twitter
    For Quick Alerts
    ALLOW NOTIFICATIONS  
    For Daily Alerts

    2021ರ ಕ್ವಾಟರ್ ರಿಪೋರ್ಟ್: ಗೆದ್ದಿದ್ದು ಯಾರು, ದುಡ್ಡು ಮಾಡಿದ್ದು ಯಾರು?

    |

    ಕೊರೊನಾ ವೈರಸ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಚಿತ್ರರಂಗ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಸಿನಿಮಾ ಕ್ಷೇತ್ರ ಮೊದಲಿನಂತೆ ಯಥಾಸ್ಥಿತಿಗೆ ಮರಳುತ್ತಿದೆ. ಆರೇಳು ತಿಂಗಳು ಚಿತ್ರಮಂದಿರಗಳು ಸ್ತಬ್ದವಾಗಿದ್ದವು. ಇದೀಗ, ಸಿನಿಮಾ ಥಿಯೇಟರ್‌ಗಳು ಮತ್ತೆ ಕಾರ್ಯಾರಂಭ ಮಾಡಿವೆ. ಫಸ್ಟ್ ಡೇ ಫಸ್ಟ್ ಶೋ, ಟಿಕೆಟ್ ಬುಕ್ಕಿಂಗ್, ಹೌಸ್‌ಫುಲ್, ಸಕ್ಸಸ್ ಎಂಬ ಪದಗಳಿಗೆ ಮತ್ತೆ ಜೀವ ಸಿಕ್ಕಿದೆ.

    ಸಂಕಷ್ಟ, ಸವಾಲಿನ ನಡುವೆಯೇ ವರ್ಷದ ಮೂರು ತಿಂಗಳು ಕಳೆದಿದೆ. ಮೊದಲ ಕ್ವಾಟರ್ ಸ್ಯಾಂಡಲ್ ವುಡ್ ಪಾಲಿಗೆ ಹೇಳಿಕೊಳ್ಳುವಂತಿಲ್ಲ. ಆದರೆ, ಸ್ಟಾರ್ ನಟರ ಪಾಲಿಗೆ ಇದು ಅದೃಷ್ಟದ ಆರಂಭ. ಜನವರಿಯಿಂದ ಮಾರ್ಚ್ ಅಂತ್ಯದವರೆಗೂ ಸುಮಾರು 40 ಸಿನಿಮಾಗಳು ತೆರೆಗೆ ಬಂದಿವೆ. ಇದರಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದು ಬೆರಳೆಣಿಕೆಯ ಸಿನಿಮಾಗಳು ಮಾತ್ರ. ಇನ್ನುಳಿದ ಚಿತ್ರಗಳು ಬಂದು ಹೋಗಿದ್ದೇ ಬಹುತೇಕರಿಗೆ ನೆನಪಿಲ್ಲ.

    4ನೇ ದಿನವೂ 'ರಾಬರ್ಟ್' ದಾಖಲೆ ಗಳಿಕೆ: 50 ಕೋಟಿ ಕ್ಲಬ್ ಸೇರಿದ ಡಿ ಬಾಸ್ ಸಿನಿಮಾ4ನೇ ದಿನವೂ 'ರಾಬರ್ಟ್' ದಾಖಲೆ ಗಳಿಕೆ: 50 ಕೋಟಿ ಕ್ಲಬ್ ಸೇರಿದ ಡಿ ಬಾಸ್ ಸಿನಿಮಾ

    ಹಾಗಾದ್ರೆ, 2021ನೇ ವರ್ಷದ ಕ್ವಾಟರ್ ರಿಪೋರ್ಟ್ ಏನು ಹೇಳುತ್ತಿದೆ. ಎಷ್ಟು ಚಿತ್ರಗಳು ತೆರೆಕಂಡವು, ಎಷ್ಟು ಚಿತ್ರಗಳು ಸಕ್ಸಸ್ ಕಂಡವು, ಯಾವ ಚಿತ್ರ ಹಣ ಮಾಡಿತು ಎಂಬ ಪೂರ್ಣ ವಿವರ ಇಲ್ಲಿದೆ. ಮುಂದೆ ಓದಿ....

