Leo: ಮೊದಲ ದಿನ ಅತಿಹೆಚ್ಚು ಗಳಿಕೆ ಕಂಡ ಚಿತ್ರಗಳ ಪಟ್ಟಿ: 'ಲಿಯೋ'ಗೆ ಎಷ್ಟನೇ ಸ್ಥಾನ?
ದಳಪತಿ ವಿಜಯ್ ನಟನೆಯ 'ಲಿಯೋ' ಸಿನಿಮಾ ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಕೋಟಿ ಕೋಟಿ ಕೊಳ್ಳೆ ಹೊಡೆದು ಮುನ್ನುಗ್ಗುತ್ತಿದೆ. ಕರ್ನಾಟಕ ಸೇರಿದಂತೆ ವಿಶ್ವದಾದ್ಯಂತ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಅಡ್ವಾನ್ಸ್ ಬುಕ್ಕಿಂಗ್ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಹಾಗಾಗಿ ಕಲೆಕ್ಷನ್ ಜೋರಾಗಿದೆ.
ಲೋಕೇಶ್ ಕನಕರಾಜ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಸಿನಿಮಾ ಹಿಂದೆ ಬಿದ್ದಿದೆ. ಆದರೆ ಹಬ್ಬದ ಸಂಭ್ರಮದಲ್ಲಿ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತದೆ ಎನ್ನುವ ನಿರೀಕ್ಷೆಯಿದೆ. ಲೋಕೇಶ್ ನಿರ್ದೇಶನದ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೂ 'ಲಿಯೋ' ಅಷ್ಟೇನು ಚೆನ್ನಾಗಿಲ್ಲ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ. 'ಲಿಯೋ' ಸಿನಿಮಾ ಮೊದಲ ದಿನವೇ ವಿಶ್ವದಾದ್ಯಂತ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ.

'ಖೈದಿ', 'ವಿಕ್ರಂ' ಬಳಿಕ 'ಲಿಯೋ' ಕೂಡ ಲೋಕೇಶ್ ಕನಕರಾಜ್ ಸಿನಿಮ್ಯಾಟಿಕ್ ಯೂನಿವರ್ಸ್ ಭಾಗವಾಗಿದೆ. 'ಮಾಸ್ಟರ್' ಬಳಿಕ ವಿಜಯ್- ಲೋಕೇಶ್ ಮತ್ತೆ ಒಟ್ಟಿಗೆ ಸಿನಿಮಾ ಮಾಡಲು ಕೈ ಜೋಡಿಸಿದ್ದರು. ಹಾಗಾಗಿ ಸಹಜವಾಗಿಯೇ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿತ್ತು. ಬೆಂಗಳೂರಿನಲ್ಲಿ 'ಲಿಯೋ' ಚಿತ್ರದ ಅರ್ಲಿ ಮಾರ್ನಿಂಗ್ ಶೋ ಟಿಕೆಟ್‌ಗಳು 1500 ರೂ.ಗೆ ಮಾರಾಟವಾಗಿದೆ. ಅಷ್ಟರಮಟ್ಟಿಗೆ ಸಿನಿಮಾ ಕ್ರೇಜ್ ಹುಟ್ಟಿಸಿತ್ತು. ಫೈನಲಿ ಸಿನಿಮಾ ರಿಲೀಸ್ ಆಗಿದೆ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದೆ.
ಪ್ರತಿಕ್ರಿಯೆ ಹೇಗೆ ಇದ್ದರೂ ದಾಖಲೆಯ ಅಡ್ವಾನ್ಸ್ ಬುಕ್ಕಿಂಗ್ ಚಿತ್ರಕ್ಕೆ ಪ್ಲಸ್ ಆಗಿದೆ. ತಮಿಳು ಚಿತ್ರರಂಗದಲ್ಲಿ ಈವರೆಗೆ ಯಾವುದೇ ಸಿನಿಮಾ ಮಾಡದ ದಾಖಲೆಯನ್ನು 'ಲಿಯೋ' ಮಾಡಿದೆ. ಮೊದಲ ದಿನ ವಿಶ್ವದಾದ್ಯಂತ ಅತಿಹೆಚ್ಚು ಗಳಿಕೆ ಕಂಡ ಟಾಪ್ 10 ಸಿನಿಮಾಗಳ ಲಿಸ್ಟ್‌ನಲ್ಲಿ 'ಲಿಯೋ' ಸದ್ದು ಮಾಡ್ತಿದೆ. ಟ್ರೇಡ್ ಎಕ್ಸ್‌ಪರ್ಟ್ ಮನೋಬಲ ವಿಜಯಬಾಲನ್ ಪ್ರಕಾರ ಸಿನಿಮಾ ಮೊದಲ ದಿನ 115 ಕೋಟಿ ರೂ. ಗಳಿಸಿದೆ. ಮೊದಲ ದಿನ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾಗಳಲ್ಲಿ 'ಲಿಯೋ' 8ನೇ ಸ್ಥಾನದಲ್ಲಿದೆ.

