ಲಕ್ಷ ರೂಪಾಯಿ ಬ್ಯಾಗ್ ಬಳಸುವ ಮೇಘನಾ ರಾಜ್; ಆ ಬ್ಯಾಗ್ ಈಗ ಸೋಲ್ಡ್ ಔಟ್!

By ಎಸ್ ಸುಮಂತ್

ನಟಿ ಮೇಘನಾ ರಾಜ್ ಸಿನಿಮಾಗಳ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರ್ತಾರೆ. ಅವರದ್ದೇ ಒಂದು ಯೂಟ್ಯೂಬ್ ಚಾನೆಲ್ ಅನ್ನು ಕೂಡ ಹೊಂದಿದ್ದಾರೆ.

ಆಕೆ ತನ್ನ ಚಾನಲ್‌ನಲ್ಲಿ ಹಾಕುವ ಒಂದೊಂದು ವಿಡಿಯೋ ಮಿಲಿಯನ್ ಗಟ್ಟಲೆ ಓಡುತ್ತದೆ. ಮೇಘನಾ ರಾಜ್ ಎಂದರೆ ಅಷ್ಟು ಕ್ರೇಜ್ ಇದೆ ಅಭಿಮಾನಿಗಳಿಗೆ. ಮೇಘನಾ ರಾಜ್ ಕೂಡ ತಮ್ಮದೇ ಆದ ಸ್ವಂತ ಕಂಟೆಂಟ್ ಅನ್ನ ಕ್ರಿಯೇಟ್ ಮಾಡ್ತಾರೆ ಹಾಗೇ ಅದು ವಿಭಿನ್ನವಾಗಿಯೂ ಇರುತ್ತೆ. ಅದರಲ್ಲೂ ಸಿಕ್ಕಾಪಟ್ಟೆ ರೀಚ್ ಆಗುವಂತ ಕಂಟೆಂಟ್ ಅಂದ್ರೆ ಅದು ರಾಯನ್ ಜೊತೆಗೆ.

Kannada Actress Meghana Raj shares her new Bag price

ರಾಯನ್ ತುಂಟಾಟವನ್ನ ಎಲ್ಲರೂ ನೋಡಿಯೇ ಇರ್ತೀರಿ. ಆ ತೊದಲು ಮಾತುಗಳಿಂದಾನೇ ಎಲ್ಲರನ್ನು ಸೆಳೆಯುತ್ತಾನೆ. ತನಗೆ ಇಷ್ಟ ಬಂದಂತೆ ಇರುತ್ತಾನೆ. ತರಲೆ ಮಾಡುತ್ತಾನೆ. ಇದರಿಂದಾನೇ ಮೇಘನಾ ರಾಜ್‌ಗೂ ಒಳ್ಳೆ ಮನರಂಜನೆ, ಸುಂದರ್ ರಾಜ್ - ಪ್ರಮೀಳಾ ಜೋಷಾಯ್‌ಗೂ ಖುಷಿ. ಮೇಘನಾ ರಾಜ್ ಮಾಡುವ ಪ್ರತಿ ಕಂಟೆಂಟ್‌ನಲ್ಲೂ ರಾಯನ್ ಇರ್ತಾನೆ.

ಅಮ್ಮ ಬಾ ಎನ್ನದೇ ಹೋದರೂ ಕ್ಯಾಮೆರಾ ಆನ್ ಆದರೆ ಸಾಕು ರಾಯನ್ ಮುಂದೆ ಹೋಗಿ ನಿಂತು ಬಿಡುತ್ತಾನೆ. ಮೇಘನಾ ರಾಜ್ ಕೊಡುವ ಕಂಟೆಂಟ್ ಅನ್ನೇ ರಾಯನ್ ಮರೆಸಿ ಬಿಡುತ್ತಾನೆ. ಆದರೆ ಅಮ್ಮ ಮಗನ ಕಾಂಪಿನೇಷನ್ ನೋಡುವುದಕ್ಕೇನೆ ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟ. ಈಗ ಸಮ್ಮರ್ ಹಾಲಿಡೇಸ್ ಇರುವ ಕಾರಣ ಮೇಘನಾ ರಾಜ್, ಮಗ ಹಾಗೂ ತಮ್ಮ ತಂದೆಯ ಜೊತೆಗೆ ಸಣ್ಣದೊಂದು ಪ್ರವಾಸಕ್ಕೆ ಹೋಗಿದ್ದಾರೆ. ಅದರ ವಿಡಿಯೋ ಕೂಡ ಅಪ್ಲೋಡ್ ಮಾಡಿದ್ದಾರೆ.

