Megha Shetty: ಲಂಗ ದಾವಣಿ ಲುಕ್ ಹಂಚಿಕೊಂಡ ಮೇಘಾ ಶೆಟ್ಟಿ: ಬಿಗ್ ಬಾಸ್‌ಗೆ ಹೋಗ್ತಿರಾ ಎಂದ ಫ್ಯಾನ್ಸ್!

ಕನ್ನಡದ ನಟಿ ಮೇಘಾ ಶೆಟ್ಟಿ ಸೌಂದರ್ಯದ ಪ್ರತಿರೂಪ ಎಂದರೆ ತಪ್ಪಾಗಲ್ಲ ಬಿಡಿ. ತನ್ನ ಅಭಿಮಾನಿಗಳನ್ನು ಎಲ್ಲಾ ದಿನಗಳಲ್ಲು ಹಿಡಿದಿಟ್ಟುಕೊಳ್ಳುವ ಕಲೆ ಅವರಿಗೆ ಕರಗತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅವರು ತನ್ನ ಅಭಿಮಾನಿಗಳಿಗೆ ತನ್ನ ಕೆಲಸಗಳ ಬಗ್ಗೆ ಒಂದಲ್ಲ ಒಂದು ರೀತಿ ಅಪ್‌ಡೇಟ್ ಸಿಗುವಂತೆ ಮಾಡುತ್ತಿರುತ್ತಾರೆ.

ಎಸ್... ಮೇಘಾ ಶೆಟ್ಟಿ ಭಾನುವಾರ (ಸೆಪ್ಟಂಬರ್ 10) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ, ಅವರು ಗುಲಾಬಿ ಮತ್ತು ಹಸಿರು ಬಣ್ಣದ ಲಂಗ - ದಾವಣಿಯನ್ನು ತೊಟ್ಟು ಥೇಟ್ ಹಳ್ಳಿ ಹುಡುಗಿಯಂತೆ ಫೋಸ್ ಕೊಟ್ಟಿದ್ದಾರೆ.

Kannada actress Megha Shetty shares photos, fans react

ಮಿನಿಮಲ್ ಮೇಕಪ್ ಲುಕ್‌ನಲ್ಲಿ ಸಕತ್ ಸಿಂಪಲ್ ಸುಂದರಿಯಾಗಿ ಮೇಘಾ ಶೆಟ್ಟಿ ಕಾಣಿಸುತ್ತಿದ್ದಾರೆ. ಮ್ಯಾಚಿಂಗ್ ಜುಮುಕಿ ಮತ್ತು ನಾಲ್ಕಾರು ಮ್ಯಾಚಿಂಗ್ ಬಳೆಗಳನ್ನು ಧರಿಸಿರುವ ಅವರು ಪಾರ್ಕ್ ಒಂದರಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಪುಟ್ಟ ಹಣೆಯ ಬೊಟ್ಟು, ಕಾಡಿಗೆ, ಮಸ್ಕಾರ ಮತ್ತು ನ್ಯೂಡ್ ಶೇಡ್ ಲಿಪ್‌ಸ್ಟಿಕ್‌ ಧರಿಸಿದ್ದಾರೆ.

ಈ ಫೋಟೋಗಳನ್ನು ಹಂಚಿಕೊಂಡಿರುವ ಅವರು ಕೇವಲ ಒಂದು ರೆಡ್ ಹಾರ್ಟ್ ಹಾಕಿ ಬೇರೆನೂ ಶೀರ್ಷಿಕೆ ನೀಡದೆ ಅಭಿಮಾನಿಗಳಿಗಾಗಿ ಕಾಮೆಂಟ್ ಬಾಕ್ಸ್ ಒಪನ್ ಇಟ್ಟಿದ್ದಾರೆ. ಮೇಘಾ ಶೆಟ್ಟಿ ಲುಕ್‌ಗೆ ಅಭಿಮಾನಿಗಳು ಪ್ರೀತಿಯ ಮಳೆ ಸುರಿಸಿದ್ದು, ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಮೇಘಾ ಶೆಟ್ಟಿ ಸಾಂಪ್ರದಾಯಿಕ ಉಡುಪಿರಲಿ ಅಥವಾ ಪಾಶ್ಚಾತ್ಯ ಶೈಲಿಯ ಉಡುಪಿರಲಿ ಎಂದಿಗೂ ಅಭಿಮಾನಿಗಳಿಗೆ ನಿರಾಸೆ ಮಾಡುವುದಿಲ್ಲ. ಯಾವುದೇ ಡ್ರೆಸ್ ಧರಿಸಿದರೂ ಕೂಟ ಅಪ್ಪಟ ಅಪ್ಸರೆಯಂತೆ ಕಾಣುತ್ತಾರೆ. ತಮ್ಮ ಕಣ್ಣಿನ ನೋಟದಿಂದಲೇ ಅಭಿಮಾನಿಗಳ ಹೃದಯಕ್ಕೆ ಪ್ರವೇಶಿಸುತ್ತಾರೆ.

