ಪರದೆ ಮೇಲೆ ಸ್ಟಾರ್ ನಟರ ಹೆಸರು ಮೊದಲ ಬಾರಿಗೆ ಮೂಡಿದ್ದು ಹೀಗೆ ನೋಡಿ!

By Naveen

ಯಾವುದೇ ಸಿನಿಮಾ ನೋಡುವುದಕ್ಕೆ ಹೋದರು ಮೊದಲು ಆ ಚಿತ್ರದ ಟೈಟಲ್ ಕಾರ್ಡ್ ಬರುತ್ತದೆ. ಸಿನಿಮಾದಲ್ಲಿ ಕೆಲಸ ಮಾಡಿದ ಕಲಾವಿದ ಹಾಗೂ ತಂತ್ರಜ್ಞರ ಹೆಸರುಗಳು ಅದರಲ್ಲಿ ಇರುತ್ತದೆ. ಸ್ಟಾರ್ ನಟರ ಹೆಸರು ಪರದೆ ಮೇಲೆ ಬರುತ್ತಿದ್ದ ಹಾಗೆ ಇಡೀ ಚಿತ್ರಮಂದಿರದಲ್ಲಿ ಅಭಿಮಾನಿಗಳ ಅಬ್ಬರ ಜೋರಾಗುತ್ತದೆ. ಆ ಸಂಭ್ರಮ ನೋಡುವುದೇ ಒಂದು ರೋಮಾಂಚನ.

ಈಗ ಸ್ಟಾರ್ ನಟರ ಪ್ರತಿ ಸಿನಿಮಾದಲ್ಲಿ ಅವರ ಹೆಸರು ಬೇರೆ ಬೇರೆ ರೀತಿಗಳಲ್ಲಿ ಸ್ಕೀನ್ ಮೇಲೆ ಕಂಗೊಳಿಸುತ್ತದೆ. ಆದರೆ, ಅಂತಹ ನಟರ ಹೆಸರು ಮೊದಲ ಬಾರಿಗೆ ಪರದೆ ಮೇಲೆ ಹೇಗೆ ಮೂಡಿತ್ತು ಎಂಬುದನ್ನು ಅನೇಕರು ನೋಡಿರುವುದಿಲ್ಲ. 'ಹೊಸ ಪರಿಚಯ' ಎಂಬ ಟೈಟಲ್ ಕಾರ್ಡ್ ಮೂಲಕ ಕನ್ನಡಿಗರಿಗೆ ಪರಿಚಯ ಆದ ಆ ನಟರು ಇಂದು ಸ್ಟಾರ್ ಆಗಿದ್ದಾರೆ.

ಕನ್ನಡ ನಟರಾದ ರಾಜ್ ಕುಮಾರ್, ಶಂಕರ್ ನಾಗ್, ರವಿಚಂದ್ರನ್, ಶಿವರಾಜ್ ಕುಮಾರ್, ಉಪೇಂದ್ರ, ಸುದೀಪ್, ದರ್ಶನ್, ಗಣೇಶ್, ದುನಿಯಾ ವಿಜಯ್ ಹೀಗೆ ಅನೇಕ ನಟರ ಹೆಸರು ಅವರ ಮೊದಲ ಚಿತ್ರದಲ್ಲಿ ಹೇಗಿತ್ತು ಎಂಬ ಕುತೂಹಲ ಇದ್ದರೆ ಮುಂದೆ ಓದಿ...

'ನಟರು ರಾಜ ಕುಮಾರ್'

'ನಟರು ರಾಜ ಕುಮಾರ್'

ರಂಗಭೂಮಿಯಲ್ಲಿ ಇದ್ದ ಮುತ್ತುರಾಜ್ ಚಿತ್ರರಂಗಕ್ಕೆ ಬಂದು ರಾಜ್ ಕುಮಾರ್ ಆದರು. ಅವರ ಹೆಸರು ಬದಲಾಗಿದ್ದು 1954 ರಲ್ಲಿ ಬಂದ 'ಬೇಡರ ಕಣ್ಣಪ್ಪ' ಚಿತ್ರದಲ್ಲಿ. ಈ ಚಿತ್ರದ ಟೈಟಲ್ ಕಾರ್ಡ್ ನಲ್ಲಿ 'ನಟರು ರಾಜ್ ಕುಮಾರ್' ಎಂದು ವರನಟರ ಹೆಸರನ್ನು ಮೊದಲ ಬಾರಿಗೆ ಹಾಕಿದ್ದರು. ಅವರ ಹೆಸರಿನ ಜೊತೆಗೆ ಅವರ ಪಾತ್ರವನ್ನು ಸಹ ಬರೆದಿದ್ದರು.

