twitter
    For Quick Alerts
    ALLOW NOTIFICATIONS  
    For Daily Alerts

    2019ರಲ್ಲಿ ಕನ್ನಡ ಚಿತ್ರರಂಗದ ಬೆಳವಣಿಗೆ ಎಷ್ಟು ಗೊತ್ತೇ?: ಇಲ್ಲಿದೆ ಮಾಹಿತಿ

    |

    ಬಹುಶಃ 2020 ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಕರಾಳ ವರ್ಷ ಎನಿಸುವ ಸಾಧ್ಯತೆ ಇದೆ. ಇಡೀ ಜಗತ್ತೇ ಕೊರೊನಾ ವೈರಸ್ ಕಾರಣದಿಂದ ತತ್ತರಿಸಿರುವಾಗ ಮನರಂಜನಾ ಉದ್ಯಮ ಕೂಡ ನೆಲಕಚ್ಚಿರುವುದರಲ್ಲಿ ವಿಶೇಷವೇನಿಲ್ಲ. ಚಿತ್ರೋದ್ಯಮದ ಚಟುವಟಿಕೆಗಳು ಬಹುತೇಕ ಎರಡು ತಿಂಗಳಿನಿಂದ ಸ್ಥಗಿತಗೊಂಡಿವೆ. ಎಲ್ಲವೂ ಸಹಜ ಸ್ಥಿತಿಗೆ ಬರಲು ಇನ್ನೂ ಕೆಲವು ತಿಂಗಳುಗಳು ಬೇಕಾಗಬಹುದು.

    Recommended Video

    ಡಾ. ಅಂಬೇಡ್ಕರ್ ಬಗ್ಗೆ ನಟ ನೀನಾಸಂ ಸತೀಶ್ ಹೇಳಿದ್ದೇನು? | Neenasam Sathish | DR BR Ambedkar

    ಈ ವರ್ಷ ಬಿಡುಗಡೆಯಾಗಬೇಕಾದ ಅನೇಕ ಸಿನಿಮಾಗಳು ಮುಂದಕ್ಕೆ ಹೋಗುವ ಸಾಧ್ಯತೆ ಹೆಚ್ಚಿವೆ. ಈಗಲೇ ಬಿಡುಗಡೆಗೆ ಸಿದ್ಧವಾಗಿದ್ದ ನೂರಾರು ಸಿನಿಮಾಗಳಿವೆ. ಎಲ್ಲವೂ ಸರಿ ಹೋದರೆ ಏಕಾಏಕಿ ಸಿನಿಮಾಗಳು ನುಗ್ಗಾಟ ಆರಂಭಿಸಲಿವೆ. ಅಲ್ಲಿ ದೊಡ್ಡ ಸಿನಿಮಾಗಳ ಅಡಿ ಸಣ್ಣ ಬಜೆಟ್ ಹಾಗೂ ಹೊಸಬರ ಚಿತ್ರಗಳು ನೆಲಕಚ್ಚುವ ಅಪಾಯ ಹೆಚ್ಚಿದೆ. ಹೀಗಾಗಿ 2020 ಚಿತ್ರರಂಗದ ಪಾಲಿಗೆ ಕಹಿಯಾಗುವುದರಲ್ಲಿ ಸಂಶಯವಿಲ್ಲ. ಆದರೆ 2018ಕ್ಕೆ ಹೋಲಿಸಿದರೆ ಕನ್ನಡ ಚಿತ್ರರಂಗ 2019ರಲ್ಲಿ ಗಣನೀಯ ಬೆಳವಣಿಗೆ ಕಂಡಿದೆ. ಮುಂದೆ ಓದಿ...

    'ಪಾಪ್ ಕಾರ್ನ್ ಮಂಕಿ ಟೈಗರ್' 3 ದಿನದ ಕಲೆಕ್ಷನ್ ಎಷ್ಟು?'ಪಾಪ್ ಕಾರ್ನ್ ಮಂಕಿ ಟೈಗರ್' 3 ದಿನದ ಕಲೆಕ್ಷನ್ ಎಷ್ಟು?

