"ಸ್ನೇಹಿತರ ಜೊತೆ ಹಾಸಿಗೆ ಹಂಚಿಕೊಳ್ಳುವಂತೆ ಪೀಡಿಸಿದ್ದ ಪತಿ"; ಶಾಕಿಂಗ್ ಸಂಗತಿ ಬಿಚ್ಚಿಟ್ಟಿದ್ದ ನಟಿ
ಕಪೂರ್ ಖಾಂದಾನ್ ಕುಡಿ ಕರೀಷ್ಮಾ. ಸಹೋದರಿ ಕರೀನಾಗಿಂತ ಮೊದಲು ಕರೀಷ್ಮಾ ಬಾಲಿವುಡ್‌ಗೆ ಎಂಟ್ರಿ ಕೊಟ್ಟವರು. ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ ಚೆಲುವೆ ಬಳಿಕ 15 ವರ್ಷಗಳ ಈಚೆಗೆ ಹೆಚ್ಚು ಸಿನಿಮಾಗಳಲ್ಲಿ ನಟಿಸಲಿಲ್ಲ. ಆಗೊಮ್ಮೆ ಈಗೊಮ್ಮೆ ಅತಿಥಿ ಪಾತ್ರಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ.
90ರ ದಶಕದ ಆರಂಭದಲ್ಲಿ 'ಪ್ರೇಮ್ ಖೈದಿ' ಸಿನಿಮಾ ಮೂಲಕ ಕರೀಷ್ಮಾ ಕಪೂರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 'ಅಂದಾಜ್', 'ಜವಾಬ್', 'ಕೂಲಿ ನಂ.1', 'ರಾಜಾ ಹಿಂದೂಸ್ತಾನಿ, ದಿಲ್‌ತೋ ಪಾಗಲ್ ಹೈ' ಹೀಗೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದರು. 2003ರಲ್ಲಿ ಉದ್ಯಮಿ ಸಂಜಯ್ ಕಪುರ್ ಕೈ ಹಿಡಿದ ಕರೀಷ್ಮಾ ನಿಧಾನವಾಗಿ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಮಾಡಿದ್ದರು.

ನಟ ಅಭಿಷೇಕ್ ಬಚ್ಚನ್ ಜೊತೆಗೂ ಕರೀಷ್ಮಾ ಲವ್ವಿಡವ್ವಿ ನಡೆಸಿದ್ದರು. ಆದರೆ ಕೊನೆಗೆ ಸಂಜಯ್ ಕಪುರ್ ಎಂಬುವವರ ಜೊತೆ ಹಸೆಮಣೆ ಏರಿದರು. ದಂಪತಿಗೆ ಸಮೀರಾ, ಕಿರಣ್ ಎನ್ನುವ ಮಕ್ಕಳಿದ್ದಾರೆ. ಮದುವೆಯಾದ ಕೆಲವೇ ವರ್ಷಗಳಲ್ಲಿ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಕೆಲ ಭಿನ್ನಾಭಿಪ್ರಾಯಗಳಿಂದ 2014ರಲ್ಲಿ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. 2016ರಲ್ಲಿ ಡಿವೋರ್ಸ್ ಪಡೆದು ದೂರಾದರು.
ಸಂದರ್ಶನವೊಂದರಲ್ಲಿ ಕರೀಷ್ಮಾ ತಮ್ಮ ವೈಯಕ್ತಿಕ ದಾಂಪತ್ಯ ಜೀವನದ ಬಗ್ಗೆ ಮಾತನಾಡಿದ್ದರು. ಮದುವೆ ಬಳಿಕ ಗಂಡನ ಮನೆಯಲ್ಲಿ ಮಾನಸಿಕವಾಗಿ, ದೈಹಿಕವಾಗಿ ಬಹಳ ಹಿಂಸೆ ಅನುಭವಿಸಿದ್ದಾರೆ ಕರೀಷ್ಮಾ ಹೇಳಿಕೊಂಡಿದ್ದರು. ಮದುವೆ ಆದ ದಿನದಿಂದಲೇ ಟಾರ್ಚರ್ ಶುರುವಾಯಿತು. ಹನಿಮೂನ್‌ಗೆ ತೆರಳಿದ್ದ ಸಮಯದಲ್ಲಿ ನ್ನ ಸ್ನೇಹಿತರ ಜೊತೆ ಮಲಗು ಎನ್ನುತ್ತಿದ್ದ" ಎಂದು ನೋವು ತೋಡಿಕೊಂಡಿದ್ದರು.
ಕರೀಷ್ಮಾ ನಟನೆಯ 'ಮರ್ಡರ್ ಮುಬಾರಕ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಹಾಗಾಗಿ ವೈಯಕ್ತಿಕ ಜೀವನದ ಬಗ್ಗೆ ಆಕೆ ಹೇಳಿದ್ದ ವಿಚಾರಗಳು ಮತ್ತೆ ವೈರಲ್ ಆಗುತ್ತಿದೆ. "ಹನಿಮೂನ್ ಸಮಯದಲ್ಲಿ ಪತಿ ತನ್ನ ಸ್ನೇಹಿತರೊಂದಿಗೆ ರಾತ್ರಿ ಕಳೆಯಲು ಒತ್ತಾಯಿಸಿದ್ದ. ಅಷ್ಟೇ ಅಲ್ಲ ಆತ ನನ್ನನ್ನು ಹರಾಜು ಹಾಕಲು ಯತ್ನಿಸಿದ್ದ. ತನ್ನ ತಾಯಿ ಜೊತೆ ಸೇರಿ ನನ್ನನ್ನು ಹೊಡೆಯಲು ಮುಂದಾಗಿದ್ದ" ಎಂದು ಕರೀಷ್ಮಾ ಹೇಳಿಕೊಂಡಿದ್ದರು.

