"ಅಪ್ಪ ಹೋಟೆಲ್ ಬ್ಯುಸಿನೆಸ್, ಮಗಳು ಕುಣಿಯೋಕೆ ಹೋದ್ಲು ಅಂತಿದ್ರು"; ಶ್ವೇತಾ ಕನ್ನಡ ಸಂದರ್ಶನ

ಬೆಂಗಳೂರು ಬೆಡಗಿ ನಂದಿತಾ ಶ್ವೇತಾ ತಮಿಳು ಸಿನಿಮಾಗಳಲ್ಲಿ ಹೆಚ್ಚು ನಟಿಸಿ ಅಲ್ಲೇ ಜನಪ್ರಿಯತೆ ಗಳಿಸಿದರು. 'ನಂದಾ ನಂದಿತಾ' ಚಿತ್ರದಲ್ಲಿ ಮೊದಲಿಗೆ ನಾಯಕಿಯಾಗಿ ನಟಿಸಿದರು. ಚಿತ್ರದಲ್ಲಿ ಲೂಸ್ ಮಾದ ಯೋಗಿ ಜೋಡಿಯಾಗಿ ಗಮನ ಸೆಳೆದರು. ಬಳಿಕ ಕನ್ನಡ ಸಿನಿಮಾಗಳಲ್ಲಿ ನಟಿಸಲೇ ಇಲ್ಲ.

ಕಿರುತೆರೆಯಲ್ಲಿ ನಿರೂಪಕಿಯಾಗಿ ಗುರ್ತಿಸಿಕೊಂಡಿದ್ದ ಶ್ವೇತಾ 'ನಂದಾ ಲವ್ಸ್ ನಂದಿತಾ' ಚಿತ್ರಕ್ಕೆ ಆಯ್ಕೆ ಆಗಿದ್ದರು. ಆ ಸಿನಿಮಾ ಬಳಿಕ ಮತ್ತೆ ವಿದ್ಯಾಭ್ಯಾಸ ಮುಂದುವರೆಸಿದ್ದರು. ಆ ಬಳಿಕ ತಮಿಳು ಸಿನಿಮಾಗಳ ಅವಕಾಶ ಸಿಕ್ಕಿತ್ತು. ಸಾಲು ಸಾಲು ತಮಿಳು ಸಿನಿಮಾಗಳಲ್ಲಿ ನಟಿಸಿ ಕಾಲಿವುಡ್‌ನಲ್ಲೇ ನೆಲೆ ನಿಂತರು. ಇದೇ ಮೊದಲ ಬಾರಿಗೆ ಕನ್ನಡ ಸಂದರ್ಶನವೊಂದರಲ್ಲಿ ಶ್ವೇತಾ ಮಾತನಾಡಿದ್ದಾರೆ. ಸಿನಿಎಂಟ್ರಿ, ಆರೋಗ್ಯ ಸಮಸ್ಯೆ ಸೇರಿದಂತೆ ಹಲವು ವಿಚಾರ ಹಂಚಿಕೊಂಡಿದ್ದಾರೆ.