'ಶಂಕರ್ ನಾಗ್'

'ಶಂಕರ್ ನಾಗ್'

ನಟ ಶಂಕರ್ ನಾಗ್ 'ಒಂದಾನೊಂದು ಕಾಲದಲ್ಲಿ' ಸಿನಿಮಾದ ಮೂಲಕ ತಮ್ಮ ಚಿತ್ರ ಬದುಕನ್ನು ಶುರು ಮಾಡಿದರು. ಈ ಚಿತ್ರದ ಟೈಟಲ್ ಕಾರ್ಡ್ ನಲ್ಲಿ ಸರಳವಾಗಿ 'ಶಂಕರ್ ನಾಗ್' ಎಂದು ಬರೆಸಿದ್ದರು. ಅವರ ಹೆಸರಿನೊಂದಿಗೆ ಸುಂದರ್ ಕೃಷ್ಣ ಅರಸ್ ಅವರ ಹೆಸರು ಕೂಡ ಇತ್ತು. ಚಿತ್ರದಲ್ಲಿ ಶಂಕ್ರಣ್ಣ ಗಂಡುಗಲಿ ಎಂಬ ಪಾತ್ರವನ್ನು ನಿರ್ವಹಿಸಿದ್ದರು. 1978ರಲ್ಲಿ ಬಂದ ಈ ಚಿತ್ರವನ್ನು ಗಿರೀಶ್ ಕಾರ್ನಾಡ್ ನಿರ್ದೇಶನ ಮಾಡಿದ್ದಾರೆ.

'ಕನ್ನಡ ಚಿತ್ರರಂಗಕ್ಕೊಂದು ಹೊಸ ಕೊಡುಗೆ ಶಿವರಾಜ್ ಕುಮಾರ್'

'ಕನ್ನಡ ಚಿತ್ರರಂಗಕ್ಕೊಂದು ಹೊಸ ಕೊಡುಗೆ ಶಿವರಾಜ್ ಕುಮಾರ್'

ಸೆಂಚುರಿ ಸ್ಟಾರ್ ಶಿವಣ್ಣನ ಹೆಸರು ಇಂದು ಪರದೆ ಮೇಲೆ ಬಂದರೆ ಸಾಕು ಚಿತ್ರಮಂದಿರದಲ್ಲಿ ಶಿಳ್ಳೆ ಚಪ್ಪಾಳೆಯ ಸುರಿಮಳೆ ಬೀಳುತ್ತದೆ. ಅಂದಹಾಗೆ, ಶಿವಣ್ಣ 'ಆನಂದ್' ಚಿತ್ರದ ಮೂಲಕ ತಮ್ಮ ಖಾತೆ ತೆರೆದರು. ಈ ಚಿತ್ರದಲ್ಲಿ 'ಕನ್ನಡ ಚಿತ್ರರಂಗಕ್ಕೊಂದು ಹೊಸ ಕೊಡುಗೆ ಶಿವರಾಜ್ ಕುಮಾರ್' ಎಂದು ಟೈಟಲ್ ಕಾರ್ಡ್ ನಲ್ಲಿ ಅವರನ್ನು ಪರಿಚಯಿಸಲಾಗಿತ್ತು. ಸಂಗೀತಂ ಶ್ರೀನಿವಾಸ್ ರಾವ್ ಚಿತ್ರದ ನಿರ್ದೇಶನ ಮಾಡಿದ್ದು, 1986ರಲ್ಲಿ ಚಿತ್ರ ಬಿಡುಗಡೆಯಾಗಿತ್ತು.

'ಕಾಮಣ್ಣನಾಗಿ ಉಪೇಂದ್ರ'

'ಕಾಮಣ್ಣನಾಗಿ ಉಪೇಂದ್ರ'

ಉಪೇಂದ್ರ ಒಬ್ಬ ನಟ, ನಿರ್ದೇಶಕನಾಗಿವುದಕ್ಕೆ ಮುಂಚೆ ಕಾಶೀನಾಥ್ ಅವರ ಬಳಿ ಕೆಲಸ ಮಾಡುತ್ತಿದ್ದರು. 'ಅನಂತನ ಅವಾಂತರ' ಚಿತ್ರದಲ್ಲಿ 'ಕಮನ್ ಕಮನ್ ಕಾಮಣ್ಣ..' ಎಂದು ಮೊದಲ ಬಾರಿಗೆ ಹಾಡು ಬರೆದ ಉಪ್ಪಿ ಆ ಹಾಡಿನ ಮೂಲಕ ಫಸ್ಟ್ ಟೈಂ ಸ್ಕ್ರೀನ್ ಮೇಲೆ ಕಾಣಿಸಿಕೊಂಡರು. ಆದರೆ, ಈ ಚಿತ್ರದ ಟೈಟಲ್ ಕಾರ್ಡ್ ರೆಡಿ ಮಾಡುವ ಹುಡುಗರು ಉಪ್ಪಿ ಹೆಸರನ್ನು ಮರೆತು ಬಿಟ್ಟಿದ್ದರಂತೆ. ಆ ಬಳಿಕ ಕಾಶೀನಾಥ್ ಅವರು 'ಕಾಮಣ್ಣನಾಗಿ ಉಪೇಂದ್ರ' ಎಂದು ಉಪ್ಪಿ ಹೆಸರನ್ನು ಸಿಂಗಲ್ ಆಗಿ ಹಾಕಿಸಿದರಂತೆ.