ಮುದ್ದಾಗಿ ಬೆಳೆಸಿದ ಮಗಳು ಅತ್ತೆ ಮನೆಯಲ್ಲಿ ಪಡಬಾರದ ಪಾಡು ಪಟ್ಟಳು ಎಂದು ಕರೀಷ್ಮಾ ತಂದೆ ರಣ್‌ಧೀರ್ ಕಪೂರ್ ನೋವು ತೋಡಿಕೊಂಡಿದ್ದರು. "ಸಮಾಜದಲ್ಲಿ ನಮ್ಮ ಘನತೆ, ನಮ್ಮ ಅಂತಸ್ತು ಎಲ್ಲರಿಗೂ ಗೊತ್ತು. ನಾವು ಹಣಕ್ಕಾಗಿ ಕೈಚಾಚುವ ಅಗತ್ಯ ಇಲ್ಲ. ಆದರೆ ಆ ಸಂಜಯ್‌ನಿಂದ ಅನುಭವಿಸಿದ ನೋವು ಅಷ್ಟಿಷ್ಟಲ್ಲ" ಎಂದಿದ್ದರು.
"ಆ ದೇವರು ನಮಗೆ ಪ್ರತಿಭೆ, ಹಣ ಎಲ್ಲಾ ಕೊಟ್ಟಿದ್ದಾರೆ. ಆದರೆ ಆ ಸಂಜಯ್ ಒಬ್ಬ ಥರ್ಡ್ ಕ್ಲಾಸ್. ಆತನೊಟ್ಟಿಗೆ ನನ್ನ ಮಗಳು ಮದುವೆ ಆಗುವುದು ನನಗೆ ಇಷ್ಟವಿರಲಿಲ್ಲ. ಆತ ನನ್ನ ಮಗಳನ್ನು ಎಂದೂ ಚೆನ್ನಾಗಿ ನೋಡಿಕೊಳ್ಳಲಿಲ್ಲ. ನನ್ನ ಮಗಳನ್ನು ಬಿಟ್ಟು ಮತ್ತೊಬ್ಬಳ ಜೊತೆ ಸುತ್ತಾಡುತ್ತಿದ್ದ. ಆತ ಎಂತವನು ಎನ್ನುವುದು ಇಡೀ ದೆಹಲಿಗೆ ಗೊತ್ತು. ಆತನ ಬಗ್ಗೆ ಮಾತನ ಬಗ್ಗೆ ಮತ್ತೇನು ಹೇಳಲ್ಲ" ಎಂದು ರಣ್‌ಧೀರ್ ಕಪೂರ್ ಅಲವತ್ತುಕೊಂಡಿದ್ದರು.
2016ರಲ್ಲಿ ಕರೀಷ್ಮಾ ಪತಿ ಸಮಜಯ್ ವಿರುದ್ಧ ಗೃಹ ಹಿಂಸೆ ದೂರು ದಾಖಲಿಸಿದ್ದರು. 'ಮರ್ಡರ್ ಮುಬಾರಕ್' ಚಿತ್ರದಲ್ಲಿ ಕರೀಷ್ಮಾ ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಹೋಮಿ ಅದಾಜಾನಿಯಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಈ ವಾರವೇ ಸ್ಟ್ರೀಮಿಂಗ್ ಆಗಲಿದೆ.


Click it and Unblock the Notifications