    ಎಫ್‌ಐಸಿಸಿಐ ಮಾಹಿತಿ

    ಎಫ್‌ಐಸಿಸಿಐ ಮಾಹಿತಿ

    ಚಿತ್ರರಂಗದ ಎರಡು ವರ್ಷಗಳ ತುಲನಾತ್ಮಕ ಮಾಹಿತಿಗಳನ್ನು ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ (ಎಫ್‌ಐಸಿಸಿಐ) ನೀಡಿದೆ. ದೇಶದ ವಿವಿಧ ಪ್ರಮುಖ ಚಿತ್ರರಂಗಗಳಲ್ಲಿ ಬಿಡುಗಡೆಯಾದ ಸಿನಿಮಾಗಳು ಅವುಗಳಿಂದ ಬಂದ ಒಟ್ಟು ತಲಾದಾಯದ ವಿವರಗಳನ್ನು ನೀಡಿದೆ. ಇದರಲ್ಲಿ ಕನ್ನಡ ಚಿತ್ರರಂಗದ ಕುರಿತಾದ ಮಾಹಿತಿ ಇಲ್ಲಿದೆ.

    26 ಹೆಚ್ಚು ಸಿನಿಮಾಗಳು ತೆರೆಗೆ

    26 ಹೆಚ್ಚು ಸಿನಿಮಾಗಳು ತೆರೆಗೆ

    2018ರಲ್ಲಿ ಕನ್ನಡದಲ್ಲಿ ಒಟ್ಟು 197 ಚಲನಚಿತ್ರಗಳು ಬಿಡುಗಡೆಯಾಗಿದ್ದವು. 2019ರಲ್ಲಿ ಬಿಡುಗಡೆಯಾದ ಸಿನಿಮಾಗಳ ಸಂಖ್ಯೆ ಹೆಚ್ಚಳವಾಗಿದೆ. ಕಳೆದ ವರ್ಷ ಕನ್ನಡದಲ್ಲಿ 223 ಸಿನಿಮಾಗಳು ಬಿಡುಗಡೆಯಾಗಿವೆ. ಅಂದರೆ 2018ಕ್ಕೆ ಹೋಲಿಸಿದರೆ 26 ಹೆಚ್ಚು ಸಿನಿಮಾಗಳು ತೆರೆಕಂಡಿವೆ.

    ದೂರದ ಅಮೇರಿಕಾದಲ್ಲೂ ಮಹೇಶ್ ಬಾಬು ದಾಖಲೆ ಅಳಿಸಿ ಹಾಕಿದ ಅಲ್ಲು ಅರ್ಜುನ್.!ದೂರದ ಅಮೇರಿಕಾದಲ್ಲೂ ಮಹೇಶ್ ಬಾಬು ದಾಖಲೆ ಅಳಿಸಿ ಹಾಕಿದ ಅಲ್ಲು ಅರ್ಜುನ್.!

    ಚಿತ್ರೋದ್ಯಮದ ಬೆಳವಣಿಗೆ

    ಚಿತ್ರೋದ್ಯಮದ ಬೆಳವಣಿಗೆ

    ಕನ್ನಡ ಚಿತ್ರೋದ್ಯಮ 2019ರಲ್ಲಿ ಅಂದಾಜು ಶೇ 36ರಷ್ಟು ವರಮಾನ ಬೆಳವಣಿಗೆ ಕಂಡಿದೆ. ಇದು ಚಿತ್ರರಂಗದ ಪಾಲಿಗೆ ದೊಡ್ಡ ಪ್ರಗತಿ. ಕಳೆದ ವರ್ಷ ಕನ್ನಡ ಚಿತ್ರೋದ್ಯಮದ ಒಟ್ಟಾರೆ ಬಾಕ್ಸ್ ಆಫೀಸ್ ಕಲೆಕ್ಷನ್ (ಜಿಬಿಓಸಿ) 5.2 ಬಿಲಿಯನ್ ರೂಪಾಯಿ. 2018ರಲ್ಲಿ ಇದು 3.2 ಬಿಲಿಯನ್ ರೂಪಾಯಿ ಆಗಿತ್ತು.