Kannada actress Nandita Swetha suffering from Auto immune fibromyalgia

'ಡೀ ಟಾಕ್ಸ್' ಯೂಟ್ಯೂಬ್ ಪಾಡ್‌ಕಾಸ್ಟ್‌ನಲ್ಲಿ ಜಿಂಕೆಮರಿ ಶ್ವೇತಾ ಮಾತನಾಡಿದ್ದಾರೆ. ಶಾಲಾ ದಿನಗಳಲ್ಲೇ ಕಿರುತೆರೆ ವಾಹಿನಿ ನಿರೂಪಕಿಯಾಗಿ ಕೆಲಸ ಮಾಡಲು ಆರಂಭಿಸಿದೆ. ಮೊದಲ ಒಂದೂವರೆ ವರ್ಷ ಯಾವುದೇ ಸಂಬಳ ಇಲ್ಲದೇ ಕೆಲಸ ಮಾಡಿದ್ದೆ. ಅದೇ ಸಮಯದಲ್ಲಿ 'ನಂದಾ ಲವ್ಸ್ ನಂದಿತಾ' ಸಿನಿಮಾ ಅವಕಾಶ ಸಿಕ್ಕಿತ್ತು. ತಂದೆಗೆ ಇಷ್ಟವಿರಲಿಲ್ಲ. ಹೇಗೋ ಒಪ್ಪಿಸಿ ನಟಿಸಿದೆ. ಸಿನಿಮಾ ಹಿಟ್ ಆಯಿತು. ಬಳಿಕ ಜನ ಜಿಂಕೆಮರಿ ಶ್ವೇತಾ ಎಂದ ಗುರ್ತಿಸಲು ಆರಂಭಿಸಿದರು.

ಮೊದಲ ಸಿನಿಮಾ ಬಳಿಕ ಯಾವುದೇ ಅವಕಾಶಗಳು ಸಿಗಲಿಲ್ಲ. ಮಧ್ಯಮವರ್ಗದ ಮನೆ ಹುಡುಗಿ ಚಿತ್ರರಂಗಕ್ಕೆ ಬರುವುದು ಅಷ್ಟು ಸುಲಭವಲ್ಲ. ಆ ಸಿನಿಮಾ ಬಳಿಕ ಅವಕಾಶಗಳು ಸಿಗಲಿಲ್ಲ. ಬಳಿಕ ನಾನು ಓದು ಮುಂದುವರೆಸಿದೆ. ಅಪ್ಪ ಲೈವ್‌ಬ್ಯಾಂಡ್ ಮ್ಯಾನೇಜರ್ ಆಗಿದ್ದರು. ಜನ ಏನಂತಾರೆ ಅಪ್ಪ ಹೋಟೆಲ್ ಬ್ಯುಸಿನೆಸ್, ಲವ್ ಮ್ಯಾರೇಜ್, ಮಗಳು ಕುಣಿಯೋಕೆ ಹೋದ್ಲು ಅಂದಿದ್ರು. ಅದಕ್ಕೆ ಅಪ್ಪ ಬೇಡ ಅಂದ್ರು.

'ನಂದಾ ಲವ್ಸ್ ನಂದಿತಾ' ಬಳಿಕ ಕಾಲೇಜು ಕಡೆ ಮುಖ ಮಾಡಿದ್ದೆ. ಅದೇ ಸಮಯದಲ್ಲಿ ತಮಿಳಿನ 'ಅತ್ತಕತ್ತಿ' ಸಿನಿಮಾ ಅವಕಾಶ ಸಿಕ್ತು. ಒಮ್ಮೆ ನೋಡಿದ ಕೂಡಲೇ ನಾನೇ ಚಿತ್ರಕ್ಕೆ ನಾಯಕಿ ಎಂದು ಚಿತ್ರತಂಡ ಒಪ್ಪಿಕೊಂಡಿತ್ತು. ಶುಕ್ರವಾರ ಚೆನ್ನೈಗೆ ಹೋದೆ. ಸೋಮವಾರವೇ ಚಿತ್ರೀಕರಣ ಆರಂಭವಾಯಿತು. ಆ ಸಿನಿಮಾ ಕೂಡ ಹಿಟ್ ಆಯಿತು. ಜನ ಆ ಚಿತ್ರದ ಪೂರ್ಣಿ ಪಾತ್ರದಿಂದ ಇವತ್ತಿಗೂ ಗುರ್ತಿಸುತ್ತಾರೆ ಎಂದು ಶ್ವೇತಾ ವಿವರಿಸಿದ್ದಾರೆ.