    'ರಾಜತಂತ್ರ'ದಿಂದ ಆರಂಭ

    'ರಾಜತಂತ್ರ'ದಿಂದ ಆರಂಭ

    ಶಕೀಲಾ ಚಿತ್ರದ ಮೂಲಕ 2020ನೇ ವರ್ಷಕ್ಕೆ ಗುಡ್ ಬೈ ಹೇಳಿದ್ದ ಸ್ಯಾಂಡಲ್ ವುಡ್, 2021ನೇ ವರ್ಷವನ್ನು ಸ್ವಾಗತಿಸಿದ್ದು ರಾಜತಂತ್ರ ಸಿನಿಮಾ ಮೂಲಕ. ರಾಘವೇಂದ್ರ ರಾಜ್ ಕುಮಾರ್ ನಟನೆಯಲ್ಲಿ ಮೂಡಿಬಂದಿದ್ದ ರಾಜತಂತ್ರ ಸಿನಿಮಾ ಜನವರಿ 1 ರಂದು ತೆರೆಕಂಡಿತ್ತು. ಎರಡನೇ ವಾರ (ಜನವರಿ 8) ಅಮೃತವಾಹಿನಿ ಹಾಗೂ ಮಹಿಷಾಸುರ ಚಿತ್ರಗಳು ಬಿಡುಗಡೆಯಾದವು. ನಂತರ ಬಿಡುಗಡೆಗಾಗಿ ದಿನ ಕಾಯುತ್ತಿದ್ದ ಚಿತ್ರಗಳು ಜನವರಿ ತಿಂಗಳಲ್ಲಿ ಚಿತ್ರಮಂದಿರಕ್ಕೆ ಬಂತು. ವಿಕ್ಕಿ, ಕತ್ಲೆಕಾಡು, ಲಡ್ಡು, ಪಂಟ್ರು, ತಲಾಕ್ ತಲಾಕ್ ತಲಾಕ್, ನಾನು ನನ್ ಜಾನು ಸಿನಿಮಾ ಬಿಡುಗಡೆಯಾದರೂ ಯಾವುದು ವಾರಕ್ಕಿಂತ ಹೆಚ್ಚು ದಿನ ಉಳಿಯಲಿಲ್ಲ.

    'ರಾಮಾರ್ಜುನ' ಅಬ್ಬರ

    'ರಾಮಾರ್ಜುನ' ಅಬ್ಬರ

    ಅನಿಶ್ ತೇಜೇಶ್ವರ್ ನಟಿಸಿ, ನಿರ್ದೇಶಿಸಿದ ಚಿತ್ರ ರಾಮಾರ್ಜುನ ಜನವರಿ 29 ರಂದು ರಿಲೀಸ್ ಆಯಿತು. ಕೊರೊನಾದಿಂದ ನಿಂತಿದ್ದ ಚಿತ್ರರಂಗಕ್ಕೆ ಕಮರ್ಷಿಯಲ್ ಆಗಿ ಜೋಶ್ ನೀಡಿದ ಚಿತ್ರ. ಸಿನಿಮಾಗೆ ಒಳ್ಳೆಯ ಅಭಿಪ್ರಾಯ ಬಂತು. ಮೊದಲ ವಾರ ಜನ ಬಂದ್ರು, ಎರಡನೇ ವಾರದಿಂದ ಪ್ರೇಕ್ಷಕರ ಕೊರತೆ ಎದುರಾಯಿತು. ನಟ ಅನೀಶ್ ಪ್ರೇಕ್ಷಕರನ್ನು ಕೇಳಿಕೊಂಡರು. ಒಳ್ಳೆಯ ಸಿನಿಮಾ ಉಳಿಸಿಕೊಳ್ಳಿ ಎಂದು ವಿನಂತಿಸಿದರು. ಆದರೂ, ರಾಮಾರ್ಜುನ ಹೆಚ್ಚು ದಿನ ಚಿತ್ರಮಂದಿರದಲ್ಲಿ ಉಳಿದಿಲ್ಲ.

    ಕೊರೊನಾ ನಂತರ ಅತಿ ಹೆಚ್ಚು ಹಣ ಗಳಿಸಿದ ಚಿತ್ರರಂಗ ಯಾವುದು?ಕೊರೊನಾ ನಂತರ ಅತಿ ಹೆಚ್ಚು ಹಣ ಗಳಿಸಿದ ಚಿತ್ರರಂಗ ಯಾವುದು?

    ಗಮನ ಸೆಳೆದ 'ಇನ್ಸ್‌ಪೆಕ್ಟರ್ ವಿಕ್ರಂ'

    ಗಮನ ಸೆಳೆದ 'ಇನ್ಸ್‌ಪೆಕ್ಟರ್ ವಿಕ್ರಂ'

    ಫೆಬ್ರವರಿ 5 ರಂದು ಬಿಡುಗಡೆಯಾದ 'ಇನ್ಸ್‌ಪೆಕ್ಟರ್ ವಿಕ್ರಂ' ಹಾಗೂ 'ಮಂಗಳವಾರ ರಜಾದಿನ' ಸಿನಿಮಾಗಳು ಗಮನ ಸೆಳೆಯಿತು. ಪ್ರಜ್ವಲ್ ದೇವರಾಜ್ ಚಿತ್ರಕ್ಕೆ ಒಳ್ಳೆಯ ರೆಸ್‌ಪಾನ್ಸ್ ಸಿಕ್ತು. ಚಂದನ್ ನಟಿಸಿದ್ದ ಮಂಗಳವಾರ ರಜಾದಿನ ಚಿತ್ರಕ್ಕೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಯಿತು.

