ಅಣ್ಣಾವ್ರು ಆತ್ಮ*ತ್ಯೆಗೆ ಮುಂದಾಗಿದ್ದು ಯಾಕೆ? ಕೊನೆಗೆ ಆ ನಿರ್ಧಾರವನ್ನು ಬದಲಾಯಿಸಿದ್ದು ಯಾರು?

By ಫಿಲ್ಮಿಬೀಟ್ ಡೆಸ್ಕ್

ಡಾ.ರಾಜ್‌ಕುಮಾರ್ ಅಂತಹ ಮೇರು ವ್ಯಕ್ತಿತ್ವ ಕನ್ನಡ ಚಿತ್ರರಂಗಕ್ಕೆ ಮತ್ತೆ ಸಿಗೋದಿಲ್ಲ. ಅಣ್ಣಾವ್ರು ಅಣ್ಣಾವ್ರೇ ಅಂತ ಅವರೊಂದಿಕೆ ಕೆಲಸ ಮಾಡಿದವರು, ಅವರನ್ನು ಹತ್ತಿರದಿಂದ ಬಲ್ಲವರು ಹೇಳುವುದನ್ನು ಕೇಳಿದ್ದೇವೆ. ಅದೆಷ್ಟೇ ಯಶಸ್ಸು ಸಿಕ್ಕರೂ ರಾಜ್‌ಕುಮಾರ್ ಅವರಂತೆ ಸರಳವಾಗಿ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳುವುದಕ್ಕೆ ಅದೆಷ್ಟೋ ಮಂದಿಗೆ ಸಾಧ್ಯವಾಗಿಲ್ಲ.

ಕನ್ನಡ ಚಿತ್ರರಂಗಕ್ಕೆ ಬದ್ರಬುನಾದಿಯನ್ನು ಹಾಕಿದವರಲ್ಲಿ ಪ್ರಮುಖರಾಗಿ ನಿಂತಿರುವ ರಾಜ್‌ಕುಮಾರ್ ಬಗ್ಗೆ ಕೆದಕಿದಷ್ಟು ವಿಷಯಗಳು ಸಿಗುತ್ತವೆ. ಒಬ್ಬೊಬ್ಬರ ಬಳಿಯೂ ಒಂದೊಂದು ಕತೆಯಿದೆ. ವರನಟನೊಂದಿಗೆ ಕಳೆದ ಅನುಭವಗಳು ಇವೆ. ಹೀಗಿದ್ಮೇಲೆ ಅವರನ್ನು ತೀರಾ ಹತ್ತಿರದಿಂದ ನೋಡಿರುವ ಅವರ ಮಕ್ಕಳಿಗೆ ಇನ್ನೆಷ್ಟು ಸಂಗತಿಗಳು ಗೊತ್ತಿರಬೇಡ. ರಾಜ್‌ಕುಮಾರ್ ಎರಡನೇ ಪುತ್ರ ರಾಘವೇಂದ್ರ ರಾಜ್‌ಕುಮಾರ್ ತಮ್ಮ ತಂದೆಯ ಬಗ್ಗೆ ಕೆಲವು ಸಂಗತಿಯನ್ನು ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದರು.

Kannada legend Dr Rajkumar s Life-Changing Decision A Story of Hope

ಶಾಂತ ಸ್ವಭಾವದ, ಸರಳ ವ್ಯಕ್ತಿತ್ವದ ಡಾ.ರಾಜ್‌ಕುಮಾರ್ ಒಮ್ಮೆ ಆತ್ಮ*ತ್ಯೆ ಮಾಡಿಕೊಳ್ಳಬೇಕು ಅಂತ ನಿರ್ಧರಿಸಿದ್ದರು. ಅದ್ಯಾಕೆ ಅಂತಹ ನಿರ್ಧಾರಕ್ಕೆ ಬಂದಿದ್ದರು? ಅವರ ಮನಸ್ಸಿನ ಮೇಲೆ ಅಷ್ಟೊಂದು ಕೆಟ್ಟ ಪ್ರಭಾವ ಬೀರುವ ಘಟನೆ ಏನು ನಡೀತು? ಅದು ತಪ್ಪು ಅಂತ ತಿದ್ದಿ ಹೇಳಿದ್ದು ಯಾರು? ಆ ಬಳಿಕ ಅವರ ಬದುಕು ಬದಲಾಗಿದ್ದು ಹೇಗೆ? ಅನ್ನೋದನ್ನು ರಾಘವೇಂದ್ರ ರಾಜ್‌ಕುಮಾರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಕರ್ನಾಟಕದ ಗಡಿಯಲ್ಲಿರುವ ಗಾಜನೂರು ಅನ್ನುವ ಪುಟ್ಟ ಗ್ರಾಮದಲ್ಲಿ ಹುಟ್ಟಿದ ರಾಜ್‌ಕುಮಾರ್ ಭಾರತೀಯ ಚಿತ್ರರಂಗದ ಮೇರು ನಟನಾಗಿ ಮೆರೆದಿದ್ದು ಗೊತ್ತೇ ಇದೆ. ರಾಜ್‌ಕುಮಾರ್ ಕನ್ನಡ ಚಿತ್ರರಂಗಕ್ಕೆ ವರನಟನಾಗಿ, ನಟ ಸಾರ್ವಭೌಮನಾಗಿ, ಗಾನಗಂಧರ್ವನಾಗಿ ಅಭಿಮಾನಿಗಳನ್ನು ರಂಜಿಸಿದ್ದು ಇತಿಹಾಸ. ತಮ್ಮ ಹುಟ್ಟು, ವೃತ್ತಿ, ಯಶಸ್ಸನ್ನು ಮೂರು ಅಧ್ಯಾಯಗಳಲ್ಲಿ ರಾಘಣ್ಣನ ಬಳಿ ತೆರೆದಿಟ್ಟಿದ್ದರು.