ಫೋಟೋಗಳಿಗೆ ಕಾಮೆಂಟ್ ಹೀಗಿವೆ. 'ಪೇಟೆ ಹುಡುಗಿ ಹಳ್ಳಿ ಲೈಫ್', 'ಬಂಗಾರದ ಗೊಂಬೆಯು ನೀನು, ಏನೆಂದು ಹೊಗಳಲಿ ನಾನು, ಮುದ್ದಾದ ನಿಮ್ಮ ಕಿರುನಗೆ, ಉಸಿರಾಡಲು ಕಾರಣವು ಸಾಕೆನಗೆ', ದಂತದ ಗೊಂಬೆ, ಕಳದೋಯಿತು ....ನನ್ನ ಮನಸಿಗಾ....', 'ನಾಲ್ಕನೇ ಫೋಟೋ ಸೂಪರ್ ಆಗಿದೆ', 'ಜೊತೆ ಜೊತೆಯಲಿ ಕನ್ನಡ ಧಾರಾವಾಹಿಯ ನಟನೆ ಸುಂದರ. ನಾನು ನಿಮ್ಮ ದೊಡ್ಡ ಅಭಿಮಾನಿ. ನನ್ನ ಹೃದಯದಾಳದಿಂದ ನಾನು ನಿಮ್ಮನ್ನು ಪ್ರೀತಿಸುತ್ತೇನೆ' ಎಂದು ಕಾಮೆಂಟ್‌ಗಳು ಬಂದಿವೆ.

Kannada actress Megha Shetty shares photos, fans react

ಬಿಗ್ ಬಾಸ್ ಹೋಗ್ತೀರಾ...?

ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಇನ್ನೇನು ಆರಂಭವಾಗಲಿದೆ. ಈ ಬಾರಿ ಸ್ಪರ್ಧಿಗಳು ಯಾರಾಗಲಿದ್ದಾರೆ ಎಂಬ ಬಗ್ಗೆ ಈಗಾಗಲೇ ಹಲವು ವದಂತಿಗಳು ಹಬ್ಬಿವೆ. ಅದರಲ್ಲಿ ನಟಿ ಮೇಘಾ ಶೆಟ್ಟಿ ಹೆಸರು ಕೂಡ ಕೇಳಿ ಬರುತ್ತಿದೆ. ಜೀ ಕನ್ನಡದ ಜೊತೆ ಜೊತೆಯಲಿ ಧಾರವಾಹಿಯಿಂದ ಖ್ಯಾತಿ ಪಡೆದ ಅವರು ಈ ಬಾರಿ ಬಿಗ್‌ಬಾಸ್ ಸೀಸನ್ ಹತ್ತಕ್ಕೆ ಹೋಗಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಫ್ಯಾನ್ಸ್ ಕೂಡ ಕಾಮೆಂಟ್ ಮೂಲಕ ಪ್ರಶ್ನೆ ಮಾಡಿದ್ದಾರೆ.

ಮೇಘಾ ಶೆಟ್ಟಿ ತಮ್ಮ ಪ್ಯಾನ್ ಇಂಡಿಯಾ ಸಿನಿಮಾ 'ಆಪರೇಷನ್ ಲಂಡನ್ ಕೆಫೆ' ಮುಗಿಸಿದ್ದಾರೆ. ಸದ್ಯ ಬೇರೆ ಸಿನಿಮಾಗಳ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ. ಪ್ಯಾನ್ ಇಂಡಿಯಾ ಚಿತ್ರ ಆಪರೇಷನ್ ಲಂಡನ್ ಕೆಫೆ ಈ ವರ್ಷ ತೆರೆ ಕಾಣುತ್ತಿರುವ ಚಿತ್ರಗಳ ಪೈಕಿ ಅತೀ ಹೆಚ್ಚು ಕುತೂಹಲ ಮೂಡಿಸಿದೆ. ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ನಟಿಸಿರುವ ಸಿನಿಮಾವು ಕನ್ನಡ, ಮರಾಠಿ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಇದಾದ ನಂತರ ಮೇಘಾ ಶೆಟ್ಟಿ ಬೇರೆ ಭಾಷೆಗಳ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುವ ನಿರೀಕ್ಷಿಯಿದೆ.

More from Filmibeat

English summary
Kannada actress Megha Shetty shares photos, fans react.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X