ಟಾಪ್ 10 ವರ್ಲ್ಡ್ ವೈಡ್ ಡೇ 1 ಕಲೆಕ್ಷನ್
1. RRR = 257.15 ಕೋಟಿ ರೂ.
2. ಬಾಹುಬಲಿ-2= 217.52 ಕೋಟಿ ರೂ.
3. ಕೆಜಿಎಫ್-2 = 165.37 ಕೋಟಿ ರೂ.
4. ಆದಿಪುರುಷ್= 136.84 ಕೋಟಿ ರೂ.
5. ಸಾಹೋ= 128. 41 ಕೋಟಿ ರೂ.
6. ಜವಾನ್= 125.05 ಕೋಟಿ ರೂ.
7. 2.0 = 117.24 ಕೋಟಿ ರೂ.
8. ಲಿಯೋ= 115.90 ಕೋಟಿ ರೂ.
9. ಪಠಾಣ್= 106.14 ಕೋಟಿ ರೂ.
10. ಕಬಾಲಿ= 105.70 ಕೋಟಿ ರೂ.
ಕೆಲವರು 'ಲಿಯೋ' ಮೊದಲ ದಿನ 140 ಕೋಟಿ ರೂ.ವರೆಗೆ ಕಲೆಕ್ಷನ್ ಮಾಡಿದೆ ಎನ್ನುವ ವಾದವನ್ನು ಮುಂದಿಡುತ್ತಿದ್ದಾರೆ. ಒಟ್ನಲ್ಲಿ 'ಲಿಯೋ' ಮೊದಲ ದಿನವೇ ದಾಖಲೆಯ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಕಂಡು ಮುನ್ನುಗ್ಗುತ್ತಿದೆ. ಆದರೆ ಮಿಶ್ರ ಪ್ರತಿಕ್ರಿಯೆ ಮುಂದಿನ ದಿನಗಳಲ್ಲಿ ಚಿತ್ರದ ಗಳಿಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಹಾಲಿವುಡ್‌ನ 'ಎ ಹಿಸ್ಟರಿ ಆಫ್ ವೈಲೆನ್ಸ್' ಸಿನಿಮಾದಿಂದ ಪ್ರೇರಣೆಗೊಂಡು ಲೋಕೇಶ್ ಕನಕರಾಜ್ 'ಲಿಯೋ' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಸೆವೆನ್ ಸ್ಕ್ರೀನ್ ಸ್ಟುಡಿಯೋ ಬ್ಯಾನರ್‌ನಲ್ಲಿ ಲಲಿತ್ ಕುಮಾರ್ ಹಾಗೂ ಜಗದೀಶ್ ಪಳನಿಸ್ವಾಮಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ತ್ರಿಶಾ ನಾಯಕಿಯಾಗಿ ನಟಿಸಿದ್ದು ಅರ್ಜುನ್ ಸರ್ಜಾ, ಸಂಜಯ್ ದತ್ ವಿಲನ್‌ಗಳಾಗಿ ಅಬ್ಬರಿಸಿದ್ದಾರೆ.


Click it and Unblock the Notifications











