದಾರೆ. ವಾರದ ಹಿಂದೆ ಡುಕಾಟಿ ಬೈಕ್ ಖರೀದಿಸಿದ್ದ ಚೆಲುವೆ ವೀಡಿಯೋ ಹಂಚಿಕೊಂಡು "ಅಧಿಕೃತವಾಗಿ ಈಗ ನನ್ನ ಬೇಬಿ. ಅವಳಿಗೆ ಆನಂದಿ ಎಂದು ಹೆಸರಿಟ್ಟಿದ್ದೇನೆ. ಸ್ವರ್ಗಕ್ಕೆ ನನ್ನ ದಾರಿ.. ಅತ್ಯುತ್ತಮ ಬೈಕ್, ಕ್ರೇಜಿ ಸ್ಪೀಡ್, ಹೆಚ್ಚು ಆರಾಮದಾಯಕ" ಎಂದು ಬರೆದುಕೊಂಡಿದ್ದರು.

ಅಂದಹಾಗೆ ಡುಕಾಟಿ ಮಾನ್‌ಸ್ಟರ್ ಬೈಕ್ ಎಕ್ಸ್‌ ಶೋ ರೂಂ ದರ 8 ಲಕ್ಷದಿಂದ ಆರಂಭವಾಗುತ್ತದೆ. ಸಖತ್ ಸ್ಟೈಲಿಶ್ ಆಗಿರುವ ಬೈಕ್ ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿದೆ. ಡೈಸಿ ಕೊಂಡುಕೊಂಡಿರುವ ಬೈಕ್ ಬೆಲೆ 13 ಲಕ್ಷ ರೂ. ಎನ್ನುವ ಅಂದಾಜಿದೆ.

More from Filmibeat

English summary
Sandalwood actress Takes her friend On A Bike Ride In mumbai;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X