    ಆಮೇಲೆ ಘರ್ಜಿಸಿದ್ದು 'ಪೊಗರು'

    ಆಮೇಲೆ ಘರ್ಜಿಸಿದ್ದು 'ಪೊಗರು'

    ಈ ನಡುವೆ ಹಲವು ಚಿತ್ರಗಳು ಬಿಡುಗಡೆಯಾದರೂ ಯಾವುದು ಜನರ ಗಮನಕ್ಕೆ ಬಂದಿಲ್ಲ. ಫೆಬ್ರವರಿ 19ಕ್ಕೆ ಪೊಗರು ಎಂಟ್ರಿ ಆಯಿತು. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಬಿಸಿನೆಸ್ ಕಂಡ ಚಿತ್ರ. ಮೊದಲ ಆರು ದಿನಕ್ಕೆ 40 ಕೋಟಿಗೂ ಹೆಚ್ಚು ಗಳಿಸಿದೆ ಎಂದು ಸ್ವತಃ ನಿರ್ಮಾಪಕ ಹೇಳಿಕೊಂಡರು. ಆದರೆ, ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಇತ್ತು.

    ಕುಷ್ಕ ರುಚಿ ಇರಲಿಲ್ಲ, ಹೀರೋ ನಿಲ್ಲಲಿಲ್ಲ

    ಕುಷ್ಕ ರುಚಿ ಇರಲಿಲ್ಲ, ಹೀರೋ ನಿಲ್ಲಲಿಲ್ಲ

    ಗುರುಪ್ರಸಾದ್ ಕುಷ್ಕ ರುಚಿ ಕೊಡಲಿಲ್ಲ. ರಿಷಭ್ ಶೆಟ್ಟಿ ನಟನೆಯ ಹೀರೋ ಸಿನಿಮಾ ಎದ್ದು ನಿಂತಿಲ್ಲ. ಹೀರೋ ಹೆಚ್ಚು ಸುದ್ದಿ ಮಾಡಿತ್ತು. ಆದರೆ, ನಿರೀಕ್ಷೆಯಂತೆ ಸಿನಿಮಾ ಮೂಡಿ ಬಂದಿರಲಿಲ್ಲ ಎಂದು ಪ್ರೇಕ್ಷಕರು ನಿರಾಸೆಗೊಂಡರು.

    ರಾಬರ್ಟ್ ವಿಜಯಯತ್ರೆ

    ರಾಬರ್ಟ್ ವಿಜಯಯತ್ರೆ

    ಭಾರಿ ನಿರೀಕ್ಷೆ ಮೂಡಿಸಿದ್ದ ರಾಬರ್ಟ್ ಸಿನಿಮಾ ಮಾರ್ಚ್ 11ಕ್ಕೆ ಬಂತು. ಚಿತ್ರಕ್ಕೂ ಒಳ್ಳೆಯ ಓಪನಿಂಗ್ ಸಿಕ್ತು. ಕೊರೊನಾದಿಂದ ಮಂದಗತಿಯಲ್ಲಿದ್ದ ಚಿತ್ರರಂಗಕ್ಕೆ ವೇಗನೂ ತಂದು ಕೊಡ್ತು. ರಾಬರ್ಟ್ ವಿಜಯಯಾತ್ರೆ ನೋಡಿದ್ಮೇಲೆ ಸ್ಯಾಂಡಲ್ ವುಡ್‌ ಚೇತರಿಕೆ ಕಂಡಾಗಿದೆ ಎನ್ನುವುದು ಖಾತ್ರಿಯಾಯಿತು. ಸ್ಟಾರ್ ನಟರ ಚಿತ್ರಗಳಿಗೆ ಪ್ರೇಕ್ಷಕರು ಕಾಯ್ತಿದ್ದಾರೆ ಎಂದು ತಿಳಿಯಿತು. ಇದರ ಪರಿಣಾಮ ರಾಬರ್ಟ್ 78 ಕೋಟಿಗೂ ಅಧಿಕ ಗಳಿಕೆ ಕಂಡಿದೆ.

    ಯುವರತ್ನನ ಆಟ ಶುರು

    ಯುವರತ್ನನ ಆಟ ಶುರು

    ಮಾರ್ಚ್ ತಿಂಗಳು ಮುಗಿದಿದೆ. ಏಪ್ರಿಲ್ 1ಕ್ಕೆ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ರಿಲೀಸ್ ಆಗುತ್ತಿದೆ. ಪೊಗರು, ರಾಬರ್ಟ್ ಸಕ್ಸಸ್ ನೋಡಿದ್ಮೇಲೆ ಯುವರತ್ನ ಚಿತ್ರದ ಮೇಲೂ ಹೆಚ್ಚಿನ ನಿರೀಕ್ಷೆ ಇದೆ. ಇದಾದ ಬಳಿಕ ಸೆಕೆಂಡ್ ಹಾಫ್‌ನಲ್ಲಿ ಸ್ಯಾಂಡಲ್‌ವುಡ್‌ನ ಮತ್ತಷ್ಟು ದೊಡ್ಡ ಸಿನಿಮಾಗಳು ಸಾಲಿನಲ್ಲಿದೆ.

    English summary
    Kannada Movies Released and their Collection Reports in First Three Months of 2021.
    Wednesday, March 31, 2021, 14:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X