'ನಿರ್ಮಾಪಕ ವಿ.ರವಿಚಂದ್ರನ್'

'ನಿರ್ಮಾಪಕ ವಿ.ರವಿಚಂದ್ರನ್'

'ಪ್ರೇಮಲೋಕ' ಸೃಷ್ಟಿ ಮಾಡಿದ್ದ ರವಿಚಂದ್ರನ್ ಆ ಚಿತ್ರಕ್ಕೆ ಮುಂಚೆ 'ಕದೀಮ ಕಳ್ಳರು' ಎಂಬ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರವನ್ನು ಅವರೇ ನಿರ್ಮಾಣ ಸಹ ಮಾಡಿದ್ದು, ಟೈಟಲ್ ಕಾರ್ಡ್ ನಲ್ಲಿ 'ನಿರ್ಮಾಪಕ ರವಿಚಂದ್ರನ್' ಎಂದು ಹೆಸರು ಬಂದಿತ್ತು. ಈ ಹೆಸರಿನೊಂದಿಗೆ ಚಿತ್ರದಲ್ಲಿ ಅವರ ಮುಖ ಜನರಿಗೆ ಕಂಡಿತ್ತು.

'ಹೊಸ ಪರಿಚಯ ಸುದೀಪ್ ಸಂಜೀವ್'

'ಹೊಸ ಪರಿಚಯ ಸುದೀಪ್ ಸಂಜೀವ್'

ಇಂದು ಸುದೀಪ್ ಸಿನಿಮಾ ರಿಲೀಸ್ ಆದರೆ ಅವರ ಹೆಸರು 'ಕಿಚ್ಚ ಸುದೀಪ', 'ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ' ಎಂದು ಬರುತ್ತದೆ. ಆದರೆ, ಅವರ ಹೆಸರು ಮೊದಲು ಪರದೆ ಮೇಲೆ 'ಹೊಸ ಪರಿಚಯ ಸುದೀಪ್ ಸಂಜೀವ್' ಎಂದು ಬಂದಿತ್ತು. ಸುದೀಪ್ 'ಸ್ಪರ್ಶ' ಚಿತ್ರಕ್ಕೆ ಮುಂಚೆ 'ತಾಯವ್ವ' ಎಂಬ ಸಿನಿಮಾ ಮಾಡಿದ್ದರು. ಈ ಚಿತ್ರದ ಟೈಟಲ್ ಕಾರ್ಡ್ ನಲ್ಲಿ ಅವರ ಹೆಸರು ಸುದೀಪ್ ಸಂಜೀವ್ ಎಂದಿತ್ತು.

'ಹೊಸ ಪರಿಚಯ ದರ್ಶನ್ ತೂಗುದೀಪ'

'ಹೊಸ ಪರಿಚಯ ದರ್ಶನ್ ತೂಗುದೀಪ'

ಸದ್ಯ 50ನೇ ಸಿನಿಮಾ ಸಂಭ್ರಮದಲ್ಲಿರುವ ನಟ ದರ್ಶನ್ ಹೀರೋ ಆಗಿದ್ದು 'ಮೆಜೆಸ್ಟಿಕ್' ಸಿನಿಮಾದ ಮೂಲಕ. ಇನ್ನು ಈ ಚಿತ್ರದ ಟೈಟಲ್ ಕಾರ್ಡ್ ನಲ್ಲಿ 'ಹೊಸ ಪರಿಚಯ ದರ್ಶನ್ ತೂಗುದೀಪ' ಎಂದು ಪರದೆ ಮೇಲೆ ಮೊದಲ ಬಾರಿಗೆ ಡಿ ಬಾಸ್ ಹೆಸರು ಮೂಡಿತ್ತು. ಪಿ.ಎನ್.ಸತ್ಯ ಚಿತ್ರವನ್ನು ನಿರ್ದೇಶನ ಮಾಡಿದ್ದು, ಮೊದಲ ಚಿತ್ರದಲ್ಲಿಯೇ ಮಾಸ್ ಹೀರೋ ಆಗಿ ದರ್ಶನ್ ಫ್ಯಾನ್ಸ್ ಮುಂದೆ ಬಂದು ನಿಂತಿದ್ದರು.