ಮೇಘನಾ ರಾಜ್ ಆಗಾಗ ತಮ್ಮ ಮನೆಯ ವಿಡಿಯೋ, ಬೆಡ್ ರೂಮ್ ಟೂರ್, ತಾವೂ ಬಳಸುವ ಡ್ರೆಸ್, ಬ್ಯಾಗ್, ಕಾಸ್ಮೆಟಿಕ್ ಹೀಗೆ ಎಲ್ಲವನ್ನು ತೋರಿಸಿದ್ದಾರೆ. ಆದರೆ ಅದರ ಬೆಲೆಯನ್ನ ಹೇಳಿಲ್ಲ. ಅದರಲ್ಲೂ ಹೊಸ ಮನೆಗೆ ಶಿಫ್ಟ್ ಆದಾಗ ಬಾಲ್ಕನಿ ಹಾಗೂ ಬೆಡ್ ರೂಮ್ ವಿಡಿಯೋ ಒಂದನ್ನ ಮಾಡಿದ್ದರು. ಅದಕ್ಕೆ ಸಾಕಷ್ಟು‌ಮಂದಿ ಫಿದಾ ಆಗಿದ್ದರು. ಅದನ್ನ ಅಲಂಕಾರ ಮಾಡಿದ್ದ ರೀತಿಗೆ ಖುಷಿ ಪಟ್ಟಿದ್ದರು. ಇದೀಗ ಅವರು ಶಾಪ್ ಮಾಡಿರುವ ಬ್ಯಾಗ್ ಒಂದು ನೋಡುಗರಿಗೆ ಇಷ್ಟವಾಗಿದೆ.

ಹೌದು, ಮೇಘನಾ ರಾಜ್ ಇತ್ತೀಚೆಗೆ ಬ್ಯಾಗ್ ಒಂದನ್ನ ಬುಕ್ ಮಾಡಿದ್ದು, ಅದರ ರಿವ್ಯೂ ಕೂಡ ನೀಡಿದ್ದಾರೆ. ಬ್ಯಾಗ್ ಒಳಗೆ ಎಷ್ಟೆಲ್ಲಾ ಸ್ಪೇಸ್ ಇದೆ ಎಂಬುದನ್ನು ತಿಳಿಸಿದ್ದಾರೆ. ಈ ಬ್ಯಾಗ್ ಪಾರ್ಟಿ, ಫಂಕ್ಷನ್‌ಗಳಿಗೆ ಒಳ್ಳೆ ಲುಕ್ ಕೊಡಲಿದೆ. ಇದರ ಬೆಲೆ ಬಂದು 75 ಸಾವಿರದಿಂದ ಒಂದು ಲಕ್ಷದವರೆಗೂ ಇದೆ. confidentialcounterofficial ಎಂಬ ವೆಬ್ಸೈಟ್ ಮೂಲಕ ಈ ಬ್ಯಾಗ್ ಬುಕ್ ಮಾಡಿದ್ದಾರೆ. ಹಾಗೇ givenchy ಬ್ರ್ಯಾಂಡ್ ನ ಬ್ಯಾಗ್ ಇದಾಗಿದೆ. ಈ ವೆಬ್ಸೈಟ್‌ಗೆ ವಿಸಿಟ್ ಕೊಟ್ಟು ನೋಡಿದರೆ ಅಲ್ಲಿರುವ ಬ್ಯಾಗ್‌ಗಳೆಲ್ಲಾ ಸಿಕ್ಕಾಪಟ್ಟೆ ಕಾಸ್ಟ್ಲೀ ಬ್ಯಾಗ್ ಆಗಿದ್ದಾವೆ.

ಸದ್ಯಕ್ಕೆ ಮೇಘನಾ ರಾಜ್ ಪ್ರಮೋಟ್ ಮಾಡಿರುವಂತ ಬ್ಯಾಗ್ ಸೋಲ್ಡ್ ಔಟ್ ಆಗಿದೆ. ಮೇಘನಾ ರಾಜ್ ಬಳಿ ಬ್ಯಾಗ್ ಕಲೆಕ್ಷನ್ಸ್ ಕೂಡ ಸಿಕ್ಕಾಪಟ್ಟೆ ಇದೆ. ಕೆಲವೊಂದು ಪ್ರೋಗ್ರಾಂಗಳಿಗೂ ಒಳ್ಳೊಳ್ಳೆ ಬ್ರ್ಯಾಂಡ್ ಬ್ಯಾಗ್‌ಗಳನ್ನೇ ಮೇಘನಾ ರಾಜ್ ಕ್ಯಾರಿ ಮಾಡ್ತಾರೆ. ಲೆದರ್ ಬ್ಯಾಗ್ ಕೂಡ ಮೇಘನಾ ರಾಜ್ ಒಮ್ಮೆ ತೋರಿಸಿದ್ದರು. ಅದರ ಬೆಲೆ ಗೂಗಲ್‌ನಲ್ಲಿ ಸರ್ಚ್ ಮಾಡಿದರೆ ಒಂದೂವರೆ ಲಕ್ಷ ರೂಪಾಯಿ‌ ತೋರಿಸುತ್ತಾ ಇದೆ. ಅಂದ್ರೆ ಮೇಘನಾ ರಾಜ್ ದುಬಾರಿ ಬ್ರ್ಯಾಂಡ್ ಬ್ಯಾಗ್‌ಗಳನ್ನ ಕ್ಯಾರಿ ಮಾಡ್ತಾರೆ. ಆ ಬ್ಯಾಗ್‌ಗಳು ಕೊಡುವ ಲುಕ್ ಕೂಡ ಅಷ್ಟೇ ಬ್ಯೂಟಿಫುಲ್ ಆಗಿರುತ್ತದೆ.

More from Filmibeat

English summary
Here is the details about Meghana Raj uses a bag worth lakhs;
Read more about: meghana raj sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X