Kannada actress Nandita Swetha suffering from Auto immune fibromyalgia

"ನಾನು ಬಹಳ ಸಣ್ಣ ಇದ್ದೆ. ನಾನು ಕಳೆದ 4 ವರ್ಷಗಳಿಂದ ಆಟೋಇಮ್ಯೂನ್ ಫೈಬ್ರೊಮ್ಯಾಲ್ಗಿಯ ಎನ್ನುವ ಆಟೊ ಇಮ್ಯೂನ್ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಹಾಗಾಗಿ ಸ್ಟ್ರೆಸ್ ಆದಷ್ಟು ದೇಹದ ಸ್ನಾಯುಗಳು ಎಳೆಯಲು ಆರಂಭವಾಗುತ್ತದೆ. ನಿಧಾನವಾಗಿ ಆ ನೋವು ದೇಹವೆಲ್ಲಾ ಹರಡುತ್ತದೆ. ದೇಹದಲ್ಲಿ ಪ್ರತಿ ಕ್ಷಣ ಆ ನೋವು ಇರುತ್ತದೆ."

"ನನಗೆ 4 ವರ್ಷಗಳಲ್ಲಿ ದೇಹದ ಬಲಭಾಗ ನೋವಾಗುತ್ತದೆ. ಆಲೂಗಡ್ಡೆ, ಟಮೋಟೊ, ಪನ್ನೀರ್, ಹಾಲಿನ ಪದಾರ್ಥ ಯಾವುದು ತಿನ್ನಬಾರದು. ಕೆಲವೊಮ್ಮೆ ನಾನು ಯಾಕಾದರೂ ಬದುಕಿದ್ದೀನಿ ಎನಿಸಿಬಿಡುತ್ತದೆ. ಕೆಲವೊಮ್ಮೆ ಯಾವುದೇ ಕಾರಣ ಇಲ್ಲದೇ ದುಃಖ ಆಗುತ್ತದೆ. ನೋವಾಗುತ್ತದೆ. ಸಮಂತಾ ಮಾತನಾಡಿದ ಮೇಲೆ ಸಾಕಷ್ಟು ಜನ ಆ ಬಗ್ಗೆ ಮಾತನಾಡುತ್ತಿದ್ದಾರೆ. ಕೆಲವರು ಮಾತನಾಡಲು ಸಾಧ್ಯವಿಲ್ಲ"

"ಇಂತಹ ಸಮಸ್ಯೆಗಳ ಬಗ್ಗೆ ಹೇಳಲು ಸಾಧ್ಯವಿಲ್ಲ. ಹೇಳಿದರೆ ಇನ್ನುಮುಂದೆ ಸಿನಿಮಾಗಳಲ್ಲಿ ನಟಿಸಲ್ಲ ಎಂದು ಸುದ್ದಿ ಆಗಿಬಿಡುತ್ತದೆ. ಈ ಹಿಂದೆ ನಂದಿತಾ ಹಾಸಿಗೆ ಹಿಡಿದಿದ್ದಾರೆ ಎಂದು ಯಾರೋ ಸುದ್ದಿ ಮಾಡಿದ್ದು ನೋಡಿ ಬೇಸರವಾಗಿತ್ತು. ಇನ್ನು ಆರೋಗ್ಯ ಸಮಸ್ಯೆ ಕಾರಣಕ್ಕೆ ತಿನ್ನುವ ಮಾತ್ರೆಗಳಿಂದ ದೇಹದ ತೂಹ ಹೆಚ್ಚುತ್ತದೆ. ನನಗೆ ಅದು ಪರವಾಗಿಲ್ಲ. ಆದರೆ ಕೆಲವರು ಆ ಬಗ್ಗೆ ಗೊತ್ತಿಲ್ಲದೇ ಟ್ರೋಲ್ ಮಾಡುತ್ತಾರೆ. ಬಾಡಿ ಶೇಮಿಂಗ್ ಕಾಮೆಂಟ್ ಮಾಡುತ್ತಾರೆ" ಎಂದು ಶ್ವೇತಾ ತಿಳಿಸಿದ್ದಾರೆ.

More from Filmibeat

English summary
Nandita Swetha opens up about being body-shamed for being both fat and skinny in her life
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X