    ಪ್ರಶಸ್ತಿಗಳ ಸುರಿಮಳೆ

    ಪ್ರಶಸ್ತಿಗಳ ಸುರಿಮಳೆ

    2019 ಕನ್ನಡ ಚಿತ್ರರಂಗವು ರಾಷ್ಟ್ರಮಟ್ಟದಲ್ಲಿ ಮತ್ತೆ ತನ್ನ ಹೆಗ್ಗುರುತು ಮೂಡಿಸಿದ ವರ್ಷ. ಏಕೆಂದರೆ ಒಂದಲ್ಲ, ಎರಡಲ್ಲ ಒಟ್ಟು 13 ರಾಷ್ಟ್ರಪ್ರಶಸ್ತಿಗಳನ್ನು ಕನ್ನಡ ಚಿತ್ರರಂಗ ಬಾಚಿಕೊಂಡಿತು. ಅತ್ಯುತ್ತಮ ಮಕ್ಕಳ ಚಿತ್ರ, ರಾಷ್ಟ್ರೀಯತೆ ಸಮಗ್ರತೆ ತೋರುವ ಅತ್ಯುತ್ತಮ ಚಿತ್ರ, ಉತ್ತಮ ಬಾಲನಟ, ಅತ್ಯುತ್ತಮ ಹಿನ್ನೆಲೆ ಗಾಯಕಿ, ಅತ್ಯುತ್ತಮ ಸಂಕಲನ, ಅತ್ಯುತ್ತಮ ಸಾಹಿತ್ಯ ಹೀಗೆ 13 ಪ್ರಶಸ್ತಿಗಳು ಬಂದವು.

    'ಬಾಹುಬಲಿ' ಬಿಟ್ಟರೆ ಟಾಲಿವುಡ್ ಕಲೆಕ್ಷನ್ ನಲ್ಲಿ ಅಲ್ಲು ಅರ್ಜುನ್ 'ಕಿಂಗ್'.!'ಬಾಹುಬಲಿ' ಬಿಟ್ಟರೆ ಟಾಲಿವುಡ್ ಕಲೆಕ್ಷನ್ ನಲ್ಲಿ ಅಲ್ಲು ಅರ್ಜುನ್ 'ಕಿಂಗ್'.!

    ಬೇರೆ ಭಾಷೆಯಲ್ಲಿಯೂ ಕನ್ನಡ ಸಿನಿಮಾ

    ಬೇರೆ ಭಾಷೆಯಲ್ಲಿಯೂ ಕನ್ನಡ ಸಿನಿಮಾ

    2019ರಲ್ಲಿ 'ಕುರುಕ್ಷೇತ್ರ' ಮತ್ತು 'ಪೈಲ್ವಾನ್' ಚಿತ್ರಗಳು ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾದವು. ಈ ಎರಡೂ ಸಿನಿಮಾಗಳು ಜಗತ್ತಿನೆಲ್ಲೆಡೆಯ ಪ್ರದರ್ಶನಗಳಿಂದ ಒಟ್ಟು 1 ಬಿಲಿಯನ್‌ ರೂ.ಗೂ ಅಧಿಕ ಆದಾಯ ಗಳಿಸಿದವು.

    ಕನ್ನಡದಲ್ಲಿ ಡಬ್ಬಿಂಗ್ ಚಿತ್ರಗಳು

    ಕನ್ನಡದಲ್ಲಿ ಡಬ್ಬಿಂಗ್ ಚಿತ್ರಗಳು

    ಇದಲ್ಲದೆ ಕಳೆದ ವರ್ಷ ಅನೇಕ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿವೆ. ಇವುಗಳಲ್ಲಿ ಹೆಚ್ಚಿನವು ಚಿತ್ರಮಂದಿರದಲ್ಲಿ ಬಿಡುಗಡೆಯಾಗದೆ ಇದ್ದರೂ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಆಗುವ ಮೂಲಕ ಹೆಚ್ಚುವರಿ ಆದಾಯ ಚಿತ್ರೋದ್ಯಮಕ್ಕೆ ದೊರಕಿದೆ.

    English summary
    Kannada film industry has witnessed 36% revenue growth in 2019, as compared to 2018.
    Monday, April 20, 2020, 21:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X