'ಪ್ರಥಮ ಬಾರಿಗೆ ನಾಯಕನಾಗಿ ಪುನೀತ್ ರಾಜ್ ಕುಮಾರ್'

'ಪ್ರಥಮ ಬಾರಿಗೆ ನಾಯಕನಾಗಿ ಪುನೀತ್ ರಾಜ್ ಕುಮಾರ್'

ದೊಡ್ಮನೆಯ ಕಿರಿಯ ಪುತ್ತು ಪುನೀತ್ ರಾಜ್ ಕುಮಾರ್ 'ಅಪ್ಪು' ಚಿತ್ರದ ಮೂಲಕ ಪವರ್ ಫುಲ್ ಆಗಿ ಎಂಟ್ರಿ ಕೊಟ್ಟರು. ಬಾಲನಟನಾಗಿದ್ದ ಪುನೀತ್ ಈ ಚಿತ್ರದ ಮೂಲಕ ನಾಯಕನಟನಾಗಿ ಮೊದಲ ಹೆಜ್ಜೆ ಇಟ್ಟಿದ್ದರು. ಅಪ್ಪು ಟೈಟಲ್ ಕಾರ್ಡ್ ನಲ್ಲಿ 'ಪ್ರಥಮ ಬಾರಿಗೆ ನಾಯಕನಾಗಿ ಪುನೀತ್ ರಾಜ್ ಕುಮಾರ್' ಎಂದು ಬರೆದಿತ್ತು. ಪೂರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿದ್ದರು.

'ಪ್ರಪ್ರಥಮ ಬಾರಿಗೆ ನಾಯಕ ನಟನಾಗಿ ಗಣೇಶ್'

'ಪ್ರಪ್ರಥಮ ಬಾರಿಗೆ ನಾಯಕ ನಟನಾಗಿ ಗಣೇಶ್'

'ಕಾಮಿಡಿ ಟೈಂ' ಕಾರ್ಯಕ್ರಮದ ನಿರೂಪಕನಾಗಿದ್ದ ಗಣೇಶ್ ಅವರ ಗೋಲ್ಡನ್ ಡೇಸ್ ಶುರು ಆಗಿದ್ದು, 'ಚೆಲ್ಲಾಟ' ಚಿತ್ರದ ಮೂಲಕ. ಈ ಸಿನಿಮಾದಲ್ಲಿ ಮೊದಲ ಬಾರಿಗೆ ಗಣೇಶ್ ಹೀರೋ ಆಗಿದ್ದರು. 'ಪ್ರಪ್ರಥಮ ಬಾರಿಗೆ ನಾಯಕ ನಟನಾಗಿ ಗಣೇಶ್' ಎಂದು ಚಿತ್ರದ ಟೈಟಲ್ ಕಾರ್ಡ್ ನಲ್ಲಿ ಗಣೀಶ್ ಹೆಸರನ್ನು ತೋರಿಸಲಾಗಿತ್ತು. ಗಣೇಶ್ ಗೆ ಹೀರೋ ಪಟ್ಟವನ್ನು ನಿರ್ದೇಶಕ ಎಂ.ಡಿ.ಶ್ರೀಧರ್ ನೀಡಿದ್ದರು.

'ಬೆಳ್ಳಿ ಪರದೆಗೆ ನಾಯಕನಾಗಿ ವಿಜಯ್'

'ಬೆಳ್ಳಿ ಪರದೆಗೆ ನಾಯಕನಾಗಿ ವಿಜಯ್'

ನಟ ವಿಜಯ್ ಇಂದು ದುನಿಯಾ ವಿಜಯ್ ಎಂದೇ ಜನಪ್ರಿಯತೆ ಗಳಿಸಿದ್ದಾರೆ. ಕೆಲ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ವಿಜಯ್ ತಮ್ಮ 'ದುನಿಯಾ' ಚಿತ್ರದ ಮೂಲಕ ಹೀರೋ ಆದರು. 'ಬೆಳ್ಳಿ ಪರದೆಗೆ ನಾಯಕನಾಗಿ ವಿಜಯ್' ಎಂದು ದುನಿಯಾ ಟೈಟಲ್ ಕಾರ್ಡ್ ನಲ್ಲಿ ಅವರನ್ನು ಪರಿಚಯ ಮಾಡಿಸಿದ್ದರು ನಿರ್ದೇಶಕ ಸೂರಿ.

More from Filmibeat

English summary
In Pics : Kannada star actors first movie title card.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X