ಚಿಕ್ಕ ವಯಸ್ಸಿನಲ್ಲೇ ತಂದೆ ಕಳೆದುಕೊಂಡ ಸೋನಾಲ್ ಮಾಂಥೆರೋ; ಹೆಣ್ಣು ಮಕ್ಕಳದ್ದೇ ಕುಟುಂಬ ಗೆದ್ದು ನಿಂತಿದ್ದೇಗೆ?
ಸ್ಯಾಂಡಲ್‌ವುಡ್‌ನ ಇಬ್ಬರು ಪ್ರೇಮಿಗಳು ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಬ್ಲಾಕ್ ಬಸ್ಟರ್ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮಾಂಥೆರೋ ಇದೇ ಆಗಸ್ಟ್ 11ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದ ಜೋಡಿ ಮನೆಯವರ ಆಶೀರ್ವಾದ ಪಡೆದು ವಿವಾಹವಾಗಲು ನಿರ್ಧರಿದ್ದಾರೆ.
ಒಂದ್ಕಡೆ ತರುಣ್ ಸುಧೀರ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ನಿರ್ದೇಶಿಸಿದ 'ಕಾಟೇರ' ಸಿನಿಮಾ ಸ್ಯಾಂಡಲ್‌ವುಡ್ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಅದೇ ಇನ್ನೊಂದು ಕಡೆ ಸೋನಾಲ್ ಮಾಂಥೆರೋ ಕೂಡ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಸೋನಾಲ್ ಮಾಂಥೆರೋ ಹೆಚ್ಚಾಗಿ ಯಾವುದೇ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಸಿನಿಮಾ ಪ್ರಚಾರವಿದ್ದಾಗ ಕ್ಯಾಮರಾ ಮುಂದೆ ಪ್ರತ್ಯಕ್ಷ ಆಗುತ್ತಾರೆ ಈ ಕಾರಣಕ್ಕೆ ಸೋನಾಲ್ ಮಾಂಥೆರೋ ತಮ್ಮ ಕೌಟುಂಬಿಕ ಹಿನ್ನೆಲೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಎಲ್ಲೂ ಕೇಳಿ ಬಂದಿಲ್ಲ. ಈ ನಟಿ ತಂದೆ ಕೂಡ ಒಬ್ಬ ಒಳ್ಳೆಯ ಹಾಡುಗಾರ. ಇಬ್ಬರು ಅಕ್ಕಂದಿರು ಕೂಡ ನ್ಯಾಷನಲ್ ಲೆವೆಲ್ ಸಿಂಗರ್ ಅನ್ನೋದು ನಿಮಗೆ ಗೊತ್ತಿತ್ತೇ? ಇವರ ಕೌಟುಂಬಿಕ ಹಿನ್ನೆಲೆಯ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ.
ಸೋನಾಲ್ ಮಾಂಥೆರೋ ಮಂಗಳೂರು ಮೂಲದವರು. ಅಲ್ಲೇ ಬೆಳೆದು ಬಳಿಕ ಸಿನಿಮಾಗಾಗಿ ಬೆಂಗಳೂರಿಗೆ ಬಂದು ನೆಲೆಸುವುದಕ್ಕೆ ಶುರು ಮಾಡಿದ್ದರು. ಸೋನಾಲ್ ಮಾಂಥೆರೋ ಆಕಸ್ಮಿಕವಾಗಿ ಚಿತ್ರರಂಗಕ್ಕೆ ಬಂದವರಲ್ಲ. ಅವರ ಮನೆಯಲ್ಲಿರು ಸದಸ್ಯರಿಗೆ ಕಲೆಯ ಮೇಲೆ ಆಸಕ್ತಿ ಇತ್ತು. ತಂದೆ ಕೂಡ ಉತ್ತಮ ಗಾಯಕರಾಗಿದ್ದರು. ಆದರೆ, ದುರಾದೃಷ್ಟವಶಾತ್ ಸೋನಾಲ್ 3ನೇ ತರಗತಿ ಓದುತ್ತಿರುವಾಗಲೇ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು.
ಇಲ್ಲಿಂದ ಸೋನಾಲ್ ಮಾಂಥೆರೋ ಅವರದ್ದು ಹೆಣ್ಣು ಮಕ್ಕಳ ಕುಟುಂಬ ಆಗೋಯ್ತು. ಸೋನಾಲ್ ಮಾಂಥೆರೋಗೆ ಇಬ್ಬರು ಅಕ್ಕಂದಿರು ಇದ್ದಾರೆ. ಅವರಿಬ್ಬರೂ ಅವಳಿ ಜವಳಿ ಅಕ್ಕಂದಿರು. ತಂದೆ ಅಗಲಿದ ಬಳಿಕ ತಾಯಿಯೇ ಸಂಸಾರದ ಹೊರೆಯನ್ನು ಹೊತ್ತುಕೊಂಡಿದ್ದರು. ಹೀಗಾಗಿ ಮನೆಯಲ್ಲಿ ಮಹಿಳೆಯರದ್ದೇ ಪವರ್. ಅದರಲ್ಲೂ ಅಕ್ಕಂದಿರಿಬ್ಬರೂ ನ್ಯಾಷನಲ್ ಲೆವೆಲ್ ಸಿಂಗರ್ ಎಂದು ಸಂದರ್ಶನವೊಂದರಲ್ಲಿ ಸೋನಾಲ್ ಮಾಂಥೆರೋ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಸೋನಾಲ್ ಮಾಂಥೆರೋ ಒಬ್ಬರು ಅಕ್ಕ ದುಬೈನಲ್ಲಿ ನೆಲೆಸಿದ್ದಾರೆ. ಇನ್ನೊಂದು ಬೆಂಗಳೂರಿನಲ್ಲಿ ಇದ್ದಾರೆ. ಮಗಳು ಸ್ವತಂತ್ರವಾಗಿ ಬೆಳೆಯಬೇಕು ಅನ್ನೋದು ತಾಯಿ ಆಸೆಯಾಗಿತ್ತು. ಹೀಗಾಗಿ ಬೆಂಗಳೂರಿನಲ್ಲಿ ಮಗಳನ್ನು ಮನೆ ಮಾಡಿ ಬಿಟ್ಟು ಹೋಗಿದ್ದರು. ಒಬ್ಬಳೇ ಬದುಕುವುದನ್ನು ಕಲಿಯಬೇಕು ಅಂತ ಬಯಸಿದ್ದರು. ಆ ಕಾರಣಕ್ಕೆ ತಾನೇ ಎಲ್ಲವನ್ನೂ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ.
ಅಡುಗೆ, ಮನೆ ಕೆಲಸ ಎಲ್ಲವನ್ನೂ ಅವರೇ ಮಾಡಿಕೊಳ್ಳುತ್ತಾರೆಂತೆ. ಇನ್ನು ತರುಣ್ ಸುಧೀರ್ ಹಾಗೂ ಸೋನಾಲ್ ಮಾಂಥೆರೋ ವಿವಾಹದ ವಿಷಯಕ್ಕೆ ಬಂದರೆ, ಇನ್ನು ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅದಕ್ಕೆ ಬೇಕಾಗಿರೋ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.


Click it and Unblock the Notifications