Kannada legend Dr Rajkumar s Life-Changing Decision A Story of Hope

"1929 ಒಂದು ಮಗು ಜನಿಸುತ್ತೆ. ಈ ಕರ್ನಾಟಕದಲ್ಲಿ ಸಾವಿರಾರು ಮಗು ಅವತ್ತು ಹುಟ್ಟುತ್ತೆ. ಈ ಮಗು ಕೂಡ ಹುಟ್ಟುತ್ತೆ. ಅದು ನಿಮ್ಮಪ್ಪ. ಎಲ್ಲರ ಹಾಗೆ ಅದು ಕೂಡ ಅಳುತ್ತಲೇ ಹುಟ್ಟುತ್ತೆ. ಅವತ್ತೇ ದೇವರು ಈ ಮಗುವನ್ನು ತೆಗೆದು ನೀನು ರಾಜಕುಮಾರ ಆಗ್ಬೇಕು ಅಂತ ಅವತ್ತೇ ಎತ್ತಿಡುತ್ತಾನೆ. ಅಂದಿನಿಂದ ಅವನು ಎಲ್ಲಾ ಕೊಡುತ್ತಾ ಹೋಗುತ್ತಾನೆ. ಇದು ಮೊದಲನೇ ಅಧ್ಯಾಯ" ಎಂದು ಅಣ್ಣಾವ್ರು ಹೇಳಿದ್ದನ್ನು ಪುತ್ರ ರಾಘವೇಂದ್ರ ರಾಜ್‌ಕುಮಾರ್ ಸಂದರ್ಶನದ ಬಳಿ ರಿವೀಲ್ ಮಾಡಿದ್ದರು.

ರಾಜ್‌ಕುಮಾರ್ ಅಂತಹ ಮೇರು ನಟನ ಬದುಕು ಒಮ್ಮೆ ಅಲ್ಲೋಲ ಕಲ್ಲೋಲ ಆಗಿತ್ತು. ಆ ವೇಳೆ ಬದುಕನ್ನು ಇಲ್ಲಿಗೆ ಮುಗಿಸಬೇಕು ಅಂತ ನಿರ್ಧರಿಸಿದ್ದರು. ಅದು ಎರಡನೇ ಅಧ್ಯಾಯ. "1953ರಲ್ಲಿ ಈ ಮಗು ತಂದೆ ಕಳೆದುಕೊಳ್ಳುತ್ತೆ. ಅಲ್ಲಿಯೇ ನಾಟಕಗಳ ಪರಿಚಯವೂ ಆಗಿರುತ್ತೆ. ತಂದೆಯನ್ನು ಕಳೆದಕೊಂಡ ಬಳಿಕ ಜೀವನವೇ ಮುಗಿದು ಹೋಯ್ತು. ನಾವೆಲ್ಲರೂ ಆತ್ಮ*ತ್ಯೆ ಮಾಡಿಕೊಳ್ಳಬೇಕು ಅಂತ ನಿರ್ಧರಿಸುತ್ತಾರೆ. ಆಗ ನಮ್ಮ ತಂದೆಯವರ ತಾಯಿ ಬೇಡ ಕಂದ ನಿಮ್ಮ ತಂದೆಯ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಅಂತ ಹೇಳಿದಾಗ ಮತ್ತೆ ಬದುಕುತ್ತಾರೆ. ನಮ್ಮ ತಾಯಿಯನ್ನು ಮದುವೆ ಆಗುತ್ತಾರೆ. ಇಲ್ಲಿಂದ ಸರಸ್ವತಿ ಮತ್ತು ಲಕ್ಷ್ಮಿ ಎರಡೂ ಬಂತು" ಎಂದು ರಾಘಣ್ಣ ಸಂದರ್ಶನದಲ್ಲಿ ಹೇಳಿ ಕೊಂಡಿದ್ದಾರೆ.

ಇನ್ನು ಮೂರನೇ ಅಧ್ಯಾಯ ಸರಳತೆ ಪಾಠ ಮಾಡಿದ್ದರು. ಮೊದಲ ಸಿನಿಮಾದ ಆಡಿಷನ್ ಕೊಡುವುದಕ್ಕೆ ಅಂತ ಊರು ಬಿಟ್ಟು ಬಂದಾಗ ಬಿಳಿ ಬಟ್ಟೆಯನ್ನು ಧರಿಸಿದ್ದರು. ಅಲ್ಲಿಂದ ಅಣ್ಣಾವ್ರು ಅದೆಷ್ಟೇ ಎತ್ತರಕ್ಕೆ ಹೋದರೂ ಬಿಳಿ ಬಟ್ಟೆ ಧರಿಸುವುದನ್ನು ನಿಲ್ಲಿಸಿರಲಿಲ್ಲ. ಅದೇ ಬಿಳಿ ಶರ್ಟ್ ಹಾಗೂ ಬಿಳಿ ಪಂಚೆಯನ್ನು ಧರಿಸಿಕೊಂಡೇ ಬಂದ ಪ್ರಶಸ್ತಿಗಳನ್ನು,ಗೌರವಗಳನ್ನು ಸ್ವೀಕರಿಸಿದ್ದರು. ಅದ್ಯಾವುದನ್ನೂ ತಲೆ ಮೇಲೆ ಹೊತ್ತುಕೊಳ್ಳದೇ ಕೆಲಸ ಮಾಡುತ್ತಲೇ ಇದ್ದರು.

More from Filmibeat

English summary
Kannada legend Dr.Rajkumar's Life-Changing Decision: A Story of Hope;
Read more about: rajkumar sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X